
10-10-2026, 8:00 PM
ಮೂಲ್ಕಿ, ಅ. 10: ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಅಕ್ಟೋಬರ್ 11ರಿಂದ 19ರವರೆಗೆ ಒಂಬತ್ತು ದಿನಗಳ ಕಾಲ ನಡೆಯಲಿರುವ ನವರಾತ್ರಿ ಉತ್ಸವದ ಪೂರ್ವಭಾವಿಯಾಗಿ ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಅಕ್ಟೋಬರ್ 10ರಂದು ಸಂಘದ ಸಭಾಂಗಣ ಹಾಗೂ ಪರಿಸರದಲ್ಲಿ ಸ್ವಚ್ಛತಾ ಕಾರ್ಯ ನಡೆಸಲಾಯಿತು. ನವರಾತ್ರಿ ಉತ್ಸವವನ್ನು ಸ್ವಚ್ಛ ಹಾಗೂ ಸುಂದರ ಪರಿಸರದಲ್ಲಿ ಆಚರಿಸುವ ಉದ್ದೇಶದಿಂದ ಘಟಕದ ಸದಸ್ಯರು ಒಗ್ಗೂಡಿ ಸ್ವಚ್ಛತಾ ಕಾರ್ಯದಲ್ಲಿ ತೊಡಗಿಸಿಕೊಂಡರು. ಈ ಸೇವಾ ಕಾರ್ಯದಲ್ಲಿ ಘಟಕದ ಅಧ್ಯಕ್ಷರು, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ […]
Read More

08-10-2026, 8:00 PM
ಮೂಲ್ಕಿ ಅ 08: ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಗುರು ಸಂದೇಶವನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಮನೆ ಮನೆ ಭಜನಾ ಕಾರ್ಯಕ್ರಮವು ಘಟಕದ ಸಕ್ರಿಯ ಸದಸ್ಯರಾದ ಬಿಪಿನ್ ಪ್ರಸಾದ್ ಅವರ ನೇತೃತ್ವದಲ್ಲಿ ಪಡುಬಿದ್ರಿಯ ದತ್ತ ಗುರು ಮಂದಿರದಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಘಟಕದ ಸುಮಾರು 27 ಮಂದಿ ಸದಸ್ಯರು ಭಜನಾ ಸೇವೆಯಲ್ಲಿ ಪಾಲ್ಗೊಂಡರು. ಭಜನೆಯ ಮೂಲಕ ಗುರು ತತ್ವ, ಭಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುವ ಈ ಕಾರ್ಯಕ್ರಮಕ್ಕೆ ಮಂದಿರದಲ್ಲಿ ಉಪಸ್ಥಿತರಿದ್ದ ಭಕ್ತರು ಮೆಚ್ಚುಗೆ […]
Read More

26-09-2026, 8:00 PM
ಮೂಲ್ಕಿ, ಸೆ. 26: ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಸದಸ್ಯರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುವ ಉದ್ದೇಶದಿಂದ ಮನೆಮನೆ ಭಜನಾ ಕಾರ್ಯಕ್ರಮ ಆಯೋಜಿಸಲಾಯಿತು. ಸೆ. 26ರಂದು ಸಂಜೆ 6ರಿಂದ 7ರವರೆಗೆ ಘಟಕದ ಉಪಾಧ್ಯಕ್ಷ ವರುಣ್ ಚಿತಾಪು ಅವರ ಮನೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಜನಾ ಸಂಕೀರ್ತನೆ ನಡೆಸಿದರು. ಬಳಿಕ ಮಹಾಪೂಜೆ ನೆರವೇರಿಸಿ, ಸದಸ್ಯರು ಹಾಗೂ ಕುಟುಂಬಸ್ಥರಿಗೆ ಪ್ರಸಾದ ವಿತರಿಸಲಾಯಿತು. ಕಾರ್ಯಕ್ರಮದಲ್ಲಿ ಘಟಕದ ಪದಾಧಿಕಾರಿಗಳು, ಸದಸ್ಯರು ಹಾಗೂ ಕುಟುಂಬಸ್ಥರು […]
Read More

12-09-2026, 8:00 PM
ಮೂಲ್ಕಿ ಸೆ 12 : ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಸದಸ್ಯರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ಮನೆಮನೆ ಭಜನೆ ಕಾರ್ಯಕ್ರಮವು ಸೆ. 12ರಂದು ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಅವರ ಮನೆಯಲ್ಲಿ ನಡೆಯಿತು. ಸಂಜೆ 6ರಿಂದ 7 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಾಗವಹಿಸಿ ಭಜನೆ, ಪ್ರಾರ್ಥನೆ ಹಾಗೂ ಭಕ್ತಿಗೀತೆಗಳ ಮೂಲಕ ಭಕ್ತಿಭಾವ ಮೆರೆದರು. ಬಳಿಕ ಮಹಾಪೂಜೆ ನೆರವೇರಿಸಲಾಯಿತು. ಕಾರ್ಯಕ್ರಮದ ನಂತರ […]
Read More

