ಕೂಳೂರು: ಭಾಗ್ಯಗಳು ಯಾವತ್ತೂ ಒಂದೇ ರೀತಿ ಇರುವುದಿಲ್ಲ ತಿರುಗುವ ಚಕ್ರದ ಪರಿಧಿಯಂತೆ ಏಳು ಬೀಳುಗಳು ಸಹಜ. ಉಳ್ಳವರು ಇಲ್ಲದವರಿಗೆ ಆಸರೆ ಆಗಬೇಕಾದುದು ಮಾನವೀಯ ಧರ್ಮ.
ಪಂಜಿಮೊಗರು ವಿದ್ಯಾನಗರ ನಿವಾಸಿ ದೀಪಕ್ ಇವರಿಗೆ ಬಾಯಿಯ ಕ್ಯಾನ್ಸರ್ ಖಾಯಿಲೆ ಇದ್ದು ,ಇವರ ಇಬ್ಬರು ಹೆಣ್ಣು ಮಕ್ಕಳಿಗೆ ವಿದ್ಯಾಭ್ಯಾಸ ಕೂಡ ಬಹಳ ಕಷ್ಟಕರವಾಗಿರುವುದ್ದು ನಮ್ಮ ಘಟಕದ ನೆರವು ಕೋರಿದ್ದರು. ಹಾಗಾಗಿ ಘಟಕದ ವತಿಯಿಂದ ದಿ. 13-05-2024 ರಂದು ಇವರ ಕುಟುಂಬದ ನೆರವಿಗೆ ಬೇಕಾಗಿ ಸೇವಾ ನಿಧಿ ಯೋಜನೆಯ ಅಡಿಯಲ್ಲಿ ರೂ. 15000 ಧನ ಸಹಾಯ ನೀಡಲಾಯಿತು. ಈ ಸಂದರ್ಭ ಘಟಕದ ಅಧ್ಯಕ್ಷರಾದ ಶ್ರೀಮತಿ ಇಂದಿರಾ ಸುರೇಶ್, ಮಾಜಿ ಅಧ್ಯಕ್ಷರಾದ ಪುಷ್ಪರಾಜ್ ಕುಮಾರ್, ಲೋಕೇಶ್ ಕೋಟ್ಯಾನ್, ಭಾಸ್ಕರ್ ಕೋಟ್ಯಾನ್, ಶ್ರೀಮತಿ ನಯನ ರಮೇಶ್, ಮಾರ್ಗದರ್ಶಕರಾದ ಚಂದಪ್ಪ ಸನಿಲ್, ಸಮಾಜ ಸೇವಾ ನಿರ್ದೇಶಕರಾದ ಶ್ರೀಮತಿ ಜಯಲಕ್ಷ್ಮಿ, ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು.