31-03-2019, 1:03 PM
ಕಾರ್ಕಳ : ಯುವವಾಹಿನಿಯ 34 ನೇ ನೂತನ ಘಟಕ ಯುವವಾಹಿನಿ (ರಿ) ಕಾರ್ಕಳ ಘಟಕ ಉದ್ಘಾಟನೆ ದಿನಾಂಕ 31.03.2019 ರಂದು ಕಾರ್ಕಳದ ಬಿಲ್ಲವ ಸಂಘದ ಸಭಾಭವನದಲ್ಲಿ ಬಿಲ್ಲವ ಸಂಘ ಕಾರ್ಕಳ ಇದರ ಅಧ್ಯಕ್ಷರಾದ ಡಿ. ಆರ್ ರಾಜು ಅವರು ದೀಪ ಬೆಳಗುವುದರ ಮೂಲಕ ಉದ್ಘಾಟಿಸಿದರು. ಅವರು ಮಾತನಾಡುತ್ತಾ ವಿದ್ಯೆ ಉದ್ಯೋಗ ಸಂಪರ್ಕ ಧ್ಯೇಯದೊಂದಿಗೆ ಸ್ಥಾಪಿಸಲ್ಪಟ್ಟ ಯುವಾಹಿನಿ ಸಂಸ್ಥೆಯು ಬಿಲ್ಲವ ಸಮಾಜದ ಯುವಕರನ್ನು ಎಲ್ಲ ಕ್ಷೇತ್ರದಲ್ಲಿಯೂ ತೊಡಗಿಸಿಕೊಳ್ಳುವಂತೆ ಮಾಡಿದೆ ಎಂದರು ಪ್ರಧಾನ ಭಾಷಣಕಾರರಾಗಿ ಆಗಮಿಸಿದ ಬೆಳ್ತಂಗಡಿ ಸುವರ್ಣ ಸಾಂಸ್ಕೃತಿಕ […]
Read More
30-03-2019, 4:44 PM
ಪಡುಬಿದ್ರಿ : ಯುವವಾಹಿನಿ ಸಂಘಟನೆಯು ಸಾಕಷ್ಟು ಬೆಳೆದು ನಿಂತು ಸಮಾಜಕ್ಕೆ ತನ್ನಿಂದಾದ ಸಹಾಯ ನೀಡುತ್ತಿದೆ. ಸಮಾಜದ ಅಭಿವೃದ್ಧಿಗಾಗಿ ನಿಸ್ವಾರ್ಥತೆಯಿಂದ ದುಡಿಯುತ್ತಿರುವ ಯುವಕರ ಭಲಾಡ್ಯ ಸಂಘಟನೆಯೇ ಯುವವಾಹಿನಿ ಎಂದು ಯುವವಾಹಿನಿಯ ಕಾರ್ಯ ಸಾಧನೆಗಳನ್ನು ಅರಿತುಕೊಂಡ ಮುಂಬೈ ಆನಂದ್ ರಾಠಿ ಆಂಡ್ ಗ್ರೂಪ್ ಸಂಸ್ಥೆಯ ಸದಾನಂದ ಪೂಜಾರಿ ಮಾದುಮನೆ ಇವರು ಹರ್ಷ ವ್ಯಕ್ತಪಡಿಸಿದರು. ಇವರು ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘದ ಸಭಾ ಭವನದಲ್ಲಿ ದಿನಾಂಕ 24.03.2019 ರಂದು ಜರಗಿದ ಯುವವಾಹಿನಿ(ರಿ.) ಪಡುಬಿದ್ರಿ ಘಟಕದ 2019-20 ನೇ ಸಾಲಿನ ಪದಗ್ರಹಣ […]
Read More
27-03-2019, 4:48 PM
