16-07-2026, 2:00 PM
ಮಾಣಿ, ಜುಲೈ 16: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಘಟಕದ ಸದಸ್ಯರ ಮಕ್ಕಳಿಗೆ ‘ಪ್ರತಿಭಾ ಗೌರವ ಅಭಿನಂದನಾ ಕಾರ್ಯಕ್ರಮ’ ಆಯೋಜಿಸಿ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ಎಸ್‌ಎಸ್‌ಎಲ್‌ಸಿ ಹಾಗೂ ಪಿಯುಸಿ ಪರೀಕ್ಷೆಗಳಲ್ಲಿ ಉತ್ತಮ ಅಂಕಗಳನ್ನು ಗಳಿಸಿದ ಆಧ್ಯಾ ಎಂ.ಎಸ್., ಗ್ರೀಷ್ಮಾ, ಪ್ರಗತಿ ಆರ್. ಸಾಲ್ಯಾನ್, ಹನ್ಶಿಕಾ ಎಸ್.ಡಿ. ಪೂಜಾರಿ, ಕೌಶಿಕ್, ದಿಶಾ ಕೆ. ಪೂಜಾರಿ, ದಿಶಾಂತ್ ಪೂಜಾರಿ ಹಾಗೂ ಪೂರ್ವಿ ಬಿ.ಕೆ. ಅವರನ್ನು ಗೌರವಿಸಿ ಅಭಿನಂದಿಸಲಾಯಿತು. ಕಾರ್ಯಕ್ರಮದ […]
Read More
30-06-2026, 3:00 PM
ಮಂಗಳೂರು, ಜೂನ್ 30: ಮಹಿಳೆಯರು ಸ್ವಂತ ಉದ್ಯಮ ಆರಂಭಿಸುವ ಮೂಲಕ ಆರ್ಥಿಕವಾಗಿ ಸ್ವಾವಲಂಬಿಗಳಾಗಬೇಕು. ದಿಟ್ಟ ನಿರ್ಧಾರ ಮತ್ತು ಆತ್ಮವಿಶ್ವಾಸದಿಂದ ಯಾವುದೇ ಕ್ಷೇತ್ರದಲ್ಲಿಯೂ ಯಶಸ್ಸು ಸಾಧಿಸಲು ಸಾಧ್ಯ ಎಂದು ಜಿಲ್ಲಾ ಕೌಶಲ್ಯಾಭಿವೃದ್ಧಿ ಅಧಿಕಾರಿ ಪ್ರದೀಪ್ ಡಿಸೋಜಾ ಹೇಳಿದರು. ಅವರು ಮಹಿಳಾ ಮಂಡಲ (ರಿ.) ಕುಳಾಯಿ, ಮಂಗಳೂರಿನಲ್ಲಿ ನಡೆದ “ಒಂದು ದಿನದ ಉದ್ಯಮಶೀಲತಾ ತಿಳುವಳಿಕೆ ಶಿಬಿರ”ವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್ ಮಾತನಾಡಿ, ಮಹಿಳೆಯರು ಸಣ್ಣ-ಪುಟ್ಟ […]
Read More
30-06-2026, 1:00 PM
ಪರಪಾದೆ, ಜೂನ್ 30: ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಪರಪಾದೆಯ ದಕ್ಷಿಣ ಕನ್ನಡ ಜಿಲ್ಲಾ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆಯ ಸುಮಾರು 135 ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡೆಗಳನ್ನು ವಿತರಿಸುವ ಸಮಾಜಮುಖಿ ಸೇವಾ ಕಾರ್ಯಕ್ರಮ ನಡೆಯಿತು. ಶಾಲೆಯ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆ ಗೀತಾ ವಸಂತ್ ವಹಿಸಿದ್ದರು. ವೇದಿಕೆಯಲ್ಲಿ ಘಟಕದ ಕಾರ್ಯದರ್ಶಿ ವಂದೀಪ್, ಕಾರ್ಯಕ್ರಮದ ಸಂಚಾಲಕಿ ಹಾಗೂ ವಿದ್ಯಾರ್ಥಿ ಸಂಘಟನೆ ನಿರ್ದೇಶಕಿ ವೀಣಾ ಭಾಸ್ಕರ್, ಮಾರ್ಗದರ್ಶಕರಾದ ಜಯಾನಂದ ಅಮೀನ್ ಹಾಗೂ ಶಾಲೆಯ ಮುಖ್ಯೋಪಾಧ್ಯಾಯಿನಿ ರೇಖಾ […]
