ಮೂಡುಬಿದ್ರೆ ಸೆಪ್ಟೆಂಬರ್ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ವತಿಯಿಂದ ಸಮಾಜ ಸೇವಾ ನಿರ್ದೇಶಕ ಶ್ರೀ ಉಮೇಶ್ ಕೋಟ್ಯಾನ್ ಅವರ ಸಹಕಾರದೊಂದಿಗೆ ಸಂಕಷ್ಟದಲ್ಲಿದ್ದ ಬಡ ಕುಟುಂಬಕ್ಕೆ ಮಾನವೀಯ ನೆರವು ನೀಡಲಾಯಿತು.

ಮೂಡುಬಿದ್ರೆ ರೇಂಜ್ ಫಾರೆಸ್ಟ್ ಆಫೀಸ್ ಬಳಿಯ ನಿವಾಸಿ ಇಬ್ರಾಹೀಂ ಅವರ ಅನಾರೋಗ್ಯ ಸಮಸ್ಯೆಗೆ ಸ್ಪಂದಿಸಿದ ಘಟಕವು ಕುಟುಂಬಕ್ಕೆ ಆರ್ಥಿಕ ಧನಸಹಾಯ ನೀಡುವುದರ ಜೊತೆಗೆ, ಮನೆಗೆ ಅಗತ್ಯವಿರುವ ರೇಷನ್ ಸಾಮಗ್ರಿಗಳನ್ನು ವಿತರಿಸಿತು.
ಸಂಕಷ್ಟದಲ್ಲಿರುವ ಕುಟುಂಬಗಳಿಗೆ ನೆರವಿನ ಹಸ್ತ ಚಾಚುವ ಮೂಲಕ ಮಾನವೀಯ ಮೌಲ್ಯಗಳನ್ನು ಎತ್ತಿಹಿಡಿಯುವ ಕಾರ್ಯವನ್ನು ಯುವವಾಹಿನಿ ನಿರಂತರವಾಗಿ ನಡೆಸಿಕೊಂಡು ಬರುತ್ತಿದೆ. ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಮಾಜಿ ಅಧ್ಯಕ್ಷ ಶಂಕರ್ ಎ. ಕೋಟ್ಯಾನ್ ಹಾಗೂ ಸಮಾಜ ಸೇವಾ ನಿರ್ದೇಶಕ ಶ್ರೀ ಉಮೇಶ್ ಕೋಟ್ಯಾನ್ ಉಪಸ್ಥಿತರಿದ್ದರು.







