28-05-2026, 9:00 PM
ಮಂಗಳೂರು, ಮೇ 28: ಯುವವಾಹಿನಿ (ರಿ.) ಕಂಕನಾಡಿ ಘಟಕವು ತನ್ನ ಸಮಾಜಮುಖಿ ಕಾರ್ಯಚಟುವಟಿಕೆಗಳ ಅಂಗವಾಗಿ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿರುವ ಮಂಗಳೂರಿನ ಉಜ್ಜೋಡಿ ನಿವಾಸಿ ರಾಜೇಶ್ ಅವರಿಗೆ ಆರ್ಥಿಕ ನೆರವು ನೀಡಿದೆ. ರಾಜೇಶ್ ಅವರ ವೈದ್ಯಕೀಯ ಚಿಕಿತ್ಸೆಗೆ ಸಹಕಾರಿಯಾಗುವ ಉದ್ದೇಶದಿಂದ ಘಟಕದ ಸದಸ್ಯರು ಮತ್ತು ಹಿತೈಷಿಗಳ ಸಹಯೋಗದೊಂದಿಗೆ ಸಂಗ್ರಹಿಸಲಾದ Rs. 30,000/- ಮೊತ್ತದ ಧನಸಹಾಯವನ್ನು 28-05-2026 ರಂದು ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದು, ರಾಜೇಶ್ ಅವರು ಶೀಘ್ರವಾಗಿ ಸಂಪೂರ್ಣ ಆರೋಗ್ಯವನ್ನು […]
Read More
19-04-2026, 8:07 PM
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಎಪ್ರಿಲ್ 19ರಂದು ಬಿ.ಸಿ.ರೋಡಿನ ಸ್ಪರ್ಶಕಲಾ ಮಂದಿರದಲ್ಲಿ ನಡೆದ ಪ್ರತಿಷ್ಠಿತ ಅಂತರ ಘಟಕ ಸಾಂಸ್ಕೃತಿಕ ಸ್ಪರ್ಧೆ “ಡೆನ್ನಾನ ಡೆನ್ನನ 2026” ರಲ್ಲಿ ಕಂಕನಾಡಿ ಘಟಕದ ಕಲಾವಿದರು ನೀಡಿದ ಸಾಂಸ್ಕೃತಿಕ ಕಲಾ ಪ್ರದರ್ಶನವು ಪ್ರೇಕ್ಷಕರ ಅಪಾರ ಮೆಚ್ಚುಗೆಗೆ ಪಾತ್ರವಾಗಿ, ಸಾಂಸ್ಕೃತಿಕ ಲೋಕದ ಗಮನ ಸೆಳೆದಿದೆ.
Read More
09-03-2026, 8:00 PM
ಮಂಗಳೂರು: ದಿನಾಂಕ 09-03-2026 ನೇ ಸೋಮವಾರ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯನ್ನು ಯುವವಾಹಿನಿ (ರಿ.) ಕಂಕನಾಡಿ ಘಟಕದ ಸಹಯೋಗದೊಂದಿಗೆ ಭಕ್ತಿಭಾವದಿಂದ ನೆರವೇರಿಸಲಾಯಿತು.ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮಂಗಳೂರು ಘಟಕದ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.
