ಮೂಲ್ಕಿ ಸೆ 12 : ಯುವವಾಹಿನಿ (ರಿ.) ಮೂಲ್ಕಿ ಘಟಕದ ಸದಸ್ಯರ ನಡುವಿನ ಸಂಪರ್ಕದ ಕೊಂಡಿಯನ್ನು ಮತ್ತಷ್ಟು ಗಟ್ಟಿಗೊಳಿಸುವ ಹಾಗೂ ಸದಸ್ಯರ ಕುಟುಂಬದೊಂದಿಗೆ ಆತ್ಮೀಯವಾಗಿ ಬೆರೆಯುವ ಉದ್ದೇಶದಿಂದ ಹಮ್ಮಿಕೊಂಡಿರುವ ಮನೆಮನೆ ಭಜನೆ ಕಾರ್ಯಕ್ರಮವು ಸೆ. 12ರಂದು ಘಟಕದ ಅಧ್ಯಕ್ಷೆ ಚರಿಷ್ಮಾ ಶ್ರೀನಿವಾಸ್ ಅವರ ಮನೆಯಲ್ಲಿ ನಡೆಯಿತು.

ಸಂಜೆ 6ರಿಂದ 7 ಗಂಟೆಯವರೆಗೆ ನಡೆದ ಭಜನಾ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಾಗವಹಿಸಿ ಭಜನೆ, ಪ್ರಾರ್ಥನೆ ಹಾಗೂ ಭಕ್ತಿಗೀತೆಗಳ ಮೂಲಕ ಭಕ್ತಿಭಾವ ಮೆರೆದರು. ಬಳಿಕ ಮಹಾಪೂಜೆ ನೆರವೇರಿಸಲಾಯಿತು.
ಕಾರ್ಯಕ್ರಮದ ನಂತರ ಸದಸ್ಯರು ಹಾಗೂ ಕುಟುಂಬಸ್ಥರಿಗೆ ಪ್ರಸಾದ ವಿತರಿಸಲಾಯಿತು. ಮನೆಮನೆ ಭಜನೆಯ ಮೂಲಕ ಸದಸ್ಯರ ಕುಟುಂಬಗಳೊಂದಿಗೆ ಆತ್ಮೀಯ ಬಾಂಧವ್ಯ ಬೆಳೆಸುವುದರ ಜೊತೆಗೆ, ಸಂಘಟನೆಯ ಸದಸ್ಯರ ನಡುವೆ ಸ್ನೇಹ, ಸಹಕಾರ ಮತ್ತು ಒಗ್ಗಟ್ಟನ್ನು ಮತ್ತಷ್ಟು ಬಲಪಡಿಸುವ ಪ್ರಯತ್ನ ನಡೆಯಿತು.







