19-07-2026, 8:00 PM
ಸುಳ್ಯ, ಜುಲೈ 19 : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಜೂನ್ ತಿಂಗಳ ‘ಗುರುಸ್ಪೂರ್ತಿ’ ಕಾರ್ಯಕ್ರಮವು ಘಟಕದ ಪೂರ್ವಾಧ್ಯಕ್ಷ ಸುನಿಲ್ ಪೂಜಾರಿ ಕಳಂಜಪಟ್ಟೆ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮದಲ್ಲಿ ಹೊನ್ನಪ್ಪ ಕೈಂದಾಡಿ ಅವರು ನಾರಾಯಣಗುರುಗಳ ಸಂದೇಶವನ್ನು ನೀಡುತ್ತಾ, ಗುರುಗಳ ತತ್ವ-ಆದರ್ಶಗಳನ್ನು ಪ್ರತಿಯೊಬ್ಬರೂ ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಸೌಹಾರ್ದತೆ, ಸಮಾನತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸಬೇಕೆಂದು ಕರೆ ನೀಡಿದರು. ಯುವವಾಹಿನಿ (ರಿ.) ಸುಳ್ಯ ಘಟಕದ ಅಧ್ಯಕ್ಷ ಮಹೇಶ್ ಕಲ್ಪಣೆ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ […]
Read More
14-06-2026, 1:00 PM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಕುಟುಂಬ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಘಟಕದ ಕೋಶಾಧಿಕಾರಿ ಹರೀಶ್ ದೋಳ ಅವರ ನಿವಾಸದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಘಟಕದ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ವಿವಿಧ ಮೋಜಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕುಟುಂಬ ಸದಸ್ಯರ ಪರಸ್ಪರ ಒಡನಾಟ ಮತ್ತು ಸೌಹಾರ್ದತೆಯನ್ನು ವೃದ್ಧಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ […]
Read More
17-05-2026, 7:00 PM
ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ನಾಲ್ಕನೇ ತಿಂಗಳ ‘ಗುರುಸ್ಫೂರ್ತಿ’ ಕಾರ್ಯಕ್ರಮವು ಮೇ 17 ರಂದು ಬೆಳಿಗ್ಗೆ ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ರಮೇಶ್ ಪೂಜಾರಿ ಜಯನಗರ ಇವರ ಗೃಹದಲ್ಲಿ ಅತ್ಯಂತ ಶ್ರದ್ಧಾ-ಭಕ್ತಿಯಿಂದ ಜರುಗಿತು. ದೀಪ ಪ್ರಜ್ವಲನೆ ಮತ್ತು ಭಜನೆ:ಕಾರ್ಯಕ್ರಮದ ಆತಿಥ್ಯ ವಹಿಸಿದ್ದ ರಮೇಶ್ ಪೂಜಾರಿ ಅವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿ, ಶುಭ ಹಾರೈಸಿದರು. ಉದ್ಘಾಟನೆಯ ಬಳಿಕ ನೆರೆದಿದ್ದ ಸದಸ್ಯರಿಂದ ಭಕ್ತಿಪೂರ್ವಕ ಭಜನಾ ಕಾರ್ಯಕ್ರಮ ನಡೆಯಿತು. ನಾರಾಯಣ ಗುರುಗಳ ತತ್ವ […]
