
22-09-2026, 9:00 PM
ಮಾಣಿ, ಸೆ. 22: “ಸಂಕಷ್ಟದಲ್ಲಿರುವವರ ಬದುಕಿಗೆ ಮಾನವೀಯ ಸ್ಪರ್ಶ ನೀಡುವುದೇ ಗುರುತತ್ತ್ವದ ನಿಜವಾದ ಅನುಷ್ಠಾನ. ಸಮಾಜದ ಅಂಚಿನಲ್ಲಿರುವವರ ಬದುಕಿಗೆ ಸ್ಪಂದಿಸಿದಾಗ ಮಾತ್ರ ನಾರಾಯಣ ಗುರುಗಳ ತತ್ವಗಳು ಅರ್ಥಪೂರ್ಣವಾಗುತ್ತವೆ” ಎಂದು ಯುವವಾಹಿನಿ (ರಿ.) ಮಾಣಿ ಘಟಕದ ಕೋಶಾಧಿಕಾರಿ ಡಾ. ತ್ರಿವೇಣಿ ರಮೇಶ್ ಹೇಳಿದರು. ಯುವವಾಹಿನಿ (ರಿ.) ಮಾಣಿ ಘಟಕದ ‘ಮನೆ ಮನೆಗೆ ಗುರುತತ್ತ್ವ ಸಂದೇಶ’ ಕಾರ್ಯಕ್ರಮದ ಅಂಗವಾಗಿ ಸೆ. 22ರಂದು ಲಲಿತಾ ಅವರ ಮನೆಯಲ್ಲಿ ಭಜನಾ ಸಂಕೀರ್ತನೆ ಹಾಗೂ ನಾರಾಯಣ ಗುರುಗಳ ತತ್ವಸಂದೇಶ ಕಾರ್ಯಕ್ರಮ ನಡೆಯಿತು. ತಂದೆ-ತಾಯಿಯ ಆಶ್ರಯವಿಲ್ಲದೆ […]
Read More

22-09-2026, 8:00 PM
ಮಂಗಳೂರು ಸೆ 22 : ಸಮಾಜದಲ್ಲಿ ಬದಲಾವಣೆ ತರಲು ಬಯಸುವ ವ್ಯಕ್ತಿ ಮೊದಲು ತನ್ನ ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು ಎಂದು ಪರಿಸರವಾದಿ ನಾಗರಾಜ್ ಬಜಾಲ್ ಹೇಳಿದರು ಯುವವಾಹಿನಿ (ರಿ.) ಮಂಗಳೂರು ಘಟಕದ ವತಿಯಿಂದ ಸೆ. 22ರಂದು ನಡೆದ ಕಾರ್ಯಕ್ರಮದಲ್ಲಿ “ಕಸ ನಿರ್ವಹಣೆ ಹಾಗೂ ಪರಿಸರ ಸಂರಕ್ಷಣೆ” ಕುರಿತು ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡಿದ ಅವರು, ಕಸವನ್ನು ಹಸಿ ಮತ್ತು ಒಣ ಕಸ ಎಂದು ವಿಂಗಡಿಸಿ ವಿಲೇವಾರಿ ಮಾಡುವ ಜವಾಬ್ದಾರಿಯನ್ನು ಪ್ರತಿಯೊಬ್ಬರೂ ಪಾಲಿಸಬೇಕು ಎಂದರು.ಕಸ ವಿಲೇವಾರಿ ಮಾಡುವ ಕಾರ್ಮಿಕರು ಸಮಾಜದ […]
Read More

