21-06-2024, 4:17 PM
ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕ, ಬಿಲ್ಲವ ಸಮಾಜ ಸೇವಾ ಸಂಘ, ಹಳೆಯಂಗಡಿ ಹಾಗೂ ಲಯನ್ಸ್ ಮತ್ತು ಲಿಯೋ ಕ್ಲಬ್, ಹಳೆಯಂಗಡಿ ಜಂಟಿ ಆಶ್ರಯದಲ್ಲಿ ಹತ್ತನೇ ವರ್ಷದ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ದಿನಾಂಕ 21-06-2024 ರಂದು ಹಳೆಯಂಗಡಿ ಬಿಲ್ಲವ ಭವನದಲ್ಲಿ ಯೋಗ ಗುರುಗಳು ಯಾದವ ದೇವಾಡಿಗರ ಮಾರ್ಗದರ್ಶನದಲ್ಲಿ ಜರಗಿತು. ಯೋಗ ಗುರುಗಳು ಯೋಗದ ಮಹತ್ವ ಹಾಗೂ 2024 ರ ವಿಷಯವಾದ ಸ್ವಯಂ ಮತ್ತು ಸಮಾಜಕ್ಕಾಗಿ ಯೋಗ ಇದರ ಬಗ್ಗೆ ಹೆಚ್ಚಿನ ಮಾಹಿತಿಯನ್ನು ನೀಡಿದರು. ಕಾರ್ಯಕ್ರಮದಲ್ಲಿ ಬಿಲ್ಲವ ಸಂಘದ ಗೌರವಾಧ್ಯಕ್ಷರು ಗಣೇಶ್ […]
Read More
03-03-2024, 5:52 PM
ಹಳೆಯಂಗಡಿ: ಯುವವಾಹಿನಿ(ರಿ.) ಹಳೆಯಂಗಡಿ ಘಟಕದ ವತಿಯಿಂದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವು ದಿನಾಂಕ 03-03-2024 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ಬಿಲ್ಲವ ಭವನದಲ್ಲಿ ನಡೆಯಿತು. ಪದಗ್ರಹಣ ಯುವವಾಹಿನಿ ಸಮಾರಂಭದಲ್ಲಿ ಹಳೆಯಂಗಡಿ ಘಟಕದ ಅಧ್ಯಕ್ಷರು ಕಿರಣ್ ಕುಮಾರ್ ಇವರ ಅಧ್ಯಕ್ಷತೆಯಲ್ಲಿ ಜರುಗಿತು. ಸಮಾರಂಭದ ಉದ್ಘಾಟನೆಯನ್ನು ಬಿಲ್ಲವ ಸಮಾಜ ಸೇವಾ ಸಂಘ(ರಿ.) ಹಳೆಯಂಗಡಿ ಅಧ್ಯಕ್ಷರು ಚಂದ್ರಶೇಖರ್ ನಾನಿಲ್ ದೀಪವನ್ನು ಬೆಳಗಿಸುವುದರ ಮೂಲಕ ನೆರವೇರಿಸಿದರು. 2024- 25 ನೇ ಸಾಲಿನ ಅಧ್ಯಕ್ಷರಾಗಿ ಹಿತಾಕ್ಷಿ ನಾರಾಯಣ್, ಕಾರ್ಯದರ್ಶಿ ಪೂರ್ಣಿಮಾ ಹಾಗೂ […]
Read More
21-08-2022, 4:31 PM
ಕಟಪಾಡಿ :- ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸಂಸ್ಥೆಯ ವರ್ಷದ ಪ್ರತಿಷ್ಠಿತ ಸಾಂಸ್ಕೃತಿಕ ಸೌರಭ, ಡೆನ್ನಾನ ಡೆನ್ನನ – 2022ನೇ ಸಾಲಿನ ದ್ವೀತಿಯ ಬಹುಮಾನವನ್ನು ಯುವವಾಹಿನಿ ಹಳೆಯಂಗಡಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 21 ಆಗಸ್ಟ್ 2022ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಗೃಹದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಯುವವಾಹಿನಿ ಉಡುಪಿ ಘಟಕದ ಆತಿಥ್ಯದಲ್ಲಿ ಜರಗಿದ ಅಂತರ್ ಘಟಕ ಡೆನ್ನಾನ ಡೆನ್ನನ 2022 ಕಾರ್ಯಕ್ರಮದಲ್ಲಿ ಭಾಗವಹಿಸಿದ ಯುವವಾಹಿನಿಯ 20 ಘಟಕಗಳ ತೀವ್ರ […]
