15-11-2024, 3:59 PM
ಹೆಜಮಾಡಿ : ಯುವವಾಹಿನಿ (ರಿ) ಹೆಜಮಾಡಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವ ಸಂಘದ ವಠಾರದಲ್ಲಿ ನವೆಂಬರ್ 13 ರಂದು ತುಳುವೆರೆ ತುಳಸಿ ಪರ್ಬ ಕಾರ್ಯಕ್ರಮ ಜರುಗಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ಹೆಜಮಾಡಿ ಘಟಕದ ಅಧ್ಯಕ್ಷೆ ದೀಪಾ ದಿನೇಶ್ ವಹಿಸಿದರು. ಮುಖ್ಯ ಅತಿಥಿಯಾಗಿ ಯುವವಾಹಿನಿ (ರಿ ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಉದಯ ಅಮೀನ್ ಮಟ್ಟು, ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷರು ಮೋಹನ್ ದಾಸ್ ಹೆಜಮಾಡಿ, ಹೆಜಮಾಡಿ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೆಸರರು ದಯಾನಂದ ಹೆಜಮಾಡಿ, […]
Read More
13-11-2024, 5:42 PM
ಮೂಡುಬಿದಿರೆ: ಹಣತೆಯು ತಾನು ಬೆಳಕು ಚೆಲ್ಲುವ ಜೊತೆಗೆ ಇತರ ಹಣತೆಗಳನ್ನೂ ಬೆಳಗಿಸಿ ಬೆಳಕನ್ನು ಆಚರಿಸುವ ಪ್ರಕ್ರಿಯೆಯಲ್ಲಿ ಜೀವನ ಸಾರ್ಥಕ್ಯ ಸಾರುತ್ತದೆ. ನಾವೂ ಲೋಕದ ಅಭ್ಯುದಯಕ್ಕಾಗಿ ಕೊಡುಗೆ ನೀಡುವ ದೀಪಗಳಾಗಬೇಕಾಗಿದೆ. ಗಂಧದಂತೆ ಸವೆಸಿಕೊಂಡು ತ್ಯಾಗಿಯಾಗಿ ಪರಿಮಳಿಸಬೇಕಾಗಿದೆ ಎಂದು ಎಸ್.ಎನ್.ಎಂ ಪಾಲಿಟೆಕ್ನಿಕ್ ಉಪನ್ಯಾಸಕ ಡಾ. ಎಸ್.ಪಿ.ಗುರುದಾಸ್ ಅಭಿಪ್ರಾಯಪಟ್ಟರು. ಸಮಾಜ ಮಂದಿರ ಸಭಾ (ರಿ) ಮೂಡುಬಿದಿರೆ ಮತ್ತು ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಇವರ ಜಂಟಿ ಆಶ್ರಯದಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಸಾರ್ವಜನಿಕರಿಗಾಗಿ 3ನೇ ವರ್ಷದ ಬೆದ್ರ ಗೂಡುದೀಪ ಮತ್ತು ರಂಗೋಲಿ […]
Read More
06-11-2022, 4:50 PM
