17-09-2017, 9:28 AM
ಯುವವಾಹಿನಿ (ರಿ) ಕೇಂದ್ರ ಸಮಿತಿ ಮಂಗಳೂರು ಇದರ 26 ನೇ ಘಟಕವಾಗಿ ಅಸ್ತಿತ್ವಕ್ಕೆ ಬಂದ ಯುವವಾಹಿನಿ (ರಿ) ಮಾಣಿ ಘಟಕದ 2017-18 ನೇ ಸಾಲಿನ ಅಧ್ಯಕ್ಷರಾಗಿ ರಾಜೇಶ್ ಪೂಜಾರಿ ಬಾಬನಕಟ್ಟೆ ಆಯ್ಕೆಯಾಗಿದ್ದಾರೆ ಉಪಾಧ್ಯಕ್ಷರಾಗಿ ವಿಜಯಕುಮಾರ್ ಎಸ್.ಕಡೇಶಿವಾಲಯ,ಕಾರ್ಯದರ್ಶಿಯಾಗಿ ಪ್ರಶಾಂತ್ ಅನಂತಾಡಿ ಜತೆಕಾರ್ಯದರ್ಶಿಯಾಗಿ ಪವನ್ ಅನಂತಾಡಿ,ಕೋಶಾಧಿಕಾರಿಯಾಗಿ ಅಮರನಾಥ್ ಮುಜಲ ಸಾಹಿತ್ಯ ಮತ್ತು ಸಾಂಸ್ಕೃತಿಕ ನಿರ್ದೇಶಕರಾಗಿ ಸ್ವರ್ಣ ಜೋತ್ಸ್ನಮಾಣಿ, ನಾರಾಯಣಗುರು ತತ್ವ ಪ್ರಚಾರ ಅನುಷ್ಠಾನ ನಿರ್ದೇಶಕರಾಗಿ ಶ್ರೀಮತಿ ತ್ರಿವೇಣಿ ರಮೇಶ್ ಮುಜಲ, ಸಮಾಜ ಸೇವೆ ನಿರ್ದೇಶಕರಾಗಿ ನೀಲಯ್ಯ ಪೂಜಾರಿ ಜೋಗಿಬೆಟ್ಟು ದರ್ಖಾಸು, […]
Read More
16-09-2017, 9:15 AM
ಪುತ್ತೂರು ತಾಲೂಕು ಬಡಗನ್ನೂರು ಗ್ರಾಮದ ಮುಡಿಪಿನಡ್ಕ ಎಂಬಲ್ಲಿರುವ ದೇಯಿ ಬೈದೇತಿ ಔಷದಿ ವನದಲ್ಲಿ ಹಿಂದೂ ಸಮಾಜದ ವಿಶೇಷವಾಗಿ ಬಿಲ್ಲವ ಸಮಾಜದ ಆರಾಧ್ಯ ತಾಯಿ ದೇಯಿ ಬೈದೇತಿ ಮೂರ್ತಿಗೆ ಅಪಮಾನ ಮಾಡಿದ ಹೇಯ ಕೃತ್ಯದ ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವಂತೆ ಯುವವಾಹಿನಿ ಪುತ್ತೂರು ಘಟಕ ಅಗ್ರಹಿಸಿದೆ. ಪ್ರಕರಣದಲ್ಲಿ ಒಬ್ಬ ಆರೋಪಿಯನ್ನು ಬಂಧಿಸಿದ ಪೋಲೀಸ್ ಇಲಾಖೆಯ ಎಲ್ಲಾ ಅಧಿಕಾರಿಗಳಿಗೆ ಹಾಗೂ ಸಿಬ್ಬಂದಿ ವರ್ಗದವರಿಗೆ ಯುವವಾಹಿನಿ ಪುತ್ತೂರು ಘಟಕವು ಅಭಿನಂದನೆ ಸಲ್ಲಿಸಿದೆ. ಕೃತ್ಯದಲ್ಲಿ ಭಾಗಿಯಾದ ಎಲ್ಲಾ ಆರೋಪಿಗಳನ್ನು ಕೂಡಲೇ ಬಂಧಿಸಿ […]
Read More
13-09-2017, 12:37 PM
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಸ್ಥಾಪಕ ಅಧ್ಯಕ್ಷರು ಹಾಗೂ ದಕ್ಷಿಣ ಕನ್ನಡ ಜಿಲ್ಳಾ ಕನ್ನಡ ಸಾಹಿತ್ಯ ಪರಿಷತ್ ಇದರ ಗೌರವ ಪ್ರಧಾನ ಕಾರ್ಯದರ್ಶಿ ಬಿ.ತಮ್ಮಯ ಸಂಪಾದಕೀಯದ ತುಳು ಪತ್ರಿಕೆಯನ್ನು ಬಿಡುಗಡೆಗೊಳಿಸಲಾಯಿತು. ದಿನಾಂಕ 13.09.2017 ರಂದು ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ಕಾರ್ಯಕಾರಿ ಸಮಿತಿ ಸಭೆಯಲ್ಲಿ ಬಂಟ್ವಾಳ ತಾಲೂಕು ಬಿಲ್ಲವ ಸಮಾಜ ಸೇವಾ ಸಂಘದ ಅಧ್ಯಕ್ಷರಾದ ಕೆ.