21-09-2026, 8:00 PM
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಶ್ರಯದಲ್ಲಿ ಹಾಗೂ ಯುವವಾಹಿನಿ (ರಿ.) ಮಂಗಳೂರು ಘಟಕದ ಸಂಯೋಜನೆಯಲ್ಲಿ ಪ್ರತೀ ಸೋಮವಾರ ನಡೆಯುವ ಸಾಪ್ತಾಹಿಕ ಸಂಕೀರ್ತನ ಸರಣಿಯ ಭಜನಾ ಸೇವೆಯು ದಿನಾಂಕ: 21-09-2026 ರಂದು ಸಂಜೆ ನಡೆಯಿತು. ಈ ವಾರದ ಭಜನಾ ಸೇವೆ ಶ್ರೀ ಮುಖ್ಯಪ್ರಾಣ ಭಜನಾ ತಂಡ ಕಾವೂರು, ಮಂಗಳೂರು ಇವರ ಸಹಯೋಗದಲ್ಲಿ ನೆರವೇರಿತು. ಕ್ಷೇತ್ರದಲ್ಲಿ ಸೇರಿರುವ ಭಕ್ತರ ಮನ ಸೆಳೆಯುವ ಭಕ್ತಿ ತುಂಬಿದ ಭಜನೆಯನ್ನು ಗೋಕರ್ಣನಾಥ ಹಾಗೂ ನಾರಾಯಣ ಗುರುಗಳ ಚರಣಕ್ಕೆ ಸಮರ್ಪಿಸಿದರು. ಸಂಜೆ 7 ಗಂಟೆಗೆ […]
Read More

21-09-2026, 8:00 PM
ಪೆರಾಜೆ, ಸೆ. 21: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ವ ಸಂದೇಶ” ಕಾರ್ಯಕ್ರಮವು ಸೆ. 21ರಂದು ಪೆರಾಜೆ ಗ್ರಾಮದ ಧರ್ಮಣ ಪೂಜಾರಿ ಅವರ ಕುಟುಂಬದ ಧರ್ಮಚಾವಡಿಯಲ್ಲಿ ನಡೆಯಿತು. ಕಾರ್ಯಕ್ರಮದಲ್ಲಿ ಮಾತನಾಡಿದ ರೇಣುಕಾ ಕಣಿಯೂರು ಅವರು, “ಹುಟ್ಟಿನಿಂದ ಸಾವಿನವರೆಗಿನ ಬದುಕಿನಲ್ಲಿ ಮಾನವೀಯತೆಯ ಮಹತ್ವವನ್ನು ಅರಿತುಕೊಳ್ಳಬೇಕು. ಪ್ರಾಣಿ–ಪಕ್ಷಿಗಳಲ್ಲಿಯೂ ಕಾಣುವ ಸಹೋದರತೆ ಹಾಗೂ ಆತ್ಮೀಯತೆಯನ್ನು ನಮ್ಮ ಬದುಕಿನಲ್ಲೂ ಅಳವಡಿಸಿಕೊಳ್ಳಬೇಕು. ಬ್ರಹ್ಮಶ್ರೀ ನಾರಾಯಣ ಗುರುಗಳು ಸಾರಿದ ಸಮಾನತೆ, ಸಹೋದರತ್ವ ಮತ್ತು ಮಾನವೀಯತೆಯ ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ಮುನ್ನಡೆಯಬೇಕು” […]
Read More

21-09-2026, 7:00 PM
ಪಡುಬಿದ್ರಿ, ಸೆ. 21: ತುಳುನಾಡಿನ ಜನಪದ ಸಂಸ್ಕೃತಿ ಹಾಗೂ ಆರಾಧನಾ ಪರಂಪರೆಯಲ್ಲಿ ಬೆರ್ಮೆರ್ ಮತ್ತು ಹಿರಿಯಾಕ್ಲೆನ ಆರಾಧನೆಗೆ ವಿಶೇಷ ಸ್ಥಾನವಿದೆ ಎಂದು ತುಳು ಜನಪದ ಆಸಕ್ತ ಶ್ರೀಕಾಂತ್ ಶೆಟ್ಟಿ, ಕಾರ್ಕಳ ಹೇಳಿದರು. ಬ್ರಹ್ಮಶ್ರೀ ನಾರಾಯಣ ಗುರುಗಳ 97ನೇ ಪುಣ್ಯತಿಥಿಯ ಅಂಗವಾಗಿ ಪಡುಬಿದ್ರಿ ಬಿಲ್ಲವ ಸಮಾಜ ಸೇವಾ ಸಂಘ (ರಿ.) ಹಾಗೂ ಯುವವಾಹಿನಿ (ರಿ.) ಪಡುಬಿದ್ರಿ ಘಟಕದ ಜಂಟಿ ಆಶ್ರಯದಲ್ಲಿ ಪಡುಬಿದ್ರಿಯ ಬ್ರಹ್ಮಶ್ರೀ ನಾರಾಯಣಗುರು ಸಭಾಗೃಹದಲ್ಲಿ ನಡೆದ ‘ತುಳುನಾಡ್ ಬೆರ್ಮೆರ್ ಬೊಕ್ಕ ಹಿರಿಯಾಕ್ಲೆನ ಆರಾಧನೆ’ ವಿಚಾರ ಮಂಡನೆ ಕಾರ್ಯಕ್ರಮದಲ್ಲಿ […]
Read More

