ಉಡುಪಿ : ಯುವವಾಹಿನಿ (ರಿ ) ಉಡುಪಿ ಘಟಕದ ಗುರು ಸತ್ಸಂಗ ಕಾರ್ಯ ಕ್ರಮವು ಘಟಕದ ಜೊತೆಕಾರ್ಯದರ್ಶಿ ಸಚೇಂದ್ರ ಅಂಬಾಗಿಲುರವರ ಅಥಿತ್ಯದಲ್ಲಿ ಅವರ ಮನೆಯಲ್ಲಿ ಅವರ ಮನೆಯವರು ಸೇರಿ ದೀಪ ಬೆಳಗಿಸಿ ಪ್ರಾರಂಭಗೊಂಡಿತು. ಘಟಕದ ಸದಸ್ಯರು ಸೇರಿ ಭಜನಾ ಕಾರ್ಯಕ್ರಮ ನೆರವೇರಿಸಿದರು.

ಮಾಜಿ ಅಧ್ಯಕ್ಷರಾದ ಭಾಸ್ಕರ್ ಸುವರ್ಣರವರು ಗುರುಗಳಿಗೆ ಮಹಾಪೂಜೆ ನೆರವೇರಿಸಿ. ಆಗಮಿಸಿದ ಎಲ್ಲರಿಗೂ ಹಾಗೂ ಮನೆಯವರಿಗೂ ಗುರುಗಳು ಒಳಿತು ಮಾಡುವಂತೆ ಪ್ರಾರ್ಥಿಸಿ ಮಹಾ ಪ್ರಸಾದವನ್ನು ನೀಡಿದರು.
ಗುರು ಸಂದೇಶವನ್ನು ಖ್ಯಾತ ನಿರೂಪಕರಾದ ರಾಜೇಂದ್ರ ಪ್ರಸಾದ್ ಎಕ್ಕರ್ ರವರು ಯಶಸ್ವಿ ಯಾಗಿ ನಡೆಸಿ ಕೊಟ್ಟರು. ಅತಿಥಿಗಳ ಪರಿಚಯವನ್ನು ಸಚೇಂದ್ರ ಅಂಬಾಗಿಲು ನಡೆಸಿಕೊಟ್ಟರು. ಕಾರ್ಯಕ್ರಮಕ್ಕೆ ಅವಕಾಶ ನೀಡಿರುವ ಹಾಗೂ ಆಗಮಿಸಿದ ಎಲ್ಲ ಸದಸ್ಯರಿಗೂ, ಹಿತೈಷಿಗಳಿಗೆ ಘಟಕದ ಅಧ್ಯಕ್ಷರಾದ ವಿನೋದ್ ಮಂಚಿ ಕೃತಜ್ಞತೆ ಸಲ್ಲಿಸಿದರು.
ಬಂದಿರುವ ಎಲ್ಲರನ್ನು ಸ್ವಾಗತಿಸಿ, ಧನ್ಯವಾದಗಳನ್ನು ಘಟಕದ ಕಾರ್ಯದರ್ಶಿ ವೀಕ್ಷಿತ್ ರವರು ನೀಡಿದರು. ಈ ಸಂದರ್ಭದಲ್ಲಿ ಮಾಜಿ ಅಧ್ಯಕ್ಷರು, ಸದಸ್ಯರು ಊರಿನ ಬಾಂಧವರು, ಮುಖಂಡರು ಉಪಸ್ಥಿರಿದ್ದರು.