Read More
28-06-2026, 1:00 PM
ಮಾಣಿ: ಯುವ ಮನಸ್ಸುಗಳಲ್ಲಿ ಕನಸುಗಳ ಕಿಡಿ ಹೊತ್ತಿಸಿ, ಸೇವಾ ಮನೋಭಾವ ಹಾಗೂ ನಾಯಕತ್ವದ ಗುಣಗಳನ್ನು ಬೆಳೆಸುವ ಉದ್ದೇಶದಿಂದ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ಸದಸ್ಯತ್ವ ಅರಿವು ಹಾಗೂ ನಾಯಕತ್ವ ತರಬೇತಿ ಶಿಬಿರ ಯಶಸ್ವಿಯಾಗಿ ನಡೆಯಿತು. “ಯುವಶಕ್ತಿ ಜಾಗೃತಿಯಾದರೆ ಸಮಾಜದ ನಾಳೆ ಬೆಳಗುತ್ತದೆ” ಎಂಬ ಆಶಯದೊಂದಿಗೆ ನಡೆದ ಶಿಬಿರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಸಾಮಾಜಿಕ ಜಾಲತಾಣ ಹಾಗೂ ವೆಬ್‌ಸೈಟ್ ಸಂಪಾದಕರಾದ ರಾಜೇಶ್ ಸುವರ್ಣ ಅವರು ಯುವಕರಿಗೆ ಸದಸ್ಯತ್ವದ ಮಹತ್ವ, ನಾಯಕತ್ವದ ಗುಣಗಳು […]
Read More
14-06-2026, 1:00 PM
ಸುಳ್ಯ : ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ ಕುಟುಂಬ ಸಮ್ಮಿಲನ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವು ಘಟಕದ ಕೋಶಾಧಿಕಾರಿ ಹರೀಶ್ ದೋಳ ಅವರ ನಿವಾಸದಲ್ಲಿ ಸಂಭ್ರಮದಿಂದ ನಡೆಯಿತು. ಕಾರ್ಯಕ್ರಮದ ಅಂಗವಾಗಿ ಘಟಕದ ಸದಸ್ಯರು ಹಾಗೂ ಅವರ ಕುಟುಂಬದವರಿಗಾಗಿ ವಿವಿಧ ಮೋಜಿನ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು, ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು. ಕುಟುಂಬ ಸದಸ್ಯರ ಪರಸ್ಪರ ಒಡನಾಟ ಮತ್ತು ಸೌಹಾರ್ದತೆಯನ್ನು ವೃದ್ಧಿಸುವ ಉದ್ದೇಶದಿಂದ ಆಯೋಜಿಸಲಾದ ಈ ಕಾರ್ಯಕ್ರಮ ಎಲ್ಲರ ಮೆಚ್ಚುಗೆಗೆ ಪಾತ್ರವಾಯಿತು. ಬಳಿಕ ನಡೆದ ಸಭಾ ಕಾರ್ಯಕ್ರಮದಲ್ಲಿ ಕಳೆದ ಶೈಕ್ಷಣಿಕ […]
Read More
