01-09-2026, 8:00 PM
ಮಂಗಳೂರು, ಸೆ. 1: ನಾರಾಯಣ ಗುರುಗಳ ತತ್ವ ಹಾಗೂ ಆದರ್ಶಗಳನ್ನು ಪಾಲಿಸುವ ಮೊದಲು ಅವುಗಳ ಮೂಲ ಅದ್ವೈತದ ಅರ್ಥವನ್ನು ಅರಿತುಕೊಳ್ಳುವುದು ಅತ್ಯಂತ ಮುಖ್ಯ ಎಂದು ಶ್ರೀ ನಾರಾಯಣ ಗುರು ಧರ್ಮ ಪ್ರಸರಣ ಸೇವಾ ಟ್ರಸ್ಟ್ (ರಿ.)ನ ಟ್ರಸ್ಟಿ ವರದರಾಜ್ ಮಟ್ಟು ಕಟಪಾಡಿ ಹೇಳಿದರು. ಉರ್ವಸ್ಟೋರ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆ. 1ರಂದು ನಡೆದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಕಾರ್ಯಕ್ರಮದಲ್ಲಿ ಗುರು ಸಂದೇಶ ನೀಡಿದ ಅವರು ಮಾತನಾಡಿದರು. ನಾರಾಯಣ ಗುರುಗಳು […]
Read More
28-08-2026, 8:00 PM
ಮಂಗಳೂರು ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆಗಸ್ಟ್ 28ರಂದು ಸಂಜೆ 6.30ಕ್ಕೆ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಗುರುಪೂಜೆ ನೆರವೇರಿಸಲಾಯಿತು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರವು ಬ್ರಹ್ಮಶ್ರೀ ನಾರಾಯಣ ಗುರುಗಳ ಆಶಯ ಹಾಗೂ ಬಿಲ್ಲವ ಸಮಾಜದ ಸಂಘಟಿತ ಪ್ರಯತ್ನದ ಪ್ರತೀಕವಾಗಿ ರೂಪುಗೊಂಡ ಕ್ಷೇತ್ರವಾಗಿದೆ. 1908ರಲ್ಲಿ ಬಿಲ್ಲವ ಸಮಾಜದ ಮುಖಂಡ ಹಾಗೂ ಉದ್ಯಮಿ ಹೋಯ್ಗೆ ಬಜಾರ್ ಕೊರಗಪ್ಪ ಅವರು ಕೇರಳಕ್ಕೆ ತೆರಳಿ ನಾರಾಯಣ ಗುರುಗಳನ್ನು […]
Read More
28-08-2026, 1:30 PM
ಮಂಗಳೂರು ಅಗಸ್ಟ್ 28 : ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಜಯಂತಿಯ ಪ್ರಯುಕ್ತ ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಶಾಲಾ ಮಕ್ಕಳು ಹಾಗೂ ಅಂಗನವಾಡಿ ಮಕ್ಕಳಿಗೆ ಸಿಹಿ ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಗುರುಜಯಂತಿಯನ್ನು ಆಚರಿಸಲಾಯಿತು. ಆಗಸ್ಟ್ 28ರಂದು ಕೊಟ್ಟಾರದಲ್ಲಿರುವ ಸೇಂಟ್ ಪೀಟರ್ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಅಂಗನವಾಡಿಯ ಮಕ್ಕಳಿಗೆ ಸಿಹಿ ವಿತರಿಸಲಾಯಿತು. ಅನ್ನದಾನವು ಶ್ರೇಷ್ಠ ದಾನವಾಗಿದ್ದು, ಸಾಧ್ಯವಾದಷ್ಟು ಸಮಾಜ ಸೇವೆಯಲ್ಲಿ ತೊಡಗಿಸಿಕೊಳ್ಳುವ ಮೂಲಕ ಭಗವಂತನ ಸೇವೆ ಮಾಡಿದ ತೃಪ್ತಿ ದೊರೆಯುತ್ತದೆ ಎಂಬ ಆಶಯದೊಂದಿಗೆ ಕಾರ್ಯಕ್ರಮ […]
Read More
24-08-2026, 4:00 PM