ಬಜಪೆ : ಯುವವಾಹಿನಿ(ರಿ.) ಬಜಪೆ ಘಟಕ ,ಲಯನ್ಸ್ ಕ್ಲಬ್ ಮುಚ್ಚೂರು – ನೀರುಡ್ಡೆ ,ನಿರಂಜನ ಸ್ವಾಮಿ ಪಾಲಿಟೆಕ್ನಿಕ್ (ಅನುದಾನಿತ ) ಸುಂಕದಕಟ್ಟೆ , ಹಾಗೂ ವೆನ್‌ಲಾಕ್ ಆಸ್ಪತ್ರೆ ಮಂಗಳೂರು, ಇವರ ಸಂಯುಕ್ತ ಅಶ್ರಯದಲ್ಲಿ, ಬೃಹತ್ ರಕ್ತದಾನ ಶಿಬಿರ ತಾರೀಕು 27/03/2019 ರಂದು ಬೆಳಿಗ್ಗೆ 10 ಗಂಟೆಗೆ ಶ್ರೀ ನಿರಂಜನ ಸ್ವಾಮಿ ಪಾಲಿಟೆಕ್ನಿಕ್ ಸುಂಕದಕಟ್ಟೆ ಇಲ್ಲಿ ಯಶಶ್ವಿಯಾಗಿ ನಡೆಯಿತು . ಎಸ್.ಎನ್.ಎಸ್ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಜ್ಯೋತಿ ನಾರಾಯಣ ಪೂಜಾರಿ ಕಾರ್ಯಕ್ರಮ ಉದ್ಘಾಟಿಸಿದರು .ಲಯನ್ಸ್ ಕ್ಲಬ್ ವಲಯ ಅಧ್ಯಕ್ಷರಾದ […]
Read More
24-03-2019, 4:24 PM
ಮೂಡಬಿದಿರೆ : ಮಂಗಳೂರು ಕೆಮಿಕಲ್ಸ್ ಆ್ಯಂಡ್ ಫರ್ಟಿಲೈಜರ್ಸ್ ಲಿಮಿಟೆಡ್ ಪಣಂಬೂರು,ಮಂಗಳೂರು, ಜಸ್ಟಿಸ್ ಕೆ.ಎಸ್.ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ಮಂಗಳೂರು ಹಾಗೂ ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಹಾಗೂ ಇನ್ನಿತರ ಸಂಘ ಸಂಸ್ಥೆಗಳ ಜಂಟಿ ಆಶ್ರಯದಲ್ಲಿ ಹರಿಪ್ರಸಾದ್ ಪಿ. ನಿಯೋಜಿತ ಉಪಾಧ್ಯಕ್ಷರು ಯುವವಾಹಿನಿ ರಿ. ಮೂಡಬಿದಿರೆ ಘಟಕ ಇವರ ನೇತ್ರತ್ವದಲ್ಲಿ ದಿನಾಂಕ 24-3-2019 ಭಾನುವಾರ ಫ್ರೆಂಡ್ಸ್ ಕ್ಲಬ್ ಸಭಾ ಭವನ ಹೊಸಂಗಡಿಯಲ್ಲಿ ಉಚಿತ ನೇತ್ರ ತಪಾಸಣಾ ಶಿಬಿರ ನಡೆಯಿತು. ಸುಮಾರು 211 ಮಂದಿ ಈ ಶಿಬಿರದ ಪ್ರಯೋಜನವನ್ನು ಪಡೆದಿರುತ್ತಾರೆ…
Read More
24-03-2019, 4:22 PM
ಮೂಡಬಿದಿರೆ : ದಕ್ಷಿಣ ಕನ್ನಡ ಸ್ಕೀಪ್ ಸಮಿತಿ,ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗು ಆಳ್ವಾಸ್ ಶಿಕ್ಷಣ ಸಂಸ್ಥೆ ಮತ್ತು “”ಯುವವಾಹಿನಿ (ರಿ) ಮೂಡುಬಿದಿರೆ ಘಟಕ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ದಿನಾಂಕ 24-3-2019ರಂದು ಮೂಡುಬಿದಿರೆ ಯ “ಸ್ವರಾಜ್ ಮೈದಾನದ ಮುಖ್ಯ ದ್ವಾರ”ದಿಂದ ಮೂಡುಬಿದಿರೆ ವ್ಯಾಪ್ತಿಯ 18ಕಿ.