21-09-2026, 11:00 AM
ಮಂಗಳೂರು, ಸೆ. 21: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಸೆಪ್ಟೆಂಬರ್ ಸಂಚಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಸೋಮಸುಂದರಂ ಅವರು ಬಿಡುಗಡೆಗೊಳಿಸಿದರು. ಸೆಪ್ಟೆಂಬರ್ 21ರಂದು ಲೋಕಶಾಂತಿಯ ಹರಿಕಾರ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದ ಅಂಗವಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರು ಸಾನಿಧ್ಯದಲ್ಲಿ ‘ಯುವಸಿಂಚನ’ ಸೆಪ್ಟೆಂಬರ್ ಸಂಚಿಕೆಯನ್ನು ಬಿಡುಗಡೆ ಮಾಡಿ, ಪತ್ರಿಕೆಗೆ ಶುಭಹಾರೈಸಿದರು. ಯುವವಾಹಿನಿಯ ಚಟುವಟಿಕೆಗಳು, ಸಾಮಾಜಿಕ ಕಳಕಳಿ, ಶೈಕ್ಷಣಿಕ […]
Read More

20-09-2026, 9:00 PM
ಕೂಳೂರು ಸೆ 20 : “ಜೀವ ಜಡರೂಪ ಪ್ರಪಂಚವನದಾವುದೋ | ಆವರಿಸಿಕೊಂಡು ಮೊಳನೆರೆದುಮಿಹುದಂತೆ || ಭಾವಕೊಳಪಡದಂತೆ ಅಳತೆಗಳವಡದಂತೆ | ಆ ವಿಶೇಷಕೆ ನಮಿಸೊ – ಮಂಕುತಿಮ್ಮ ||” ಎಂಬ ಡಿ.ವಿ. ಗುಂಡಪ್ಪ (ಡಿ.ವಿ.ಜಿ.) ಅವರ ಮಂಕುತಿಮ್ಮನ ಕಗ್ಗದ ಸಾಲುಗಳು ಜೀವನದ ಅಗಾಧತೆಯತ್ತ ನಮ್ಮನ್ನು ಕರೆದೊಯ್ಯುತ್ತವೆ. ಯುವವಾಹಿನಿ (ರಿ.) ಕೂಳೂರು ಘಟಕದ ವತಿಯಿಂದ ಸೆಪ್ಟೆಂಬರ್ 20ರಂದು ಕೇರಳ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರಗಳಿಗೆ “ಕ್ಷೇತ್ರ ದರ್ಶನ – 2026” ಆಧ್ಯಾತ್ಮಿಕ ಹಾಗೂ ಸ್ಮರಣೀಯ ಪ್ರವಾಸವನ್ನು ಆಯೋಜಿಸಲಾಯಿತು. ಬೆಳಗ್ಗೆ 5 […]
Read More

20-09-2026, 8:00 PM
ಮಾಣಿ, ಸೆ. 20: ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆಯುತ್ತಿರುವ “ಮನೆ ಮನೆಗೆ ಗುರುತತ್ತ್ವ ಸಂದೇಶ” ಕಾರ್ಯಕ್ರಮವು ಸದಾನಂದ ಪೂಜಾರಿ ಬರಿಮಾರು ಅವರ ಮನೆಯಲ್ಲಿ ನಡೆಯಿತು. ಈ ಸಂದರ್ಭದಲ್ಲಿ ಮಾತನಾಡಿದ ಯುವವಾಹಿನಿ (ರಿ.) ಮಾಣಿ ಘಟಕದ ಮಾಜಿ ನಿರ್ದೇಶಕ ರಾಜೇಶ್ ಬಲ್ಯ, ಸಮಾಜದಲ್ಲಿ ಸಮಾನತೆ ಹಾಗೂ ಸಾಮಾಜಿಕ ಬದಲಾವಣೆಗೆ ಬ್ರಹ್ಮಶ್ರೀ ನಾರಾಯಣ ಗುರುಗಳು ದಾರಿದೀಪವಾಗಿದ್ದಾರೆ. ಮದ್ಯಪಾನ, ಮೂಢನಂಬಿಕೆ ಹಾಗೂ ಅನಿಷ್ಟ ಪದ್ಧತಿಗಳ ವಿರುದ್ಧ ಜಾಗೃತಿ ಮೂಡಿಸಿದ ಅವರು, ಸರಳತೆ, ಶಿಕ್ಷಣ ಹಾಗೂ ಮಾನವೀಯತೆಯ ಮಹತ್ವವನ್ನು ಸಮಾಜಕ್ಕೆ […]
Read More

