ಮೂಡುಬಿದ್ರೆ ಸೆ 6 : ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ವತಿಯಿಂದ ಮೂಡುಮಾರ್ನಾಡು ಗ್ರಾಮದ ಹೊಸಮನೆ ಪರಪು ನಿವಾಸಿ ಸರಸ್ವತಿ ಅವರ ಕುಟುಂಬದ ಆರ್ಥಿಕ ಸಂಕಷ್ಟಕ್ಕೆ ಮಾನವೀಯವಾಗಿ ಸ್ಪಂದಿಸಲಾಯಿತು.

ಕುಟುಂಬಕ್ಕೆ ಆರ್ಥಿಕ ಧನಸಹಾಯ ನೀಡುವುದರ ಜೊತೆಗೆ, ಮನೆಗೆ ಅಗತ್ಯವಿರುವ ರೇಷನ್ ಸಾಮಗ್ರಿಗಳನ್ನು ವಿತರಿಸಿ ನೆರವು ನೀಡಲಾಯಿತು.ಸಂಕಷ್ಟದಲ್ಲಿರುವ ಹಾಗೂ ಅಶಕ್ತ ಕುಟುಂಬಗಳ ಅಗತ್ಯಗಳಿಗೆ ಸ್ಪಂದಿಸಿ, ಅಗತ್ಯದ ಸಂದರ್ಭದಲ್ಲಿ ನೆರವಿನ ಹಸ್ತ ಚಾಚುವುದು ಯುವವಾಹಿನಿಯ ಸಮಾಜ ಸೇವೆಯ ಪ್ರಮುಖ ಉದ್ದೇಶವಾಗಿದೆ. ಈ ಮೂಲಕ ಸಮಾಜದಲ್ಲಿ ಮಾನವೀಯತೆ, ಸಹಕಾರ ಮತ್ತು ಪರಸ್ಪರ ಕಾಳಜಿಯ ಮೌಲ್ಯಗಳನ್ನು ಬೆಳೆಸುವ ಕಾರ್ಯವನ್ನು ಸಂಘಟನೆ ಮುಂದುವರಿಸಿಕೊಂಡು ಬರುತ್ತಿದೆ.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಮೂಡುಬಿದ್ರೆ ಘಟಕದ ಅಧ್ಯಕ್ಷ ಗಿರೀಶ್ ಕೋಟ್ಯಾನ್, ಸಮಾಜ ಸೇವಾ ನಿರ್ದೇಶಕ ಉಮೇಶ್ ಕೋಟ್ಯಾನ್, ಮಾಜಿ ಅಧ್ಯಕ್ಷರಾದ ಶಂಕರ್ ಕೋಟ್ಯಾನ್ ಹಾಗೂ ಜಗದೀಶ್ ಚಂದ್ರ ಡಿ.ಕೆ., ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷ ಅಶೋಕ್ ಕುಮಾರ್ ಪಡ್ಪು, ಕೇಂದ್ರ ಸಮಿತಿಯ ಸಂಘಟನಾ ನಿರ್ದೇಶಕ ಶುಭಕರ ಪೂಜಾರಿ ಮತ್ತಿತರರು ಉಪಸ್ಥಿತರಿದ್ದರು.







