19-02-2026, 8:00 PM
ಕಾರ್ಕಳ: “ಸಮಾಜದಲ್ಲಿರುವ ಅಶಕ್ತರಿಗೆ ಆಸರೆಯಾಗುವುದು ಮತ್ತು ಬಡ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಮಹತ್ವ ನೀಡಿ ಪ್ರೋತ್ಸಾಹಿಸುವುದು ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ನಾವು ಸಲ್ಲಿಸುವ ನಿಜವಾದ ಪೂಜೆ. ಗುರುಗಳ ತತ್ವ ಹಾಗೂ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಮೂಲಕ ಸ್ವಸ್ಥ ಸಮಾಜ ನಿರ್ಮಾಣಕ್ಕೆ ನಾವೆಲ್ಲರೂ ಕಟಿಬದ್ಧರಾಗಬೇಕು,” ಎಂದು ಉಡುಪಿಯ ನಿವೃತ್ತ ಉಪನ್ಯಾಸಕರಾದ ದಯಾನಂದ ಬಿ. ಕಿದಿಯೂರು ಅವರು ಕರೆ ನೀಡಿದರು.ಅವರು ಯುವವಾಹಿನಿ (ರಿ.) ಕಾರ್ಕಳ ಘಟಕದ ನೇತೃತ್ವದಲ್ಲಿ, ಕಾಂತಾವರ ಬಿಲ್ಲವ ಸಂಘದ ಆತಿಥ್ಯದಲ್ಲಿ ದಿನಾಂಕ 19.02.2026 ರಂದು ನಡೆದ “ಗುರುಭ್ಯೋ […]
Read More
10-02-2026, 11:00 AM
ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ಮಾನವೀಯ ಸೇವಾ ಮನೋಭಾವಕ್ಕೆ ಸಾಕ್ಷಿಯಾಗಿ, ಕಾರ್ಕಳ ತಾಲೂಕು ಏರ್ಲಪಾಡಿ ಗ್ರಾಮದ ಚೈತ್ರ–ಸಂತೋಷ್ ದಂಪತಿಗಳ ಮಗುವಿನ ಚಿಕಿತ್ಸಾ ವೆಚ್ಚಕ್ಕಾಗಿ ರೂ. 20,000 ಧನಸಹಾಯವನ್ನು ನೀಡಲಾಯಿತು. ಮಗುವಿಗೆ ಶ್ರವಣ ಯಂತ್ರ ಅಳವಡಿಕೆ ಹಾಗೂ ಅಗತ್ಯ ಶಸ್ತ್ರಚಿಕಿತ್ಸೆಗಾಗಿ ಈ ನೆರವು ಒದಗಿಸಲಾಗಿದ್ದು, ದಿನಾಂಕ 10/02/2026 ರಂದು ಘಟಕದ ಪದಾಧಿಕಾರಿಗಳು ಮಗುವಿನ ನಿವಾಸಕ್ಕೆ ತೆರಳಿ ಕುಟುಂಬದವರಿಗೆ ಧನಸಹಾಯವನ್ನು ಹಸ್ತಾಂತರಿಸಿದರು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮೀನ್ ಹಾಗೂ ಘಟಕದ […]
Read More
14-01-2026, 9:59 AM
ಕಾರ್ಕಳ: ದಿನಾಂಕ 14.01.2025 ರಂದು ಶ್ರೀ ಕೃಷ್ಣ ಕ್ಷೇತ್ರ ಆನೆಕೆರೆ, ಕಾರ್ಕಳದಲ್ಲಿ ಆಯೋಜಿಸಲಾದ ಸಾಮೂಹಿಕ ಸತ್ಯನಾರಾಯಣ ಪೂಜೆಯ ಸಂದರ್ಭದಲ್ಲಿ, ಸಹಕಾರ ರತ್ನ ಪ್ರಶಸ್ತಿ ಪುರಸ್ಕೃತ ಹಿರಿಯರಾದ ಭಾಸ್ಕರ್ ಕೋಟ್ಯಾನ್ ಇರುವತ್ತೂರು ಅವರನ್ನು ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಈ ಸನ್ಮಾನ ಕಾರ್ಯಕ್ರಮದಲ್ಲಿ ಕ್ಷೇತ್ರದ ಶಾಸಕರಾದ ವಿ. ಸುನಿಲ್ ಕುಮಾರ್, ಯುವವಾಹಿನಿ ಕಾರ್ಕಳ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ, ಕಾರ್ಯದರ್ಶಿ ರಾಕೇಶ್ ಅಮಿನ್, ಘಟಕದ ಪೂರ್ವಾಧ್ಯಕ್ಷರು, ನಿರ್ದೇಶಕರು ಹಾಗೂ ಪದಾಧಿಕಾರಿಗಳು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ […]
Read More
03-01-2026, 4:09 AM
ಕಾರ್ಕಳ: ಯುವವಾಹಿನಿ (ರಿ.) ಕಾರ್ಕಳ ಘಟಕದ ವತಿಯಿಂದ “ಗುರುಭೋ ನಮಃ – ಯುವಮನಸ್ಸಿಗೆ ಗುರು ಸಂದೇಶ” ಕಾರ್ಯಕ್ರಮವು ಜನವರಿ 3ರಂದು ಘಟಕದ ಪೂರ್ವಾಧ್ಯಕ್ಷರಾದ ಗಣೇಶ್ ಸಾಲ್ಯಾನ್ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಕಾರ್ಯಕ್ರಮವನ್ನು ನಾರಾಯಣಗುರು ಅಭಿವೃದ್ಧಿ ನಿಗಮದ ಅಧ್ಯಕ್ಷ ಮಂಜುನಾಥ್ ಪೂಜಾರಿ ಮುದ್ರಾಡಿ ಅವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಬ್ರಹ್ಮಶ್ರೀ ನಾರಾಯಣ ಗುರುಗಳ ಆದರ್ಶ ತತ್ವಗಳನ್ನು ಸಮಾಜದ ಎಲ್ಲ ವರ್ಗಗಳಿಗೆ ತಲುಪಿಸುವ ಉದ್ದೇಶದಿಂದ ಸರಕಾರ ಮಟ್ಟದಲ್ಲಿ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸುವ ಯೋಜನೆಯನ್ನು […]
Read More
23-12-2025, 3:55 AM
ಯುವವಾಹಿನಿ (ರಿ.) ಕಾರ್ಕಳ ಘಟಕದ ಆಶ್ರಯದಲ್ಲಿ 6ನೇ ವರ್ಷದ “ಯುವವಾಹಿನಿ ಪೊರ್ಲಾ ಬಾಲೆ – 2025” ಸ್ಪರ್ಧೆಯ ಬಹುಮಾನ ವಿತರಣಾ ಕಾರ್ಯಕ್ರಮವು ಡಿಸೆಂಬರ್ 23ರಂದು ಮಂಗಳವಾರ ಸಂಜೆ 5.30ಕ್ಕೆ ಕಾರ್ಕಳದ ಶ್ರೀ ಕೃಷ್ಣ ಸಮುದಾಯ ಭವನದಲ್ಲಿ ವಿಜೃಂಭಣೆಯಿಂದ ನಡೆಯಿತು. ಸಮಾರಂಭದ ಅಧ್ಯಕ್ಷತೆಯನ್ನು ಯುವವಾಹಿನಿ ಘಟಕದ ಅಧ್ಯಕ್ಷರಾದ ಪ್ರಕಾಶ್ ಪೂಜಾರಿ ಕೆರ್ವಾಸೆ ವಹಿಸಿದ್ದರು. ವೇದಿಕೆಯಲ್ಲಿ ಕಾರ್ಕಳ ಬಿಲ್ಲವ ಸಂಘದ ಅಧ್ಯಕ್ಷ ಪ್ರಮಾಲ್ ಕುಮಾರ್, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಲೋಕೇಶ್ ಕೋಟ್ಯಾನ್, ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ […]
