ಕೂಳೂರು:- ಯುವವಾಹಿನಿ (ರಿ) ಕೂಳೂರು ಘಟಕ ಹಾಗೂ ಲಯನ್ಸ್ ಕ್ಲಬ್ ಫಲ್ಗುಣಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನದ ಅಂಗವಾಗಿ ದಿನಾಂಕ 05 ಜೂನ್ 2022 ರಂದು ಕ್ಲೀನ್ ಕೂಳೂರು ಡ್ರೈವ್ ಎಂಬ ಸ್ವಚ್ಚತಾ ಕಾರ್ಯಕ್ರಮಕ್ಕೆ ಮಂಗಳೂರು ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ ಯವರು ಚಾಲನೆ ನೀಡಿದರು. ಸೆಂಟರ್ ಫಾರ್ ಇಂಟಿಗ್ರೆಟೆಡ್ ಲರ್ನಿಂಗ್ ಇದರ ಸಂಚಾಲಕರಾದ ನಂದಗೋಪಾಲ್ ರವರು ಪರಿಸರದ ಬಗ್ಗೆ ಪ್ರತಿಜ್ಞಾ ವಿಧಿ ಬೋಧಿಸಿದರು. ಬೆಳಗ್ಗೆ 9.30 ರಿಂದ 10.30 ರವರೆಗೆ ನಡೆದ ಕಾರ್ಯಕ್ರಮದಲ್ಲಿ ಕೂಳೂರು ಪರಿಸರದ ಸುತ್ತಮುತ್ತ ಸ್ವಚ್ಛತೆ ನಡೆಸಲಾಯಿತು. ಈ ಕಾರ್ಯಕ್ರಮವು ಪ್ರತಿ ಆದಿತ್ಯವಾರ 2 ತಿಂಗಳುಗಳ ಸಮಯ ನಡೆಯಲಿರುವುದು ಎಂದು ಘಟಕದ ಅಧ್ಯಕ್ಷರಾದ ದೀಕ್ಷಿತ್ ಸಿ ಎಸ್ ತಿಳಿಸಿದರು. ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಕಾರ್ಪೊರೇಟರ್ ಅನಿಲ್ ಕುಮಾರ್, ಸೆಂಟರ್ ಫಾರ್ ಇಂಟಿಗ್ರೆಟೆಡ್ ಇದರ ಕಾರ್ಯಕಾರಿ ನಿರ್ದೇಶಕರಾದ ಸಚಿತ ನಂದಗೋಪಾಲ್, ಲಯನ್ಸ್ ಕ್ಲಬ್ ಫಲ್ಗುಣಿ ಇದರ ಅಧ್ಯಕ್ಷರಾದ ಹಾಗೂ ಯುವವಾಹಿನಿ (ರಿ) ಕೂಳೂರು ಘಟಕದ ಮಾಜಿ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಯುವವಾಹಿನಿ (ರಿ.) ಕೂಳೂರು ಘಟಕದ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.