ಸೇಸಪ್ಪ ಕೋಟ್ಯಾನ್ ಪತ್ರಿಕೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು. ಈ ಸಂದರ್ಭದಲ್ಲಿ, ಬಿ.ತಮ್ಮಯ ಯುವವಾಹಿನಿ ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ ಲೋಕೇಶ್ […]
Read More
10-09-2017, 1:16 PM
ವಿಶಿಷ್ಟ ವಿನ್ಯಾಸದೊಂದಿಗೆ ವರ್ಣರಂಜಿತ ಪುಟಗಳನ್ನು ಒಳಗೊಂಡ ಯುವವಾಹಿನಿಯ ಮುಖವಾಣಿ ಯುವಸಿಂಚನ ಪತ್ರಿಕೆ ಎಲ್ಲರ ಮನಸ್ಸು ಗೆಲ್ಲಲಿದೆ ಎಂದು ಯುವವಾಹಿನಿ ಕೇಂದ್ರ ಸಮಿತಿಯ ಅನುಷ್ಠಾನ ಸಮಿತಿಯ ಸಂಚಾಲಕರಾದ ಅಶೋಕ್ ಕುಮಾರ್ ತಿಳಿಸಿದರು ಅವರು ದಿನಾಂಕ 10.09.2017 ರಂದು ಯುವವಾಹಿನಿ ಸಸಿಹಿತ್ಲು ಘಟಕದ ಆಶ್ರಯದಲ್ಲಿ ಸಸಿಹಿತ್ಲು ವೈಶಾಲಿ ರೆಸಾರ್ಟ್ ಇಲ್ಲಿ ಜರುಗಿದ ಯುವವಾಹಿನಿಯ 26 ಘಟಕಗಳ ಸಮನ್ವಯತೆ ಸ್ನೇಹಾನುಬಂಧ ಕಾರ್ಯಕ್ರಮದಲ್ಲಿ ಯುವಸಿಂಚನ ಪತ್ರಿಕೆ ಯನ್ನು ಬಿಡುಗಡೆಗೊಳಿಸಿ ಮಾತನಾಡಿದರು. ಎಲ್ಲರ ಸಲಹೆ ಸೂಚನೆ, ಮಾರ್ಗದರ್ಶನ ಹಾಗೂ ಸಹಕಾರದಿಂದ ಹೊಸ ವಿನ್ಯಾಸದಲ್ಲಿ ಯುವಸಿಂಚನ […]
Read More
10-09-2017, 12:15 PM
ಬ್ರಹ್ಮಶ್ರೀ ನಾರಾಯಣಗುರುಗಳು ತಾನು ಸಮಾಜಕ್ಕೆ ನೀಡಿದ್ದ ಪ್ರತಿ ಸಂದೇಶವನ್ನು ತನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರು. ಮಾನವತಾವಾದದ ಪ್ರತಿಪಾದಕರಾಗಿದ್ದರು, ಮನುಕುಲಕ್ಕೆ ಜ್ಞಾನದ ಬೆಳಕು ತೋರಿದ ಗುರುಗಳ ಸಂದೇಶದ ಅನುಷ್ಠಾನದ ಜತೆ ಅವರು ತೋರಿಸಿದ ದಾರಿಯಲ್ಲಿ ಸಂಘಟಿತ ಸಮಾಜ ನಿರ್ಮಾಣಕ್ಕೆ ಯತ್ನಿಸಬೇಕು ಎಂದು ಅಗತ್ತಾಡಿ ಗರೋಡಿಯ ಶೈಲು ಬಿರ್ವ ತಿಳಿಸಿದರು ಅವರು ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜಯಂತಿ ಪ್ರಯುಕ್ತ ಯುವವಾಹಿನಿ(ರಿ) ಸುರತ್ಕಲ್ ಘಟಕದ ಆಶ್ರಯದಲ್ಲಿ ದಿನಾಂಕ 10.09.2017 ರಂದು ಇಡ್ಯಾ ಸುರತ್ಕಲ್ ಬಿಲ್ಲವ ಸಮಾಜ ಸೇವಾ ಸಂಘದಲ್ಲಿ ಜರುಗಿದ ಗುರುಸ್ಮರಣೆ ಕಾರ್ಯಕ್ರಮದಲ್ಲಿ […]
