ಯುವವಾಹಿನಿ(ರಿ) ಕಡಬ ಘಟಕ ಹಾಗೂ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆ ರಾಮಕುಂಜ ಇದರ ಸಹಯೋಗದಲ್ಲಿ ವಿಶೇಷ ಮಕ್ಕಳ ಸಂವಾದ ಕಾರ್ಯಕ್ರಮವು 06 ಜೂನ್ 2022 ನೇ ಸೋಮವಾರ ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆ ರಾಮಕುಂಜ ಇಲ್ಲಿ ನಡೆಯಿತು. ಸಂವಾದ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಶರವೂರು ಇದರ ವ್ಯವಸ್ಥಾಪನ ಸಮಿತಿ ಸದಸ್ಯರಾದ ಮಂಜುಳಾ ಕೆ, ಸಿ ಎಂಡೋಪೀಡಿತ ಮಕ್ಕಳನ್ನು ನೋಡಿಕೊಳ್ಳಲು ಸರಕಾರವು ಐದು ಎಕರೆ ಜಮೀನನ್ನು ಆಲಂಕಾರ್ ನಲ್ಲಿ ನಿಗದಿಪಡಿಸಿದೆ, ನಿಗದಿಪಡಿಸಿದ ಸ್ಥಳದಲ್ಲಿ ಕಟ್ಟಡಗಳು ನಿರ್ಮಾಣಗೊಂಡು ವಿಕಲಚೇತನ ಮಕ್ಕಳ ಭವಿಷ್ಯವನ್ನು ರೂಪಿಸುವಲ್ಲಿ ಸಂಘ ಸಂಸ್ಥೆಗಳು ಕೆಲಸ ಮಾಡಬೇಕಾಗಿದೆ ಈ ನಿಟ್ಟಿನಲ್ಲಿ ಯುವವಾಹಿನಿ ಸಂಸ್ಥೆಯು ಸಮಾಜದಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿದೆ ಎಂದು ತಿಳಿಸಿ ಶುಭ ಹಾರೈಸಿದರು. ನಂತರ ಐದು ಜನ ವಿಕಲಚೇತನ ವಿದ್ಯಾರ್ಥಿಗಳು ಎಸೆಸೆಲ್ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಅವರನ್ನು ಯುವವಾಹಿನಿ(ರಿ) ಕಡಬ ಘಟಕದ ವತಿಯಿಂದ ಗೌರವಿಸಲಾಯಿತು.
ಯುವವಾಹಿನಿಯ ಶಾಶ್ವತ ನೆನಪಿಗಾಗಿ ಕಪಾಟು ಅನ್ನು ಕೊಡುಗೆಯಾಗಿ ನೀಡಲಾಯಿತು ಈ ಕಾರ್ಯಕ್ರಮವನ್ನು ಹರೀಶ್ ಕರ್ಕೇರ ಮಾಜಿ ಸೈನಿಕರು ನೆರವೇರಿಸಿ ಕೊಟ್ಟು ಶುಭಾಶಯಗಳನ್ನು ತಿಳಿಸಿದರು. ವಿದ್ಯಾ ಚೇತನ ವಿಶೇಷ ಮಕ್ಕಳ ಶಾಲೆ ರಾಮಕುಂಜದಲ್ಲಿ ಕೆಲಸ ನಿರ್ವಹಿಸುತ್ತಿರುವ ಸಿಬ್ಬಂದಿ ವರ್ಗದವರನ್ನು ಯುವವಾಹಿನಿಯ ಪರವಾಗಿ ಗೌರವಿಸಲಾಯಿತು. ಗೌರವ ಸ್ವೀಕರಿಸಿ ಮಾತನಾಡಿದ ಶಾಲಾ ಮುಖ್ಯೋಪಾಧ್ಯಾಯಿನಿ ಶಶಿಕಲಾ ಮಾತನಾಡಿ ಯುವವಾಹಿನಿಗೆ ತುಂಬು ಹೃದಯದ ಅಭಿನಂದನೆಗಳು ನಿಮ್ಮ ಸೇವೆ ಇನ್ನಷ್ಟು ನಮ್ಮ ಜೊತೆಗಿರಲಿ, ಎಂಡೋ ಪೀಡಿತ ಮಕ್ಕಳು ಹುಟ್ಟದ ಹಾಗೆ ತಡೆಗಟ್ಟುವಲ್ಲಿ ಯುವಪೀಳಿಗೆಯು ಕೆಲಸ ಮಾಡಬೇಕಾಗಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಯುವವಾಹಿನಿ(ರಿ.) ಕೇಂದ್ರ ಸಮಿತಿ ಮಂಗಳೂರು ಇದರ ಸಂಘಟನಾ ಕಾರ್ಯದರ್ಶಿಯಾದ ಶಿವಪ್ರಸಾದ್ ನೂಚಿಲ ಸಂದರ್ಭೋಚಿತವಾಗಿ ಮಾತನಾಡಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಘಟಕದ ಅಧ್ಯಕ್ಷರಾದ ಪ್ರವೀಣ್ ಓಂಕಾಲ್ ಮಾತನಾಡಿ ಈ ಸಂಸ್ಥೆಯ ಸಿಬ್ಬಂದಿಗಳನ್ನು ಇಂದಿನ ಕಾರ್ಯಕ್ರಮದಲ್ಲಿ ನಾವು ಗೌರವಿಸಲು ಬಹಳ ಸಂತೋಷ ಪಡುತ್ತೇವೆ, ತನ್ನ ಮನೆಯಲ್ಲಿ, ಮನದಲ್ಲಿ ಅನೇಕ ನೋವುಗಳಿದ್ದರೂ ಈ ಮಕ್ಕಳನ್ನು ಬಹಳ ಪ್ರೀತಿಯಿಂದ ನೋಡಿಕೊಳ್ಳುವ ಅಧ್ಯಾಪಕರಿಗೆ, ಸಿಬ್ಬಂದಿವರ್ಗದವರಿಗೆ ಅಭಿನಂದನೆಗಳನ್ನು ತಿಳಿಸಿದರು. ಕಾರ್ಯಕ್ರಮದಲ್ಲಿ ಘಟಕದ ಉಪಾಧ್ಯಕ್ಷರು, ಸದಸ್ಯರು, ಬಿಲ್ಲವ ಸಂಘ ಕಡಬ ವಲಯದ ಸಂಚಾಲಕರು, ಕಡಬ ವಲಯ ಬಿಲ್ಲವ ಮಹಿಳಾ ಅಧ್ಯಕ್ಷರು, ಮತ್ತಿತರು ಉಪಸ್ಥಿತರಿದ್ದರು. ವಿಶೇಷ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರಗಿತು. ಶಾಲಾ ಮಕ್ಕಳಿಗೆ ನೂರು ತೆಂಗಿನಕಾಯಿ, ಹಳೆಯ ವಾರ್ತಾಪತ್ರಿಕೆಯನ್ನು ಸಂಗ್ರಹಿಸಿ ನೀಡಲಾಯಿತು. ಕಾರ್ಯಕ್ರಮವು ಪ್ರಾರ್ಥನೆಯ ಮೂಲಕ ಆರಂಭವಾಯಿತು. ಘಟಕದ ಜೊತೆ ಕಾರ್ಯದರ್ಶಿಯಾದ ಸರಿತಾ ಉಂಡಿಲ ಸ್ವಾಗತಿಸಿ,ಕಾರ್ಯಕ್ರಮವನ್ನು ಘಟಕದ ಕಾರ್ಯದರ್ಶಿಯಾದ ಕೃಷ್ಣಪ್ಪ ಅಮೈ ನಿರೂಪಿಸಿ, ಧನ್ಯವಾದ ಸಮರ್ಪಿಸಿದರು.