ಯುವವಾಹಿನಿ ಸಂಸ್ಥೆಯು ಯುವ ಪ್ರತಿಭೆಗಳನ್ನು ಗುರುತಿಸಿ, ಅವರಲ್ಲಿರುವ ಸೃಜನಶೀಲತೆ, ಕಥನ, ಅಭಿನಯ ಹಾಗೂ ತಾಂತ್ರಿಕ ಕೌಶಲ್ಯಗಳಿಗೆ ವೇದಿಕೆ ಕಲ್ಪಿಸುವ ಉದ್ದೇಶದಿಂದ “ಯುವ ಸಿನಿ ದನಿ” ಕಿರುಚಿತ್ರ ಸ್ಪರ್ಧೆಯನ್ನು ಆಯೋಜಿಸಲಾಗಿದೆ.

ಸ್ಪರ್ಧೆಯ ನಿಯಮಾವಳಿ
- ಸ್ಪರ್ಧೆಯ ಅರ್ಹತೆ : ಈ ಸ್ಪರ್ಧೆಯು ಯುವವಾಹಿನಿಯ 35 ಘಟಕಗಳಿಗೆ ಮಾತ್ರ ಸೀಮಿತವಾಗಿರುತ್ತದೆ.
- ನಿರ್ದೇಶನ ಮತ್ತು ಅಭಿನಯ : ಕಿರುಚಿತ್ರದ ನಿರ್ದೇಶಕರು ಹಾಗೂ ಅಭಿನಯಿಸುವ ಎಲ್ಲಾ ಕಲಾವಿದರು ಕಡ್ಡಾಯವಾಗಿ ಯುವವಾಹಿನಿಯ ಅರ್ಹ ಸದಸ್ಯರಾಗಿರಬೇಕು.
ತಾವು ಸದಸ್ಯತ್ವ ಹೊಂದಿರುವ ಘಟಕದ ಮೂಲಕ ಮಾತ್ರ ಸ್ಪರ್ಧಿಸಲು ಅವಕಾಶವಿರುತ್ತದೆ. ಸ್ಪರ್ಧೆಯ ಪರಿಕಲ್ಪನೆಗೆ ಪೂರಕವಾಗಿ ಮಕ್ಕಳ ಅಗತ್ಯವಿದ್ದಲ್ಲಿ, 0 ರಿಂದ 18 ವರ್ಷದೊಳಗಿನ ಗರಿಷ್ಠ 5 ಮಕ್ಕಳನ್ನು ಮಾತ್ರ ಬಳಸಿಕೊಳ್ಳಬಹುದು. ಆ ಮಕ್ಕಳ ಹೆತ್ತವರು/ಸಹೋದರ/ಸಹೋದರಿ ಯುವವಾಹಿನಿಯ ಅರ್ಹ ಸದಸ್ಯರಾಗಿರಬೇಕು. ಮಕ್ಕಳ ವಯಸ್ಸು 01/11/2026ಕ್ಕೆ ಅನ್ವಯವಾಗುವಂತೆ 18 ವರ್ಷ ಮೀರಿರಬಾರದು. - ತಾಂತ್ರಿಕ ವಿಭಾಗಕ್ಕೆ ವಿನಾಯಿತಿ : ಅಭಿನಯ ಮತ್ತು ನಿರ್ದೇಶನವನ್ನು ಹೊರತುಪಡಿಸಿ, ಛಾಯಾಗ್ರಹಣ, ಸಂಕಲನ, ಸಂಗೀತ, ಹಿನ್ನೆಲೆ ಸಂಗೀತ, ಧ್ವನಿ, ತಾಂತ್ರಿಕ ನಿರ್ವಹಣೆ ಸೇರಿದಂತೆ ಇತರ ತಾಂತ್ರಿಕ ವಿಭಾಗಗಳಲ್ಲಿ ಯುವವಾಹಿನಿಯ ಸದಸ್ಯರಲ್ಲದವರ ಸೇವೆಯನ್ನು ಬಳಸಿಕೊಳ್ಳಬಹುದು, ಅವರೂ ವಯಕ್ತಿಕ ಬಹುಮಾನಕ್ಕೆ ಅರ್ಹರು.
- ಘಟಕಕ್ಕೆ ಒಂದು ಕಿರುಚಿತ್ರ : ಪ್ರತಿ ಘಟಕವು ಒಂದು ಕಿರುಚಿತ್ರವನ್ನು ಮಾತ್ರ ಸ್ಪರ್ಧೆಗೆ ಸಲ್ಲಿಸಬಹುದು.
- ಕಿರುಚಿತ್ರದ ಅವಧಿ : ಕಿರುಚಿತ್ರದ ಅವಧಿ ಕನಿಷ್ಠ 4 ನಿಮಿಷ ಹಾಗೂ ಗರಿಷ್ಠ 6 ನಿಮಿಷ ಇರಬೇಕು.
- ಭಾಷೆ : ಕಿರುಚಿತ್ರವನ್ನು ಕನ್ನಡ ಅಥವಾ ತುಳು ಭಾಷೆಯಲ್ಲಿ ಮಾತ್ರ ತಯಾರಿಸಬೇಕು.
- ತೀರ್ಪಿನ ಮಾನದಂಡಗಳು : ತೀರ್ಪುಗಾರರು ಕೆಳಗಿನ ಅಂಶಗಳಿಗೆ ಆದ್ಯತೆ ನೀಡುವರು:
- ಕಥಾವಸ್ತು ಮತ್ತು ಕಥಾನಿರೂಪಣೆ
- ಸಾಮಾಜಿಕ ಸಂದೇಶ
- ನಿರ್ದೇಶನ
- ಅಭಿನಯ
- ಛಾಯಾಗ್ರಹಣ
- ಸಂಕಲನ
- ಸಂಗೀತ
- ಸಾಹಿತ್ಯ
- ಒಟ್ಟಾರೆ ಸೃಜನಶೀಲತೆ ಮತ್ತು ತಾಂತ್ರಿಕ ಗುಣಮಟ್ಟ
- ತೀರ್ಪುಗಾರರ ತೀರ್ಮಾನವೇ ಅಂತಿಮ : ಸ್ಪರ್ಧೆಗೆ ಸಂಬಂಧಿಸಿದಂತೆ ತೀರ್ಪುಗಾರರು ನೀಡುವ ತೀರ್ಮಾನವೇ ಅಂತಿಮವಾಗಿರುತ್ತದೆ. ಈ ಕುರಿತು ಯಾವುದೇ ಆಕ್ಷೇಪಣೆ ಅಥವಾ ಮೇಲ್ಮನವಿಗೆ ಅವಕಾಶ ಇರುವುದಿಲ್ಲ.
- ಸಾಮಾಜಿಕ ಜಾಲತಾಣದಲ್ಲಿ ಪ್ರಸಾರ ನಿಷೇಧ : ಸ್ಪರ್ಧೆಯ ಫಲಿತಾಂಶ ಘೋಷಣೆಯಾಗುವವರೆಗೆ ಸ್ಪರ್ಧೆಗೆ ಸಲ್ಲಿಸಿದ ಕಿರುಚಿತ್ರವನ್ನು ಯಾವುದೇ ಸಾಮಾಜಿಕ ಜಾಲತಾಣ ಅಥವಾ ಡಿಜಿಟಲ್ ವೇದಿಕೆಯಲ್ಲಿ ಪ್ರಸಾರ ಮಾಡುವಂತಿಲ್ಲ.
- ವಿಷಯಕ್ಕೆ ಸಂಬಂಧಿಸಿದ ನಿಯಮ : ಯಾವುದೇ ವಿಷಯದ ಕುರಿತು ಕಿರುಚಿತ್ರವನ್ನು ತಯಾರಿಸಬಹುದು. ಆದರೆ, ನಿಮ್ಮ ಕಿರುಚಿತ್ರವು ಸಮಾಜಕ್ಕೆ ಅರ್ಥಪೂರ್ಣ ಹಾಗೂ ಉತ್ತಮ ಸಂದೇಶವನ್ನು ತಲುಪಿಸುವಂತಿರಲಿ.
