ಮಂಗಳೂರು: ಭಜನೆ ಮೂಲಕ ಯುವಪೀಳಿಗೆ ಸುಸಂಸ್ಕೃತರಾಗುವುದರೊಂದಿಗೆ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಉಪನ್ಯಾಸಕ ಡಾ.ಅರುಣ್ ಉಳ್ಳಾಲ್ ಹೇಳಿದರು. ಅವರು ಯುವವಾಹಿನಿ (ರಿ.) ಕೇಂದ್ರ ಸಮಿತಿ ಹಾಗೂ ಯುವವಾಹಿನಿ (ರಿ.) ಪಣಂಬೂರು- ಕುಳಾಯಿ ಘಟಕದ ಸಹಯೋಗದಲ್ಲಿ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಅಂತರ್ ಘಟಕಗಳ ಭಜನಾ ಸ್ಪರ್ಧೆ “ಮಾಧವ ಕೀರ್ತನೋತ್ಸವ-2022” ಸಮರೋಪ ಸಮಾರಂಭದಲ್ಲಿ ಮಾತನಾಡಿದರು.
ಅಧ್ಯಕ್ಷರಾದ ರವಿ ಅಮೀನ್ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟು, ವಕೀಲರಾದ ಮಯೂರ್ ಕೀರ್ತಿ ಉಪಸ್ಥಿತರಿದ್ದರು. ಭಜನಾ ಪೋಷಕ ಮಾಧವ ಅಂಚನ್ ಇಡ್ಯಾ,ಹಿರಿಯರಾದ ಪಿ. ನಾರಾಯಣ ಪೂಜಾರಿ ಕುಳಾಯಿ,ಡಾ.ಅರುಣ್ ಉಳ್ಳಾಲ್ ಇವರನ್ನು ಸಮಾರಂಭದಲ್ಲಿ ಗೌರವಿಸಲಾಯಿತು. ಘಟಕದ ಮಾಜಿ ಅಧ್ಯಕ್ಷರಾದ ಸುರೇಶ್ ಪೂಜಾರಿ ವಿಜೇತರ ಪಟ್ಟಿ ವಾಚಿಸಿದರು. ಸಂಜೀವ ಸುವರ್ಣ, ರಾಜೀವ ಪೂಜಾರಿ ಹಾಗೂ ಅಕ್ಷಿತಾ ಕಾರ್ಯಕ್ರಮ ನಿರ್ವಹಿಸಿ, ಕಾರ್ಯದರ್ಶಿ ಹರಿಣಿ ಜಗದೀಶ್ ವಂದಿಸಿದರು. ಮಾಧವ ಕೀರ್ತನೋತ್ಸವ ಉದ್ಘಾಟನೆ: ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಕುಳಾಯಿ ಅಧ್ಯಕ್ಷ ಗೋಪಾಲ ಬಂಗೇರ ಕಾರ್ಯಕ್ರಮ ಉದ್ಘಾಟಿಸಿದರು. ಶಿವಗಿರಿ ಮಠದ ಸ್ವಾಮೀಜಿ ಶ್ರೀ ಸತ್ಯಾನಂದ ತೀರ್ಥ ಸ್ವಾಮೀಜಿ ಆಶೀರ್ವಚನ ನೀಡಿದರು. ದಕ್ಷಿಣ ಕನ್ನಡ ಜಿಲ್ಲಾ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಚಂದ್ರ, ಡಾ.ರವೀಶ್ ಪಡುಮಲೆ, ಯುವವಾಹಿನಿ (ರಿ.) ಕೇಂದ್ರ ಸಮಿತಿಯ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಬಾಬು ಪೂಜಾರಿ ಮೊದಲಾದವರಿದ್ದರು. ವಿದ್ಯಾರ್ಥಿನಿ ಯಶ್ವಿತಾಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಮಾಜಿ ಅಧ್ಯಕ್ಷ ಪದ್ಮನಾಭ ಮರೋಳಿ ಪ್ರಸ್ತಾವನೆಗೈದರು. ಯುವವಾಹಿನಿ (ರಿ.) ಕೇಂದ್ರ ಸಮಿತಿ ಪ್ರಧಾನ ಕಾರ್ಯದರ್ಶಿ ಸತೀಶ್ ಕಿಲ್ಪಾಡಿ ವಂದಿಸಿದರು.