19-07-2026, 2:00 PM
ಸುರತ್ಕಲ್, ಜುಲೈ 19 : ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ “ಆಟಿದ ಐಸಿರ -2026” ಕಾರ್ಯಕ್ರಮವು 19-07-2026ರಂದು ಗುಡ್ಡೆಕೊಪ್ಲದ “ಮಾತೃಕೃಪಾ”ದಲ್ಲಿ ಘಟಕದ ಅಧ್ಯಕ್ಷೆ ರೇವತಿ ನವೀನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಮನೆಯಂಗಳಕ್ಕೆ ಆಗಮಿಸಿದ ಆಟಿಕಳೆಂಜನಿಗೆ ಪುಷ್ಪ ಅವರು ಪಡಿಯಕ್ಕಿ ಸುರಿಯುವ ಮೂಲಕ ಸಾಂಪ್ರದಾಯಿಕವಾಗಿ ಸ್ವಾಗತಿಸಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ನೀಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ ಶಿಕ್ಷಕಿ, ನಿರೂಪಕಿ ಹಾಗೂ ಜೈ ತುಳುನಾಡು (ರಿ.) ಬಂಟ್ವಾಳ ಘಟಕದ ಸಂಘಟನಾ ಕಾರ್ಯದರ್ಶಿ ರೇಣುಕಾ ಕಾಣಿಯೂರ್ ಅವರು ಮಾತನಾಡಿ, “ಆಟಿದ […]
Read More
30-06-2026, 7:00 PM
ಮಂಗಳೂರು, ಜೂನ್ 30: ಕರ್ನಾಟಕ ಉದ್ಯಮಶೀಲತಾ ಅಭಿವೃದ್ಧಿ ಕೇಂದ್ರ (ಸಿಡಾಕ್), ಧಾರವಾಡ ಹಾಗೂ ಸಿಡಾಕ್ ಮಂಗಳೂರು ವತಿಯಿಂದ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಬೆಂಗಳೂರು ಇವರ ಸಹಕಾರದಲ್ಲಿ ಜಿಲ್ಲಾ ಕೈಗಾರಿಕಾ ಕೇಂದ್ರ, ಜಿಲ್ಲಾ ಕೌಶಲ್ಯ ಮಿಷನ್, ಯುವವಾಹಿನಿ (ರಿ.) ಸುರತ್ಕಲ್ ಘಟಕ, ಯುವವಾಹಿನಿ (ರಿ.) ಮಂಗಳೂರು ಮಹಿಳಾ ಘಟಕ ಹಾಗೂ ಮಹಿಳಾ ಮಂಡಲ (ರಿ.) ಕುಳಾಯಿ ಇವರ ಸಂಯುಕ್ತ ಆಶ್ರಯದಲ್ಲಿ ಮಹಿಳಾ ಅಭ್ಯರ್ಥಿಗಳಿಗಾಗಿ ಒಂದು ದಿನದ ಉದ್ಯಮಶೀಲತಾ ತರಬೇತಿ ಶಿಬಿರ ಕುಳಾಯಿಯ ಮಹಿಳಾ ಮಂಡಲ ಸಭಾಂಗಣದಲ್ಲಿ […]
Read More
22-06-2026, 11:00 AM
ಸುರತ್ಕಲ್ ಜೂನ್ 22: ಮಕ್ಕಳ ಸುರಕ್ಷತೆ, ಪೋಕ್ಸೋ ಕಾಯಿದೆಯ ಅರಿವು, ಮಾದಕ ದ್ರವ್ಯ ಸೇವನೆಯ ದುಷ್ಪರಿಣಾಮಗಳು ಹಾಗೂ ಮೊಬೈಲ್ ಬಳಕೆಯ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ಶ್ರೀ ಮಹಾಲಿಂಗೇಶ್ವರ ಆಂಗ್ಲ ಮಾಧ್ಯಮ ಶಾಲೆ, ಸುರತ್ಕಲ್‌ನಲ್ಲಿ ಜಾಗೃತಿ ಕಾರ್ಯಕ್ರಮ ನಡೆಯಿತು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಸುರತ್ಕಲ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಘು ನಾಯ್ಕ್ ಅವರು ಮಾತನಾಡಿ, “ಮಕ್ಕಳು ದೇಶದ ಭವಿಷ್ಯ. ಅವರ ಸುರಕ್ಷಿತ ಹಾಗೂ ನಿಶ್ಚಿಂತ ಬಾಲ್ಯವನ್ನು ಕಾಪಾಡುವುದು ನಮ್ಮೆಲ್ಲರ […]