Read More
25-04-2026, 10:00 PM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಶಿವಗಿರಿ ಹಾಗೂ ಇತರ ಪುಣ್ಯಕ್ಷೇತ್ರಗಳಿಗೆ ಎರಡು ದಿನಗಳ ಯಾತ್ರೆ ಆಯೋಜಿಸಲಾಯಿತು. ಯಾತ್ರೆಯ ಮೊದಲ ದಿನ ಬ್ರಹ್ಮಶ್ರೀ ನಾರಾಯಣ ಗುರುಗಳು ಸ್ಥಾಪಿಸಿದ ಶಾರದಾ ಪೀಠ, ತಪೋಭೂಮಿ ಸಮಾಧಿ ಸ್ಥಳ, ಗುರುಗಳು ಜನಿಸಿದ ಚೆಂಬಳಂತಿ, ಕುನ್ನುಂಪಾರೆ ಬಾಲಸುಬ್ರಹ್ಮಣ್ಯ ದೇವಸ್ಥಾನ ಹಾಗೂ ಗುರುಗಳು ಪ್ರಥಮವಾಗಿ ಪ್ರತಿಷ್ಠಾಪಿಸಿದ ಅರಿವಿಪುರ ಶಿವ ದೇವಸ್ಥಾನಗಳಿಗೆ ಭೇಟಿ ನೀಡಲಾಯಿತು. ಬಳಿಕ ಕನ್ಯಾಕುಮಾರಿ ದೇವಸ್ಥಾನಕ್ಕೂ ಭೇಟಿ ನೀಡಲಾಯಿತು. ಮುಂದುವರಿದಂತೆ, ಗುರುಗಳು ಸುಮಾರು ಆರು ವರ್ಷ ತಪಸ್ಸು ಮಾಡಿ ಸಿದ್ಧಿ […]
Read More
22-03-2026, 10:00 PM
ಸುಳ್ಯ: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಮೂರನೇ ಗುರುಸ್ಫೂರ್ತಿ ಕಾರ್ಯಕ್ರಮವನ್ನು ಯುವವಾಹಿನಿ ಸುಳ್ಯ ಘಟಕದ ಕೋಶಾಧಿಕಾರಿಯಾದ ಹರೀಶ್ ದೋಳ ಅವರ ಮನೆಯಲ್ಲಿ ದಿನಾಂಕ 22.03.2026 ಭಕ್ತಿಭಾವದಿಂದ ನೆರವೇರಿಸಲಾಯಿತು. ಕಾರ್ಯಕ್ರಮವನ್ನು ಮನೆಯ ಯಜಮಾನರಾದ ಹೊನ್ನಪ್ಪ ಪೂಜಾರಿ ದಂಪತಿಗಳು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ಘಟಕದ ಅಧ್ಯಕ್ಷ ಮಹೇಶ್ ಕಲ್ಲಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ರಾಜೇಶ್ ರೆಂಜಾಳ ಅವರು ಗುರುಸ್ಫೂರ್ತಿ ಕಾರ್ಯಕ್ರಮದ ಮಹತ್ವವನ್ನು ವಿವರಿಸಿದರು. ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ಅನುಷ್ಟಾನ […]
Read More
27-02-2026, 10:00 AM
ಸುಳ್ಯ: ಶ್ರೀಕ್ಷೇತ್ರ ಗೆಜ್ಜೆಗಿರಿ ವಾರ್ಷಿಕ ಜಾತ್ರಾ ಮಹೋತ್ಸವದ ಪ್ರಯುಕ್ತ ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ದಿನಾಂಕ 27-02-2026 ಹಾಗೂ 28-02-2026 ರಂದು ಎರಡು ದಿನಗಳ ಕಾಲ ಹಗಲು–ರಾತ್ರಿ ನಿರಂತರವಾಗಿ ವಿವಿಧ ಸೇವಾ ಕಾರ್ಯಗಳಲ್ಲಿ ಸ್ವಯಂಸೇವಕರಾಗಿ ಸೇವೆ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ವತಿಯಿಂದ ಶ್ರೀಕ್ಷೇತ್ರಕ್ಕೆ ಅನ್ನದಾನದ ಸಲುವಾಗಿ ರೂ. 5,500/- ದೇಣಿಗೆಯನ್ನು ಸಮರ್ಪಿಸಲಾಯಿತು.ಈ ಪುಣ್ಯ ಕಾರ್ಯದಲ್ಲಿ ಘಟಕದ ಅಧ್ಯಕ್ಷರು, ಪೂರ್ವಾಧ್ಯಕ್ಷರುಗಳು, ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.