ಮಂಗಳೂರು: ಸಮಾಜದಲ್ಲಿ ವ್ಯವಸ್ಥಿತವಾಗಿ ಬದುಕಲು ಉದ್ಯೋಗದ ಅಗತ್ಯವಿದೆ. ಸ್ವ-ಉದ್ಯೋಗದ ಮೂಲಕ ಸ್ವಾವಲಂಬಿಗಳಾಗಲು ಉತ್ತಮ ಅವಕಾಶಗಳು ದೊರೆತಾಗ ಅವುಗಳನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದು ಕಾರ್ಯಕ್ರಮದ ಉದ್ಘಾಟಕಿ ಚಂದ್ರಿಕಾ ಎಸ್. ನಾಯಕ್ ಹೇಳಿದರು. ಅವರು ಆ. 24ರಂದು ಸೋಮವಾರ ಬೆಳಿಗ್ಗೆ 10.30ಕ್ಕೆ ಉರ್ವ ಸ್ಟೋರ್‌ನ ರಘು ಬಿಲ್ಡಿಂಗ್‌ನಲ್ಲಿರುವ ಯುವವಾಹಿನಿ ಸಭಾಂಗಣದಲ್ಲಿ ಆಯೋಜಿಸಲಾದ 10 ದಿನಗಳ ಉದ್ಯಮಶೀಲತಾ ಅಭಿವೃದ್ಧಿ ಕಾರ್ಯಕ್ರಮದ ತರಬೇತಿ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು. ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಬೆಂಗಳೂರು, ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (CEDOK), ಮಂಗಳೂರು […]
Read More
24-08-2026, 2:00 PM
ಮಂಗಳೂರು ಅಗಸ್ಟ್ 24 : “ಭಜನೆಯು ಕೇವಲ ಹಾಡಲ್ಲ, ಅದು ಭಕ್ತನಿಗೂ ಪರಮಾತ್ಮನಿಗೂ ನಡುವಿನ ಮಧುರವಾದ ಅನುಸಂಧಾನ” ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 24-08-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಝೆಡ್ ಕಲಾ ವೇದಿಕೆ ಭಜನಾ ತಂಡ ಕುಳಾಯಿ ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿತು. ಹರಿನಾಮ ಸ್ಮರಣೆಯ ಭಕ್ತಿ ಭಾವ […]
Read More
21-08-2026, 8:00 PM
ಮಂಗಳೂರು ಅಗಸ್ಟ್ 21: “ಕ್ಯಾನ್ಸರ್ ರೋಗಕ್ಕೆ ಭಯಪಡುವ ಅಗತ್ಯವಿಲ್ಲ. ಆರಂಭದ ಹಂತದಲ್ಲಿಯೇ ರೋಗವನ್ನು ಪತ್ತೆಹಚ್ಚಿ ಸೂಕ್ತ ಚಿಕಿತ್ಸೆ ನೀಡಿದರೆ ಗುಣಪಡಿಸಲು ಸಾಧ್ಯ. ದೇಹದಲ್ಲಿ ಯಾವುದೇ ಅಸಹಜ ಬದಲಾವಣೆ ಕಂಡುಬಂದರೆ ನಿರ್ಲಕ್ಷ್ಯ ಮಾಡದೆ ವೈದ್ಯರನ್ನು ಸಂಪರ್ಕಿಸಿ ತಪಾಸಣೆ ಮಾಡಿಸಿಕೊಳ್ಳಬೇಕು” ಎಂದು ಕೆ.ಎಂ.ಸಿ. ಆಸ್ಪತ್ರೆ ಮಂಗಳೂರು ಕ್ಯಾನ್ಸರ್ ವಿಭಾಗದ ಸಲಹೆಗಾರ್ತಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸದಸ್ಯೆ ಮಮತಾ ಸುವರ್ಣ ಹೇಳಿದರು. ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಆ.21ರಂದು ಆಯೋಜಿಸಲಾದ ಕ್ಯಾನ್ಸರ್ ರೋಗದ ಮಾಹಿತಿ ಹಾಗೂ ಜಾಗೃತಿ […]
Read More
17-08-2026, 8:00 PM
