
15-09-2026, 3:56 PM
ಯುವವಾಹಿನಿ ಸಂಸ್ಥೆಯು ಯುವ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಸೃಜನಶೀಲತೆ, ಕಥನ, ಅಭಿನಯ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ “ಯುವ ಸಿನಿ ದನಿ” ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ. ಸ್ಪರ್ಧೆಯ ನಿಯಮಾವಳಿ ಕಿರುಚಿತ್ರದಲ್ಲಿ ಯಾವುದೇ ಜಾತಿ/ಧರ್ಮ ನಿಂದನೆ, ವೈಯಕ್ತಿಕ ನಿಂದನೆ ಅಥವಾ ಅವಹೇಳನ, ರಾಜಕೀಯ ಹಾಗೂ ಅಸಭ್ಯ/ಅಶ್ಲೀಲ ವಿಷಯಗಳಿಗೆ ಅವಕಾಶವಿರುವುದಿಲ್ಲ. ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಗಳು ಶ್ರೇಷ್ಠ ಕಿರುಚಿತ್ರ – ಪ್ರಥಮಶ್ರೇಷ್ಠ ಕಿರುಚಿತ್ರ – ದ್ವಿತೀಯಶ್ರೇಷ್ಠ ಕಿರುಚಿತ್ರ – ತೃತೀಯ ಅಗ್ರ ಮೂರು ತಂಡಗಳಿಗೆ ವಿಶೇಷ ನಗದು ಬಹುಮಾನ […]
Read More

28-08-2026, 4:00 PM
ಉಡುಪಿ ಅಗಸ್ಟ್ 28 : ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ 172ನೇ ಗುರುಜಯಂತಿ ಕಾರ್ಯಕ್ರಮವು ಆಗಸ್ಟ್ 28ರಂದು ಶುಕ್ರವಾರ ಘಟಕದ ಸಭಾಂಗಣದಲ್ಲಿ ಭಕ್ತಿಭಾವದಿಂದ ನಡೆಯಿತು. ಗುರುಜಯಂತಿಯ ಅಂಗವಾಗಿ ಬೆಳಿಗ್ಗೆ 8 ಗಂಟೆಯಿಂದ ನಾರಾಯಣ ಗುರುತತ್ವ ಪ್ರಚಾರ ನಿರ್ದೇಶಕರಾದ ಶಾರದಾ ಉಮೇಶ್ ಅವರ ಮುತುವರ್ಜಿಯಲ್ಲಿ ಘಟಕದ ಸದಸ್ಯರಿಂದ ಭಜನಾ ಕಾರ್ಯಕ್ರಮ ನಡೆಯಿತು. ಬಳಿಕ ಘಟಕದ ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣ ಅವರು ಗುರುಪೂಜೆ ನೆರವೇರಿಸಿ, ಸರ್ವರಿಗೂ ಒಳಿತಾಗಲಿ ಎಂದು ಪ್ರಾರ್ಥಿಸಿದರು. ನಂತರ ಭಕ್ತರಿಗೆ […]
Read More

20-08-2026, 9:00 PM
ಉಡುಪಿ, ಆಗಸ್ಟ್.20: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುರು ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ ನಡೆಯಿತು. ಯುವವಾಹಿನಿ (ರಿ.) ಉಡುಪಿ ಘಟಕದ ಮಾಜಿ ಅಧ್ಯಕ್ಷ ಅಶೋಕ್ ಕೋಟ್ಯಾನ್ ಅವರು ಗುರುಸಂದೇಶ ನೀಡುತ್ತಾ, “ಯುವಜನತೆಗೆ ಸದಾ ಪ್ರೇರಣೆಯಾಗುವಂತಹ ಸಮಾಜಮುಖಿ ಕಾರ್ಯಗಳನ್ನು ಯುವವಾಹಿನಿ ಕೈಗೊಳ್ಳುತ್ತಿರುವುದು ಶ್ಲಾಘನೀಯ” ಎಂದು ಹೇಳಿದರು. ಮಾಜಿ ಅಧ್ಯಕ್ಷ […]
Read More

