ಯುವವಾಹಿನಿ (ರಿ.) ಕೊಲ್ಯ ಘಟಕ, ಬಿಲ್ಲವ ಸೇವಾ ಸಮಾಜ ಟ್ರಸ್ಟ್ (ರಿ.) ಕೊಲ್ಯ , ಬಿಲ್ಲವ ಸೇವಾ ಸಮಾಜ ಕೊಲ್ಯ, ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ, ಕೊಲ್ಯ ಇವರ ನೇತೃತ್ವದಲ್ಲಿ ಹಾಗೂ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಇವರ ಸಹಯೋಗದಲ್ಲಿ ಉಚಿತ ಹೃದಯ ವೈದ್ಯಕೀಯ ಶಿಬಿರ ಕೊಲ್ಯ ಬಿಲ್ಲವ ಸಂಘದಲ್ಲಿ ನೆರವೇರಿತು. ಶಿಬಿರವನ್ನು ಬಿಲ್ಲವ ಸೇವಾ ಸಮಾಜ ಟ್ರಸ್ಟ್, ಕೊಲ್ಯ ಇದರ ಅಧ್ಯಕ್ಷರಾದ ವೇಣುಗೋಪಾಲ್ ಕೊಲ್ಯ ಇವರು ಉದ್ಘಾಟಿಸಿ ಶಿಬಿರದ ಪ್ರಯೋಜನವನ್ನು ಎಲ್ಲರೂ ಪಡೆಯುವಂತೆ ಕರೆ ನೀಡಿದರು. ಕಾರ್ಯಕ್ರಮದಲ್ಲಿ ಭಾಗವಹಿಸಿದ ಮಂಗಳೂರು ಹಾರ್ಟ್ ಸ್ಕ್ಯಾನ್ ಫೌಂಡೇಶನ್ ಇದರ P.R.O ಬಾಲಕೃಷ್ಣ ಮುತ್ತಮ್ ಹೃದಯದ ತಪಾಸಣೆಯ ಮಹತ್ವ, ಹೃದಯದ ಆರೋಗ್ಯಕ್ಕೆ ಸಂಬಂಧಿಸಿದಂತೆ ನಾವು ತೆಗೆದು ಕೊಳ್ಳಬೇಕಾದ ಮುನ್ನೆಚ್ಚರಿಕೆಯ ಬಗ್ಗೆ ಮಾಹಿತಿ ನೀಡಿದರು. ಯುವವಾಹಿನಿ ಕೊಲ್ಯ ಘಟಕದ ಅಧ್ಯಕ್ಷರಾದ ಮೋಹನ್ ಮಾಡೂರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಬಿಲ್ಲವ ಸೇವಾ ಸಮಾಜದ ಅಧ್ಯಕ್ಷರಾದ ಶ್ರೀ ರಾಮ ಪರ್ಯಾತ್ತೂರು, ಶ್ರೀ ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷರಾದ ಕುಸುಮ ಭರತ್ ಕುಂಪಲ, ವೈದ್ಯರಾದ ಡಾ. ಪ್ರಜ್ವಲ್, ಡಾ. ರಾಹುಲ್, ಕೇಂದ್ರ ಸಮಿತಿ ಸಂಘಟನಾ ಕಾರ್ಯದರ್ಶಿ ರವಿ ಕೊಂಡಾಣ, ಸುದೀಪ್ ಮತ್ತಿತರರು ಉಪಸ್ಥಿತರಿದ್ದರು. ಘಟಕದ ಕ್ರೀಡಾ ಮತ್ತು ಅರೋಗ್ಯ ನಿರ್ದೇಶಕರಾದ ಶಶಿಕಾಂತ್ ಪರ್ಯಾತ್ತೂರು ಸ್ವಾಗತಿಸಿ, ಘಟಕದ ಉದ್ಯೋಗ ಮತ್ತು ಭವಿಷ್ಯ ನಿರ್ದೇಶಕರಾದ ಜೀವನ್ ಕೊಲ್ಯ ಕಾರ್ಯಕ್ರಮ ನಿರೂಪಿಸಿ, ಧನ್ಯವಾದಗೈದರು.. ಕೊಲ್ಯ ಅಸುಪಾಸಿನ ಸುಮಾರು 100 ಕ್ಕಿಂತಲೂ ಹೆಚ್ಚಿನ ಜನರು ಶಿಬಿರದ ಪ್ರಯೋಜನ ಪಡೆದರು.