ಮಂಗಳೂರು:- ಸ್ವಾತಂತ್ರ್ಯ ಅಮೃತ ಮಹೋತ್ಸವ 2022ರ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಮಂಗಳೂರು ಘಟಕವು, ಘಟಕದ ಸದಸ್ಯರಿಗೆ, ಮಕ್ಕಳಿಗೆ ಮತ್ತು ಮಹಿಳೆಯರಿಗೆ ದಿನಾಂಕ 06 ನವೆಂಬರ್ 2022ರ ಭಾನುವಾರದಂದು ಯುವವಾಹಿನಿ ಸಭಾಂಗಣದಲ್ಲಿ ಸಂಗೀತ ಸ್ಪರ್ಧೆಯನ್ನು ಏರ್ಪಡಿಸಿತ್ತು. ಈ ಸಂಗೀತ ಸ್ಪರ್ಧೆಯ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿದ ಯುವವಾಹಿನಿ ಕೇಂದ್ರ ಸಮಿತಿಯ ಎರಡನೇ ಉಪಾಧ್ಯಕ್ಷರಾದ ಹರೀಶ್ ಕೆ. ಪೂಜಾರಿಯವರು ಮಾತನಾಡುತ್ತಾ ಸದಸ್ಯರಲ್ಲಿರುವ ಸೂಕ್ತ ಪ್ರತಿಭೆಗಳ ಅನಾವರಣಕ್ಕೆ ಇಂಥ ಕಾರ್ಯಕ್ರಮಗಳು ಮಾದರಿ ಎಂದು ಅಭಿಪ್ರಾಯಪಟ್ಟರು. ಸಂಗೀತ ಸ್ಪರ್ಧೆಯಲ್ಲಿ 9 […]
Read More
05-11-2022, 4:30 PM
ಹೆಜಮಾಡಿ :- ಹೆಜಮಾಡಿ ಯುವವಾಹಿನಿ ಘಟಕದ ಆಶ್ರಯದಲ್ಲಿ ಹೆಜಮಾಡಿ ಬಿಲ್ಲವರ ಸಂಘದ ಗುರು ಮಂದಿರದಲ್ಲಿ ತುಳುನಾಡ ತುಳಸಿ ಪರ್ಭ ಆಚರಣೆಯು ದಿನಾಂಕ 05 ನವೆಂಬರ್ 2022ರಂದು ನಡೆಯಿತು. ಗುರು ಮಂದಿರದ ಪ್ರಧಾನ ಅರ್ಚಕ ಹರೀಶ್ ಶಾಂತಿ ಮುಂಬಯಿ ಧಾರ್ಮಿಕ ಪೂಜಾ ಕಾರ್ಯಕ್ರಮ ನೆರವೇರಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ಬಿಲ್ಲವ ಸಂಘದ ಅಧ್ಯಕ್ಷ ಲೋಕೇಶ್ ಅಮೀನ್, ಯುವವಾಹಿನಿ ಹೆಜಮಾಡಿ ಘಟಕ ದ ಅಧ್ಯಕ್ಷ ಧನಂಜಯ ಕಾರ್ಯದರ್ಶಿ ಜಯಶ್ರೀ ಸದಾಶಿವ, ಯುವವಾಹಿನಿ ಕೇಂದ್ರ ಸಮಿತಿಯ […]
Read More
05-11-2022, 2:53 PM
ಕೊಲ್ಯ :- ತುಳಸಿ ಹಬ್ಬದ ಪ್ರಯುಕ್ತ ಘಟಕದ ಸದಸ್ಯರಿಗೆ ದಿನಾಂಕ 05 ನವೆಂಬರ್ 2022ರಂದು ಸಾಂಪ್ರದಾಯಿಕ ಹಣತೆ ಬೆಳಗಿದ ಅಂದದ ತುಳಸಿ ಕಟ್ಟೆ ಫೋಟೋ ಸ್ಪರ್ಧೆಯನ್ನು ಘಟಕದ ಸದಸ್ಯರಿಗೆ ಏರ್ಪಡಿಸಿದ್ದು, ಒಟ್ಟು 31 ಸದಸ್ಯರು ಭಾಗವಹಿಸಿದ್ದರು. ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರು ಕು. ಅನ್ವಿತಾ. ಎ, ಮತ್ತು ವಿದ್ಯಾರ್ಥಿ ಸಂಘಟನೆ ನಿರ್ದೇಶಕರದ ಕು. ಸಚೇತ ಸಾಲ್ಯಾನ್ ಅವರು ಈ ಸ್ಪರ್ಧೆಯ ಜವಾಬ್ದಾರಿ ವಹಿಸಿಕೊಂಡಿದ್ದರು. ಬ್ರಹ್ಮ ಶ್ರೀ ನಾರಾಯಣ ಗುರು ಧರ್ಮಶಿಕ್ಷಣ ತರಗತಿ ಇದರ ಗುರುಗಳಾದ ಡಾ. […]