Read More
10-09-2017, 3:10 AM
ಯವವಾಹಿನಿಯ (ರಿ) ಕಂಕನಾಡಿ ಘಟಕದ ವತಿಯಿಂದ ಬ್ರಹ್ಮಶ್ರೀ ನಾರಾಯಣಗುರುಗಳ 163ನೇ ಜನ್ಮದಿನದ ಪ್ರಯುಕ್ತ ದಿನಾಂಕ 10.09.2017ರಂದು ಗೋರಿಗುಡ್ಡೆ ಕಿಟ್ಟೆಲ್ ಮೆಮೋರಿಯಲ್ ಶಾಲೆಯಲ್ಲಿ ಶಾಲಾ ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಯುವವಾಹಿನಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ರಾಜೀವ ಪೂಜಾರಿ, ಉದಯಶಂಕರ್ ಮತ್ತು ರೇವತಿ ಟೀಚರ್ ಇವರು ತೀರ್ಪುಗಾರರಾಗಿ ಭಾಗವಹಿಸಿದರು ಹಾಗೂ ಈ ಸ್ಪರ್ಧೆಯಲ್ಲಿ ಸುಮಾರು 40ಕ್ಕೂ ಹೆಚ್ಚು ಸಂಖ್ಯೆಯಲ್ಲಿ ವಿದ್ಯಾರ್ಥಿ- ವಿದ್ಯಾರ್ಥಿನಿಯರು ಭಾಗವಹಿಸಿದ್ದರು. ಹಾಗೂ ಯುವವಾಹಿನಿ ಕಂಕನಾಡಿ ಘಟಕದ ಸದಸ್ಯರಿಗೆ ಅಟೋಟ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ಯುವವಾಹಿನಿ ಕಂಕನಾಡಿ […]
Read More
09-09-2017, 1:56 PM
ಕೃಷಿಕರಿಗೆ ಸೋಣ ತಿಂಗಳು ಸಂಭ್ರಮದ ತಿಂಗಳು ಆಗಿರುವುದರಿಂದ ಈ ಕಾರ್ಯಕ್ರಮದ ಶೀರ್ಷಿಕೆ ಅರ್ಥಪೂರ್ಣವಾಗಿದೆ.ತಂತ್ರಜ್ಞಾನದಿಂದ ಮನಸ್ಸಿನ ಬದಲಾವಣೆ ಆಗಬಹುದೇ ಹೊರತು ಸಂಸ್ಕೃತಿ, ಸಂಸ್ಕಾರ ಹಾಗೂ ಜೀವನ ಪಾಠವನ್ನು ಕಲಿಸುವುದಿಲ್ಲ ಹಾಗಾಗಿ ಸಂಸ್ಕಾರದ ಜತೆಗೆ ಜೀವನ ಮೌಲ್ಯವನ್ನು ಅಳವಡಿಸುವುದು ಇಂದು ತೀರಾ ಅಗತ್ಯವಾಗಿದೆ ಎಂದು ಮಂಗಳೂರು ಮಹಿಳಾ ಮಂಡಲಗಳ ಒಕ್ಕೂಟದ ಸ್ಥಾಪಕ ಅಧ್ಯಕ್ಷರಾದ ಕೆ.ಎ.ರೋಹಿಣಿ ಅಭಿಪ್ರಾಯ ಪಟ್ಟರು.ಅವರು ದಿನಾಂಕ 09.09.2017 ರಂದು ಮಂಗಳೂರು ಯುವವಾಹಿನಿ ಸಭಾಂಗಣದಲ್ಲಿ ಯುವವಾಹಿನಿ (ರಿ) ಮಂಗಳೂರು ಮಹಿಳಾ ಘಟಕದ ಆಶ್ರಯದಲ್ಲಿ ಜರುಗಿದ ಸೋಣ ಸಂಭ್ರಮ ಕಾರ್ಯಕ್ರಮದಲ್ಲಿ […]
Read More
07-09-2017, 1:27 PM
