14-11-2019, 3:52 PM
ವಿದ್ಯೆ ,ಉದ್ಯೋಗ, ಸಂಪರ್ಕ ಜಿಲ್ಲಾ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ (ರಿ)ಕಡಬ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಅಂಗವಾಗಿ ನ.14ರಂದು ಕಡಬ ತಾಲೂಕಿನ ಮೀನಾಡಿ ದ.ಕ.ಜಿ.ಪ.ಕಿ.ಪ್ರಾಥಮಿಕ ಶಾಲಾ ಮಕ್ಕಳಿಗೆ ಉಚಿತ ಐಡಿ ಕಾರ್ಡ್ ವಿತರಿಸಲಾಯಿತು. ಯುವವಾಹಿನಿ ಕಡಬ ಘಟಕದ ಕಾರ್ಯದರ್ಶಿ ಶಿವಪ್ರಸಾದ್ ನೂಚಿಲರವರು ಐಡಿ ಕಾರ್ಡ್ ವಿತರಿಸಿ ಶುಭಹಾರೈಸಿದರು. ಈ ಸಂದರ್ಭದಲ್ಲಿ ಮೀನಾಡಿ ಶಾಲಾ ಎಸ್ ಡಿ ಎಮ್ ಸಿ ಉಪಾಧ್ಯಕ್ಷ ಗಿರಿಧರ ಯುವವಾಹಿನಿ ಪದಾಧಿಕಾರಿಗಳಾದ ಜಯಪ್ರಕಾಶ್ ದೋಳ,ತಾರನಾಥ ಮರ್ಧಳ ,ಸರಿತಾ ಉಂಡಿಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಶಿಕ್ಷಕ ವೃಂದ […]
Read More
14-11-2019, 3:49 PM
ಯುವವಾಹಿನಿ (ರಿ,) ಮುಲ್ಕಿ ಘಟಕದ ವತಿಯಿಂದ 14.11.2019ರಂದು ಮುಲ್ಕಿಯ ಸಿ.ಎಸ್ .ಐ ಬಾಲಿಕಾಶ್ರಮದಲ್ಲಿ ಮಕ್ಕಳ ದಿನಾಚರಣೆ ಕಾರ್ಯಕ್ರಮ ವನ್ನು ಏರ್ಪಾಡಿಸಿಲಾಯಿತು. ಘಟಾಕಧ್ಯಕ್ಷರಾದ ಸತೀಶ್ ಕಿಲ್ಪಾಡಿಯವರ ಅಧ್ಯಕ್ಷತೆಯಲ್ಲಿ ಜರಗಿದ ಕಾರ್ಯಕ್ರಮ ವನ್ನು ಹೆಜಮಾಡಿ ಬಿಲ್ಲವ ಸಂಘದ ಅಧ್ಯಕ್ಷ ರಾದ ಲೋಕೇಶ್ ಅಮೀನ್ ರವರು ದೀಪ ಬೆಳಗಿಸಿ ಉಧ್ಘಾಟಿಸಿದರು. ಕಾರ್ಯ ಕ್ರಮ ದ ಪ್ರಾರಂಭದಲ್ಲಿ ಬಾಲಿಕಾಶ್ರಮದ ಮಕ್ಕಳು ಪ್ರಾರ್ಥನೆ ಗೈದರು, ಅಧ್ಯಕ್ಷರು ಎಲ್ಲರನ್ನು ಆತ್ಮೀಯವಾಗಿ ಸ್ವಾಗತಿಸಿದರು, ಕಾರ್ಯ ಕ್ರಮ ವನ್ನು ಊಧ್ಘಾಟಿಸಿ ಮಾತಾನಾಡಿದ ಲೋಕೇಶ್ ಅಮೀನ್ ರು ತನ್ನ ನೆರೆಕರೆಯ […]
Read More
14-11-2019, 3:45 PM
