ಯುವವಾಹಿನಿ (ರಿ.) ಕೇಂದ್ರ ಸಮಿತಿ ಹಾಗೂ ಯುವವಾಹಿನಿ (ರಿ.) ಪಣಂಬೂರು- ಕುಳಾಯಿ ಘಟಕದ ಸಹಯೋಗದಲ್ಲಿ ಕುಳಾಯಿ ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘದಲ್ಲಿ ಯುವವಾಹಿನಿ ಅಂತರ್ ಘಟಕಗಳ ಭಜನಾ ಸ್ಪರ್ಧೆ “ಮಾಧವ ಕೀರ್ತನೋತ್ಸವ -2022” ಕಾರ್ಯಕ್ರಮದಲ್ಲಿ ಯುವವಾಹಿನಿ (ರಿ.) ಬಜ್ಪೆ ಘಟಕ ಪ್ರಥಮ, ಸುರತ್ಕಲ್ ಘಟಕ ದ್ವೀತಿಯ,ಮಂಗಳೂರು ಮಹಿಳಾ ಘಟಕ ತೃತೀಯ, ಬಹುಮಾನ ಪಡೆಯಿತು. ಶ್ರೇಯಾ ಬಜ್ಪೆ ಉತ್ತಮ ಭಜಕ ಪ್ರಶಸ್ತಿ, ಸುರತ್ಕಲ್ ಘಟಕದ ವಿಜಯ ಕುಕ್ಯಾನ್ ಉತ್ತಮ ತಬಲ ವಾದಕ ಪ್ರಶಸ್ತಿ, ದಿನೇಶ್ ಅಡ್ವೆ ಉತ್ತಮ ಹಾರ್ಮೋನಿಯಂ ವಾದಕ ಪ್ರಶಸ್ತಿಗೆ ಭಾಜನರಾದರು. ತೀರ್ಪುಗಾರರಾಗಿ ವೆಂಕಟೇಶ್ ರಾವ್,ತಿಮ್ಮಪ್ಪ ಹೆಗ್ಡೆ ಮತ್ತು ಸೀತರಾಮ ಉಪಸ್ಥಿತರಿದ್ದರು.