ಉಡುಪಿ :- ದಿನಾಂಕ 14 ಜೂನ್ 2022 ರಂದು ಉಡುಪಿ ಘಟಕದ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಒಂದಾದ ತಲೆಗೊಂದು ಸೂರು ಕಾರ್ಯಕ್ರಮದಡಿಯಲ್ಲಿ ಈ ಬಾರಿ ತೀರ ಅವಶ್ಯಕತೆ ಇರುವ ಒಂದು ಬಡ ಕುಟುಂಬದ ಮನೆಯ ಮೇಲ್ಚಾವಣಿಯ ದುರಸ್ತಿ ಕಾರ್ಯ ಹಾಗೂ ವಿದ್ಯುತ್ ಪುನರ್ ನವೀಕರಣ ಹಾಗೂ ಪೇಂಟಿಂಗ್ ಕಾರ್ಯಕ್ರಮವು ಪೂರ್ಣಗೊಂಡಿದ್ದು ದಿನಾಂಕ 14 ಜುನ್ 2022 ಫಲಾನುಭವಿಗಳಿಗೆ ಹಸ್ತಾಂತರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಘಟಕದ ಮಾಜಿ ಅಧ್ಯಕ್ಷರು ,ಅಧ್ಯಕ್ಷರು ಉಪಾಧ್ಯಕ್ಷರು ಹಾಗೂ ಸದಸ್ಯರು ಉಪಸ್ಥಿತರಿದ್ದರು.