Yuvavahini

MAY 12, 2024 3.48 PM IST

ಯುವವಾಹಿನಿ(ರಿ.) ಸುರತ್ಕಲ್ ಘಟಕ

ಕಿರು ಪ್ರವಾಸ

ಮಂಗಳೂರು: ಯುವವಾಹಿನಿ(ರಿ.) ಸುರತ್ಕಲ್ ಘಟಕದ ವತಿಯಿಂದ ದಿನಾಂಕ 12-05-2024 ರಂದು ಭಾನುವಾರ ಒಂದು ದಿನದ ಕಿರು ಪ್ರವಾಸವನ್ನು ಬ್ರಹ್ಮವರದ ರಿಲ್ಯಾಕ್ಸ್ ಲೇಸರ್ ಪಾರ್ಕ್ ಗೆ ಹಮ್ಮಿಕೊಳ್ಳ ಲಾಗಿತ್ತು. ಬಿಡುವಿಲ್ಲದ ಜೀವನದಲ್ಲಿ ಸ್ವಲ್ಪ ಬಿಡುವು ಮಾಡಿಕೊಂಡು ರಿಲ್ಯಾಕ್ಸ್ ಲೇಸರ್ ಪಾರ್ಕಿನಲ್ಲಿ ರೋಮಾಂಚನಕಾರಿಯಾಗಿ ಸಮಯ ಕಳೆಯಲು, ಮುಂಜಾನೆ 6 ಗಂಟೆಗೆ ಸುರತ್ಕಲ್ ನಿಂದ ಬಸ್ಸು ತೆರಳಿತು. ಸದಸ್ಯರೆಲ್ಲರ ಪರಿಚಯದೊಂದಿಗೆ ಪ್ರಯಾಣ ಶುರು ಮಾಡಿ, ಮೊದಲಿಗೆ ಕಾಪು ಮಾರಿಯಮ್ಮ ದೇಗುಲ ದರ್ಶನದೊಂದಿಗೆ ಪಯಣ ಮುಂದುವರೆಸಿ, ಉಡುಪಿ ಕಡಿಯಾಳಿ ಶ್ರೀ ಮಹಿಷಮರ್ದಿನಿ ದೇವಸ್ಥಾನದಲ್ಲಿ ದೇವರ ದರ್ಶನ ಪಡೆದು, ಬೆಳಿಗ್ಗೆ ಸುಮಾರು 9.30 ಗಂಟೆಗೆ ಪ್ರವಾಸ ತಾಣ ತಲುಪಿದರು. ಬೆಳಗ್ಗಿನ ಉಪಾಹಾರ ಮುಗಿಸಿ, ದೋಣಿಯ ಮುಖಾಂತರ ರಿಲ್ಯಾಕ್ಸ್ ಲೇಸರ್ ಪಾರ್ಕ್ ತಲುಪಿದರು. ಅಲ್ಲಿಯ ಸಿಬ್ಬಂದಿಗಳು ಘಟಕದ ತಂಡವನ್ನು ಆದರದಿಂದ ಸ್ವಾಗತಿಸಿದರು. ಸದಸ್ಯರ ಎರಡು ತಂಡ ರಚಿಸಿ, ಚಿಕ್ಕ ಮಕ್ಕಳಂತೆ ತ್ರೋ ಬಾಲ್, ವಾಲಿಬಾಲ್, ಹಗ್ಗಜಗ್ಗಾಟ ಮತ್ತಿತರ ಆಟಗಳನ್ನು ಬಾಲ್ಯದ ನೆನಪು ಮರುಕಳಿಸುವಂತೆ ಆನಂದಿಸಿದರೂ.