Read More
20-03-2022, 5:41 AM
ಯುವವಾಹಿನಿ ಸಂಸ್ಥೆಯು ಯುವ ಸಮುದಾಯವನ್ನು ಕಟ್ಟಿ ಬೆಳೆಸುವ ಧ್ಯೇಯದೊಂದಿಗೆ ಇಂದು ಮಾದರಿಯಾಗಿ ಬೆಳೆದಿದೆ. ಸಮಾಜಮುಖಿ ಚಿಂತನೆಯಿಂದ ತಮ್ಮ ಸೇವೆಯನ್ನು ಎಲ್ಲಾ ಸಮಾಜಕ್ಕೂ ನೀಡುತ್ತಿರುವುದು ಶ್ಲಾಘನೀಯ ಇಂತಹ ಸೇವಾ ಸಂಸ್ಥೆಗೆ ಉತ್ತಮ ಭವಿಷ್ಯವಿದೆ ಎಂದು ಹಳೆಯಂಗಡಿ ಬಿಲ್ಲವ ಸಂಘದ ಅಧ್ಯಕ್ಷರಾದ ಚಂದ್ರಶೇಖರ ನಾನಿಲ್ ಹೇಳಿದರು. ಅವರು ದಿನಾಂಕ 20.03.2022 ರಂದು ಹಳೆಯಂಗಡಿ ಬ್ರಹ್ಮಶ್ರೀ ನಾರಾಯಣ ಗುರು ಮಂದಿರದ ವಠಾರದಲ್ಲಿ ಹಳೆಯಂಗಡಿ ಯುವವಾಹಿನಿ ಘಟಕದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು. ಘಟಕದ ನಿರ್ಗಮನ ಅಧ್ಯಕ್ಷರಾದ ಹರೀಶ್ ಆರ್ […]
Read More
09-12-2019, 10:43 AM
*ಯುವವಾಹಿನ(ರಿ.) ಹಳೆಯಂಗಡಿಘಟಕ ಮತ್ತು ಬಿಲ್ಲವಸಮಾಜ ಸೇವಾ ಸಂಘ(ರಿ)ಹಳೆಯಂಗಡಿ,* *ಲಯನ್ಸ್ ಕ್ಲಬ್, ಪೂಜಾ ಫ್ರೆಂಡ್ಸ್ ಹಳೆಯಂಗಡಿ* ಇದರ ಸಂಯುಕ್ತ ಆಶ್ರಯದಲ್ಲಿ ದಿನಾಂಕ 8-12-2019ರಂದು ಮುಲ್ಕಿ ಸೀಮೆ ಅರಸು ಕಂಬಳದ ಪ್ರಯುಕ್ತ ದಿನಾಂಕ 28-12-2019ರಂದು ನಡೆಯಲಿರುವ ಅರಸು ಕಂಬಳದ ಬಾಕಿಮಾರು ಗದ್ದೆಯಲ್ಲಿ ಬೆಳಿಗ್ಗೆ 9.00ಗಂಟೆಯಿಂದ ಮಧ್ಯಹ್ನ12.00ಗಂಟೆ ತನಕ ಸ್ವಚ್ಛತೆಯ ಕಾರ್ಯವನ್ನು ಮುಲ್ಕಿ ಸೀಮೆ ಅರಸರಾದ ಶ್ರೀ ದುಗ್ಗಣ್ಣ ಸಾವಂತರ ನೇತ್ರತ್ವದಲ್ಲಿ ಕೈಗೊಳ್ಳಲಾಯಿತು.
Read More
09-06-2019, 3:27 PM
ಹಳೆಯಂಗಡಿ : ಯುವವಾಹಿನಿ ಹಳೆಯಂಗಡಿ ಘಟಕದ ವತಿಯಿಂದ ಪ್ರೌಢಶಾಲೆ ಹಾಗೂ ಕಾಲೇಜು ವಿಭಾಗದ ವಿದ್ಯಾರ್ಥಿಗಳಿಗೆ ದಿ.ಕಮಲ ಬೂಬ ಅಮೀನ್ ಸ್ಮರಣಾರ್ಥ ಅವರ ಮಕ್ಕಳ ಪ್ರಾಯೋಜಕತ್ವದಲ್ಲಿ ಉಚಿತ ಪುಸ್ತಕ ವಿತರಣಾ ಕಾರ್ಯಕ್ರಮವು ದಿನಾಂಕ 09.06.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಹಳೆಯಂಗಡಿಯ ಹರಿ ಓಂ ಸಭಾಗ್ರಹದಲ್ಲಿ ಜರಗಿತು. ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಆಗಮಿಸಿದ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬ್ಬೆಲ್ ರವರು ತನ್ನ ಬಾಲ್ಯದ ಜೀವನವನ್ನು ಮೆಲುಕು ಹಾಕುತ್ತಾ, ವಿದ್ಯಾರ್ಥಿಗಳಿಗೆ ಈ ಪುಸ್ತಕ ವಿತರಣಾ ಕಾರ್ಯಕ್ರಮದ […]
Read More
07-04-2019, 2:21 PM