Read More
18-01-2026, 1:00 PM
ಸುಳ್ಯ : “ಮನುಷ್ಯರೆಲ್ಲರೂ ಒಂದೇ ಜಾತಿ ಎಂಬ ಸಂದೇಶವನ್ನು ಸಾರಿದ ಬ್ರಹ್ಮಶ್ರೀ ನಾರಾಯಣಗುರುಗಳ ಸಂದೇಶಗಳನ್ನು ಪ್ರತಿಯೊಬ್ಬರೂ ದಿನನಿತ್ಯದ ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಸಮಾಜದಲ್ಲಿ ನಿಜವಾದ ಬದಲಾವಣೆ ಸಾಧ್ಯ. ಗುರು ತತ್ವಗಳನ್ನು ಆಧಾರವಾಗಿಟ್ಟುಕೊಂಡು ಸಂಘಟಿತರಾದರೆ ಯಶಸ್ಸು ಖಂಡಿತ,” ಎಂದು ಯುವವಾಹಿನಿ ಕೊಲ್ಯ ಘಟಕದ ಮಾಜಿ ಅಧ್ಯಕ್ಷ ಕುಸುಮಾಕರ ಕುಂಪಲ ಹೇಳಿದರು.ಅವರು ದಿನಾಂಕ 18.01.2026 ರಂದು ಯುವವಾಹಿನಿ ಸುಳ್ಯ ಘಟಕದ ವತಿಯಿಂದ, ಸುಳ್ಯ ಘಟಕದ ಸ್ಥಾಪಕಾಧ್ಯಕ್ಷ ಶಿವಪ್ರಸಾದ್ ಕೆ.ವಿ. ಅವರ ಮನೆಯಲ್ಲಿ ಆಯೋಜಿಸಲಾದ ಗುರುಸ್ಫೂರ್ತಿ ಕಾರ್ಯಕ್ರಮದಲ್ಲಿ ಗುರುಸಂದೇಶ ನೀಡಿ ಮಾತನಾಡಿದರು. […]
Read More
14-12-2025, 6:21 AM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ 2025-26ನೇ ಸಾಲಿನ ನೂತನ ಅಧ್ಯಕ್ಷರಾಗಿ ಮಹೇಶ್ ಕಲ್ಲಪಣೆ ಅವರನ್ನು ಆಯ್ಕೆ ಮಾಡಲಾಗಿದೆ. ಅಧ್ಯಕ್ಷರು : ಮಹೇಶ್ ಕಲ್ಲಪಣೆಪ್ರಥಮ ಉಪಾಧ್ಯಕ್ಷರು : ನೂತನ ನೆಟ್ಟಾರುದ್ವಿತೀಯ ಉಪಾಧ್ಯಕ್ಷರು : ಬಾಲಕೃಷ್ಣ ತಡಗಜೆಕಾರ್ಯದರ್ಶಿ : ರಂಜಿತ್ ದರ್ಖಾಸ್ತುಜತೆ ಕಾರ್ಯದರ್ಶಿ : ಚಂದ್ರಾವತಿ ಸುಳ್ಯಕೋಶಾಧಿಕಾರಿ : ಹರೀಶ್ ದೋಳವ್ಯಕ್ತಿತ್ವ ವಿಕಸನ ನಿರ್ದೇಶಕರು : ಉಮೇಶ್ ಮಣಿಕ್ಕರಕ್ರೀಡಾ ಮತ್ತು ಆರೋಗ್ಯ ನಿರ್ದೇಶಕರು : ಲವಿನ್ ಸುಳ್ಯಸಮಾಜ ಸೇವಾ ನಿರ್ದೇಶಕರು : ಶಶಿಕಲಾ ನೀರಬಿದಿರೆಸಾಂಸ್ಕೃತಿಕ, ಕಲೆ ಮತ್ತು […]
Read More
15-09-2025, 4:17 PM
ಬ್ರಹ್ಮಶ್ರೀ ನಾರಾಯಣ ಗುರುಸ್ವಾಮಿ ಬಿಲ್ಲವ ಸಂಘ ಸುಳ್ಯ ವತಿಯಿಂದ 171ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ ಆಚರಣೆ, ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶಾಂತಿವರ್ಯರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಪೂರ್ವಾಹ್ನ ಗಂಟೆ 8.30 ರಿಂದ ಭಜನಾ ಸಂಕೀರ್ತನೆ, 9.30 ರಿಂದ ಗುರುಪೂಜೆ ನಂತರ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬ್ರಹ್ಮ ಶ್ರೀ […]
Read More
14-09-2025, 3:14 PM
ಗುರುಪೂಜೆ, ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮವು ಸೆ.14 ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಶಾಂತಿವರ್ಯರಾದ ಪಿ.ಡಿ.ಹರೀಶ ಶಾಂತಿ ಪುತ್ತೂರು ಇವರ ನೇತೃತ್ವದಲ್ಲಿ ಗುರುಪೂಜೆ ನಡೆಯಿತು. ಪೂರ್ವಾಹ್ನ ಗಂಟೆ 8.30 ರಿಂದ ಭಜನಾ ಸಂಕೀರ್ತನೆ, 9.30 ರಿಂದ ಗುರುಪೂಜೆ ನಂತರ ಸಭಾ ಕಾರ್ಯಕ್ರಮ, ಸಾಧಕರಿಗೆ ಸನ್ಮಾನ, ಪ್ರತಿಭಾನ್ವಿತರಿಗೆ ಪ್ರತಿಭಾ ಪುರಸ್ಕಾರ ನಡೆಯಿತು. ಬ್ರಹ್ಮ ಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ.ಕೃಷ್ಣಕುಮಾರ್ ಸಭಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು. ಜನಪದ ಚಿಂತಕರಾದ ಶೈಲು ಬಿರ್ವ […]
Read More