ದಿನಾಂಕ 14.11.19 ರಂದು ಸಂಜೆ 4 ಗಂಟೆಗೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ಮಕ್ಕಳ ದಿನಾಚರಣೆಯನ್ನು ಸಂವೇದನಾ ಮಕ್ಕಳ ಆಶ್ರಮ ನಂತೂರು, ತಾರೆತೋಟ ಇಲ್ಲಿ ಆಚರಿಸಲಾಯಿತು. ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಪ್ರಾರಂಭಗೊಂಡಿತು. ಯುವವಾಹಿನಿ ಕೇಂದ್ರ ಸಮಿತಿಯ ಸ್ಥಾಪಕ ಅಧ್ಯಕ್ಷರಾದ ಸಂಜೀವ ಪೂಜಾರಿ ಇವರು ಮುಖ್ಯ ಅತಿಥಿಯಾಗಿ ಭಾಗವಹಿಸಿ, ದೀಪ ಪ್ರಜ್ವಲಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ನಮ್ಮ ಘಟಕದ ವತಿಯಿಂದ ಎಲ್ಲಾ ಮಕ್ಕಳಿಗೂ 10,600 ರೂ ಪಾದರಕ್ಷೆಗಳನ್ನು ವಿತರಿಸಲಾಯಿತು. […]
Read More
14-11-2019, 3:03 AM
ಯುವವಾಹಿನಿ (ರಿ) ವೇಣೂರು ಘಟಕ ಇದರ ವತಿಯಿಂದ ಸ್ಪೂರ್ತಿ ಭಿನ್ನಚೇತನಾ ಶಾಲೆ ಮೂಡಬಿದಿರೆಯಲ್ಲಿ ಇಂದು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಘಟಕದ ಅಧ್ಯಕ್ಷರಾದ ನವೀನ್ ಪೂಜಾರಿ ಪಚ್ಚೇರಿ ವಹಿಸದ್ದರು .ಮಕ್ಕಳಿ ವಿವಿಧ ಆಟೋಟ ಹಾಗೂ ಸಾಂಸ್ಕೃತಿಕ ಸ್ಪರ್ಧೆಯನ್ನು ಹಮ್ಮಿಕೊಳ್ಳಲಾಗಿತ್ತು .ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ವೇದಿಕೆಯಲ್ಲಿ ಯುವವಾಹಿನಿ (ರಿ) ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ನಿತೀಶ್ ಎಚ್, ಘಟಕದ ಸಲಹೆಗಾರರಾದ ಹರೀಶ್ ಪೋಕ್ಕಿ, ಘಟಕದ ಕೋಶಧಿಕಾರಿ ಹರೀಶ್ ಪಿ […]
Read More
14-11-2019, 3:01 AM
ಯುವವಾಹಿನಿ ಮಾಣಿ ಘಟಕದ ವತಿಯಿಂದ ಮಕ್ಕಳ ದಿನಾಚರಣೆ ಸಂಭ್ರಮ ನವೆಂಬರ್ 14… ಈ ದಿನ ಪ್ರತಿಯೊಬ್ಬರ ಬದುಕಿನಲ್ಲೂ ಅಮೂಲ್ಯವಾಗಿದ್ದು. ಯಾಕೆಂದರೆ, ಇದು ಬರೀ ದಿನ ಅಲ್ಲ. ಇದು ನೆನಪಿನ ಮೆರವಣಿಗೆ… ಮಕ್ಕಳ ದಿನಾಚರಣೆ ಎಂದರೇನೇ ಹಾಗೆ… ಚಿಣ್ಣರಿಗಂತೂ ಇದು ಅಕ್ಷರಶಃ ಹಬ್ಬ. ದೊಡ್ಡವರಿಗೆ ಬಾಲ್ಯದ ದಿನಗಳನ್ನು ಮತ್ತೆ ಮೆಲುಕು ಹಾಕುವ ಕ್ಷಣ… ಇದೇ ಕಾರಣಕ್ಕೆ ಯುವವಾಹಿನಿ ಮಾಣಿ ಘಟಕದ ವತಿಯಿಂದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಅನಂತಾಡಿ ಹಾಗೂ ಬಾಬಣಕಟ್ಟೆ ಆಂಗನವಾಡಿ ಕೇಂದ್ರಕ್ಕೆ ತೆರಳಿ ಮಕ್ಕಳಿಗೆ ಸಿಹಿಹಂಚಿ, ಪಠ್ಯ […]