ಸುದೀರ್ಘ 30 ವರ್ಷಗಳ ಕಾಲ ವಿದ್ಯೆಗೆ ಪ್ರೋತ್ಸಾಹ ನೀಡುತ್ತಿರುವ ಯುವವಾಹಿನಿಯ ಅಧ್ಬುತ ಸಾಧನೆ ಶ್ಲಾಘನೀಯವಾದುದು, ಈ ನಿಟ್ಟಿನಲ್ಲಿ ಯುವವಾಹಿನಿ ಎಲ್ಲರಿಗೂ ಪ್ರೇರಕ ಶಕ್ತಿ .ನಮ್ಮ ಸಂಪಾದನೆಯ ಒಂದಂಶವನ್ನು ಸಮಾಜಕ್ಕೆ ನೀಡಬೇಕು ಎನ್ನುವ ಭಾವನೆ ನಮ್ಮಲ್ಲಿರಬೇಕು, ಪರಸ್ಪರ ಸಹಕಾರದಿಂದ ಸದೃಢ ಸಮಾಜದ ನಿರ್ಮಾಣ ಮಾಡೋಣ ಎಂದು ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಕವಿತಾ ಸನಿಲ್ ತಿಳಿಸಿದರು. ಅವರು ಯುವವಾಹಿನಿ (ರಿ) ಮಂಗಳೂರು ಘಟಕದ ಆಶ್ರಯದಲ್ಲಿ ಮಂಗಳೂರು ಮಂಗಳಾ ಮ್ಯೂಸಿಕ್ ಕ್ಲಬ್ ಹಾಗೂ ಕನ್ನಡ ಹಾಗೂ ಸಂಸ್ಕ್ರತಿ ಇಲಾಖೆಯ ಸಹಯೋಗದೊಂದಿಗೆ ಯುವವಾಹಿನಿ […]
Read More
06-09-2017, 2:00 PM
ಶಿಕ್ಷಣದ ಮೂಲಕ ಸಮಾನತೆ ಸಾರಿದ ಗುರುವರ್ಯರ ಸಂದೇಶ ಇಂದು ಪ್ರಸ್ತುತವಾಗಿದೆ. ಅವರ ಸಂದೇಶವನ್ನು ನಮ್ಮ ಜೀವನದಲ್ಲಿ ನಾವು ಅಳವಡಿಸಿಕೊಳ್ಳಬೇಕಾಗಿದೆ ಎಂದು ಬಂಟ್ವಾಳ ನ್ಯೂಸ್ ಸಂಪಾದಕ ಹರೀಶ್ ಮಾಂಬಾಡಿ ತಿಳಿಸಿದರು.ಅವರು ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆಶ್ರಯದಲ್ಲಿ ದಿನಾಂಕ 06.09.2017 ನೇ ಬುಧವಾರದಂದು ಬಿ.ಸಿ.ರೋಡಿನ ಸಮಾಜ ಕಲ್ಯಾಣ ಇಲಾಖಾ ವಸತಿ ಶಾಲೆಯಲ್ಲಿ ಬ್ರಹ್ಮಶ್ರೀ ನಾರಾಯಣಗುರುವರ್ಯರ 163 ನೇ ಜನ್ಮ ದಿನಾಚರಣೆಯನ್ನು ದೀಪ ಬೆಳಗುವುದರ ಮೂಲಕ ಸಮಾರಂಭ ಉದ್ಘಾಟಿಸಿ ಮಾತನಾಡಿದರು.ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಅಧ್ಯಕ್ಷರಾದ […]
Read More
06-09-2017, 1:48 PM
ಕರ್ನಾಟಕ ಸರಕಾರ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ , ಯುವವಾಹಿನಿ (ರಿ) ಸುಳ್ಯ ಘಟಕ,ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿ ಬಿಲ್ಲವ ಸಂಘ (ರಿ) ಸುಳ್ಯ ,ಬಿಲ್ಲವ ಮಹಿಳಾ ಘಟಕ ಸುಳ್ಯ ಇದರ ಜಂಟಿ ಸಾರಥ್ಯದಲ್ಲಿ ಬ್ರಹ್ಮ ಶ್ರೀ ನಾರಾಯಣ ಗುರು ಸ್ವಾಮಿಯವರ 163ನೇ ಜಯಂತಿಯನ್ನು 6-9-2017 ನೇ ಬುಧವಾರ ಬೆಳಿಗ್ಗೆ , ಸುಳ್ಯ ತಾಲೂಕು ಪಂಚಾಯತ್ ಸಂಭಾಗಣ ,ಜೂನಿಯರ್ ಕಾಲೇಜು ರಸ್ತೆ ಇಲ್ಲಿ ಆಚರಿಸಲಾಯಿತು . ಸುಳ್ಯ ತಾಲೂಕು ಪಂಚಾಯತ್ ಅಧ್ಯಕ್ಷ ಚನಿಯ ಕಲ್ತಡ್ಕ ದೀಪ […]
Read More