09-08-2026, 2:00 PM
ಉಡುಪಿ, ಆಗಸ್ಟ್ 09: ಯುವವಾಹಿನಿ (ರಿ.) ಉಡುಪಿ ಘಟಕದ ಆಶ್ರಯದಲ್ಲಿ ‘ಅಟಿಡೊಂಜಿ ದಿನ’ ಕಾರ್ಯಕ್ರಮವು ಘಟಕದ ಸಭಾಂಗಣದಲ್ಲಿ ಸಂಭ್ರಮ ಹಾಗೂ ಸಡಗರದಿಂದ ನಡೆಯಿತು. ಘಟಕದ ಅಧ್ಯಕ್ಷ ವಿನೋದ್ ಮಂಚಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮವನ್ನು ಘಟಕದ ಮಾಜಿ ಅಧ್ಯಕ್ಷರುಗಳು ಒಗ್ಗೂಡಿ ಗುರುವಿಗೆ ದೀಪ ಬೆಳಗಿಸುವ ಮೂಲಕ ಹಾಗೂ ಪ್ರಾರ್ಥನೆಯೊಂದಿಗೆ ಆರಂಭಿಸಿದರು. ಬಳಿಕ ಚೆನ್ನಮನೆಯ ಆಟವಾಡಿ, ವಾಲೆಬೆಲ್ಲ ಹಂಚುವ ಮೂಲಕ ಸಾಂಪ್ರದಾಯಿಕವಾಗಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ಆಟಿ ತಿಂಗಳ ಸಾಂಪ್ರದಾಯಿಕ ಆಹಾರ ಸಂಸ್ಕೃತಿಯನ್ನು ಪರಿಚಯಿಸುವ ಉದ್ದೇಶದಿಂದ ಯುವವಾಹಿನಿಯ ಸದಸ್ಯರು […]
Read More

16-07-2026, 8:30 PM
ಉಡುಪಿ, ಜು. 16: ಯುವ ವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಜುಲೈ 16ರಂದು ಗುರುವಾರ ಸಂಜೆ ಬಿಂದಿಯವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ಮನೆಯವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಬಳಿಕ ಗುರು ಸತ್ಸಂಗ ಹಾಗೂ ಭಜನಾ ಕಾರ್ಯಕ್ರಮ ಭಕ್ತಿಪೂರ್ವಕವಾಗಿ ನೆರವೇರಿತು. ಮುಖ್ಯೋಪಾಧ್ಯಾಯರು ಹಾಗೂ ಕಾರ್ಯಕ್ರಮದ ನಿರೂಪಕರಾದ ರಘುರಾಮ್ ಕೋಟ್ಯಾನ್ ಅವರು ಗುರು ಸಂದೇಶ ನೀಡಿ, ಯುವ ವಾಹಿನಿಯು ಯುವಜನತೆಗೆ ಪ್ರೇರಣೆಯಾಗುವ ಸಮಾಜಮುಖಿ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದ್ದು, ಸಮಾಜಕ್ಕೆ […]
Read More

