
07-09-2026, 8:00 PM
ಮಂಗಳೂರು ಸೆ 07 : ಯುವವಾಹಿನಿ (ರಿ.) ಪಣಂಬೂರು–ಕುಳಾಯಿ ಘಟಕದ ವತಿಯಿಂದ ಶಿಕ್ಷಕರ ದಿನಾಚರಣೆಯ ಪ್ರಯುಕ್ತ ಘಟಕದ ಶಿಕ್ಷಕರಿಗೆ ಅಭಿನಂದನಾ ಕಾರ್ಯಕ್ರಮವನ್ನು ಸೆಪ್ಟೆಂಬರ್ 7, 2026ರಂದು ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮದ ಅಂಗವಾಗಿ ಶಿಕ್ಷಕರಿಗಾಗಿ ವಿವಿಧ ಮನರಂಜನಾ ಆಟಗಳನ್ನು ಆಯೋಜಿಸಲಾಗಿದ್ದು, ಶಿಕ್ಷಕರು ಉತ್ಸಾಹ ಹಾಗೂ ಸಂತೋಷದಿಂದ ಪಾಲ್ಗೊಂಡರು. ಕಾರ್ಯಕ್ರಮವು ಶಿಕ್ಷಕರಲ್ಲಿ ಆತ್ಮೀಯತೆ ಹಾಗೂ ಸ್ನೇಹಭಾವವನ್ನು ಹೆಚ್ಚಿಸುವಂತೆ ಸೊಗಸಾಗಿ ಮೂಡಿಬಂದಿತು. ನಂತರ ಘಟಕದ ಮಾಜಿ ಅಧ್ಯಕ್ಷರಾದ ಶ್ರೀ ಪದ್ಮನಾಭ ಮರೋಳಿ ಅವರು ಶಿಕ್ಷಕರ ದಿನಾಚರಣೆಯ ಮಹತ್ವ ಹಾಗೂ ಸಮಾಜ ನಿರ್ಮಾಣದಲ್ಲಿ ಶಿಕ್ಷಕರ […]
Read More

07-09-2026, 2:00 PM
ಅಡ್ವೆ ಸೆ 07 : ಯುವವಾಹಿನಿ (ರಿ.) ಅಡ್ವೆ ಘಟಕ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ, ನಂದಿಕೂರು ಅಂಗನವಾಡಿ ಕೇಂದ್ರ ಅಡ್ವೆ ಹಾಗೂ ಸ್ತ್ರೀಶಕ್ತಿ ಸಂಘ ಅಡ್ವೆ ಇವರ ಜಂಟಿ ಆಶ್ರಯದಲ್ಲಿ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಸೆಪ್ಟೆಂಬರ್ 7ರಂದು ಅಡ್ವೆ ಶಾಲೆಯಲ್ಲಿ ನಡೆಯಿತು.ಯುವವಾಹಿನಿ (ರಿ.) ಅಡ್ವೆ ಘಟಕದ ಅಧ್ಯಕ್ಷ ಪ್ರಸಾದ್ ಪಲಿಮಾರು ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವು ಅಂಗನವಾಡಿ ಪುಟಾಣಿಗಳ ಪ್ರಾರ್ಥನೆಯೊಂದಿಗೆ ಆರಂಭಗೊಂಡಿತು. ಬಾಲ ವಿಕಾಸ ಸಮಿತಿಯ ಅಧ್ಯಕ್ಷೆ ಜಯಸ್ಮಿತಾ ಅವರು ಅತಿಥಿಗಳು ಹಾಗೂ […]
Read More

06-09-2026, 9:00 PM
ಮಾಣಿ ಸೆಪ್ಟೆಂಬರ್ 6 : ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆ. 6ರಂದು ಕೆದಿಲ ಗ್ರಾಮದ ಗಾಯತ್ರಿ ಮಾಧವ ಸುವರ್ಣ ಅವರ ಮನೆಯಲ್ಲಿ ನಡೆಯಿತು. ಕಾರ್ಯಕ್ರಮಕ್ಕೆ ಜನಾರ್ಧನ ಪೂಜಾರಿ ಕೊಡಂಗೆ ಹಾಗೂ ತಂಡದವರ ನೇತೃತ್ವದಲ್ಲಿ ಭಕ್ತಿಭಾವದಿಂದ ಭಜನೆ ಸಂಕೀರ್ತನೆ ನಡೆಸುವ ಮೂಲಕ ಚಾಲನೆ ನೀಡಲಾಯಿತು. ಈ ಸಂದರ್ಭದಲ್ಲಿ ಮಾತನಾಡಿದ ರಾಜೇಶ್ ಬಲ್ಯ ಅವರು, ಶ್ರೀ ನಾರಾಯಣ ಗುರುಗಳು ಶಿಕ್ಷಣ, ಧಾರ್ಮಿಕ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಮಹತ್ತರ ಬದಲಾವಣೆಗೆ […]
Read More