05-09-2026, 7:00 PM
ಮುಲ್ಕಿ: ಯುವವಾಹಿನಿ (ರಿ.) ಮುಲ್ಕಿ ಘಟಕವು ಸಮಾಜಮುಖಿ ಸೇವಾ ಕಾರ್ಯಗಳೊಂದಿಗೆ ವಿದ್ಯಾರ್ಥಿಗಳ ಭವಿಷ್ಯ ರೂಪಿಸುವಲ್ಲಿ ಮಹತ್ವದ ಪಾತ್ರ ವಹಿಸುವ ಶಿಕ್ಷಕರನ್ನು ಗೌರವಿಸುತ್ತಿರುವುದು ಶ್ಲಾಘನೀಯ ಎಂದು ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯ ಸಂಚಾಲಕ ಹರಿಂದ್ರ ಸುವರ್ಣ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಶ್ರೀ ನಾರಾಯಣಗುರು ವಿದ್ಯಾ ಸಂಸ್ಥೆಯಲ್ಲಿ ಆಯೋಜಿಸಲಾಗಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಪ್ರಥಮ ಉಪಾಧ್ಯಕ್ಷೆ ವಿದ್ಯಾ ರಾಕೇಶ್ ಮಾತನಾಡಿ, […]
Read More

15-08-2026, 9:30 AM
ಮುಲ್ಕಿ, ಆಗಸ್ಟ್ 15: ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಮತ್ತು ಬಲಿದಾನದ ಫಲವಾಗಿ ನಮಗೆ ಸ್ವಾತಂತ್ರ್ಯ ದೊರೆತಿದೆ ಎಂದು ಶ್ರೀ ನಾರಾಯಣಗುರು ಮಹಿಳಾ ಮಂಡಳಿ ಅಧ್ಯಕ್ಷೆ ಶಶಿಕಲಾ ವೈ. ಅಮೀನ್ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಯೂನಿಯನ್ ಕ್ಲಬ್, ಮುಲ್ಕಿಯಲ್ಲಿ ನಡೆದ 80ನೇ ಸ್ವಾತಂತ್ರ್ಯ ದಿನಾಚರಣೆ ಕಾರ್ಯಕ್ರಮದಲ್ಲಿ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು. ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಹಿರಿಯರ ತ್ಯಾಗವನ್ನು ಸದಾ ಸ್ಮರಿಸುವುದು ನಮ್ಮ ಕರ್ತವ್ಯ ಎಂದರು. […]
Read More

12-08-2026, 7:00 AM
ಮುಲ್ಕಿ, ಆಗಸ್ಟ್ 12: ತುಳುನಾಡಿನ ಸಂಪ್ರದಾಯ, ಆಚರಣೆಗಳ ಹಿಂದೆ ವೈಜ್ಞಾನಿಕ ಹಾಗೂ ಆರೋಗ್ಯದ ಮಹತ್ವ ಅಡಗಿದೆ. ಆಷಾಢ ಮಾಸದ ಅಮಾವಾಸ್ಯೆಯಂದು ತುಳುವರು ಸೇವಿಸುವ ಔಷಧೀಯ ಗುಣವುಳ್ಳ ಕಷಾಯವು ಆರೋಗ್ಯದ ದೃಷ್ಟಿಯಿಂದ ಮಹತ್ವದ್ದಾಗಿದೆ ಎಂದು ಯುವವಾಹಿನಿ (ರಿ.) ಮುಲ್ಕಿ ಘಟಕದ ಅಧ್ಯಕ್ಷೆ ಚರೀಷ್ಮಾ ಶ್ರೀನಿವಾಸ್ ಹೇಳಿದರು. ಅವರು ಆಗಸ್ಟ್ 12ರಂದು ಮುಲ್ಕಿ ಬಸ್ ನಿಲ್ದಾಣದ ಬಳಿ ಯುವವಾಹಿನಿ (ರಿ.) ಮುಲ್ಕಿ ಘಟಕದ ಸಂಯೋಜನೆಯಲ್ಲಿ ಲಯನ್ಸ್ ಕ್ಲಬ್ ಮುಲ್ಕಿ, ಲಿಯೋ ಕ್ಲಬ್, ರೋಟರಿ ಕ್ಲಬ್ ಮುಲ್ಕಿ ಹಾಗೂ ನವದುರ್ಗ ಯುವಕ […]
Read More