25-06-2026, 8:00 PM
ಉಡುಪಿ, ಜೂನ್ 25: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಗುರು ಸತ್ಸಂಗ ಕಾರ್ಯಕ್ರಮವು ಗುರುವಾರ ಸಂಜೆ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಸಂದೇಶ್ ಕಟಪಾಡಿ ಅವರ ಆತಿಥ್ಯದಲ್ಲಿ ಕಟಪಾಡಿಯಲ್ಲಿರುವ ಅವರ ನಿವಾಸದಲ್ಲಿ ಭಕ್ತಿಭಾವದಿಂದ ನಡೆಯಿತು. ದೀಪ ಪ್ರಜ್ವಲನೆಯೊಂದಿಗೆ ಆರಂಭಗೊಂಡ ಕಾರ್ಯಕ್ರಮದಲ್ಲಿ ಘಟಕದ ಸದಸ್ಯರು ಭಜನಾ ಸಂಕೀರ್ತನೆ ನಡೆಸಿದರು. ಬಳಿಕ ಘಟಕದ ಮಾಜಿ ಅಧ್ಯಕ್ಷ ಭಾಸ್ಕರ್ ಸುವರ್ಣ ಅವರು ಗುರುಗಳಿಗೆ ಮಹಾಪೂಜೆ ನೆರವೇರಿಸಿ, ಎಲ್ಲರಿಗೂ ಮಹಾಪ್ರಸಾದ ವಿತರಿಸಿದರು. ಗುರು ಸಂದೇಶ ನೀಡಿದ ಖ್ಯಾತ ನಿರೂಪಕರು ಹಾಗೂ ಘಟಕದ […]
Read More

25-06-2026, 11:00 AM
ಉಡುಪಿ, ಜೂನ್ 25: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ಪರಿಸರ ದಿನಾಚರಣೆಯ ಅಂಗವಾಗಿ “ಮನೆಗೊಂದು ಮರ – ಊರಿಗೊಂದು ವನ” ಅಭಿಯಾನಕ್ಕೆ ಗುರುವಾರ ಸಂಜೆ ಕಟಪಾಡಿಯಲ್ಲಿರುವ ಘಟಕದ ಕಲೆ ಮತ್ತು ಸಾಹಿತ್ಯ ನಿರ್ದೇಶಕರಾದ ಸಂದೇಶ್ ಕಟಪಾಡಿ ಅವರ ನಿವಾಸದ ಪರಿಸರದಲ್ಲಿ ಗಿಡ ನೆಡುವ ಮೂಲಕ ಚಾಲನೆ ನೀಡಲಾಯಿತು. ಕಾರ್ಯಕ್ರಮದಲ್ಲಿ ಉಡುಪಿ ನಗರಸಭಾ ಸದಸ್ಯ ಬಾಲಕೃಷ್ಣ ಶೆಟ್ಟಿ ಹಾಗೂ ಯುವವಾಹಿನಿ (ರಿ.) ಉಡುಪಿ ಘಟಕದ ಸಮಾಜ ಸೇವಾ ನಿರ್ದೇಶಕ ಸುಜಿತ್ ಮಟ್ಟು ಅವರು ಗಿಡಗಳನ್ನು ವಿತರಿಸುವ ಮೂಲಕ […]
Read More

21-05-2026, 9:00 PM
ಉಡುಪಿ : ಯುವವಾಹಿನಿ (ರಿ ) ಉಡುಪಿ ಘಟಕದ ಗುರು ಸತ್ಸಂಗ ಕಾರ್ಯ ಕ್ರಮವು ಘಟಕದ ಜೊತೆಕಾರ್ಯದರ್ಶಿ ಸಚೇಂದ್ರ ಅಂಬಾಗಿಲುರವರ ಅಥಿತ್ಯದಲ್ಲಿ ಅವರ ಮನೆಯಲ್ಲಿ ಅವರ ಮನೆಯವರು ಸೇರಿ ದೀಪ ಬೆಳಗಿಸಿ ಪ್ರಾರಂಭಗೊಂಡಿತು. ಘಟಕದ ಸದಸ್ಯರು ಸೇರಿ ಭಜನಾ ಕಾರ್ಯಕ್ರಮ ನೆರವೇರಿಸಿದರು. ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣರವರು ಗುರುಗಳಿಗೆ ಮಹಾಪೂಜೆ ನೆರವೇರಿಸಿ. ಆಗಮಿಸಿದ ಎಲ್ಲರಿಗೂ ಹಾಗೂ ಮನೆಯವರಿಗೂ ಗುರುಗಳು ಒಳಿತು ಮಾಡುವಂತೆ ಪ್ರಾರ್ಥಿಸಿ ಮಹಾ ಪ್ರಸಾದವನ್ನು ನೀಡಿದರು.ಗುರು ಸಂದೇಶವನ್ನು ಖ್ಯಾತ ನಿರೂಪಕರಾದ ರಾಜೇಂದ್ರ ಪ್ರಸಾದ್ ಎಕ್ಕರ್ ರವರು […]
Read More

