ಮಾಣಿ :- ಯುವವಾಹಿನಿ (ರಿ.) ಮಾಣಿ ಘಟಕ ಹಾಗೂ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಸಹಕಾರದೊಂದಿಗೆ ಹದಿನಾರನೇ ಹೆಜ್ಜೆಯಾಗಿ “ಮನೆ ಮನೆಗೆ ಗುರುತತ್ವ ಸಂಚಾರ” ಕಾರ್ಯಕ್ರಮವು ದಿನಾಂಕ 12 ಜೂನ್ 2022ರಂದು ಘಟಕದ ಸದಸ್ಯರಾದ ಬಾಲಕೃಷ್ಣ ಅನಂತಾಡಿ ಇವರ ಮನೆಯಲ್ಲಿ ನಡೆಯಿತು.
“ಒಂದೇ ಜಾತಿ, ಒಂದೇ ಮತ, ಒಂದೇ ದೇವರು” ಎನ್ನುವ ಬ್ರಹ್ಮಶ್ರೀ ನಾರಾಯಣ ಗುರುಗಳ ತತ್ವದ ಸತ್ವ ನಮಗೆಲ್ಲರಿಗೂ ಆದರ್ಶ, ಅವರ ಪ್ರತಿಯೊಂದು ಸಂದೇಶ ಮನುಕುಲಕ್ಕೆ ಒಳಿತು ನೀಡುತ್ತ ಬಂದಿದೆ. ಆದ್ದರಿಂದ ನಾರಾಯಣ ಗುರು ತತ್ವ ಪ್ರತಿಯೊಬ್ಬನಿಗೂ ತಿಳಿಯಬೇಕು, ಪ್ರತಿ ಮನೆಗೂ ತಲುಪಬೇಕು ಎನ್ನುವ ದೃಷ್ಟಿಯಿಂದ “ಮನೆ ಮನೆಗೆ ಗುರು ತತ್ವ ಸಂಚಾರ” ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು , ಕಾರ್ಯಕ್ರಮವನ್ನು ಮನೆಯ ಯಜಮಾನರಾದ ಬಾಲಕೃಷ್ಣರವರು ಗುರುಗಳ ಶ್ಲೋಕದೊಂದಿಗೆ,ಬ್ರಹ್ಮ ಶ್ರೀ ನಾರಾಯಣ ಗುರುಗಳಿಗೆ ದೀಪ ಬೆಳಗಿಸುವುದರ ಮೂಲಕ ಚಾಲನೆ ನೀಡಿದರು. ನಂತರ ಗುರುಗಳ ತತ್ವ, ಸಂದೇಶ ಮತ್ತು ಗುರುಗಳು ಸಮಾಜಕ್ಕೆ ನೀಡಿದ ಕೊಡುಗೆಗಳೇನು ಎಂಬುವುದರ ಕುರಿತು ಸ್ವವಿವರವಾಗಿ ನೆರೆದ ಸದಸ್ಯರಿಗೆ ಮನ ಮುಟ್ಟುವಂತೆ ಘಟಕದ ಸದಸ್ಯರಾದ ದಿನಕರ್ ಅಂಚನ್ ರವರು ತಿಳಿಸಿದರು.ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ (ರಿ.) ಮಾಣಿ ಇದರ ಸಲಹಾ ಸಮಿತಿಯ ಅಧ್ಯಕ್ಷರಾದ ನಾರಾಯಣ ಸಾಲ್ಯಾನ್ ಮತ್ತು ಉಪಾಧ್ಯಕ್ಷರಾದ ಸೋಮಪ್ಪ ಮಾದೇಲು ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಮನೆ ಮನೆಗೆ ಗುರು ತತ್ವ ಸಂಚಾರ ಕಾರ್ಯಕ್ರಮ ಉತ್ತಮವಾಗಿದ್ದು ಗುರುಗಳ ಸಂದೇಶ ಎಲ್ಲರಿಗೂ ತಲುಪಬೇಕು ಮತ್ತು ಇಂತಹ ಕಾರ್ಯಕ್ರಮ ಇನ್ನಷ್ಟು ಆಗಬೇಕು ಎಂದು ಸಭೆಯಲ್ಲಿ ಅಭಿಪ್ರಾಯ ವ್ಯಕ್ತವಾಯಿತು. ಕಾರ್ಯಕ್ರಮ ನಡೆಸಲು ಅವಕಾಶ ಮಾಡಿಕೊಟ್ಟ ಬಾಲಕೃಷ್ಣ ಮತ್ತು ಅವರ ಕುಟುಂಬದವರನ್ನು ಘಟಕದ ವತಿಯಿಂದ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಗೌರವ ಸಲಹೆಗಾರರಾದ ಯಶೋಧರ ಮಾಣಿ,ಘಟಕದ ಮಾಜಿ ಅಧ್ಯಕ್ಷರಾದ ಹರೀಶ್ ಪೂಜಾರಿ, ಕೇಂದ್ರ ಸಮಿತಿಯ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ರಮೇಶ ಮುಜಲ, ಘಟಕದ ಉಪಾಧ್ಯಕ್ಷರಾದ ರವಿಚಂದ್ರ ಬಾಬಣಕಟ್ಟೆ ಮತ್ತು ನಾಗೇಶ್ ಕೊಂಕಣಪದವು, ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಪ್ರವೀಣ್ ಕೋಟ್ಯಾನ್, ಸತೀಶ್ ಬಾಯಿಲ, ಘಟಕದ ಸದಸ್ಯರು ಹಾಗೂ ನೆಟ್ಲಮೂಡ್ನೂರು ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸತೀಶ್ ಕೊಪ್ಪರಿಗೆ ಮತ್ತು ಘಟಕದ ಸದಸ್ಯರು ಉಪಸ್ಥಿತರಿದ್ದರು. ಕೋಶಾಧಿಕಾರಿ ರಾಜೇಶ್ ಎಸ್ ಬಲ್ಯ ರವರು ಸ್ವಾಗತಿಸಿ, ಘಟಕದ ನಿಕಟ ಪೂರ್ವ ಅಧ್ಯಕ್ಷರು ಮತ್ತು ಕೇಂದ್ರ ಸಮಿತಿಯ ವಿಶುಕುಮಾರ್ ಪ್ರಶಸ್ತಿ ಪ್ರಧಾನ ಸಂಚಾಲಕರಾದ ಪ್ರಶಾಂತ್ ಅನಂತಾಡಿ ವಂದಿಸಿ, ಕಾರ್ಯದರ್ಶಿ ರೇಣುಕ ಕಣಿಯೂರು ನಿರೂಪಿಸಿದರು.