06-09-2026, 8:00 PM
ಮಾಣಿ, ಸೆ. 6: ಯುವವಾಹಿನಿ (ರಿ.) ಮಾಣಿ ಘಟಕದ “ಸೇವಾಸ್ಪರ್ಶ” ಕಾರ್ಯಕ್ರಮದ 4ನೇ ಹಂತದ ಸೇವಾ ಕಾರ್ಯದ ಅಂಗವಾಗಿ ಪೆರಾಜೆ ಗ್ರಾಮದ ಗೀತಾ ರಮೇಶ್ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು. ಕುಟುಂಬದ ಯಜಮಾನರು ಕೆಲಸ ಮಾಡಲು ಅಸಮರ್ಥರಾಗಿದ್ದು, ಒಬ್ಬ ಮಗ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ವಯೋವೃದ್ಧ ತಾಯಿ ದುಡಿದು ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು. ಈ ಸಂದರ್ಭದಲ್ಲಿ ಯುವವಾಹಿನಿ […]
Read More

06-09-2026, 2:00 PM
ಮೂಡುಬಿದ್ರೆ ಸೆಪ್ಟೆಂಬರ್ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ವತಿಯಿಂದ ಸಮಾಜ ಸೇವಾ ನಿರ್ದೇಶಕ ಶ್ರೀ ಉಮೇಶ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಮಾನವೀಯ ನೆರವು ನೀಡಲಾಯಿತು. ಮೂಡುಬಿದ್ರೆ ರೇಂಜ್ ಫಾರೆಸ್ಟ್ ಆಫೀಸ್ ಬಳಿಯ ನಿವಾಸಿ ಇಬ್ರಾಹೀಂ ಅವರ ಅನಾರೋಗ್ಯ ಸಮಸ್ಯೆಗೆ ಸ್ಪಂದಿಸಿದ ಘಟಕವು ಕುಟುಂಬಕ್ಕೆ ಆರ್ಥಿಕ ಧನಸಹಾಯ ನೀಡುವುದರ ಜೊತೆಗೆ, ಮನೆಗೆ ಅಗತ್ಯವಿರುವ ರೇಷನ್ ಸಾಮಗ್ರಿಗಳನ್ನು ವಿತರಿಸಿತು. ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು […]
Read More

06-09-2026, 2:00 PM
ಮೂಡುಬಿದ್ರೆ ಸೆ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ಸಮಾಜ ಸೇವಾ ನಿರ್ದೇಶಕ ಶ್ರೀ ಉಮೇಶ್ ಕೋಟ್ಯಾನ್ ಅವರ ಸಹಕಾರದಲ್ಲಿ ಚಾಮುಂಡಿಬೆಟ್ಟ, ಕೋಟೆಬಾಗಿಲು ನಿವಾಸಿ ಶ್ರೀಮತಿ ಬೇಬಿ ಪೂಜಾರ್ತಿ ಅವರ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಲಾಯಿತು. ಕುಟುಂಬಕ್ಕೆ ಅಗತ್ಯವಿರುವ ದಿನಸಿ ಹಾಗೂ ರೇಷನ್ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಸಹಾಯ ಹಸ್ತ ಚಾಚಲಾಯಿತು. ಅಶಕ್ತ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿ, ಅಗತ್ಯದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವುದು ಯುವವಾಹಿನಿಯ ಸಮಾಜ ಸೇವೆಯ […]
Read More

06-09-2026, 2:00 PM
ಮೂಡುಬಿದ್ರೆ ಸೆ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ವತಿಯಿಂದ ಮೂಡುಮಾರ್ನಾಡು ಗ್ರಾಮದ ಹೊಸಮನೆ ಪರಪು ನಿವಾಸಿ ಸರಸ್ವತಿ ಅವರ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸಲಾಯಿತು. ಕುಟುಂಬಕ್ಕೆ ಆರ್ಥಿಕ ಧನಸಹಾಯ ನೀಡುವುದರ ಜೊತೆಗೆ, ಮನೆಗೆ ಅಗತ್ಯವಿರುವ ರೇಷನ್ ಸಾಮಗ್ರಿಗಳನ್ನು ವಿತರಿಸಿ ನೆರವು ನೀಡಲಾಯಿತು.ಸಂಕಷ್ಟದಲ್ಲಿರುವ ಹಾಗೂ ಅಶಕ್ತ ಕುಟುಂಬಗಳ ಅಗತ್ಯಗಳಿಗೆ ಸ್ಪಂದಿಸಿ, ಅಗತ್ಯದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವುದು ಯುವವಾಹಿನಿಯ ಸಮಾಜ ಸೇವೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಸಮಾಜದಲ್ಲಿ ಮಾನವೀಯತೆ, ಸಹಕಾರ ಮತ್ತು ಪರಸ್ಪರ […]
Read More

06-09-2026, 1:00 PM
ಯುವವಾಹಿನಿ(ರಿ.)ಮೂಡುಬಿದಿರೆ ಘಟಕವು ದಾನಿಗಳ ಸಹಕಾರದೊಂದಿಗೆ ಮೂಡುಮಾರ್ನಾಡ್ನಲ್ಲಿ ಅಶಕ್ತ ಕುಟುಂಬಕ್ಕಾಗಿ ಸುಮಾರು ₹12 ಲಕ್ಷ ವೆಚ್ಚದಲ್ಲಿ ನಿರ್ಮಿಸಿದ ನೂತನ ಮನೆಯನ್ನು ಸೆ. 6ರಂದು ಸುಮಿತ್ರ ವಿಶ್ವನಾಥ್ ದಂಪತಿಗೆ ಹಸ್ತಾಂತರಿಸಿತು ದೀಪ ಬೆಳಗಿಸುವ ಮೂಲಕ ಮನೆ ಹಸ್ತಾಂತರ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಅಶಕ್ತ ಕುಟುಂಬವೊಂದಕ್ಕೆ ನೂತನ ಮನೆ ನಿರ್ಮಿಸಿಕೊಟ್ಟು ಸ್ವಾಭಿಮಾನದ ಬದುಕಿಗೆ ದಾರಿ ಮಾಡಿಕೊಡುವ ಮೂಲಕ ಯುವವಾಹಿನಿ ಕೈಗೊಂಡಿರುವ ಸಮಾಜಮುಖಿ ಹಾಗೂ ರಚನಾತ್ಮಕ ಕಾರ್ಯ ಶ್ಲಾಘನೀಯವಾಗಿದೆ ಎಂದು ಕರ್ನಾಟಕ ಸರ್ಕಾರದ ಹೈಕೋರ್ಟ್ ಹೆಚ್ಚುವರಿ ಅಡ್ವೊಕೇಟ್ ಜನರಲ್ ಇರುವೈಲು ತಾರಾನಾಥ್ ಪೂಜಾರಿ […]
Read More

05-09-2026, 7:00 PM
ಮುಲ್ಕಿ: ಯುವವಾಹಿನಿ (ರಿ.) ಮುಲ್ಕಿ ಘಟಕವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹರಿಂದ್ರ ಸುವರ್ಣ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, […]
Read More

03-09-2026, 8:00 PM
ಮಾಣಿ, ಸೆ. 3: ನಾರಾಯಣ ಗುರುಗಳ ತತ್ವ ಹಾಗೂ ಸಂದೇಶಗಳನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಹಮ್ಮಿಕೊಂಡಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮದ ಅಂಗವಾಗಿ ದೇರಣ್ಣ ಪೂಜಾರಿ ಹಾಗೂ ಶಮಿತಾ ದೇರಣ್ಣ ಪೂಜಾರಿ ಅವರ ಮನೆಯಲ್ಲಿ ಭಜನೆ, ಸಂಕೀರ್ತನೆ ಹಾಗೂ ಗುರುತತ್ವ ಸಂದೇಶ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು ಅವರು, “ನಾರಾಯಣ ಗುರುಗಳು ಮರೆಯಾದರೂ, ಅವರ ತತ್ವಸಂದೇಶಗಳು ಇಂದಿಗೂ ಜೀವಂತವಾಗಿವೆ. ಅವರು ಸಮಾಜದಲ್ಲಿ ಸಮಾನತೆ, ಮಾನವೀಯತೆ, […]
Read More