ಮಧ್ಯಾಹ್ನ ಬಿರಿಯಾನಿ ಊಟ ಮುಗಿಸಿ, ಬೋಟಿನಲ್ಲಿ ಜಲಯಾನ ಮಾಡಿ ಮಧ್ಯಾಹ್ನದ ಮಟ ಮಟ ಬಿಸಿಲಿನಲ್ಲಿ ಜಲಕ್ರೀಡೆಯಾಡಿ ಮನಸ್ಸನ್ನು ಉಲ್ಲಾಸಗೊಳಿಸಿ, ನೀರಿನಲ್ಲಿ ತ್ರೋಬಾಲ್ ಬೋಟಿಂಗ್ ಇನ್ನಿತರ ಮನರಂಜನಾ ಆಟಗಳನ್ನು ಆಡಿ, ಡಿ.ಜೆ ಸಂಗೀತಕ್ಕೆ ಮನಬಿಚ್ಚಿ ಕುಣಿದು ಆನಂದಿಸಿದರು. ಸಂಜೆಯ ಬಿಸಿ ಬಿಸಿ ಚಾ ತಿಂಡಿಯನ್ನು ಮುಗಿಸಿ, ಬಸ್ಸಿನ ಕಡೆ ಮರಳಿದರು. ಬಸ್ಸಿನಲ್ಲಿ ಹಾಡಿಗೆ ಹೆಜ್ಜೆ ಹಾಕುತ್ತಾ ಕುಣಿದು, ರಾತ್ರಿ 7.30ಕ್ಕೆ ಸುರತ್ಕಲ್ ತಲುಪಿದರು. ಮತ್ತೆ ವಾಸ್ತವಕ್ಕೆ ಮರಳುವಾಗ ಅದೇ ಜೀವನದ ಜವಾಬ್ದಾರಿಗಳು ನೆನಪಿಗೆ ಬಂದವು. ಒಂದು ದಿನ ಮುಗಿದ ಅರಿವೇ ಆಗಲಿಲ್ಲ. ಇಷ್ಟು ಬೇಗ ಕಿರು ಪ್ರವಾಸ ಮುಗಿದೇ ಹೋಯಿತಲ್ಲಾ ಎಂದು ಭಾರವಾದ ಮನಸ್ಸಿನಿಂದ ಬಸ್ಸನ್ನು ಇಳಿದು ಸವಿನೆನಪನ್ನು ಮಾತ್ರ ಹೊತ್ತುಕೊಂಡು ತಮ್ಮ ತಮ್ಮ ಮನೆಗೆ ತೆರಳಿದರು.
ಪ್ರವಾಸದಲ್ಲಿ ಸಂಚಾಲಕರಾದ ಶ್ರೀ ಶಶಾಂಕ್, ಅಧ್ಯಕ್ಷರು, ಕಾರ್ಯದರ್ಶಿ, ಉಪಾಧ್ಯಕ್ಷರು, ದ್ವಿತೀಯ ಉಪಾಧ್ಯಕ್ಷರು, ಮಾಜಿ ಅಧ್ಯಕ್ಷರುಗಳು, ಸದಸ್ಯರು ಮತ್ತು ನಮ್ಮೆಲ್ಲರ ಬಂಧು ಮಿತ್ರರು ಮಕ್ಕಳು ಒಟ್ಟು 54 ಜನರ ತಂಡ ಪಾಲ್ಗೊಂಡು ಒಂದು ದಿನದ ಪ್ರವಾಸವನ್ನು ಯಶಸ್ವಿಗೋಳಿಸಿದರು.

Leave a Reply

Your email address will not be published. Required fields are marked *

ಸಂಪರ್ಕಿಸಿ : +91 94484 63345
yuvavahinicentral@gmail.com

ಮುಂದಿನ ಕಾರ್ಯಕ್ರಮಗಳು
ಜಾಹೀರಾತುಗಳು
ಪ್ರಮುಖ ಕಾರ್ಯಕ್ರಮ
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ

ಡೆನ್ನಾನ-ಡೆನ್ನನ 2026 : ಯುವವಾಹಿನಿ(ರಿ) ಕೂಳೂರು ಘಟಕ ಚಾಂಪಿಯನ್

ಬಂಟ್ವಾಳ : ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ, ಬಂಟ್ವಾಳ ಘಟಕದ ಆತಿಥ್ಯದಲ್ಲಿ ಏಪ್ರಿಲ್ 19ರಂದು ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧೆ ‘ಡೆನ್ನಾನ-ಡೆನ್ನನ 2026’ರಲ್ಲಿ ಯುವವಾಹಿನಿ ಕೂಳೂರು ಘಟಕ ₹50,000/- ನಗದು ಹಾಗು ಆಕರ್ಷಕ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಿಗೆ ಗೌರವಾರ್ಪಣೆ

ಸವಿನೆನಪಿನ ಸಿಂಚನದ ನಮನ

ಬಂಟ್ವಾಳ : ಬಂಟ್ವಾಳದಲ್ಲಿ ಸಂಭ್ರಮದಿಂದ ಜರುಗಿದ “ಡೆನ್ನಾನ ಡೆನ್ನನ 2026” ಸಾಂಸ್ಕೃತಿಕ ವೇದಿಕೆಯಲ್ಲಿ ಒಂದು ಐತಿಹಾಸಿಕ ಕ್ಷಣ ಅನಾವರಣಗೊಂಡಿತು. ಕಳೆದ 39 ವರ್ಷಗಳಲ್ಲಿ ಯುವವಾಹಿನಿಯನ್ನು ಸಮರ್ಥವಾಗಿ ಮುನ್ನಡೆಸಿದ 33 ಮಂದಿ ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರನ್ನು ಒಂದೇ ವೇದಿಕೆಯಲ್ಲಿ ಗೌರವಿಸುವ...

