ಮೂಡುಬಿದ್ರೆ ಸೆ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ಸಮಾಜ ಸೇವಾ ನಿರ್ದೇಶಕ ಶ್ರೀ ಉಮೇಶ್ ಕೋಟ್ಯಾನ್ ಅವರ ಸಹಕಾರದಲ್ಲಿ ಚಾಮುಂಡಿಬೆಟ್ಟ, ಕೋಟೆಬಾಗಿಲು ನಿವಾಸಿ ಶ್ರೀಮತಿ ಬೇಬಿ ಪೂಜಾರ್ತಿ ಅವರ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಸ್ಪಂದಿಸಲಾಯಿತು.

ಕುಟುಂಬಕ್ಕೆ ಅಗತ್ಯವಿರುವ ದಿನಸಿ ಹಾಗೂ ರೇಷನ್ ಸಾಮಗ್ರಿಗಳನ್ನು ವಿತರಿಸುವುದರ ಜೊತೆಗೆ ಆರ್ಥಿಕ ನೆರವು ನೀಡುವ ಮೂಲಕ ಮಾನವೀಯ ಸಹಾಯ ಹಸ್ತ ಚಾಚಲಾಯಿತು. ಅಶಕ್ತ ಕುಟುಂಬಗಳ ಸಂಕಷ್ಟಕ್ಕೆ ಸ್ಪಂದಿಸಿ, ಅಗತ್ಯದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವುದು ಯುವವಾಹಿನಿಯ ಸಮಾಜ ಸೇವೆಯ ಪ್ರಮುಖ ಉದ್ದೇಶವಾಗಿದೆ. ಸಮಾಜದ ಸಂಕಷ್ಟದಲ್ಲಿರುವವರೊಂದಿಗೆ ನಿಂತು ಅವರಿಗೆ ಆತ್ಮಸ್ಥೈರ್ಯ ನೀಡುವ ಕಾರ್ಯವನ್ನು ಸಂಘಟನೆ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹಾಗೂ ಸಮಾಜ ಸೇವಾ ನಿರ್ದೇಶಕ ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.







