ಮಾಣಿ, ಸೆ. 6: ಯುವವಾಹಿನಿ (ರಿ.) ಮಾಣಿ ಘಟಕದ “ಸೇವಾಸ್ಪರ್ಶ” ಕಾರ್ಯಕ್ರಮದ 4ನೇ ಹಂತದ ಸೇವಾ ಕಾರ್ಯದ ಅಂಗವಾಗಿ ಪೆರಾಜೆ ಗ್ರಾಮದ ಗೀತಾ ರಮೇಶ್ ಅವರ ಕುಟುಂಬಕ್ಕೆ ಒಂದು ತಿಂಗಳಿಗೆ ಅಗತ್ಯವಿರುವ ಆಹಾರ ಸಾಮಗ್ರಿಗಳನ್ನು ವಿತರಿಸಲಾಯಿತು.

ಕುಟುಂಬದ ಯಜಮಾನರು ಕೆಲಸ ಮಾಡಲು ಅಸಮರ್ಥರಾಗಿದ್ದು, ಒಬ್ಬ ಮಗ ವಿದ್ಯಾಭ್ಯಾಸ ಮಾಡುತ್ತಿರುವ ಸಂದರ್ಭದಲ್ಲಿ ವಯೋವೃದ್ಧ ತಾಯಿ ದುಡಿದು ಕುಟುಂಬದ ಜೀವನ ನಿರ್ವಹಣೆ ಮಾಡುತ್ತಿರುವ ಪರಿಸ್ಥಿತಿಯನ್ನು ಪರಿಗಣಿಸಿ, ಕುಟುಂಬಕ್ಕೆ ನೆರವಾಗುವ ಉದ್ದೇಶದಿಂದ ಈ ಸೇವಾ ಕಾರ್ಯವನ್ನು ಕೈಗೊಳ್ಳಲಾಯಿತು.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ಅಧ್ಯಕ್ಷ ಗಣೇಶ್ ಪೂಜಾರಿ ಕೊಡಾಜೆ, ಸಮಾಜ ಸೇವಾ ನಿರ್ದೇಶಕ ಸುರೇಶ್ ಪೂಜಾರಿ ಬಾಕಿಲ, ಮಾಜಿ ಅಧ್ಯಕ್ಷ ಜಯಂತ ಪೂಜಾರಿ, ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್, ಜೊತೆ ಕಾರ್ಯದರ್ಶಿ ಶಶಿಪ್ರಭಾ ಮಿತ್ತೂರು, ಕಲೆ ಮತ್ತು ಸಾಹಿತ್ಯ ನಿರ್ದೇಶಕ ರಾಜೇಶ್ ಕೋಟ್ಯಾನ್, ವ್ಯಕ್ತಿತ್ವ ವಿಕಸನ ನಿರ್ದೇಶಕ ಸತೀಶ್ ಮುರುವ, ಸಂಘಟನಾ ಕಾರ್ಯದರ್ಶಿಗಳಾದ ಮೋಹನ್ ಪೂಜಾರಿ ಮುಜಲ, ಬಾಲಕೃಷ್ಣ ಕೆರೆಕೋಡಿ, ವಿಶ್ವನಾಥ ಬರಿಮಾರು ಹಾಗೂ ಸದಸ್ಯೆ ಸ್ವಾತಿ ನಿಶಾಂತ್ ಉಪಸ್ಥಿತರಿದ್ದರು.
ಸೇವಾ ಕಾರ್ಯಕ್ಕೆ ಸಹಕರಿಸಿದ ಎಲ್ಲಾ ನಿರ್ದೇಶಕರು, ಸದಸ್ಯರು ಹಾಗೂ ಹಿತೈಷಿಗಳಿಗೆ ಸಮಾಜ ಸೇವಾ ನಿರ್ದೇಶಕ ಸುರೇಶ್ ಪೂಜಾರಿ ಬಾಕಿಲ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಿದರು.







