ಮಂಗಳೂರು: ಭಜನೆ ಹಾಗೂ ಭಜಕರಲ್ಲಿ ಮೇಲು ಕೀಲು, ಬಡವ ಬಲ್ಲಿದ, ಬ್ರಾಹ್ಮಣ ದಲಿತ, ಪಂಡಿತ ಪಾಮರ ಎಂಬ ತಾರತಮ್ಯವಿಲ್ಲ. ಒಟ್ಟಿಗೆ ಕುಳಿತು ಸರ್ವ ನಾಮದಲ್ಲಿ ಏಕ ದೇವರನ್ನು ಕಾಣುವುದು ಭಜನೆಯಲ್ಲಿ ಮಾತ್ರ. ದೇವಸ್ಥಾನದಲ್ಲಿ ದೇವರ ಸ್ಥಾನ ಗರ್ಭಗುಡಿಯಾದರೆ, ಭಜನಾ ಮಂದಿರದಲ್ಲಿ ದೇವರ ಸ್ಥಾನ ಭಜಕನ ಹೃದಯದಲ್ಲಿ ಕೂಳೂರು ಘಟಕದಿಂದ ಪ್ರತಿ ತಿಂಗಳ ಒಂದು ದಿನ ಸಂಪರ್ಕದ ನೆಲೆಯಲ್ಲಿ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕರಾದ ಶ್ರೀಮತಿ ವಿಮಲಾ ರವರ ಸಂಚಾಲಕತ್ವದಲ್ಲಿ ನಡೆಸಿಕೊಂಡು ಬರುವ ಮನೆ ಮನೆ ಭಜನಾ ಕಾರ್ಯಕ್ರಮದ 48 ನೇ ಭಜನಾ ಕಾರ್ಯಕ್ರಮವು ಘಟಕದ ಸದಸ್ಯರಾದ ವೀಣಾ ಅಮೀನ್ ಇವರ ಮನೆಯಲ್ಲಿ ದಿನಾಂಕ 14-05-2024 ಮಂಗಳವಾರದಂದು ಸಂಜೆ 7.00 ಗಂಟೆಗೆ ಸರಿಯಾಗಿ ಗುರುಗಳ ಭಾವ ಚಿತ್ರಕ್ಕೆ ದೀಪ ಬೆಳಗಿಸುವ ಮೂಲಕ ಪ್ರಾರಂಭಿಸಲಾಯಿತು.
ಸರಿ ಸುಮಾರು ಒಂದು ಗಂಟೆಗಳ ಕಾಲ ಮನೆಯವರು, ಸಂಬಂಧಿಕರು, ಹಾಗೂ ಸದಸ್ಯರು ಭಜನಾ ಸಂಕೀರ್ತನೆಯಲ್ಲಿ ಪಾಲ್ಗೊಂಡರು. ರಾತ್ರಿ 8.30 ಕ್ಕೆ ಮಂಗಳಾರತಿಯೊಂದಿಗೆ ಭಜನೆಗೆ ಮಂಗಳ ಹಾಡಲಾಯಿತು. ಈ ಸಂದರ್ಭ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ದೀಕ್ಷಿತ್ ಸಿ ಎಸ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಜೊತೆ ಕಾರ್ಯದರ್ಶಿ ಕೀರ್ತನಾ, ಕೋಶಾಧಿಕಾರಿ ವಿಘ್ನೇಶ್, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.