Read More
08-03-2026, 9:00 PM
ಮಂಗಳೂರು: “ಒಬ್ಬ ಸುಸಂಸ್ಕೃತ ಮಹಿಳೆ ತನ್ನ ಮಕ್ಕಳಲ್ಲಿ ಸಂಸ್ಕೃತಿ ಮತ್ತು ಸಂಪ್ರದಾಯಗಳ ಬಗ್ಗೆ ಜಾಗೃತಿ ಮೂಡಿಸುವ ಮೂಲಕ ದೇಶ ಮತ್ತು ಸಮಾಜಕ್ಕೆ ಉತ್ತಮ ಕೊಡುಗೆ ನೀಡಲು ಸಾಧ್ಯ. ಹೆಣ್ಣು ತಾನು ಹುಟ್ಟಿದ ಮನೆ ಹಾಗೂ ಸೇರಿದ ಗಂಡನ ಮನೆಯ ಹಿತ ಬಯಸುವವಳು,” ಎಂದು ಡಿವೈನ್ ಪಾರ್ಕ್‌ನ ಮಹಿಳಾ ಮೇಲ್ಮೈ ಅಧಿಕಾರಿ ಪ್ರೇಮ ಪ್ರಭಾಕರ್ ಅವರು ಅಭಿಪ್ರಾಯಪಟ್ಟರು.ಅವರು ದಿನಾಂಕ 08-03-2026 ರಂದು ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಆಯೋಜಿಸಲಾಗಿದ್ದ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. […]
Read More
28-02-2026, 11:00 AM
ಮಂಗಳೂರು: ಶ್ರೀ ಕ್ಷೇತ್ರ ಗೆಜ್ಜೆಗಿರಿಯಲ್ಲಿ ಇತ್ತೀಚೆಗೆ ಜರುಗಿದ ಜಾತ್ರಾ ಮಹೋತ್ಸವದ ಪುಣ್ಯ ಸಂದರ್ಭದಲ್ಲಿ, ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ವಿಶೇಷ ಸ್ವಯಂ ಸೇವೆ ಹಾಗೂ ಅನ್ನದಾನ ಸೇವೆಗಳನ್ನು ಸಲ್ಲಿಸಲಾಯಿತು. ದಿನಾಂಕ 28-02-2026ರ ಮಡಿಲು ಸೇವೆಯ ಪವಿತ್ರ ದಿನದಂದು ಕಂಕನಾಡಿ ಘಟಕದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಕ್ಷೇತ್ರದಲ್ಲಿ ಉಪಸ್ಥಿತರಿದ್ದು, ಭಕ್ತಾದಿಗಳ ಅನುಕೂಲಕ್ಕಾಗಿ ಸ್ವಯಂಸೇವಕರಾಗಿ ಕಾರ್ಯನಿರ್ವಹಿಸಿದರು. ಕ್ಷೇತ್ರದ ಶಿಸ್ತು ಮತ್ತು ವ್ಯವಸ್ಥಿತ ನಿರ್ವಹಣೆಯಲ್ಲಿ ಪಾಲ್ಗೊಂಡು ಸೇವೆಯನ್ನು ಅರ್ಪಿಸಿದರು.ಅನ್ನದಾನಕ್ಕೆ ಧನಸಹಾಯ:ಯುವವಾಹಿನಿಯ ಸಾಮಾಜಿಕ ಬದ್ಧತೆಯ ಅಂಗವಾಗಿ ಪ್ರತಿ ವರ್ಷದಂತೆ ಈ ಬಾರಿಯೂ […]
Read More
25-01-2026, 8:30 PM
