ಮಂಗಳೂರು, ಸೆ. 21: ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಇದರ ಮುಖವಾಣಿ ‘ಯುವಸಿಂಚನ’ ಪತ್ರಿಕೆಯ ಸೆಪ್ಟೆಂಬರ್ ಸಂಚಿಕೆಯನ್ನು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿಯ ಅಧ್ಯಕ್ಷರಾದ ಜೈರಾಜ್ ಸೋಮಸುಂದರಂ ಅವರು ಬಿಡುಗಡೆಗೊಳಿಸಿದರು.

ಸೆಪ್ಟೆಂಬರ್ 21ರಂದು ಲೋಕಶಾಂತಿಯ ಹರಿಕಾರ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳ ಸಮಾಧಿ ದಿನದ ಅಂಗವಾಗಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಗುರು ಸಾನಿಧ್ಯದಲ್ಲಿ ‘ಯುವಸಿಂಚನ’ ಸೆಪ್ಟೆಂಬರ್ ಸಂಚಿಕೆಯನ್ನು ಬಿಡುಗಡೆ ಮಾಡಿ, ಪತ್ರಿಕೆಗೆ ಶುಭಹಾರೈಸಿದರು.
ಯುವವಾಹಿನಿಯ ಚಟುವಟಿಕೆಗಳು, ಸಾಮಾಜಿಕ ಕಳಕಳಿ, ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು, ಯುವಜನರ ಸಾಧನೆಗಳು ಮತ್ತು ವಿವಿಧ ಘಟಕಗಳ ಸೇವಾ ಕಾರ್ಯಗಳಿಗೆ ‘ಯುವಸಿಂಚನ’ ವೇದಿಕೆಯಾಗಿದ್ದು, ಸಂಘಟನೆಯ ಆಶಯಗಳು ಹಾಗೂ ನಾರಾಯಣ ಗುರುಗಳ ಸಂದೇಶಗಳನ್ನು ಸಮಾಜಕ್ಕೆ ತಲುಪಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.
ಈ ಸಂದರ್ಭದಲ್ಲಿ ಯುವವಾಹಿನಿ (ರಿ.) ಕೇಂದ್ರ ಸಮಿತಿಯ ಅಧ್ಯಕ್ಷರಾದ ಅಶೋಕ್ ಕುಮಾರ್ ಪಡ್ಪು, ಯುವಸಿಂಚನ ಪತ್ರಿಕೆಯ ಕಾರ್ಯನಿರ್ವಾಹಕ ಸಂಪಾದಕರಾದ ಹರೀಶ್ ವಿ. ಪಚ್ಚನಾಡಿ, ಪ್ರಧಾನ ಕಾರ್ಯದರ್ಶಿ ರೇಖಾ ಗೋಪಾಲ್, ಉಪ ಸಂಪಾದಕರಾದ ರಾಜೇಶ್ ಸುವರ್ಣ, ಸಂಪಾದಕೀಯ ಮಂಡಳಿ ಸದಸ್ಯರಾದ ಉಷಾ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಅಶೋಕ್ ಕುಮಾರ್, ಟಿ. ಶಂಕರ್ ಸುವರ್ಣ, ಜಯರಾಮ್ ಕಾರಂದೂರು, ಹರೀಶ್ ಕೆ. ಪೂಜಾರಿ, ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿ ಇಂದಿರಾ ಕೂಳೂರು ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.