31-05-2026, 1:00 PM
ಅಳಕೆ : ವಿದ್ಯಾರ್ಥಿಗಳು ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಮತ್ತು ಮಾನವೀಯ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕೆಂದು ಕರೆ ನೀಡಿದರು. ಶ್ರೀ ನಾರಾಯಣಗುರುಗಳ ” ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಬಲಯುತರಾಗಿರಿ ” ಎಂಬ ಸಂದೇಶವು ಇಂದಿನ ವಿದ್ಯಾರ್ಥಿ ಸಮುದಾಯಕ್ಕೆ ಅತ್ಯಂತ ಪ್ರಸ್ತುತವಾಗಿದೆ ಎಂದು ತಿಳಿಸಿದರು. ಜ್ಞಾನ ಮತ್ತು ಸಂಸ್ಕಾರಗಳೊಂದಿಗೆ ಪಡೆದ ಶಿಕ್ಷಣವು ವ್ಯಕ್ತಿಯನ್ನು ಉತ್ತಮ ನಾಗರಿಕನನ್ನಾಗಿ ರೂಪಿಸಿ ಸಮಾಜದ ಅಭಿವೃದ್ಧಿಗೆ ಕೊಡುಗೆ ನೀಡುತ್ತದೆ ಎಂದರು. ಶಿಕ್ಷಣದ ಮೂಲಕ ಸಮಾನತೆ, ಸಹೋದರತೆ ಮತ್ತು ಮಾನವೀಯತೆಯ ಮೌಲ್ಯಗಳನ್ನು ಬೆಳೆಸಿಕೊಂಡು ಆದರ್ಶ ವ್ಯಕ್ತಿತ್ವವನ್ನು ರೂಪಿಸಿಕೊಳ್ಳುವಂತೆ […]
Read More
10-05-2026, 7:00 PM
ಕುಪ್ಪೆಪದವು : “ನಾರಾಯಣ ಗುರುಗಳ ತತ್ವದಂತೆ ‘ವಿದ್ಯೆ–ಉದ್ಯೋಗ–ಸಂಪರ್ಕ’ ಎಂಬ ಧ್ಯೇಯೋದ್ದೇಶದೊಂದಿಗೆ ರಾಜ್ಯವ್ಯಾಪಿ ಬೆಳೆಯುತ್ತಿರುವ ಯುವವಾಹಿನಿ ಸಂಸ್ಥೆಯು, ಯುವಶಕ್ತಿಯನ್ನು ಸಮಾಜಸೇವೆಯತ್ತ ಕೊಂಡೊಯ್ಯುತ್ತಿರುವುದು ಹೆಮ್ಮೆಯ ವಿಚಾರ,” ಎಂದು ಶಾಸಕರಾದ ವೈ ಭರತ್ ಶೆಟ್ಟಿ ಅಭಿಪ್ರಾಯಪಟ್ಟರು. ಅವರು ಯುವವಾಹಿನಿ (ರಿ.) ಕುಪ್ಪೆಪದವು-ಎಡಪದವು ಘಟಕದ ವತಿಯಿಂದ ವಿದ್ಯಾನಿಧಿ ಸಹಾಯಾರ್ಥವಾಗಿ ಕಿಲೆಂಜಾರು ಅರಮನೆ ಮೈದಾನದಲ್ಲಿ ಆಯೋಜಿಸಲಾಗಿದ್ದ ಕ್ರಿಕೆಟ್ ಪಂದ್ಯಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡುತ್ತಿದ್ದರು. ಘಟಕವು ಯುವಜನರನ್ನು ಒಗ್ಗೂಡಿಸಿ ಸಮಾಜಮುಖಿ ಕಾರ್ಯಕ್ರಮಗಳ ಮೂಲಕ ಮಾದರಿ ಸಂಘಟನೆಯಾಗಿ ಗುರುತಿಸಿಕೊಂಡಿದೆ ಎಂದು ಅವರು ಶ್ಲಾಘಿಸಿದರು. ಪಂದ್ಯಕೂಟವನ್ನು ಕಿಲೆಂಜಾರು ಅರಮನೆ […]
Read More
08-05-2026, 1:00 PM