ಮಂಗಳೂರು : ಸೇವಾ ಮನೋಭಾವ, ಸಂಘಟನಾ ಶಕ್ತಿ ಮತ್ತು ಸಮಾಜಮುಖಿ ಚಿಂತನೆಯ ದಶಕದ ಪಯಣವನ್ನು ಸ್ಮರಿಸುವಂತೆ, ಯುವವಾಹಿನಿ (ರಿ.) ಕಂಕನಾಡಿ ಘಟಕದ ದಶಮಾನೋತ್ಸವ ಸಂಭ್ರಮ ಹಾಗೂ ಪ್ರತಿಭಾ ಪುರಸ್ಕಾರ ಸಮಾರಂಭವು ದಿನಾಂಕ 25-01-2026ರ ಆದಿತ್ಯವಾರ ಕಂಕನಾಡಿ ಗರೋಡಿ ಸಮೀಪದ ಸಮೃದ್ಧಿ ಭವನದಲ್ಲಿ ಅರ್ಥಪೂರ್ಣವಾಗಿ ನೆರವೇರಿತು. ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು ಅವರು ಮಾತನಾಡಿ,“ಹಿರಿಯರು ನಡೆದು ಬಂದ ತತ್ವಾದರ್ಶಗಳೇ ಸಂಘಟನೆಯ ನೆಲೆ. ಆ ಮಾರ್ಗದರ್ಶನವಿಲ್ಲದೆ ಹೊಸಬರ ಹೆಜ್ಜೆಗಳು […]
Read More
11-01-2026, 3:46 AM
ಕಂಕನಾಡಿ : ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಮಂಗಳೂರು ಮೋರ್ಗನ್ಸ್ ಗೇಟ್‌ನಲ್ಲಿರುವ ಕ್ರೂಸ್ ಆ್ಯಂಡ್ ಡೈನ್ ಕೇಂದ್ರಕ್ಕೆ ಒಂದು ದಿನದ ಕಿರು ಪ್ರವಾಸವನ್ನು ದಿನಾಂಕ 11-01-2026 ರಂದು ಆಯೋಜಿಸಲಾಯಿತು. ಬೆಳಿಗ್ಗೆ 10 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ನಡೆದ ಈ ಪ್ರವಾಸದಲ್ಲಿ ಘಟಕದ ಸದಸ್ಯರು ಹಾಗೂ ಅವರ ಬಂಧು–ಮಿತ್ರರು ಉತ್ಸಾಹಭರಿತವಾಗಿ ಭಾಗವಹಿಸಿ ಸಂತಸದ ಕ್ಷಣಗಳನ್ನು ಕಳೆಯಿದರು. ಬೆಳಿಗ್ಗೆ ಚಹಾ–ತಿಂಡಿಯೊಂದಿಗೆ ಆರಂಭವಾದ ಪ್ರವಾಸ, ಬೋಟಿನಲ್ಲಿ ಸಾಗುವ ಮೂಲಕ ಸುತ್ತಮುತ್ತಲಿನ ಮನೋಹರ ಪ್ರಕೃತಿ ಸೌಂದರ್ಯವನ್ನು ಆಸ್ವಾದಿಸುವ ಅನುಭವವನ್ನು ನೀಡಿತು. […]
Read More
10-01-2026, 7:10 AM
ಮಂಗಳೂರು: ಯುವವಾಹಿನಿ (ರಿ.) ಕಂಕನಾಡಿ ಘಟಕದ ವತಿಯಿಂದ ಶ್ರೀ ಬ್ರಹ್ಮ ಬೈದರ್ಕಳ ಗರಡಿ ಕ್ಷೇತ್ರದಲ್ಲಿ ನಡೆದ ವರ್ಷಾವಧಿ ಉತ್ಸವದ ಅಂಗವಾಗಿ ದಿನಾಂಕ 02-01-2026 ಹಾಗೂ 05-01-2026ರಂದು ಸ್ವಯಂಸೇವಾ ಕಾರ್ಯಗಳನ್ನು ನಡೆಸಲಾಯಿತು.ಉತ್ಸವದ ಸಂದರ್ಭದಲ್ಲಿ ಘಟಕದ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರು ಸ್ವಯಂಸೇವೆಯಲ್ಲಿ ತೊಡಗಿ ವಿವಿಧ ಸೇವಾ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿದರು. ಅಲ್ಲದೆ, ಘಟಕದ ಸದಸ್ಯರಿಂದ ಸಂಗ್ರಹಿಸಲಾದ ರೂ.12,500 ಮೊತ್ತದ ದೇಣಿಗೆಯನ್ನು ಅನ್ನದಾನ ಸೇವೆಗೆ ಸಮರ್ಪಿಸಲಾಯಿತು.