Read More
12-11-2019, 4:06 PM
ಯುವವಾಹಿನಿ (ರಿ) ಬೆಳ್ತಂಗಡಿ ಘಟಕದ ವತಿಯಿಂದ ಒಂದು ದಿನದ ಪ್ರವಾಸ ದಿನಾಂಕ :10:11:2019ರ ಭಾನುವಾರ ಯುವವಾಹಿನಿ ರಿ ಬೆಳ್ತಂಗಡಿ ಘಟಕದ ವತಿಯಿಂದ ಮನೋರಂಜನೆ ಉದ್ದೇಶದಿಂದ ಶ್ರಂಗೇರಿ ಶ್ರೀ ಶಾರದಾದೇವಿ ದೇವಾಲಯ ಮತ್ತು ಶಿರಿಮನೆ ಪಾಲ್ಸ್ ಜಲಪಾತ ಕ್ಕೆ ಒಂದು ದಿನ ಪ್ರವಾಸ ಕೈಗೂಂಡಿರುತ್ತದೆ.. 55ಜನ ಇದರಲ್ಲಿ ಭಾಗವಹಿಸಿದರು. ಸಾಮೂಹಿಕ ಸಹಬೋಜನ, ವಿಶೇಷ ಅಥಿತ್ಯ, ವಿವಿಧ ಮನೋರಂಜನಾ ಆಟ, ಇಲ್ಲಿ ವಿಶೇಷ ಮೇರುಗು ನೀಡಿತ್ತು. ಪ್ರವಾಸದ ಸಂಚಾಲಕರು ಚಂದ್ರಶೇಖರ ಅಳದಂಗಡಿ ಮತ್ತು ಉಮೇಶ್ ಸುವರ್ಣ ಇವರ ಶ್ರಮ ಎಲ್ಲರ […]
Read More
10-11-2019, 2:44 AM
ಗುತ್ತು ಮನೆಯಲ್ಲಿ ಯುವವಾಹಿನಿ ಮಾಣಿ ಘಟಕದ ತುಳಸಿ ಪರ್ಬ ಕಾರ್ಯಕ್ರಮ ‘ಗುತ್ತು’ ಎಂದರೆ ಇತಿಹಾಸ ಘನೀಭವಿಸಿದಂತೆ ಮತ್ತು ಮರುಜೀವಿಸಿದಂತೆ. ಅದು ಒಂದು ವಾಸ್ತವವೂ ಹೌದು, ಕಲ್ಪನೆಯೂ ಹೌದು. ಅದೊಂದು ಅನುಭವಜನ್ಯ ಸತ್ಯ ಮತ್ತು ಪುನಃ ಪಡೆದುಕೊಂಡ ಅನುಭವ”. ಇಂತಹ ಗುತ್ತು ಮನೆತನದಲ್ಲಿ ಒಂದು ಇಡ್ಕಿದು ಗ್ರಾಮದ ಸೂರ್ಯ ಚಂದ್ರಾವತಿ ಅಮ್ಮನವರ ಗುತ್ತು ಮನೆತನ. ನಮ್ಮ ಸಂಸ್ಕೃತಿಯನ್ನು ನೆನಪಿಸುವ, ಹಾಗೂ ಧಾರ್ಮಿಕತೆಯನ್ನು ಬಿಂಬಿಸುವ ಯುವವಾಹಿನಿ ತುಳಸಿಪರ್ಬ ಕಾರ್ಯಕ್ರಮ ಘಟಕದ ನೂತನ ಅಧ್ಯಕ್ಷರಾದ ರಮೇಶ್ ಪೂಜಾರಿ ಮುಜಾಲ ಇವರ ಅಧ್ಯಕ್ಷತೆಯಲ್ಲಿ […]
Read More
09-11-2019, 2:49 AM
ಮದ್ಯ ಮುಕ್ತ ಮದರಂಗಿಗೆ ಸಾಕ್ಷಿಯಾಯಿತು ಯುವವಾಹಿನಿ (ರಿ) ವೇಣೂರು ಘಟಕ ವೇಣೂರು ನ. 8 : ಮದ್ಯಪಾನವು ಸಾಮಾಜದ ಸ್ವಾಸ್ಥ್ಯ ದ ವಿನಾಶಕ್ಕೆ ಕಾರಣವಾಗುತ್ತಿದ್ದು,ಇತ್ತೀಜೆಗೆ ಮದುವೆಯ ಮದರಂಗಿಯು ನವಕುಡುಕರನ್ನು ಸೃಷ್ಟಿಸುವ ಸಮಾರಂಭವಾಗಿ ಪರಿವರ್ತನೆಗೊಂಡಿದೆ. ಇದು ಬದಲಾಗಿ ಎಲ್ಲಾ ಕಡೆ ಮದ್ಯಮುಕ್ತ ಮದರಂಗಿ ಕಾರ್ಯಕ್ರಮ ನಡೆಯುವಂತಾಗಲಿ ಎಂದು ಆಳ್ವಾಸ್ ಕಾಲೇಜಿನ ಕನ್ನಡ ಪ್ರಾಧ್ಯಾಪಕರಾಗದ ಡಾ। ಯೋಗೀಶ್ ಕೈರೋಡಿ ಹೇಳಿದರು. ಯುವವಾಹಿನಿ (ರಿ) ವೇಣೂರು ಘಟಕದ ಆಶ್ರಯದಲ್ಲಿ ಬಜಿರೆಗ್ರಾಮದ ಹೊಸಮನೆ ಮನೋಜ್ ಪೂಜಾರಿಯವರ ಮನೆಯಲ್ಲಿ ನಡೆದ ಮದ್ಯ ಮುಕ್ತ ಮದರಂಗಿ ಕಾರ್ಯಕ್ರಮದಲ್ಲಿ […]
Read More
03-11-2019, 4:31 PM
ಯುವವಾಹಿನಿ(ರಿ.)ಬೆಳ್ತಂಗಡಿ ಘಟಕದ ಸ್ಪಂದನ ಸೇವಾ ಯೋಜನೆಯಿಂದ ಎರಡು ಕಿಡ್ನಿ ವೈಪಲ್ಯಗೊಂಡಿರುವ ಮತ್ತು ಶ್ರವಣ ಮತ್ತು ದೃಷ್ಟಿಯನ್ನು ಸಂಪೂರ್ಣ ಕಳೆದುಕೊಂಡಿರುವ ಗುರುವಾಯನಕೆರೆ ನಿವಾಸಿ ಜಯರಾಮ್ ಶೆಟ್ಟಿ ಯವರಿಗೆ ರೂಪಾಯಿ 10000.00 ಸಾಂತ್ವನ ನಿಧಿಯನ್ನು ಘಟಕದ ಅಧ್ಯಕ್ಷರಾದ ಹರೀಶ್ ಸುವರ್ಣ ಹಸ್ತಾಂತರಿಸಿದರು ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ರಮಾನಂದ ಸಾಲಿಯಾನ್ ಮೂಂಡೂರು ಯುವವಾಹಿನಿ(ರಿ.) ಕೇಂದ್ರ ಸಮಿತಿಯ ನಿರ್ದೇಶಕರಾದ ಪ್ರಶಾಂತ್ ಮಚ್ಚಿನ ಗೆಳೆಯರ ಬಳಗ(ರಿ.)ಗುರುವಾಯನಕೆರೆಯ ಕಾರ್ಯದರ್ಶಿ ಮಂಜುನಾಥ್, ಚಿದಾನಂದ ಬಂಗೇರ ಗುರುವಾಯನಕೆರೆ ಉಪಸ್ಥಿತರಿದ್ದರು.
Read More
03-11-2019, 4:12 PM
ದಿನಾಂಕ 03/11/2019 ರಂದು ಪೂರ್ವಾಹ್ನ 7.00ಘಂಟೆಗೆ ಬೇಸಾಯದ ಕಡೆಗೆ ನಮ್ಮ ನಡೆ ಎಂಬ ಪರಿಕಲ್ಪನೆಯಲ್ಲಿ ಇಂದು ನಮ್ಮ ಘಟಕದ ವತಿಯಿಂದ ಎಲ್ಲಾ ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬಹಳ ಆಸಕ್ತಿದಾಯಕವಾಗಿ ಮತ್ತು ಸಮರ್ಪಣಾ ಭಾವದಿಂದ ನಾಗಂದಡಿಯ ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದೆವು. ಕೇವಲ ಒಂದು ಗಂಟೆಯಲ್ಲಿ ಒಂದು ಗದ್ದೆಯಲ್ಲಿ ಭತ್ತದ ಕಟಾವು ಕಾರ್ಯಕ್ರಮವನ್ನು ಪರಿಪೂರ್ಣಗೊಳಿಸಿದೆವು.ಇಂದಿನ ದಿನಗಳಲ್ಲಿ ಯುವ ಜನತೆಯು ಕೃಷಿಯತ್ತ ಒಲವು ಪ್ರದರ್ಶಿಸದ ಈ ಸಮಯದಲ್ಲಿ, ನಮ್ಮ ಘಟಕವು ಯುವಜನತೆಯನ್ನು ಒಗ್ಗೂಡಿಸಿ , ಈ ಕಾರ್ಯಕ್ರಮವನ್ನು […]
Read More