ಮಂಗಳೂರು, ಆಗಸ್ಟ್ 17: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುತ್ತಿರುವ ಸಾಪ್ತಾಹಿಕ ಭಜನಾ ಸಂಕೀರ್ತನ ಸರಣಿಯ ಅಂಗವಾಗಿ ಭಜನಾ ಸೇವೆಯು ಸೋಮವಾರ ಸಂಜೆ ಕ್ಷೇತ್ರದಲ್ಲಿ ಭಕ್ತಿ ಭಾವದಿಂದ ನಡೆಯಿತು. ಈ ವಾರದ ಭಜನಾ ಸೇವೆಯನ್ನು ವೇದಾವತಿ ಮತ್ತು ಬಳಗ, ಅಳಪೆ–ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿಸಲಾಯಿತು. ಹರಿನಾಮ ಸ್ಮರಣೆಯೊಂದಿಗೆ ಭಕ್ತಿ ಭಾವಪೂರ್ಣವಾಗಿ ಭಜನೆ ನಡೆಸಿ, ಶ್ರೀ ಗೋಕರ್ಣನಾಥ ಹಾಗೂ ಶ್ರೀ ನಾರಾಯಣಗುರುಗಳ ಚರಣಕ್ಕೆ ಭಜನಾ ಸೇವೆಯನ್ನು […]
Read More
15-08-2026, 9:15 AM
ಮಂಗಳೂರು, ಆಗಸ್ಟ್ 15: ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರು ಹಾಗೂ ದೇಶದ ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸೈನಿಕರನ್ನು ಸ್ಮರಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಹೇಳಿದರು. ಅವರು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಉರ್ವಸ್ಟೋರ್‌ನ ಯುವವಾಹಿನಿ ಸಭಾಂಗಣದಲ್ಲಿ ಆಗಸ್ಟ್ 15ರಂದು ನಡೆದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. “ನಾವು ಇಂದು ನೆಮ್ಮದಿಯಾಗಿ ಬದುಕಲು ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಹಾಗೂ ಸೈನಿಕರ ಸೇವೆಯೇ ಪ್ರಮುಖ […]
Read More
11-08-2026, 8:00 PM
ಮಂಗಳೂರು ಅಗಸ್ಟ್ 11: “ಭಾರತವು ವಿಶ್ವದಲ್ಲೇ ಅತೀ ಹೆಚ್ಚು ಡಿಜಿಟಲ್ ಪಾವತಿ ವ್ಯವಸ್ಥೆ ಬಳಸುತ್ತಿರುವ ರಾಷ್ಟ್ರಗಳಲ್ಲಿ ಒಂದಾಗಿದೆ. ಬೀದಿಬದಿ ಅಂಗಡಿಗಳಿಂದ ಹಿಡಿದು ದೊಡ್ಡ ವ್ಯಾಪಾರ ವಹಿವಾಟುಗಳವರೆಗೆ ಡಿಜಿಟಲ್ ಪಾವತಿ ವ್ಯಾಪಕವಾಗಿ ಬಳಕೆಯಾಗುತ್ತಿದೆ. ವೈಯಕ್ತಿಕ ಡಿಜಿಟಲ್ ಪಾವತಿಗೆ ಪ್ರಸ್ತುತ ಯಾವುದೇ ಶುಲ್ಕವಿಲ್ಲದಿದ್ದರೂ, ವಾಣಿಜ್ಯ ವಹಿವಾಟುಗಳಲ್ಲಿ ಮುಂದಿನ ದಿನಗಳಲ್ಲಿ ನಿರ್ದಿಷ್ಟ ಮಿತಿಯನ್ನು ಮೀರಿದ ಪಾವತಿಗಳಿಗೆ ಸೇವಾ ಶುಲ್ಕ ವಿಧಿಸುವ ಸಾಧ್ಯತೆಯಿದೆ” ಎಂದು ಯುವವಾಹಿನಿ (ರಿ.) ಮಂಗಳೂರು ಘಟಕದ ಕೋಶಾಧಿಕಾರಿ ಹಾಗೂ ಹಣಕಾಸು ನಿರ್ವಹಣಾ ತಜ್ಞ ಚಂದ್ರಶೇಖರ್ ಕಿನ್ನಿಗೋಳಿ ಹೇಳಿದರು. ಯುವವಾಹಿನಿ […]
Read More
10-08-2026, 10:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 10-08-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಇವರ ಸಹಯೋಗದಲ್ಲಿ ನೆರವೇರಿತು. ಹರಿನಾಮ ಸ್ಮರಣೆಯ ಭಕ್ತಿ ಭಾವ ತುಂಬಿದ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ ಸರಿಯಾಗಿ ಕ್ಷೇತ್ರದ ನಾರಾಯಣ […]
Read More