ಮೀ ಜಿಲ್ಲಾ ಮಟ್ಟದ ಮ್ಯಾರಥಾನ್ ಸ್ಪರ್ಧೆ ಯಶಸ್ವಿಯಾಗಿ ನಡೆಯಿತು. ಈ “ಮ್ಯಾರಥಾನ್” ಸ್ಪರ್ಧೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ವ್ಯಾಪ್ತಿಯಲ್ಲಿ ಬರುವ ಶಾಲಾ/ಕಾಲೇಜು ಗಳ ವಿದ್ಯಾರ್ಥಿಗಳು, ಇಲಾಖಾ ಅಧಿಕಾರಿ/ಸಿಬ್ಬಂದಿಗಳು ಹಾಗೂ […]
Read More
24-03-2019, 2:36 PM
ಉಪ್ಪಿನಂಗಡಿ : ತಾ.24-3-2019 ನೇ ಆದಿತ್ಯವಾರದಂದು ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದ ಯುವವಾಹಿನಿ ವಿದ್ಯಾರ್ಥಿ ಸಂಘ ಉದ್ಘಾಟನೆಗೊಂಡಿತು, ಯುವವಾಹಿನಿ(ರಿ) ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಟಿ. ಶಂಕರ ಸುವರ್ಣರವರು ದೀಪ ಬೆಳಗುವುದರ ಮೂಲಕ ನೂತನ ವಿದ್ಯಾರ್ಥಿ ಸಂಘ ಉದ್ಘಾಟಿಸಿ ಶುಭ ಹಾರೈಸಿದರು. ಯುವವಾಹಿನಿ(ರಿ) ಉಪ್ಪಿನಂಗಡಿ ಘಟಕದಅಧ್ಯಕ್ಷರಾದ ಅಜಿತ್ ಕುಮಾರ್ ಪಲೇರಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ್ದರು. ವಿದ್ಯಾರ್ಥಿ ಸಂಘ ಉದ್ಘಾಟನೆಯ ಬಳಿಕ ಯುವವಾಹಿನಿ ವಿದ್ಯಾರ್ಥಿ ಸಂಘಕ್ಕೆ ಸೇರ್ಪಡೆಯಾದ ವಿದ್ಯಾರ್ಥಿಗಳಿಗೆ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರು ಹಾಗೂ ಉಪ್ಪಿನಂಗಡಿ ಯುವವಾಹಿನಿ ಘಟಕದ […]
Read More
23-03-2019, 3:42 PM
ಮಂಗಳೂರು : ಹದಿಹರೆಯದ ಅವಧಿಯು ಏರಿಳಿತದಿಂದ ಕೂಡಿರುತ್ತದೆ. ವ್ಯಕ್ತಿಯ ಬಾಲ್ಯದ ಸುರಕ್ಷಿತ ಹಿಡಿತದಿಂದ ಪ್ರೌಡಿಮೆಯ ಕಡೆಗೆ ಹೆಜ್ಜೆಯಿಡುತ್ತಾನೆ. ಈ ಹಂತದಲ್ಲಿ ಮಕ್ಜಳೆಡೆಗೆ ಗಮನ ನೀಡಿ ಅವರ ಮನೋವಿಕಾಸದ ಬಗ್ಗೆ ಕಾಳಜಿ ವಹಿಸಬೇಕು ಎಂದು ಖ್ಯಾತ ಮನೋವೈದ್ಯರಾದ ಡಾ.ಅರುಣಾ ಯಡಿಯಾಳ್ ತಿಳಿಸಿದರು. ಅವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಮಂಗಳೂರಿನ ಇಂದಿರಾ ಪ್ರಿಯದರ್ಶಿನಿ ಉದ್ಯಾನವನದಲ್ಲಿ ದಿನಾಂಕ 23.03.2019ರಂದು ನಡೆದ ಮನೆ, ಮನಸ್ಸು, ಜೀವನ ಕನಸುಗಳ ಜೊತೆ ಮಾತುಕತೆ ಮನದ ಮಾತು […]
