ಮೂಲ್ಕಿ ಅ 08: ಯುವವಾಹಿನಿ (ರಿ.) ಮೂಲ್ಕಿ ಘಟಕದ ವತಿಯಿಂದ ಗುರು ಸಂದೇಶವನ್ನು ಮನೆ ಮನೆಗೆ ತಲುಪಿಸುವ ಉದ್ದೇಶದಿಂದ ಹಮ್ಮಿಕೊಳ್ಳಲಾಗಿರುವ ಮನೆ ಮನೆ ಭಜನಾ ಕಾರ್ಯಕ್ರಮವು ಘಟಕದ ಸಕ್ರಿಯ ಸದಸ್ಯರಾದ ಬಿಪಿನ್ ಪ್ರಸಾದ್ ಅವರ ನೇತೃತ್ವದಲ್ಲಿ ಪಡುಬಿದ್ರಿಯ ದತ್ತ ಗುರು ಮಂದಿರದಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಘಟಕದ ಸುಮಾರು 27 ಮಂದಿ ಸದಸ್ಯರು ಭಜನಾ ಸೇವೆಯಲ್ಲಿ ಪಾಲ್ಗೊಂಡರು. ಭಜನೆಯ ಮೂಲಕ ಗುರು ತತ್ವ, ಭಕ್ತಿ ಮತ್ತು ಆಧ್ಯಾತ್ಮಿಕ ಮೌಲ್ಯಗಳನ್ನು ಸಾರುವ ಈ ಕಾರ್ಯಕ್ರಮಕ್ಕೆ ಮಂದಿರದಲ್ಲಿ ಉಪಸ್ಥಿತರಿದ್ದ ಭಕ್ತರು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಂದಿನ ಮನೆ ಮನೆ ಭಜನಾ ಕಾರ್ಯಕ್ರಮವನ್ನು ಘಟಕದ ಪ್ರಸ್ತುತ ಕಾರ್ಯದರ್ಶಿಯಾದ ವೇದ ಜಯ ಕುಬೇರ್ ಅವರ ಮನೆಯಲ್ಲಿ ನಡೆಸಲು ನಿರ್ಧರಿಸಲಾಯಿತು. ಗುರು ಸಂದೇಶವನ್ನು ಮನೆ ಮನೆಗೆ ತಲುಪಿಸುವ ಮೂಲಕ ಭಕ್ತಿ ಮತ್ತು ಸೌಹಾರ್ದತೆಯನ್ನು ಬೆಳೆಸುವ ಯುವವಾಹಿನಿ ಮೂಲ್ಕಿ ಘಟಕದ ಈ ಪ್ರಯತ್ನಕ್ಕೆ ಭಕ್ತರಿಂದ ಪ್ರಶಂಸೆ ವ್ಯಕ್ತವಾಯಿತು.