ವಿಟ್ಲ : ಯುವವಾಹಿನಿ (ರಿ) ವಿಟ್ಲ ಘಟಕದ ವತಿಯಿಂದ ಬಿಲ್ಲವ ಸಂಘ (ರಿ) ಕುಂಡಡ್ಕ ಸಹಕಾರದೊಂದಿಗೆದಿನಾಂಕ 08/05/2026 ರಂದು ಎಸ್ ಎಸ್ ಎಲ್ ಸಿ ಮತ್ತು ಪಿ ಯು ಸಿ ಯ ಸಾಧಕರಿಗೆ ಪ್ರತಿಭಾ ಪುರಸ್ಕಾರ ಮತ್ತು ರಾಜ್ಯಕ್ಕೆ ಎಸ್ ಎಸ್ ಎಲ್ ಸಿ ಯಲ್ಲಿ 7ನೇ ರಾಂಕ್ ಬಂದ ವಿದ್ಯಾರ್ಥಿಗೆ ಸನ್ಮಾನಿಸಲಾಯಿತು
Read More
04-05-2026, 10:00 AM
ಮೂಡುಬಿದಿರೆ : “ಯಶಸ್ಸು ಎಂಬುದು ಒಂದು ದಿನದಲ್ಲಿ ಸಿಗುವುದಿಲ್ಲ. ಶ್ರಮ, ಶಿಸ್ತು ಹಾಗೂ ನಿರಂತರ ಪ್ರಯತ್ನಗಳ ಮೂಲಕ ಮಾತ್ರ ವಿದ್ಯಾರ್ಥಿಗಳು ತಮ್ಮ ಗುರಿಯನ್ನು ತಲುಪಬಹುದು” ಎಂದು ಡಾ. ಎಂ. ಮೋಹನ್ ಆಳ್ವ ವಿದ್ಯಾರ್ಥಿಗಳಿಗೆ ಕರೆ ನೀಡಿದರು. ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಹಾಗೂ ಆಳ್ವಾಸ್ ವಿದ್ಯಾಸಂಸ್ಥೆ ಅವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗಾಗಿ ಆಯೋಜಿಸಲಾದ ದ್ವಿತೀಯ ಮಾರ್ಗದರ್ಶನ ಶಿಬಿರವು ಮೇ 4ರಂದು ಆಳ್ವಾಸ್ ಕಚೇರಿಯಲ್ಲಿ ನಡೆಯಿತು. ಶಿಬಿರದಲ್ಲಿ ಎಸ್.ಎಸ್.ಎಲ್.ಸಿ ವಿಭಾಗದ 10 […]
Read More
21-04-2026, 11:00 AM
ಮೂಡುಬಿದಿರೆ: ಯುವವಾಹಿನಿ (ರಿ.) ಮೂಡುಬಿದಿರೆ ಘಟಕ ಮತ್ತು ಆಳ್ವಾಸ್ ಶಿಕ್ಷಣ ಸಂಸ್ಥೆ ಇವರ ಸಂಯುಕ್ತ ಆಶ್ರಯದಲ್ಲಿ 2025-26ನೇ ಸಾಲಿನ ಎಸ್.ಎಸ್.ಎಲ್.ಸಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ಶಿಬಿರವು ದಿನಾಂಕ 21-04-2026 ರಂದು ಆಳ್ವಾಸ್ ಕಚೇರಿಯಲ್ಲಿ ಯಶಸ್ವಿಯಾಗಿ ನಡೆಯಿತು. ಈ ಶಿಬಿರದಲ್ಲಿ ಎಸ್.ಎಸ್.ಎಲ್.ಸಿ ವಿಭಾಗದ 18 ಹಾಗೂ ಪಿಯುಸಿ ವಿಭಾಗದ 8 ವಿದ್ಯಾರ್ಥಿಗಳು ಸೇರಿ ಒಟ್ಟು 26 ವಿದ್ಯಾರ್ಥಿಗಳು ಭಾಗವಹಿಸಿ ಶಿಬಿರದ ಪ್ರಯೋಜನ ಪಡೆದರು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಭಾಗವಹಿಸಿದ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಡಾ. ಎಂ. ಮೋಹನ್ […]
Read More