Yuvavahini

MAY 08, 2024 3.35 PM IST

ಯುವವಾಹಿನಿ(ರಿ.) ವಿಟ್ಲ ಘಟಕ

ಕಿರು ಪ್ರವಾಸ

ವಿಟ್ಲ : ಯುವವಾಹಿನಿ(ರಿ.) ವಿಟ್ಲ ಘಟಕದ ವತಿಯಿಂದ ದಿನಾಂಕ 8-05-2024 ರಂದು ಒಂದು ದಿನದ ಕಿರು ಪ್ರವಾಸವನ್ನು ಕುಂದಾಪುರದ TINTON ರೆಸಾರ್ಟ್ ಗೆ ಹಮ್ಮಿಕೊಂಡಿದ್ದರು. ಜೀವನದ ಜಂಜಾಟಗಳ ನಡುವೆ ಬಸವಳಿದ ದೇಹಗಳ ಆಯಾಸವನ್ನು ತಣಿಸಲು ಸ್ವಲ್ಪ ರೋಮಾಂಚಕಾರಿಯಾಗಿ ಕಳೆಯಲು ಮುಂಜಾನೆ 5.30ಕ್ಕೆ ಬ್ರಹ್ಮಶ್ರೀ ನಾರಾಯಣ ಗುರುಗಳಿಗೆ ಪೂಜೆಯನ್ನು ಸಲ್ಲಿಸಿ ಪ್ರವಾಸವನ್ನು ಪ್ರಾರಂಭಿಸಿದರು. ಬಸ್ಸಿನಲ್ಲಿ ಮೊದಲಿಗೆ ಎಲ್ಲರೂ ಅವರವರ ಪರಿಚಯವನ್ನು ಮಾಡಿಕೊಂಡು ಬಸ್ಸು ಹೊರಟಿತು ಬಡಗಣ ಉಡುಪಿಯತ್ತ ಬೆಳಿಗ್ಗೆ 9.30ಕ್ಕೆ TINTON ತಲುಪಿದರು. ಬೆಳಗ್ಗಿನ ಉಪಹಾರವನ್ನು ಮಾಡಿ ನಂತರ ಈಜು ಕೊಳದಲ್ಲಿ ಸದ್ಯಸರು ಆಟ ಆಡಿದರು. ಜೀವನದ ಹಂತದಲ್ಲಿ ಬಾಲ್ಯದ ಸವಿನೆನಪು ಎಂದೆಂದು ಮರೆಯಲಾಗದು, ಮತ್ತೆ ಎಲ್ಲರೂ ಮಕ್ಕಳಂತೆ ಎರಡು ತಂಡಗಳನ್ನು ಮಾಡಿ ಥ್ರೋ ಬಾಲ್ ಆಟವನ್ನು ನೀರಿನಲ್ಲಿ ಆಡಿದರು, ಮದ್ಯಾಹ್ನದ ಭೋಜನವನ್ನು ಸವಿದು ಸ್ವಲ್ಪ ವಿರಾಮವನ್ನು ಪಡೆದು ನಂತರ ಸಾಹಸಮಯ ಜಲಕ್ರೀಡೆ ಮನುಷ್ಯನ ಮನಸ್ಸಿಗೆ ಮುದ ನೀಡುವುದರಲ್ಲಿ ಸಂಶಯವಿಲ್ಲ.

ಮಧ್ಯಾಹ್ನದ ಬಿರು ಬಿಸಿಲಿನ ನಡುವೆ ರಮಣೀಯ ನದಿ ನೀರಿನಲ್ಲಿ ಬೋಟಿಂಗ್, ನೀರಿನಲ್ಲಿ ಆಟವನ್ನು ಆಡಿದರು. ಸಂಜೆಯ ಚಾ-ತಿಂಡಿಯನ್ನು ಮುಗಿಸಿ, ಮರಳಿ ಬಸ್ಸಿನಲ್ಲಿ ಬಂದು ಕಾಪು ಬೀಚ್ ಗೆ ಹೋಗಿ ಮತ್ತೆ ಅಲ್ಲಿಂದ ವಿಟ್ಲಕ್ಕೆ ತಲುಪಿದರು. ಒಂದು ದಿನ ಮಕ್ಕಳಾಗಿ ಪುನಃ ವಾಸ್ತವಕ್ಕೆ ಮರಳುವಾಗ ಮತ್ತೆ ಅದೇ ಜೀವನದ ಜವಾಬ್ದಾರಿಗಳಿಗೆ ಹೆಜ್ಜೆ ಹಾಕಿ ಬಸ್ಸಿನ ಮೆಟ್ಟಿಲುಗಳನ್ನು ಇಳಿಯುವಾಗ ಮನಸ್ಸಿನಲ್ಲಿ ಇಷ್ಟು ಬೇಗ ಮುಗಿಯಿತೆ? ಎನ್ನುವ ಭಾರವಾದ ಚಿಂತೆಯ ಜೊತೆಗೆ ಸವಿ ನೆನಪುಗಳು ಮಾತ್ರ ಎಂದೆಂದೂ ಸ್ಮರಣೀಯ ಎನ್ನುವಂತೆ ಮನ ಮಿಡಿದದ್ದು ಅಂತು ಸತ್ಯ. ‌ಪ್ರವಾಸದಲ್ಲಿ ವಿಟ್ಲ ಘಟಕದ ಪದಾಧಿಕಾರಿಗಳು, ನಿರ್ದೇಶಕರುಗಳು, ಸದಸ್ಯರು, ಮಾಜಿ ಅಧ್ಯಕ್ಷರುಗಳು ಪಾಲ್ಗೊಂಡು ಒಂದು ದಿನವನ್ನು ಎಲ್ಲರೂ ಜೊತೆಯಾಗಿ ಆನಂದಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!