ಕಿರುಚಿತ್ರದಲ್ಲಿ ಯಾವುದೇ ಜಾತಿ/ಧರ್ಮ ನಿಂದನೆ, ವೈಯಕ್ತಿಕ ನಿಂದನೆ ಅಥವಾ ಅವಹೇಳನ, ರಾಜಕೀಯ ಹಾಗೂ ಅಸಭ್ಯ/ಅಶ್ಲೀಲ ವಿಷಯಗಳಿಗೆ ಅವಕಾಶವಿರುವುದಿಲ್ಲ.
- ತಾಂತ್ರಿಕ ಗುಣಮಟ್ಟ : ಕಿರುಚಿತ್ರವನ್ನು 1920 × 1080 ಪಿಕ್ಸೆಲ್ (16:9) ಅಳತೆಯಲ್ಲಿ ತಯಾರಿಸಬೇಕು.
- ಫೈಲ್ ಮಾದರಿ : ಕಿರುಚಿತ್ರವನ್ನು MP4 ಮಾದರಿಯಲ್ಲಿ ಮಾತ್ರ ಸಲ್ಲಿಸಬೇಕು.
- ಅಂತಿಮ ಮುದ್ರಣದ ನಿಯಮ : ಸಲ್ಲಿಸುವ ಅಂತಿಮ ಕಿರುಚಿತ್ರದಲ್ಲಿ ಕಿರುಚಿತ್ರದ ಶೀರ್ಷಿಕೆಯನ್ನು ಹೊರತುಪಡಿಸಿ ಪಾತ್ರವರ್ಗ, ನಿರ್ದೇಶಕರು ಅಥವಾ ತಾಂತ್ರಿಕವರ್ಗದ ಯಾವುದೇ ಹೆಸರುಗಳನ್ನು ನಮೂದಿಸಬಾರದು.
- ಪಾತ್ರವರ್ಗ ಮತ್ತು ತಾಂತ್ರಿಕವರ್ಗದ ವಿವರ : ಕಿರುಚಿತ್ರದಲ್ಲಿ ಭಾಗವಹಿಸಿದ ಪಾತ್ರವರ್ಗ, ನಿರ್ದೇಶಕರು ಹಾಗೂ ತಾಂತ್ರಿಕವರ್ಗದ ಸಂಪೂರ್ಣ ವಿವರಗಳನ್ನು ಪ್ರತ್ಯೇಕ ಹಾಳೆಯಲ್ಲಿ ನಮೂದಿಸಿ ಕೇಂದ್ರ ಸಮಿತಿಗೆ ಸಲ್ಲಿಸಬೇಕು.
- ಅಂತಿಮ ಪ್ರದರ್ಶನಕ್ಕೆ ಆಯ್ಕೆ : ಸಲ್ಲಿಕೆಯಾದ ಕಿರುಚಿತ್ರಗಳಲ್ಲಿ ತೀರ್ಪುಗಾರರ ಆಯ್ಕೆಯಂತೆ ಅತ್ಯುತ್ತಮ 8 ಕಿರುಚಿತ್ರಗಳನ್ನು ಅಂತಿಮ ಪ್ರದರ್ಶನಕ್ಕೆ ಆಯ್ಕೆ ಮಾಡಲಾಗುವುದು.
- ಕಿರುಚಿತ್ರ ಪ್ರದರ್ಶನ : ಆಯ್ಕೆಯಾದ 8 ಕಿರುಚಿತ್ರಗಳನ್ನು ನವೆಂಬರ್ 1, 2026ರಂದು ಉಡುಪಿಯ ಯಕ್ಷಗಾನ ಕಲಾರಂಗದ IYC ಹವಾನಿಯಂತ್ರಿತ ಸಭಾಂಗಣದಲ್ಲಿ ನಡೆಯುವ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಸಂದರ್ಭದಲ್ಲಿ ಬೃಹತ್ ಪರದೆಯಲ್ಲಿ ಪ್ರದರ್ಶಿಸಲಾಗುವುದು.
- ಪ್ರಶಸ್ತಿ ಪ್ರದಾನ : ಆಯ್ಕೆಯಾದ ಕಿರುಚಿತ್ರಗಳ ವಿಜೇತರಿಗೆ ಅದೇ ಅದ್ಧೂರಿ ವೇದಿಕೆಯಲ್ಲಿ ಸಿನಿ ಅವಾರ್ಡ್ ಶೈಲಿಯಲ್ಲಿ ಪ್ರಶಸ್ತಿ ಹಾಗೂ ಗೌರವ ನೀಡಿ ಸನ್ಮಾನಿಸಲಾಗುವುದು.