17-05-2026, 1:00 PM
ಯುವವಾಹಿನಿ ಉಡುಪಿ ಘಟಕದ ವತಿಯಿಂದ ಬನ್ನಂಜೆ ಬಾಬು ಅಮೀನ್ ಜಾನಪದ ಪ್ರಶಸ್ತಿ ಪ್ರದಾನ ಮೇ 17/5/2026ರ ಭಾನುವಾರ ನಡೆಯಿತು. ಬದುಕಿನ ಅನುಭವ ಸಾಧನೆಗೆ ಪ್ರೇರಕ: ಡಾ| ಅಭಯ ಕುಮಾರ್ : ಬದುಕಿನ ಅನುಭವ ಮನುಷ್ಯನ ಸಾಧನೆಗೆ ಪ್ರೇರಕ. ಶಿಕ್ಷಣ ಮತ್ತು ಸಿಕ್ಕ ಅವಕಾಶಗಳನ್ನು ನಾವು ಬಳಸಿಕೊಳ್ಳುವುದರಿಂದ ವೃದ್ಧಿಯಾಗುತ್ತದೆ ವ್ಯಕ್ತಿತ್ವ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶ್ರಾಂತ ಪ್ರಾಧ್ಯಾಪಕ, ಜಾನಪದ ಸಂಶೋಧಕ ಡಾ ಅಭಯ ಕುಮಾರ್ ಹೇಳಿದರು. ಯುವವಾಹಿನಿ ಉಡುಪಿ ಘಟಕದ ವತಿಯಿಂದ ರವಿವಾರ ಚಿಟ್ಟಾಡಿ ಲಕ್ಷ್ಮೀ ಟ್ರೇಡ್ ಸೆಂಟರ್ […]
Read More

14-05-2026, 8:00 PM
ಉಡುಪಿ: ಯುವವಾಹಿನಿ (ರಿ.) ಉಡುಪಿ ಘಟಕದ ವತಿಯಿಂದ ‘ಗುರು ಸತ್ಸಂಗ’ ಕಾರ್ಯಕ್ರಮವು ಬಲಯಿಪಾದೆಯ ಶ್ರೀ ನಾರಾಯಣ ಗುರು ಯುವ ವೇದಿಕೆ (ರಿ.) ಯಲ್ಲಿ ಘಟಕದ ಪ್ರಥಮ ಉಪಾಧ್ಯಕ್ಷರಾದ ಸುಪ್ರೀತ್ ಅವರ ನೇತೃತ್ವದಲ್ಲಿ ಅತ್ಯಂತ ಶ್ರದ್ಧಾಭಕ್ತಿಗಳಿಂದ ಜರುಗಿತು. ದೀಪ ಪ್ರಜ್ವಲನೆ ಮತ್ತು ಗುರು ಸಂದೇಶ:ಶ್ರೀ ನಾರಾಯಣ ಗುರು ಯುವ ವೇದಿಕೆಯ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಯುವವಾಹಿನಿ ಉಡುಪಿ ಘಟಕದ ಅಧ್ಯಕ್ಷರಾದ ವಿನೋದ್ ಮಂಚಿ ಅವರು ಜಂಟಿಯಾಗಿ ದೀಪ ಪ್ರಜ್ವಲಿಸುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ನಂತರ ಭಕ್ತಿಪೂರ್ವಕ ‘ಗುರು ಸತ್ಸಂಗ […]
Read More