ಈ ಸ್ವಯಂಸೇವಾ ಕಾರ್ಯವು ಯುವವಾಹಿನಿ ಕಂಕನಾಡಿ ಘಟಕದ ಸೇವಾ ಮನೋಭಾವ, ಸಂಘಟನಾ ಶಕ್ತಿ ಹಾಗೂ […]
Read More
01-12-2025, 2:20 PM
ನಾವು ಬಹಳ ವಿಜೃಂಭಣೆಯಿಂದ ಆಚರಿಸುವ ದೀಪಗಳ ಹಬ್ಬ ತುಳಸಿ ಪೂಜೆಯ ಪ್ರಯುಕ್ತ ಘಟಕದ ಸದಸ್ಯರಿಗೆ ” ಬೆಳಕಿನ ಚಿತ್ತಾರ” ಎಂಬ ಸಾಂಪ್ರದಾಯಿಕ ಗೂಡು ದೀಪ ಹಾಗೂ ” ತಮಸೋಮಾ ಜ್ಯೋತಿರ್ಗಮಯ” ಎಂಬ ಮಣ್ಣಿನ ಹಣತೆಯಿಂದ ಬೆಳಗಿದ ಮನೆಯಂಗಳ ಹಾಗೂ ತುಳಸಿ ಪೂಜೆಯ ಪ್ರಯುಕ್ತ ಘಟಕದ ಸದಸ್ಯರಿಗೆ ರಂಗೋಲಿ ಬಿಡಿಸಿ ಹೂವಿನ ಅಲಂಕಾರವನ್ನು ಮಾಡಿ ಮಣ್ಣಿನ ಹಣತೆ ಬೆಳಗಿದ ಅಂದ ಚೆಂದದ ತುಳಸಿಯ ಛಾಯಾಚಿತ್ರದ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಶ್ರೀಮತಿ ಸುಫ್ರಿಯಾ ಸುಂದರ್ ಸಾಲಿಯಾನ್ ಹಾಗೂ ಶ್ರೀಮತಿ ಸೌಮ್ಯವಾಣಿ ಸಿ […]
Read More
19-09-2025, 8:44 AM
ದಿನಾಂಕ 10/08/2025 ಆಟಿದ ನೆಂಪುಕಾರ್ಯಕ್ರಮ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಸಂತ ಅಲೋಶಿಯಸ್ ಸ್ನಾತಕೋತರ ವಿಭಾಗದಲ್ಲಿ ಮುಖ್ಯಸ್ಥರಾದ ಪ್ರೊ|ಡಾ| ರಾಕೇಶ್ ಕುಮಾರ್ ಆಗಮಿಸಿದ್ದರು. ಸಭಾ ಕಾರ್ಯಕ್ರಮವನ್ನು ಪ್ರಾರ್ಥನೆಯೊಂದಿಗೆ ಆರಂಭಿಸಿ ದೀಪವನ್ನು ಬೆಳಗುವುದರ ಮೂಲಕ ಉದ್ಘಾಟಿಸಲಾಯಿ..ಘಟಕದ ಅಧ್ಯಕ್ಷರಾದ ರಾಹುಲ್ ಸನಿಲ್ ರವರು ಎಲ್ಲರನ್ನೂ ಆತ್ಮೀಯವಾಗಿ ಸ್ವಾಗತಿಸಿದರು, ನಂತರ ಆಟಿ ತಿಂಗಳ ಮದಿಪು ನುಡಿಯಲು ಬಂದಂತಹ ಪ್ರೊ|ಡಾ| ರಾಕೇಶ್ ಕುಮಾರ್ ರವರು ಮುಂಚಿನ ಕಾಲದಲ್ಲಿದ್ದ ಆಟಿ ತಿಂಗಳ ಕಷ್ಟದ ದಿನಗಳನ್ನು ನೆನಪಿಸಿಕೊಂಡು ನಮ್ಮ ಹಿರಿಯರು ಆಚರಿಸುತ್ತಿದ್ದ ಆಚರಣೆಗಳ ವೈಜ್ಞಾನಿಕ ವಿಶೇಷತೆಗಳನ್ನು ವಿವರಿಸಿದರು. […]
Read More