ಮಾಣಿ: ದಿನಾಂಕ 12-05-2024 ಆದಿತ್ಯವಾರದಂದು ಬೆಳಿಗ್ಗೆ 7.00ಕ್ಕೆ ಮಾಣಿಯಿಂದ ಬಸ್ಸಿನಲ್ಲಿ ಹೊರಟ ಘಟಕದ ಪಯಣ ಅತ್ಯಂತ ಸಡಗರದಿಂದ, ಖುಷಿಯಿಂದ, ಅಂತ್ಯಾಕ್ಷರಿ, ಒಗಟು ಬಿಡಿಸೋದು, ಇನ್ನಿತರ ಹಲವು ಗೇಮ್ಸ್ ನಲ್ಲಿ ಎಲ್ಲರೂ ಪಾಲ್ಗೊಂಡು ಕಾಲ ಕಳೆದರು. ದಾರಿ ಮದ್ಯದಲ್ಲಿ ಬೆಳಗ್ಗಿನ ಉಪಹಾರವನ್ನು ಮುಗಿಸಿಕೊಂಡು ಪುನಹ ಬಸ್ಸಿನಲ್ಲಿ ವಿವಿಧ ಮನರಂಜನೆಯನ್ನು ಪ್ರಾರಂಭಿಸಿ ಎಲ್ಲರೂ ನಕ್ಕು ನಲಿದು ಸಂತೋಷ ದಿಂದ ಪ್ರಯಾಣ ಮಾಡಿ 11.30 ಕ್ಕೆ ಕಣ್ಣೂರು ತಲುಪಿದೆವು.
ಅಲ್ಲಿ ಎಲ್ಲರಿಗೂ ಟಿಕೆಟನ್ನು ಪಡೆದು ಬ್ಯಾಗನ್ನು ಲಾಕರಿನಲ್ಲಿ ಇಟ್ಟು ಮಕ್ಕಳಿಗೆ ಆಟ ಆಡಲು ವಿವಿಧ ರೀತಿಯ ರೈಲು, ಉಯ್ಯಾಲೆ ಹಾಗೂ ದೊಡ್ಡವರಿಗೆ ಆಡುವ ತೊಟ್ಟಿಲುಗಳು, ಮಿರರ್ ಕೇವ್, 3D ಪಿಕ್ಚರ್, ಮ್ಯೂಸಿಕ್ ರೌಂಡ್ ತೊಟ್ಟಿಲು ಹಾಗೂ ಹಲವು ವಿವಿಧ ರೀತಿಯ ಆಟ ಆಡಬೇಕಾದ ಉಪಕರಣಗಳಿದ್ದವು.
ನಂತರ ಮದ್ಯಾಹ್ನ ಒಳ್ಳೆಯ ರೀತಿಯ ಭೋಜನವನ್ನು ಮಾಡಿದರು. ನಂತರ ಆಡಿದ್ದು ನೀರಿನಲ್ಲಿ. ನಾನಾ ತರಹದ ಈಜುಕೊಳ ಇತ್ತು. ಅಲ್ಲಿ ಜಾಸ್ತಿ ಹೊತ್ತು ಸಂಜೆ 6ರ ತನಕ ಎಂಜಾಯ್ ಮಾಡಿ, ನಂತರ ಅಲ್ಲಿ ಗ್ರೂಪ್ ಫೋಟೋ ತೆಗೆದು ಅಲ್ಲಿಂದ ಹೊರಟರು. ನಂತರ ದಾರಿ ಮದ್ಯದಲ್ಲಿ ಲಘು ಉಪಹಾರ ಸೇವಿಸಿ, ಬಸ್ಸಿನಲ್ಲಿ ಸದಸ್ಯರೆಲ್ಲರೂ ಹಾಗೂ ಅವರ ಮಕಳು ಸೇರಿ ಆಟವಾಡಿ, ಆ ಒಂದು ದಿನದ ಅನುಭವವನ್ನು ಎಲ್ಲರೂ ಹಂಚಿಕೊಂಡರು. ಸುಮಾರು ರಾತ್ರಿ 11.30 ಕ್ಕೆ ಮಾಣಿಗೆ ತಲುಪಿ, ಆ ದಿನದ ಸಂತೋಷದ ಕ್ಷಣವನ್ನು ಮೆಲುಕು ಹಾಕಿದರು.