02-08-2026, 7:00 PM
ಮುಲ್ಕಿ, ಆ. 2: ಕಾರ್ಗಿಲ್ ವಿಜಯ ದಿನಾಚರಣೆಯು ಕೇವಲ ವಿಜಯದ ಸಂಭ್ರಮವಲ್ಲ, ದೇಶಕ್ಕಾಗಿ ತಮ್ಮ ಪ್ರಾಣವನ್ನೇ ಅರ್ಪಿಸಿದ ಹುತಾತ್ಮ ಯೋಧರಿಗೆ ಸಲ್ಲಿಸುವ ಗೌರವವಾಗಿದೆ ಎಂದು ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಗೌರವ ಸಲಹೆಗಾರ ವೈ.ಎನ್. ಸಾಲ್ಯಾನ್ ಹೇಳಿದರು. ಅವರು ಯುವವಾಹಿನಿ (ರಿ.) ಮುಲ್ಕಿ ಘಟಕದ ಆಶ್ರಯದಲ್ಲಿ ಮುಲ್ಕಿ ಬಿಲ್ಲವ ಸಂಘದಲ್ಲಿ ಆಯೋಜಿಸಿದ್ದ ಕಾರ್ಗಿಲ್ ವಿಜಯ ದಿನಾಚರಣೆ ಕಾರ್ಯಕ್ರಮದಲ್ಲಿ ಭಾರತ ಮಾತೆಯ ಭಾವಚಿತ್ರಕ್ಕೆ ಪುಷ್ಪಾರ್ಚನೆ ಸಲ್ಲಿಸಿ ಮಾತನಾಡಿದರು. ಕಾರ್ಗಿಲ್ ವಿಜಯ ಸುಲಭವಾಗಿ ದೊರೆತ ಗೆಲುವಲ್ಲ. ನಮ್ಮ ಯೋಧರು ತಮ್ಮ […]
Read More

26-07-2026, 2:00 PM
ಮುಲ್ಕಿ, ಜುಲೈ 26: “ಇಂದು ದೇಶ-ವಿದೇಶಗಳಲ್ಲಿ ಆಟಿಡೊಂಜಿ ದಿನದ ಕಾರ್ಯಕ್ರಮಗಳು ವಿಜೃಂಭಣೆಯಿಂದ ನಡೆಯುತ್ತಿದ್ದರೆ, ಅದಕ್ಕೆ ಮೂಲ ಪ್ರೇರಣೆಯೇ ಯುವವಾಹಿನಿ (ರಿ.) ಮುಲ್ಕಿ ಘಟಕ” ಎಂದು ಹೆಜಮಾಡಿ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಆಡಳಿತ ಮೊಕ್ತೇಸರ ದಯಾನಂದ್ ಹೆಜ್ಮಾಡಿ ಹೇಳಿದರು. ಅವರು ಜುಲೈ 26ರಂದು ಮುಲ್ಕಿ ಬಿಲ್ಲವ ಸಂಘದ ಸಭಾಭವನದಲ್ಲಿ ಯುವವಾಹಿನಿ (ರಿ.) ಮುಲ್ಕಿ ಘಟಕದ ವತಿಯಿಂದ ಆಯೋಜಿಸಲಾದ 24ನೇ ವರ್ಷದ ಆಟಿಡೊಂಜಿ ದಿನ ಕಾರ್ಯಕ್ರಮವನ್ನು ಹಿಂದಿನ ಕಾಲದ ಚಿಮಿನಿ ದೀಪ ಬೆಳಗಿಸುವ ಮೂಲಕ ವಿಶಿಷ್ಟವಾಗಿ ಉದ್ಘಾಟಿಸಿ ಮಾತನಾಡಿದರು. ತುಳುನಾಡಿನ […]
Read More

16-07-2026, 12:00 PM
ಮೂಲ್ಕಿ, ಜುಲೈ 16: ಪರಿಸರ ಸಂರಕ್ಷಣೆ ಪ್ರತಿಯೊಬ್ಬರ ಜವಾಬ್ದಾರಿಯಾಗಿದ್ದು, ವನಮಹೋತ್ಸವದಂತಹ ಕಾರ್ಯಕ್ರಮಗಳ ಮೂಲಕ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ ಎಂದು ಕೊಯ್ಯರ್ ಫ್ರೆಂಡ್ಸ್ ಅಧ್ಯಕ್ಷ ಕರುಣಾಕರ್ ಪೂಜಾರಿ ಹೇಳಿದರು. ಅವರು ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಬಬ್ಬು ಸ್ವಾಮಿ ದೈವಸ್ಥಾನದ ಪರಿಸರದಲ್ಲಿ ಆಯೋಜಿಸಿದ್ದ ವನಮಹೋತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಬಬ್ಬು ಸ್ವಾಮಿ ದೈವಸ್ಥಾನದ ಅರ್ಚಕ ಗಣೇಶ್ ಕೊಯ್ಯರ್ ಮಾತನಾಡಿ, ಯುವವಾಹಿನಿ ಮೂಲ್ಕಿ ಘಟಕವು ದೈವಸ್ಥಾನದ ಪರಿಸರದಲ್ಲಿ ವನಮಹೋತ್ಸವ […]
Read More