Read More
01-11-2022, 5:35 PM
ಕೊಲ್ಯ :- ಯುವವಾಹಿನಿ (ರಿ.) ಕೊಲ್ಯ ಘಟಕದ ಆಶ್ರಯದಲ್ಲಿ ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ ಸೋಮೇಶ್ವರ ಮತ್ತು ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಹಾಗೂ ಚುಟುಕು ಸಾಹಿತ್ಯ ಪರಿಷತ್ ಉಳ್ಳಾಲ ಘಟಕ ಇದರ ಸಹಭಾಗಿತ್ವದಲ್ಲಿ ಕನ್ನಡ ರಾಜ್ಯೋತ್ಸವದ ಪ್ರಯುಕ್ತ ಯುವಸಂಜೆ- ಭಾವಲಹರಿ, ಕವಿ ಕಾವ್ಯ ಗಾಯನವು ದಿನಾಂಕ 01 ನವೆಂಬರ್ 2022 ರಂದು ಸಂಜೆ ಬ್ರಹ್ಮಶ್ರೀ ನಾರಾಯಣಗುರು ಸಭಾ ಭವನ ಕೊಲ್ಯದಲ್ಲಿ ಜರುಗಿತು. ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ […]
Read More
29-10-2022, 4:22 PM
ಕೂಳೂರು :- ದೀಪಾವಳಿಯ ಬೆಳಕು ಅಂತರಾತ್ಮವನ್ನು ಉದ್ದೀಪನಗೊಳಿಸಬೇಕು, ಪಟಾಕಿ ಸದ್ದು ನಿದ್ದೆಯಲ್ಲಿದ್ದವರನ್ನೂ ಬಡಿದೆಬ್ಬಿಸುವಂತೆ ದೀಪಾವಳಿ ಹಬ್ಬ ನಮ್ಮೊಳಗೆ ಅಂತರ್ಗತವಾಗಿರುವ ಅಂತಃಸತ್ವವನ್ನು ಬಡಿದೆಬ್ಬಿಸಬೇಕು ಮತ್ತು ಅಂಧಕಾರವನ್ನು ಹೋಗಲಾಡಿಸಬೇಕು ಎಂದು ಕುದ್ರೋಳಿ ನಾರಾಯಣ ಗುರು ಕಾಲೇಜು ಉಪನ್ಯಾಸಕ ಕೇಶವ ಬಂಗೇರ ಉಪನ್ಯಾಸ ನೀಡಿದರು. ಅವರು ಯುವವಾಹಿನಿ (ರಿ.) ಕೂಳೂರು ಘಟಕ ವತಿಯಿಂದ ದಿನಾಂಕ 29 ಅಕ್ಟೋಬರ್ 2022 ರಂದು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ರವರ ಮನೆ ಪಂಜಿಮೊಗರು ಶ್ರೀರಕ್ಷಾದಲ್ಲಿ ನಡೆದ -ನಮ್ಮ ಮನೆ ಹಬ್ಬ ದೀಪಾವಳಿ ಕಾರ್ಯಕ್ರಮದಲ್ಲಿ […]
Read More
26-10-2022, 5:54 PM
ಮಂಗಳೂರು :- ದಿನಾಂಕ 26 ಅಕ್ಟೋಬರ್ 2022ರಂದು ಮಂಗಳೂರು ಘಟಕದ ವತಿಯಿಂದ ದೀಪಾವಳಿಯ ಸಂಭ್ರಮಾಚರಣೆಯನ್ನು ಯುವವಾಹಿನಿ ಸಭಾಂಗಣದಲ್ಲಿ ಆಚರಿಸಲಾಯಿತು. ಪ್ರಾರಂಭದಲ್ಲಿ ಭಜನಾ ಕಾರ್ಯಕ್ರಮವನ್ನು ನಡೆಸಲಾಯಿತು. ಗುರುಗಳ ಭಾವಚಿತ್ರದ ಸಾನಿಧ್ಯದಲ್ಲಿ ಗುರು ಪೂಜೆಯನ್ನು ನಡೆಸಿ, ಎಲ್ಲರಿಗೂ ಪ್ರಸಾದ ವಿತರಿಸಲಾಯಿತು. ನಂತರ ನಡೆದ ಸಭಾ ಕಾರ್ಯಕ್ರಮದಲ್ಲಿ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್ ರವರು ಎಲ್ಲಾ ಮಾಜಿ ಅಧ್ಯಕ್ಷರನ್ನು, ಪದಾಧಿಕಾರಿಗಳನ್ನು ಹಾಗೂ ಸರ್ವ ಸದಸ್ಯರನ್ನು ಆತ್ಮೀಯವಾಗಿ ಸಭೆಗೆ ಸ್ವಾಗತಿಸಿದರು. ಕಾರ್ಯದರ್ಶಿಯವರಾದ ಅಶೋಕ್ ಅಂಚನ್ ರವರು ಗತ ಸಭೆಯ ವರದಿಯನ್ನು ಮಂಡಿಸಿ, ಅನುಮೋದನೆ […]
Read More
09-10-2022, 3:17 AM
ವೇಣೂರು :- ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಸಮಗ್ರ ಪ್ರಶಸ್ತಿಯನ್ನು ಯುವವಾಹಿನಿ ಮಾಣಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 09 ಅಕ್ಟೋಬರ್ 2022ರಂದು ಜರಗಿದ ಕೆಸರ್ ಡೊಂಜಿ ಕ್ರೀಡಾಕೂಟದಲ್ಲಿ ಭಾಗವಹಿಸಿ ಅತೀ ಹೆಚ್ಚು ವಿಭಾಗದಲ್ಲಿ ಸ್ಪರ್ಧಿಸಿ ತೀವ್ರ ಪೈಪೋಟಿ ನೀಡಿ ಹೆಚ್ಚು ಬಹುಮಾನ ಪಡೆಯುವಲ್ಲಿ ಯಶಸ್ವಿಯಾಯಿತು. ಸಂಜೆ ನಡೆದ ಸಮಾರೋಪ ಸಮಾರಂಭದಲ್ಲಿ ಶ್ರೀ ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪ್ರಶಸ್ತಿ ವಿತರಿಸಿದರು. ಈ ಸಂದರ್ಭದಲ್ಲಿಕಾರ್ಯಕ್ರಮದಲ್ಲಿ […]
Read More
09-10-2022, 3:10 AM
ವೇಣೂರು :- ಹಿರಿಯರ ಕಾಲದಿಂದಲೂ ಕೃಷಿಯೇ ನಮ್ಮ ಜೀವನಾಡಿ, ಕೃಷಿಯನ್ನು ಬೆಳೆಸಿ ಉಳಿಸಿ ಮುಂದಿನ ಪೀಳಿಗೆಗೆ ಪರಿಚಯಿಸು ಜವಾಬ್ದಾರಿ ನಮ್ಮ ಮೇಲಿದೆ. ಕೃಷಿಯನ್ನು ಅವಲಂಬಿಸಿ ಬದುಕಿದ ನಮ್ಮ ಹಿರಿಯರ ಜೀವನವೇ ಅದರ್ಶ ಎಂದು ಮುಲ್ಕಿ-ಮೂಡಬಿದಿರೆ ಕ್ಷೇತ್ರದ ಶಾಸಕರಾದ ಉಮನಾಥ್ ಕೋಟ್ಯಾನ್ ತಿಳಿಸಿದರು. ಅವರು ಯುವವಾಹಿನಿ ಕೇಂದ್ರ ಸಮಿತಿ ಆಶ್ರಯದಲ್ಲಿ ಯುವವಾಹಿನಿ ವೇಣೂರು ಘಟಕದ ಆತಿಥ್ಯದಲ್ಲಿ “ಕೆಸರ್ ಡೊಂಜಿ ದಿನ”ಕೆಸರುಗದ್ದೆ ಕ್ರೀಡಾಕೂಟದ ಕಾರ್ಯಕ್ರಮದಲ್ಲಿ ಆತಿಥಿಯಾಗಿ ಭಾಗವಹಿಸಿ ಮಾತನಾಡಿದರು. ಸಂಘಟನೆಗಳು ಸಮುದಾಯದ ಶಕ್ತಿಯಾಗಬೇಕು :- ಪದ್ಮರಾಜ್ ಆರ್ ಬ್ರಹ್ಮಶ್ರೀ ನಾರಾಯಣ […]
Read More