20-09-2026, 8:00 PM
ಕೊಲ್ಯ ಸೆ 20 : ಯುವವಾಹಿನಿ (ರಿ.) ಕೊಲ್ಯ ಘಟಕದ ವತಿಯಿಂದ ಈ ವರ್ಷದ ಮೊದಲ ದೇಗುಲ ದರ್ಶನ ಪ್ರವಾಸವನ್ನು ಆಯೋಜಿಸಲಾಗಿದ್ದು, ಸುಮಾರು 60 ಮಂದಿ ಸದಸ್ಯರು ಹಾಗೂ ಕುಟುಂಬ ಸದಸ್ಯರು ಭಾಗವಹಿಸಿದ್ದರು. ತಲಪಾಡಿಯಿಂದ ಆರಂಭಗೊಂಡ ಈ ಪವಿತ್ರ ಪಯಣವು ವಿವಿಧ ಪುಣ್ಯಕ್ಷೇತ್ರಗಳ ದರ್ಶನದೊಂದಿಗೆ ಭಕ್ತಿ, ಸ್ನೇಹ, ಒಗ್ಗಟ್ಟು ಹಾಗೂ ಸಂತಸದ ಅನುಭವವನ್ನು ನೀಡಿತು. ಘಟಕದ ನಾರಾಯಣ ಗುರು ತತ್ವ ಪ್ರಚಾರ ನಿರ್ದೇಶಕ ಶಶಿಕಾಂತ್ ಪರ್ಯತ್ತೂರು ಪ್ರಾರ್ಥನೆ ನೆರವೇರಿಸಿ ಪ್ರಯಾಣಕ್ಕೆ ಚಾಲನೆ ನೀಡಿದರು. ಘಟಕದ ಅಧ್ಯಕ್ಷ ಜೀವನ್ […]
Read More

20-09-2026, 3:00 PM
ಬೆಳ್ಳಾರೆ, ಸೆ. 20: ಯುವವಾಹಿನಿ (ರಿ.) ಸುಳ್ಯ ಘಟಕದ ವತಿಯಿಂದ 172ನೇ ಬ್ರಹ್ಮಶ್ರೀ ನಾರಾಯಣ ಗುರು ಜಯಂತಿ, ಗುರುಪೂಜೆ, ಪ್ರತಿಭಾ ಪುರಸ್ಕಾರ ಹಾಗೂ ಸನ್ಮಾನ ಕಾರ್ಯಕ್ರಮವು ಸೆ. 20ರಂದು ಬೆಳ್ಳಾರೆ ಅಜಪಿಲ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ಸಭಾಭವನದಲ್ಲಿ ನಡೆಯಿತು. ಬ್ರಹ್ಮಶ್ರೀ ನಾರಾಯಣಗುರು ಬಿಲ್ಲವ ಸಂಘದ ಅಧ್ಯಕ್ಷ ಎ. ಕೃಷ್ಣಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ರಾಜ್ಯಶಾಸ್ತ್ರ ಉಪನ್ಯಾಸಕ ದಯಾನಂದ ಕರ್ಕೇರ ಉಗ್ಗೇಲುಬೆಟ್ಟು ಅವರು ಗುರು ಸಂದೇಶ ನೀಡುತ್ತಾ, “ಬ್ರಹ್ಮಶ್ರೀ ನಾರಾಯಣ ಗುರುಗಳು ಮಹತ್ಕಾರ್ಯ ಮಾಡಿದವರು. ಶಿಕ್ಷಣಕ್ಕೆ ಹೆಚ್ಚಿನ […]
Read More