ಮೂಡುಬಿದಿರೆ: ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಶಾರದಾ ಆರ್ಟ್ಸ್ ಕಲಾವಿದರು (ರಿ.) ಮಂಜೇಶ್ವರ ಇವರು ಅಭಿನಯಿಸಿರುವ ವಿನೂತನ ಶೈಲಿಯ ಹಾಸ್ಯಮಯ ತುಳು ನಾಟಕ ಕಥೆ ಎಡ್ಡೆ ಉಂಡು ನಾಟಕ ಪ್ರದರ್ಶನದ ಉದ್ಘಾಟನಾ ಕಾರ್ಯಕ್ರಮವು ದಿನಾಂಕ 07-05-2024 ರಂದು ಸಂಜೆ 7 ಗಂಟೆಗೆ ಸರಿಯಾಗಿ ಮೂಡುಬಿದಿರೆಯ ಕನ್ನಡ ಭವನದಲ್ಲಿ ನಡೆಯಿತು.
ಘಟಕದ ಅಧ್ಯಕ್ಷ ರಾದ ಶಂಕರ್ ಎ. ಕೋಟ್ಯಾನ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಆಗಮಿಸಿದ ಎಲ್ಲಾ ಅತಿಥಿಗಳನ್ನು ಮಾಜಿ ಅಧ್ಯಕ್ಷ ಜಗದೀಶಚಂದ್ರ ಡಿ.ಕೆ. ಇವರು ಸ್ವಾಗತಿಸಿದರು. ಶಂಕರ್ ಎ. ಕೋಟ್ಯಾನ್ ಪುಷ್ಪ ನೀಡಿ ಗೌರವಿಸಿದರು. ನಾಟಕ ತಂಡದ ಸಂಚಾಲಕರಾದ ಕೃಷ್ಣ ಜೆ. ಮಂಜೇಶ್ವರ ಇವರನ್ನು ಶಾಲು, ಸ್ಮರಣಿಕೆ ನೀಡಿ ಗೌರವಿಸಲಾಯಿತು. ಅಧ್ಯಕ್ಷರು ಪ್ರಸ್ತಾವಿಕವಾಗಿ ಮಾತನಾಡಿ ನಾಟಕದ ಉದ್ದೇಶ ಮತ್ತು ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಅಭಿನಂದನೆ ಸಲ್ಲಿಸಿದರು.
ಕಾರ್ಯಕ್ರಮದ ಉದ್ಘಾಟನೆಯನ್ನು ಉದ್ಯಮಿ ಬೆಳುವಾಯಿ ಭಾಸ್ಕರ್ ಎಸ್. ಕೋಟ್ಯಾನ್ ಇವರು ದೀಪ ಬೆಳಗಿಸುವ ಮೂಲಕ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭಹಾರೈಸಿದರು.
ಕಾರ್ಯಕ್ರಮದ ಮುಖ್ಯ ಅತಿಥಿ ಕೆ. ಅಭಯಚಂದ್ರ ಜೈನ್ ಮಾತನಾಡಿ ಯುವವಾಹಿನಿಯ ಕಾರ್ಯವೈಖರಿಯ ಬಗ್ಗೆ ಪ್ರಶಂಸೆಯ ಮಾತು ಹೇಳಿ ಕಾರ್ಯಕ್ರಮಕ್ಕೆ ಶುಭಾಶಯ ಕೋರಿದರು. ಕಾರ್ಯಕ್ರಮದಲ್ಲಿ
ಶ್ರೀಮತಿ ಭಾನುಮತಿ ಶೀನಪ್ಪ, ಉದ್ಯಮಿ ನಾರಾಯಣ ಪಿ. ಎಂ, ಸುದರ್ಶನ್ ಎಮ್. ಮೂಡಬಿದ್ರಿ, ಜಗದೀಶ್ಚಂದ್ರ ಡಿ ಕೆ, ನವಾನಂದ ಮೂಡಬಿದ್ರೆ, ಹರಿಪ್ರಸಾದ್ ಪಿ, ಸುಶಾಂತ್ ಕರ್ಕೇರ, ಪ್ರತಿಭಾ ಸುರೇಶ್, ಗಿರೀಶ್ ಕೋಟ್ಯಾನ್ ಹಾಗೂ ಕಾರ್ಯಕ್ರಮಕ್ಕೆ ಸಹಕರಿಸಿದ ಹಲವು ಗಣ್ಯಾತಿ ಗಣ್ಯರು ಭಾಗವಸಿದ್ದರು.
ಕಾರ್ಯಕ್ರಮದ ಮುಖ್ಯ ಉದ್ದೇಶವಾದ ವಿವಿಧ ಸಾಮಾಜಿಕ ಸೇವಾ ಚಟುವಟಿಕೆಗಳ ಸಹಾಯಾರ್ಥವಾಗಿ ಘಟಕದ ವತಿಯಿಂದ ಸುಶಾಂತ್ ಕೆ ಪೂಜಾರಿ, ಕೌಶಿಲ್ ಬನ್ನಡ್ಕ, ವಿಕಾಸ್ ಶೆಟ್ಟಿ , ಇವರುಗಳಿಗೆ ಅನಾರೋಗ್ಯದ ಕಾರಣ ವೈದ್ಯಕೀಯ ನೆರವಿಗಾಗಿ ಸಹಾಯ ಧನ ಅತಿಥಿಗಳ ಸಮ್ಮುಖದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮದ ನಿರೂಪಣೆಯನ್ನು ಕು.ಸೌಮ್ಯ ಕೋಟ್ಯಾನ್ ನೆರವೇರಿಸಿದರು. ನಾಟಕ ಪ್ರದರ್ಶನವು ರಾತ್ರಿ 8 ಗಂಟೆಗೆ ಸರಿಯಾಗಿ ಪ್ರಾರಂಭವಾಯಿತು. ಸುಮಾರು 900 ಕ್ಕೂ ಹೆಚ್ಚು ಮಂದಿ ನಾಟಕ ವೀಕ್ಷಿಸಿದರು. ನಾಟಕ ಪ್ರದರ್ಶನವು ಉತ್ತಮವಾಗಿ ಮೂಡಿ ಬಂದಿದ್ದು, ನಾಟಕಾಭಿಮಾನಿಗಳ ಪ್ರಸಂಶೆಗೆ ಪಾತ್ರವಾಯಿತು. ರಾತ್ರಿ 11.00ಕ್ಕೆ ಮುಕ್ತಾಯವಾಯಿತು.