Read More
01-12-2025, 2:32 PM
2025-26 ರ ಸಾಲಿನ ಪದಪ್ರದಾನ ಸಮಾರಂಭ 03.11.2025ರ ಸೋಮವಾರದಂದು ಕಾರ್ಕಳದ ಕಾರ್ಕಳ ಇನ್ ಬೈಪಾಸ್ ನಲ್ಲಿ ನಡೆಯಿತು. ಘಟಕದ ಅಧ್ಯಕ್ಷರಾದ ಮಮತಾ ಅಂಚನ್ ಅಧ್ಯಕ್ಷತೆಯಲ್ಲಿ ನಡೆದ ಈ ಕಾರ್ಯಕ್ರಮವನ್ನು ಹಿರಿಯರಾದ ಭಾಸ್ಕರ್ ಎಸ್ ಕೋಟ್ಯಾನ್ ರವರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ, ಕಾರ್ಕಳ ಯುವವಾಹಿನಿಯು ಯುವ ಸದಸ್ಯರನ್ನು ಒಗ್ಗೂಡಿಸಿಕೊಂಡು ಶೈಕ್ಷಣಿಕ, ಧಾರ್ಮಿಕ, ಆರೋಗ್ಯಸೇವೆ ಮಾಡುವ ಜೊತೆಗೆ ಮಾದರಿ ಸಂಘವಾಗಿ ಬೆಳೆಯುತ್ತಿರುವುದು ಶ್ಲಾಘನೀಯ ಎಂದು ಅಭಿಪ್ರಾಯ ಪಟ್ಟರು. ಮುಖ್ಯ ಅತಿಥಿಗಳಾಗಿ ಯುವ ವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಲೋಕೇಶ್ […]
Read More
03-11-2025, 4:48 AM
ಕಾರ್ಕಳ : ಯುವವಾಹಿನಿ (ರಿ.) ಕಾರ್ಕಳ ಘಟಕದ ನೂತನ ಅಧ್ಯಕ್ಷರಾಗಿಪ್ರಕಾಶ್ ಪೂಜಾರಿ ಕೆರ್ವಾಶೆ ಆಯ್ಕೆಯಾಗಿದ್ದಾರೆ 2025-26 ನೇ ಸಾಲಿನ ನೂತನ ಕಾರ್ಯಕಾರಿ ಸಮಿತಿಯ ವಿವರ ಅಧ್ಯಕ್ಷರು: ಪ್ರಕಾಶ್ ಪೂಜಾರಿ ಕೆರ್ವಾಶೆ ಪ್ರಥಮ ಉಪಾಧ್ಯಕ್ಷರು: ಸಂತೋಷ್ ಪೂಜಾರಿ ಮಾಳ ದ್ವಿತೀಯ ಉಪಾಧ್ಯಕ್ಷರು: ಸಂತೋಷ್ ಬಂಗ್ಲೆಗುಡ್ಡೆ ಕಾರ್ಯದರ್ಶಿ: ರಾಕೇಶ್ ಅಮೀನ್ ಜೊತೆ ಕಾರ್ಯದರ್ಶಿ: ಶ್ರೇಯಸ್ ಕೋಶಾಧಿಕಾರಿ: ರವೀಂದ್ರ ನಕ್ರೆ ವ್ಯಕ್ತಿತ್ವ ವಿಕಸನ ನಿರ್ದೇಶಕರು: ಸಂತೋಷ್ ಬಂಗೇರ ಮಿಯ್ಯಾರು ಕ್ರೀಡಾ ನಿರ್ದೇಶಕರು: ಪ್ರಶಾಂತ್ ಬಜಗೋಳಿ ಆರೋಗ್ಯ ನಿರ್ದೇಶಕರು: ಅಶೋಕ್ ಸುವರ್ಣ – […]
Read More
17-07-2022, 4:25 PM