Read More
28-05-2026, 6:00 PM
ಸುರತ್ಕಲ್, ಮೇ 28: ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ಸದಸ್ಯರ ನಡುವಿನ ಒಡನಾಟ ಹಾಗೂ ಸಂಘಟನಾ ಬಾಂಧವ್ಯವನ್ನು ಇನ್ನಷ್ಟು ಬಲಪಡಿಸುವ ಉದ್ದೇಶದಿಂದ 2026ರ ಮೇ 28ರಂದು ಒಂದು ದಿನದ ಕಿರು ಪ್ರವಾಸವನ್ನು ಮುರುಡೇಶ್ವರ ದೇವಸ್ಥಾನ, ಇಡಗುಂಜಿ ಮಹಾಗಣಪತಿ ದೇವಸ್ಥಾನ ಹಾಗೂ ಹೊನ್ನಾವರದ ಜೋಯ್ ಎಂಜಾಯ್ ವಾಟರ್ ಪಾರ್ಕ್‌ಗೆ ಆಯೋಜಿಸಲಾಗಿತ್ತು. ಈ ಪ್ರವಾಸದಲ್ಲಿ ಸುರತ್ಕಲ್ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಸದಸ್ಯರು ಹಾಗೂ ಸದಸ್ಯರ ಕುಟುಂಬ ಸದಸ್ಯರು ಸೇರಿದಂತೆ ಒಟ್ಟು 50 ಮಂದಿ ಭಾಗವಹಿಸಿದ್ದರು. ಬೆಳಿಗ್ಗೆ 6.00 […]
Read More
10-05-2026, 2:00 PM
ಸುರತ್ಕಲ್ : ದಿನಾಂಕ 10-05-2026 ರಂದು ಇಡ್ಯಾ ಕ್ಷೇತ್ರದಲ್ಲಿ ನಡೆದ ಶ್ರೀ ವಿಠೋಭ ರುಕುಮಾಯಿ ದೇವರ ಪುನಃಪ್ರತಿಷ್ಠೆ, ಅಷ್ಟಬಂಧ ಬ್ರಹ್ಮಕಲಶಾಭಿಷೇಕ ಹಾಗೂ ಬ್ರಹ್ಮಶ್ರೀ ನಾರಾಯಣ ಗುರುವರ್ಯರ ಪುನಃಪ್ರತಿಷ್ಠೆ ಮತ್ತು ಕಲಶಾಭಿಷೇಕ ಮಹೋತ್ಸವದ ಪ್ರಯುಕ್ತ ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ರೂ.15,000 ಮೊತ್ತದ ಚೆಕ್ ಅನ್ನು ಕ್ಷೇತ್ರದ ಆಡಳಿತ ಮಂಡಳಿಗೆ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದು, ದೇವಸ್ಥಾನದ ಆಡಳಿತ ಮಂಡಳಿಯ ಪ್ರಮುಖರು ಮತ್ತು ಕ್ಷೇತ್ರದ ಶಾಂತಿಯವರು ಘಟಕದ ಅಧ್ಯಕ್ಷರನ್ನು ಸ್ಮರಣಿಕೆ ಹಾಗೂ ಶಾಲು […]
Read More
27-04-2026, 9:00 PM
ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 27-04-2026 ರಂದು ಸಂಜೆ 5.30 ಗಂಟೆಗೆ ಯುವವಾಹಿನಿ (ರಿ.) ಸುರತ್ಕಲ್ ಘಟಕ ಇವರ ಸಹಯೋಗದೊಂದಿಗೆ ನಡೆಯಿತು. ಮಂಗಳೂರು ಹಾಗೂ ಸುರತ್ಕಲ್ ಘಟಕದ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಉಪಸ್ಥಿತರಿದ್ದರು.