ಶ್ರೇಷ್ಠ ಕಿರುಚಿತ್ರ ಪ್ರಶಸ್ತಿಗಳು
ಶ್ರೇಷ್ಠ ಕಿರುಚಿತ್ರ – ಪ್ರಥಮ
ಶ್ರೇಷ್ಠ ಕಿರುಚಿತ್ರ – ದ್ವಿತೀಯ
ಶ್ರೇಷ್ಠ ಕಿರುಚಿತ್ರ – ತೃತೀಯ
ಅಗ್ರ ಮೂರು ತಂಡಗಳಿಗೆ ವಿಶೇಷ ನಗದು ಬಹುಮಾನ ಹಾಗೂ ಗೌರವ ನೀಡಲಾಗುವುದು.
ವೈಯಕ್ತಿಕ ಪ್ರಶಸ್ತಿಗಳು
- ಶ್ರೇಷ್ಠ ನಿರ್ದೇಶಕ
- ಶ್ರೇಷ್ಠ ನಟ
- ಶ್ರೇಷ್ಠ ನಟಿ
- ಶ್ರೇಷ್ಠ ಪೋಷಕ ನಟ
- ಶ್ರೇಷ್ಠ ಪೋಷಕ ನಟಿ
- ಶ್ರೇಷ್ಠ ಬಾಲ ನಟ / ಬಾಲ ನಟಿ
- ಶ್ರೇಷ್ಠ ಬರಹಗಾರ
- ಶ್ರೇಷ್ಠ ಛಾಯಾಗ್ರಹಣ
- ಶ್ರೇಷ್ಠ ಸಂಕಲನ
- ಶ್ರೇಷ್ಠ ಸಂಗೀತ
- ಉತ್ತಮ ಸಂದೇಶಭರಿತ ಕಿರುಚಿತ್ರ
ಹೆಸರು ನೋಂದಾಯಿಸಲು ಕೊನೆಯ ದಿನಾಂಕ: 20 ಸೆಪ್ಟೆಂಬರ್ 2026
ಕಿರುಚಿತ್ರ ಸಲ್ಲಿಸಲು ಕೊನೆಯ ದಿನಾಂಕ : 11 ಅಕ್ಟೋಬರ್ 2026
ಕಿರುಚಿತ್ರ ಪ್ರದರ್ಶನ ಹಾಗೂ ಪ್ರಶಸ್ತಿ ಪ್ರದಾನ : 1 ನವೆಂಬರ್ 2026
ಸ್ಥಳ: ಯಕ್ಷಗಾನ ಕಲಾರಂಗದ IYC ಹವಾನಿಯಂತ್ರಿತ ಸಭಾಂಗಣ, ಉಡುಪಿ
ಸಂಘಟಕರು ಮತ್ತು ತೀರ್ಪುಗಾರರ ತೀರ್ಮಾನವೇ ಅಂತಿಮ. ಎಲ್ಲರೂ ಅದನ್ನು ಗೌರವಿಸಬೇಕು.
📞 ಹೆಚ್ಚಿನ ಮಾಹಿತಿಗಾಗಿ
ಮಹೇಶ್ ಮಲ್ಪೆ : 86606 37172
ನಿಮ್ಮ ಕಥೆ… ನಿಮ್ಮ ದನಿ… ನಿಮ್ಮ ಪ್ರತಿಭೆ…“ಯುವ ಸಿನಿ ದನಿ”
ಯುವವಾಹಿನಿಯ ಯುವ ಪ್ರತಿಭೆಗಳಿಗೆ ಸಿನಿ ಲೋಕದ ಅದ್ಧೂರಿ ವೇದಿಕೆ!
ಪ್ರಧಾನ ಕಾರ್ಯದರ್ಶಿ
ಯುವವಾಹಿನಿ (ರಿ) ಕೇಂದ್ರ ಸಮಿತಿ, ಮಂಗಳೂರು