ಕಾರ್ಕಳ:- ದಿನಾಂಕ 17 ಜುಲೈ 2022ನೇ ಆದಿತ್ಯವಾರ ಯುವವಾಹಿನಿ(ರಿ.) ಕಾರ್ಕಳ, ಮೂಡಬಿದ್ರಿ, ಉಡುಪಿ ಘಟಕಗಳ ಜಂಟಿ ಆಶ್ರಯದಲ್ಲಿ “ಯುವ ಸಮ್ಮಿಲನ ಕಾರ್ಯಕ್ರಮ ” ಆನೆಕೆರೆ ಶ್ರೀ ಕೃಷ್ಣ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಕಾರ್ಕಳ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಉದ್ಯಮಿಗಳಾಗಿರುವ ಡಿ. ಆರ್. ರಾಜು ಅವರು ದೀಪ ಬೆಳಗಿಸಿ ಉದ್ಘಾಟಿಸಿ ಶುಭ ಹಾರೈಸಿದರು. ಕಾರ್ಕಳ ಘಟಕದ ಅಧ್ಯಕ್ಷರಾದ ತಾರಾನಾಥ್ ಕೋಟ್ಯಾನ್ ಅಧ್ಯಕ್ಷತೆ ವಹಿಸಿದ್ದರು.ಮುಖ್ಯ ಅತಿಥಿಗಳಾಗಿ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು , […]
Read More
13-02-2022, 4:30 PM
ಕಾರ್ಕಳ :ಬಿಲ್ಲವ ಸಮಾಜ ಸೇವಾ ಸಂಘ(ರಿ) ಬಜಗೋಳಿ,ಯುವವಾಹಿನಿ(ರಿ) ಕಾರ್ಕಳ ಘಟಕ,ಹಾಗೂ ಯೂತ್ ಬಿಲ್ಲವ(ರಿ) ಕಾರ್ಕಳ ಇವರ ಸಂಯುಕ್ತ ಆಶ್ರಯದಲ್ಲಿ, ಜಿಲ್ಲಾ ರಕ್ತ ನಿಧಿ ಕೇಂದ್ರ ಉಡುಪಿ ಇದರ ಸಹಯೋಗದೊಂದಿಗೆ ಸಾರ್ವಜನಿಕ ಬ್ರಹತ್ ರಕ್ತದಾನ ಶಿಬಿರವು ಶ್ರೀ ನಾರಾಯಣ ಗುರು ಸಭಾಭವನ ಬಜಗೋಳಿ ಇಲ್ಲಿ ಫೆ.13ರಂದು ನಡೆಯಿತು. ಬಜಗೋಳಿ ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಅಶೋಕ್ ಪೂಜಾರಿ ನಲ್ಲೂರು ಇವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಧಾನಮಂತ್ರಿ ಜನಔಷಧಿ ಕೇಂದ್ರ ಕಾರ್ಕಳ ಇದರ ಮಾಲಕರಾದ ಸುಶಾಂತ್ ಬಜಗೋಳಿ ಇವರು […]
Read More
30-09-2019, 8:48 AM
ದಿನಾಂಕ 29.09.2019 ರಂದು ಯುವವಾಹಿನಿ(ರಿ) ಮಂಗಳೂರು ಘಟಕ ಮತ್ತು ಕಾರ್ಕಳ ಘಟಕ ಇದರ ಜಂಟಿ ಆಶ್ರಯದಲ್ಲಿ ಸಣ್ಣ ಮತ್ತು ಮಧ್ಯಮ ಉದ್ದಿಮೆದಾರರು, ವ್ಯಾಪಾರಸ್ಥರು, ಸ್ವ ಉದ್ಯೋಗಿಗಳಿಗೆ, ಹೊಸದಾಗಿ ಉದ್ಯಮ ಪ್ರಾರಂಭಿಸುವವರಿಗೆ ಮತ್ತು ನಿರುದ್ಯೋಗಿಗಳಿಗೆ ಯಶಸ್ವಿ ಉದ್ಯಮಕ್ಕೆ ಸಮಗ್ರ ಮಾರ್ಗದರ್ಶನ ಚೇತರಿಕಾ 2019 ಎಂಬ ಕಾರ್ಯಕ್ರಮವು ಯುವವಾಹಿನಿ ಸಭಾಂಗಣ ಉರ್ವಸ್ಟೋರ್ ನಲ್ಲಿ ಜರಗಿತು. ಕಾರ್ಯಕ್ರಮವನ್ನು ಉದ್ಯಮಿ ದೇಯಿ ಬೈದೆತಿ ಕೋಟಿ ಚೆನ್ನಯ ಮೂಲಸ್ಥಾನ ಗೆಜ್ಜೆಗಿರಿ ಇದರ ಪ್ರಧಾನ ಕಾರ್ಯದರ್ಶಿ ರವಿಪೂಜಾರಿ ಚಿಲಿಂಬಿ ಉದ್ಘಾಟಿಸಿದರು. ಯುವವಾಹಿನಿಯು ಅವಕಾಶ ವಂಚಿತ ವರ್ಗಗಳಿಗೆ […]
Read More