Sunday, 19-04-2026
ಯುವವಾಹಿನಿ ಡೆನ್ನಾನ ಡೆನ್ನನ : 2026

ಪಿಯುಸಿ ಟಾಪರ್ ದಿಶಾ ಪೂಜಾರಿ ಇವರಿಗೆ ಯುವವಾಹಿನಿ ಗೌರವಾರ್ಪಣೆ

ಬಂಟ್ವಾಳ: ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಆಶ್ರಯದಲ್ಲಿ ಹಾಗೂ ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬಿ.ಸಿ.ರೋಡ್‌ನ ಸ್ಪರ್ಶ ಕಲಾ ಮಂದಿರದಲ್ಲಿ ನಡೆದ ಯುವವಾಹಿನಿ ಅಂತರ್‌ಘಟಕ ಸಾಂಸ್ಕೃತಿಕ ಸ್ಪರ್ಧಾ ಸಮಾರಂಭದಲ್ಲಿ, ಇತ್ತೀಚೆಗೆ ಪಿಯುಸಿ ಪರೀಕ್ಷೆಯಲ್ಲಿ 600 ಅಂಕಗಳನ್ನು ಪಡೆದು ರಾಜ್ಯದಲ್ಲಿ ಪ್ರಥಮ ಸ್ಥಾನ ಪಡೆದ...

Sunday, 19-04-2026
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಕೊಲ್ಯ ಘಟಕದ ಆತಿಥ್ಯದಲ್ಲಿ “ಸಖೀ ಸಂವಾದ” ಕಾರ್ಯಾಗಾರ

ಸಖೀ ಸಂವಾದ: ಮಹಿಳಾ ಸಬಲೀಕರಣಕ್ಕೆ ರಾಜಕೀಯ ಪ್ರಾತಿನಿಧ್ಯದ ಅಗತ್ಯತೆ – ಪ್ರೊ. ಪಿ.ಎಲ್. ಧರ್ಮ

ಮಂಗಳೂರು: ಮಹಿಳೆಯರು ಕೇವಲ ಮತದಾರರಾಗಿ ಉಳಿಯದೆ, ದೇಶದ ರಾಜಕೀಯ ನಿರ್ಧಾರಗಳಲ್ಲಿ ಪಾಲ್ಗೊಳ್ಳುವ ನಿರ್ಣಾಯಕ ಶಕ್ತಿಯಾಗಿ ಬೆಳೆಯಬೇಕು. ನಿರ್ಧಾರ ತೆಗೆದುಕೊಳ್ಳುವ ಉನ್ನತ ಸ್ಥಾನಗಳಲ್ಲಿ ಮಹಿಳೆಯರು ಇದ್ದಾಗ ಮಾತ್ರ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ನ್ಯಾಯ ಸಿಗಲು ಸಾಧ್ಯ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ....

Saturday, 14-03-2026
ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ ಹಾಗೂ ಕೂಳೂರು ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 38ನೇ ವಾರ್ಷಿಕ ಸಮಾವೇಶ ಸಂಪನ್ನ

ಶಾಂತಿ–ಸೌಹಾರ್ದತೆ ರಾಷ್ಟ್ರದ ಶಕ್ತಿ, ಯುವಜನತೆ ಅಧಿಕಾರದಲ್ಲೂ ಮುನ್ನಡೆಯಬೇಕು : ಜಿಲ್ಲಾಧಿಕಾರಿ ಜಗದೀಶ್

ಮಂಗಳೂರು: “ನಮ್ಮ ನಾಡಿನಲ್ಲಿ ನಾವು ಸಹೋದರತ್ವ ಬದುಕಬೇಕು. ಶಾಂತಿ ಮತ್ತು ಸೌಹಾರ್ದತೆ ನೆಲೆಸಿದರೆ ನಾಡಿನ ಅಭಿವೃದ್ಧಿ ಖಚಿತ. ಯುವ ಮನಸ್ಸುಗಳು ಕೇವಲ ಸಾಮಾಜಿಕ ನ್ಯಾಯದ ಹೋರಾಟದಲ್ಲಿ ಮಾತ್ರವಲ್ಲ, ಆಡಳಿತ ಹಾಗೂ ಅಧಿಕಾರದ ವಲಯದಲ್ಲೂ ಮುನ್ನಡೆಯಬೇಕು” ಎಂದು ಬೆಂಗಳೂರು ನಗರ ಜಿಲ್ಲಾಧಿಕಾರಿ ಜಗದೀಶ್...

Sunday, 21-12-2025
error: Content is protected !!