Read More
19-04-2026, 8:20 PM
ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ(ರಿ) ಸುರತ್ಕಲ್ ಘಟಕವು ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿಯನ್ನು ಪಡೆಯಿತು
Read More
04-04-2026, 1:00 PM
ಸುರತ್ಕಲ್: ಮಕ್ಕಳಲ್ಲಿ ಹುರುಪು ತುಂಬಲು ಹಾಗೂ ಅವರ ಪ್ರತಿಭೆಯನ್ನು ಪ್ರೋತ್ಸಾಹಿಸಲು ಯುವವಾಹಿನಿ (ರಿ.) ಸುರತ್ಕಲ್ ಘಟಕದ ವತಿಯಿಂದ ದಿನಾಂಕ 04-04-2026 ರಂದು ಚೇಲಾರಿನ ಕಳವಾರು ಪ್ರಾಥಮಿಕ ಆಂಗ್ಲಮಾಧ್ಯಮ ಶಾಲೆಯಲ್ಲಿ ಒಂದು ದಿನದ ವಿಶೇಷ ಬೇಸಿಗೆ ಶಿಬಿರವನ್ನು ಆಯೋಜಿಸಲಾಗಿತ್ತು. ಶಿಬಿರದ ಕಲಿಕೆ ಮತ್ತು ಚಟುವಟಿಕೆಗಳು: ಏಕಪಾತ್ರಾಭಿನಯ: ಘಟಕದ ಅಧ್ಯಕ್ಷರಾದ ರೇವತಿ ನವೀನ್ ಅವರು ಮಕ್ಕಳಿಗೆ ಏಕಪಾತ್ರಾಭಿನಯದ ಕುರಿತು ತರಬೇತಿ ನೀಡಿದರು. ಘಟಕದ ಸದಸ್ಯೆ ಆಶಾ ರವಿಶಂಕರ್ ಅವರು ವಿವಿಧ ಆಸನಗಳ ಪ್ರದರ್ಶನದ ಮೂಲಕ ಯೋಗದ ಮಹತ್ವ ಮತ್ತು ಜ್ಞಾನವನ್ನು […]
Read More
17-03-2026, 8:00 PM
ಸುರತ್ಕಲ್: ಯುವವಾಹಿನಿ (ರಿ) ಸುರತ್ಕಲ್ ಘಟಕದ ವತಿಯಿಂದ ದಿನಾಂಕ 17-03-2026 ರಂದು ಕುಳಾಯಿ ಮಹಿಳಾ ಮಂಡಲದಲ್ಲಿ ವಿಶ್ವ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ರಾಹುಲ್ ಎ. ಅಮೀನ್ ಹಾಗೂ ಮಹಿಳಾ ಸಂಘಟನಾ ನಿರ್ದೇಶಕಿ ಸುಧಾ ಸುರೇಶ್ ಉಪಸ್ಥಿತರಿದ್ದರು.ಮಹಿಳಾ ದಿನಾಚರಣೆಯ ಅಂಗವಾಗಿ ನಾಟಿನೈದ್ಯರಾದ ಸೇಸಮ್ಮ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಈ ವೇಳೆ ಮಹಿಳೆಯರಿಗಾಗಿ ವಿಶೇಷ ಆಟಗಳನ್ನು ಆಯೋಜಿಸಲಾಗಿದ್ದು, ಭಾಗವಹಿಸಿದವರು ಉತ್ಸಾಹದಿಂದ ಪಾಲ್ಗೊಂಡರು.ಕಾರ್ಯಕ್ರಮದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು ಹಾಗೂ ಎಲ್ಲಾ […]
Read More
08-03-2026, 1:00 PM
ಕುಳಾಯಿ : ಯುವವಾಹಿನಿ ಸುರತ್ಕಲ್ ಘಟಕದ ವತಿಯಿಂದ ಮಹಿಳಾ ದಿನಾಚರಣೆಯ ಪ್ರಯುಕ್ತ ಬೃಹತ್ ರಕ್ತದಾನ ಶಿಬಿರವನ್ನು ದಿನಾಂಕ 08.03.2026 ರಂದು ಕುಳಾಯಿ ಮಹಿಳಾ ಮಂಡಲದಲ್ಲಿ ಆಯೋಜಿಸಲಾಗಿತ್ತು. ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಕುಳಾಯಿ, ಮಹಿಳಾ ಮಂಡಲ (ರಿ) ಕುಳಾಯಿ, ತಿರಂಗ ಟ್ರಸ್ಟ್ (ರಿ) ಮಂಗಳೂರು, ಶ್ರೀನಿವಾಸ ಆಸ್ಪತ್ರೆ ಮುಕ್ಕ ಇದರ ಸಹಯೋಗದೊಂದಿಗೆ ಬೃಹತ್ ರಕ್ತದಾನ ಶಿಬಿರವು ನಡೆಯಿತು. ಮಹಿಳಾ ದಿನಾಚರಣೆಯನ್ನು ಕೇವಲ ಆಚರಣೆಗೆ ಸೀಮಿತಗೊಳಿಸದೆ, ರೋಗಿಗಳ ಪ್ರಾಣ ಉಳಿಸುವ ಉದಾತ್ತ ಉದ್ದೇಶದಿಂದ ರಕ್ತದಾನ ಶಿಬಿರವನ್ನು ಆಯೋಜಿಸಲಾಗಿತ್ತು. ಶ್ರೀನಿವಾಸ […]
Read More