ಕೊಲ್ಯ: ಬೇಸಿಗೆ ಶಿಬಿರಗಳು ಮಕ್ಕಳ ಸರ್ವತೋಮುಖ ಬೆಳವಣಿಗೆಗೆ ಸಹಕಾರಿ, ಇಂತಹ ಶಿಬಿರಗಳಿಂದ ಮಕ್ಕಳಿಗೆ ಹೊಸ ಚೈತನ್ಯ ಶಕ್ತಿ ದೊರಕುತ್ತದೆ. ಈ ನಿಟ್ಟಿನಲ್ಲಿ ಯುವವಾಹಿನಿ ಕೊಲ್ಯ ಘಟಕದ ಕಾರ್ಯಕ್ರಮ ಅಭಿನಂದನೆಗೆ ಅರ್ಹ ಎಂದು ದೀಪ ಪ್ರಜ್ವಲಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ನಾರಾಯಣ ಗುರು ಧರ್ಮ ಶಿಕ್ಷಣ ಕೇಂದ್ರ ಕೊಲ್ಯ ಇದರ ಧಾರ್ಮಿಕ ಗುರುಗಳಾದ ಡಾ. ಅರುಣ್ ಉಳ್ಳಾಲ್ ಹೇಳಿದರು.
ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿಯ ಕೊಲ್ಯ ಘಟಕದ ನೇತೃತ್ವದಲ್ಲಿ, ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಕೊಲ್ಯ ಇವರ ಸಹಯೋಗದಲ್ಲಿ, ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ(ರಿ.) ಮಂಗಳೂರು ಇವರ ಪ್ರಯೋಜಕತ್ವದಲ್ಲಿ ಕೊಲ್ಯದಲ್ಲಿ 15-05-2024 ರಿಂದ ನಡೆದ ನಾಲ್ಕು ದಿನಗಳ ಚಿಗುರು ಬೇಸಿಗೆ ಶಿಬಿರದ ಉದ್ಘಾಟನೆ ಮಾಡಿ ಮಾತನಾಡಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ ಬಿಲ್ಲವ ಸೇವಾ ಸಮಾಜ ಟ್ರಸ್ಟ್(ರಿ.) ಇದರ ಅಧ್ಯಕ್ಷರಾದ ವೇಣುಗೋಪಾಲ್ ಬೇಸಿಗೆ ಶಿಬಿರ ಆಯೋಜನೆಯ ಪ್ರಾಮುಖ್ಯತೆ ಬಗ್ಗೆ ತಿಳಿಸಿದರು. ಬಿಲ್ಲವ ಸೇವಾ ಸಮಾಜ ಟ್ರಸ್ಟ್ ಇದರ ಗೌರವಧ್ಯಕ್ಷರಾದ ಗೋಪಾಲ ಕೃಷ್ಣ ಸೋಮೇಶ್ವರ ಇಂತಹ ಶಿಬಿರಗಳು 10 ದಿನ ನಡೆದರೆ ಮಕ್ಕಳಿಗೆ ಹೆಚ್ಚಿನ ಪ್ರಯೋಜನ ಪಡೆಯಲು ಸಾಧ್ಯ ಎಂದರು. ನಾರಾಯಣ ಗುರು ಮಹಿಳಾ ಮಂಡಳಿ ಅಧ್ಯಕ್ಷರಾದ ರೇವತಿ ವಿಶ್ವನಾಥ್ ಕುಂಪಲ ಇವರು ಶುಭ ಹಾರೈಸಿದರು.
ಯುವವಾಹಿನಿ ಘಟಕ ಕೊಲ್ಯದ ಅಧ್ಯಕ್ಷರಾದ ಲತೀಶ್ ಸಂಕೋಳಿಗೆ ಮಾತಾನಾಡಿ, ಬೇಸಿಗೆ ಶಿಬಿರದ ಸಂಪೂರ್ಣ ಪ್ರಯೋಜನ ಮಕ್ಕಳು ಪಡೆಯಬೇಕು, ಮಕ್ಕಳಲ್ಲಿ ಅಡಗಿರುವ ಪ್ರತಿಭೆ ಈ ಶಿಬಿರದಿಂದ ಹೊರಗೆ ಬರಲಿ, ಶಿಬಿರಕ್ಕೆ ಸಹಕಾರ ನೀಡಿದ ಸರ್ವರಿಗೂ ಧನ್ಯವಾದ ನೀಡಿದರು. ಘಟಕದ ವ್ಯಕ್ತಿತ್ವ ವಿಕಸನ ನಿರ್ದೇಶಕರಾದ ಶ್ರೀಮತಿ ಪೂರ್ಣಿಮಾ ಕುಂಪಲ ವೇದಿಕೆಯಲ್ಲಿ ಉಪಸ್ಥಿತರಿದ್ದರು. ಉದ್ಘಾಟನಾ ದಿನದಂದು ಶಿಬಿರದಲ್ಲಿ ಸುಮಾರು 60 ಮಕ್ಕಳು ಭಾಗವಹಿಸಿದರು. ಕೊಲ್ಯ ಘಟಕದ ಕಾರ್ಯದರ್ಶಿ ಸರ್ವರನ್ನು ಸ್ವಾಗತಿಸಿ ಶಿಬಿರದ ನಿಯಮಗಳು, ಚಟುವಟಿಕೆ ಬಗ್ಗೆ ಮಾಹಿತಿ ನೀಡಿದರು.