ಹಳೆಯಂಗಡಿ : ಯುವವಾಹಿನಿ (ರಿ) ಹಳೆಯಂಗಡಿ ಘಟಕದ 2019-20 ನೇ ಸಾಲಿನ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮ ದಿನಾಂಕ 07-04-2019 ರಂದು ಶ್ರೀ ವಿದ್ಯಾ ವಿನಾಯಕ ಯುವಕ ಮಂಡಲ (ರಿ) ಹಳೆಯಂಗಡಿಯ ಸಭಾಗ್ರಹದಲ್ಲಿ ಜರಗಿತು. ಕಾರ್ಯಕ್ರಮವನ್ನು ಹಳೆಯಂಗಡಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಶ್ರೀ ಚಂದ್ರಶೇಖರ್ ನಾನಿಲ್ ರವರು ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು.ಯುವವಾಹಿನಿ (ರಿ) ಹಳೆಯಂಗಡಿಯ ಘಟಕದ ಅಧ್ಯಕ್ಷರಾದ ಹೇಮನಾಥ ಕರ್ಕೇರಾರವರು ಸಭೆಯ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಳ್ವಾಸ್ ಪದವಿ ಕಾಲೇಜಿನ ಉಪನ್ಯಾಸಕಿ […]
Read More
19-10-2018, 3:12 PM
ಮಂಗಳೂರು ದಸರಾ ಉತ್ಸವದಲ್ಲಿ ಯುವವಾಹಿನಿಯ ಸೇವೆ ಮಂಗಳೂರು : ಜಗದ್ವಿಖ್ಯಾತ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ನವರಾತ್ರಿಯ ವೈಭವದ ಮಂಗಳೂರು ದಸರಾದಲ್ಲಿ ಯುವವಾಹಿನಿಯ ಸದಸ್ಯರು ನಿರಂತರ ಸೇವಾ ಕಾರ್ಯದಲ್ಲಿ ತೊಡಗಿದರು. ದಿನಾಂಕ 10.10.2018 ರಿಂದ 19.10.2018 ರ ವರಗೆ ಯುವವಾಹಿನಿಯ ಮಂಗಳೂರು, ಸುರತ್ಕಲ್, ಬಂಟ್ವಾಳ, ಪುತ್ತೂರು, ಪಣಂಬೂರು, ಹಳೆಯಂಗಡಿ, ಹೆಜಮಾಡಿ, ಸಸಿಹಿತ್ಲು, ಪಡುಬಿದ್ರೆ, ಉಪ್ಪಿನಂಗಡಿ, ಮಂಗಳೂರು ಮಹಿಳಾ, ಮುಲ್ಕಿ, ಬೆಳುವಾಯಿ, ಅಡ್ವೆ, ಬಜಪೆ, ಬೆಳ್ತಂಗಡಿ, ಕಂಕನಾಡಿ, ಕೂಳೂರು, ಕೊಲ್ಯ, ಸುಳ್ಯ, ಮಾಣಿ, ವೇಣೂರು, ಮೂಡಬಿದ್ರೆ, ಕೆಂಜಾರು-ಕರಂಬಾರು, ಶಕ್ತಿನಗರ, […]
Read More
15-09-2018, 4:45 PM
ಹಳೆಯಂಗಡಿ : ಕಟ್ಟೋಣ ನಾವು ಹೊಸ ನಾಡೊಂದನು…ಶಾಂತಿ ಸಹಬಾಳ್ವೆಯ ಬೀಡೊಂದನು… ಹೆಜ್ಜೆ ಮೇಲೆ ಹೆಜ್ಜೆ ಇಡುತ ಕುಣಿವ ಯುವಜನರ ದಂಡು, ಜೊತೆಗೆ ಹುಚ್ಚೆಬ್ಬಿಸೋ ನಾಸಿಕ್ ಬ್ಯಾಂಡು… ಹಳೆಯಂಗಡಿ ಗಣೇಶೋತ್ಸವದಲ್ಲಿ ಜನಮನ ಸೆಳೆದ ಯುವವಾಹಿನಿ ತಂಡಕ್ಕೆ ಜೈ ಹೋ . ದಿನಾಂಕ 15-09-2018 ರಂದು ನಡೆದ ಹಳೆಯಂಗಡಿಯ ಸಾರ್ವಜನಿಕ ಶ್ರೀ ಗಣೇಶೋತ್ಸವದ ಶೋಭಯಾತ್ರೆಯಲ್ಲಿ ಯುವವಾಹಿನಿ (ರಿ) ಹಳೆಯಂಗಡಿ ಘಟಕದ ಸದಸ್ಯರಿಂದ “ನಾಸಿಕ್ ಬ್ಯಾಂಡ್ ” ಕಾರ್ಯಕ್ರಮ ಏರ್ಪಡಿಸಲಾಯಿತು. 60 ಸದಸ್ಯರ ದಂಡು ,ಹಳದಿ ಬಣ್ಣದ ಜರ್ಸಿ ಟಿ-ಶರ್ಟ್ ಸಮವಸ್ತ್ರದಲ್ಲಿ […]
Read More