Read More
23-03-2019, 12:40 PM
ಕೆಂಜಾರು ಕರಂಬಾರು : ಕರಂಬಾರು ಮುಖ್ಯ ರಸ್ತೆಯಲ್ಲಿರುವ ಯುವವಾಹಿನಿ (ರಿ) ಕೆಂಜಾರು ಕರಂಬಾರು ಘಟಕದ ನೂತನ ಕಾರ್ಯಾಲಯವನ್ನು ದಿನಾಂಕ 23.03.2019 ರಂದು ವೈದಿಕ ವಿಧಿವಿಧಾನಗಳ ಮೂಲಕ ಉದ್ಘಾಟಿಸಲಾಯಿತು. ಬಜಪೆ ಬ್ರಹ್ಮಶ್ರೀ ನಾರಾಯಣಗುರು ಮಂದಿರದ ಅರ್ಚಕರಾದ ಶಿವರಾಮ ಪೂಜಾರಿಯವರು ಗಣ ಹೋಮ , ಗುರುಪೂಜೆಯ ಮೂಲಕ ವೈದಿಕ ವಿಧಿವಿಧಾನಗಳನ್ನು ನೆರವೇರಿಸಿದರು. ಘಟಕದ ಅಧ್ಯಕ್ಷರಾದ ಯಶವಂತ ಬಿ ಹಾಗೂ ವಿನುತಾ ದಂಪತಿಗಳು ಪೂಜಾ ಕಾರ್ಯದಲ್ಲಿ ಭಾಗವಹಿಸಿದರು. ಈ ಸಂದರ್ಭದಲ್ಲಿ ಘಟಕದ ಸ್ಥಾಪಕ ಅಧ್ಯಕ್ಷರಾದ ಗಣೇಶ್ ಅರ್ಬಿ, ಕಟ್ಟಡದ ಮಾಲೀಕರಾದ ಜಗನ್ನಾಥ […]
Read More
20-03-2019, 2:23 PM
ಕೂಳೂರು : ಬೋಂದೆಲ್ ನಿವಾಸಿ ಅನುಪಮ ಇವರ ಪುತ್ರ ಧನರಾಜ್ ಬಂಗೇರ ಇವರ ಶಾಲಾ ಫೀಸ್ ಪಾವತಿಸಲು ಅಸಾಧ್ಯವಾದ ಕಾರಣ ಯುವವಾಹಿನಿ(ರಿ) ಕೂಳೂರು ಘಟಕದ ವತಿಯಿಂದ 13,500/- ರೂಪಾಯಿಯನ್ನು ಎಲ್ಲರ ಒಪ್ಪಿಗೆಯ ಮೇರೆಗೆ ಅವರಿಗೆ ದಿನಾಂಕ 20/03/2019 ರ ವಾರದ ಸಭೆಯಲ್ಲಿ ಸಲಹೆಗಾರರಾದ ನೇಮಿರಾಜ್ ಹಸ್ತಾಂತರಿಸಿದರು. ಈ ಸoದರ್ಭದಲ್ಲಿ ಘಟಕದ ಅಧ್ಯಕ್ಷರಾದ ಲೋಕೇಶ್ ಕೋಟ್ಯಾನ್, ಉಪಾಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್, ಕಾರ್ಯದರ್ಶಿ ಪವಿತ್ರ ಅಚನ್, ನಿಕಟ ಪೂರ್ವ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಪಧಾದಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು .
Read More