ಮಾಣಿ : “ಮನುಷ್ಯನ ಬದುಕನ್ನು ಪ್ರಕೃತಿಯೇ ರೂಪಿಸುತ್ತದೆ.ಆದರೆ ಇಂದು ನಾವು ವಿಕೃತಿಯೆಡೆಗೆ ಸಾಗಿ ಪ್ರಕೃತಿ ರೂಪಿತ ಸಹಜ ಬದುಕನ್ನು ಅದಃ ಪತನಗೊಳಿಸುತ್ತಿದ್ದೇವೆ.ನಮ್ಮಲ್ಲಿ ಇಂದು ಮಣ್ಣನ್ನು ಮಣ್ಣಾಗಿ ನೋಡುವ ದೃಷ್ಟಿ ಇಲ್ಲದಾಗಿದೆ.ಆದರಲ್ಲಿಯೂ ದುರಾಸೆಯ ಪ್ರತಿರೂಪವನ್ನು ರೂಪಿಸುತ್ತಿದ್ದೇವೆ.
ಬದುಕಿನ ಪ್ರಕ್ರಿಯೆಯಲ್ಲಿ ಪ್ರಕೃತಿಯು ರೂಪಿಸಿರುವ ವಿವಿಧ ಕಾಲಮಾನಗಳ ಅರಿವು ನಮ್ಮಲ್ಲಿ ಅಗತ್ಯವಾಗಿರಬೇಕು ಎಂದು ತುಳು ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಸಾಹಿತಿ ಅಧ್ಯಾಪಕ ರಮೇಶ್ ಉಳಯ ನುಡಿದರು.ಅವರು ಯುವವಾಹಿನಿ (ರಿ.)ಮಾಣಿ ಘಟಕದ ವತಿಯಿಂದ ದಿನಾಂಕ:28-07-19ರ ಆದಿತ್ಯವಾರದಂದು ಮಾಣಿ ನಾರಾಯಣ ಗುರು ಸಭಾ ಭವನದಲ್ಲಿ ನಡೆದ “ಆಟಿಡೊಂಜಿ ದಿನ” ಕಾರ್ಯಕ್ರಮದಲ್ಲಿ ಆಟಿದ ಮದಿಪು ನೀಡಿ ಮಾತನಾಡಿದರು.ಮನುಷ್ಯ ತನ್ನ ಬದುಕಿನಲ್ಲಿ ಆನಂದ ಪಡೆಯುವುದಕ್ಕಿಂತ ಮುಖ್ಯವಾಗಿ ಸುಖದ ಬೆನ್ನು ಹತ್ತಿ ಹೋಗಿರುವುದರಿಂದ ಸಂಸ್ಕೃತಿಯು ಮರೆತು ವಿಕೃತಿ ವಿಜೃಂಭಿಸುತ್ತದೆ” ಎಂದು ನುಡಿದರು.
ಸಂಪೂರ್ಣವಾಗಿ ತುಳುನಾಡಿನ ಪರಿಸರದ ಪುರಾತನ ಮನೆಯ ಸನ್ನಿವೇಶವನ್ನು ಪ್ರತಿಬಿಂಬಿಸಿದ ವೇದಿಕೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ತುಳು ಸಂಸ್ಕೃತಿಯ ಪ್ರಕಾರ ಕಾರ್ಯಕ್ರಮದ ಮೊದಲು ಗಣಪತಿ ಇಡುವ ಸಂಕೇತದ ಮೂಲಕ ಕಾರ್ಯಕ್ರಮಕ್ಕೆ ಮಾಣಿ ನಾರಾಯಣ ಗುರು ಸೇವಾ ಸಂಘದ ಗೌರವಾಧ್ಯಕ್ಷ ಈಶ್ವರ ಪೂಜಾರಿ ಕಡೇಶಿವಾಲಯ ಶುಭ ಚಾಲನೆ ನೀಡಿದರು.ನಂತರ ವೇದಿಕೆಗೆ ಆಗಮಿಸಿದ ಆಟಿಕಳೆಂಜನಿಗೆ ಅಕ್ಕಿ ಕಾಣಿಕೆ ನೀಡಲಾಯಿತು.ತುಳುನಾಡಿನ ವಿಶಿಷ್ಟ ಖಾದ್ಯಗಳನ್ನು ಸದಸ್ಯರು ಮನೆಯಲ್ಲಿ ತಯಾರಿಸಿ ತಂದಿದ್ದರು. ವಿಶೇಷವಾಗಿ “ಡೆಂಜಿ ಸುಕ್ಕ,ನರ್ತೆ ಸಾರು,ಉಪ್ಪಡ್ ಪಚ್ಚಿಲ್,ತೇವು ಕಾರ್ ಗಸಿ,ಮೆತ್ತೆಗಂಜಿ,ಪೆಲಕಾಯಿದ ಪಾಯಿಸ ಹಾಗೂ ಒಟ್ಟು 30ಕ್ಕೂ ಹೆಚ್ಚಿನ ಪದಾರ್ಥಗಳು ಕೂಟದ ಮೆರುಗು ಹೆಚ್ಚಿಸಿದವು.ಹರೀಶ್ ಪೂಜಾರಿ ಬಾಕಿಲ ಅಧ್ಯಕ್ಷ ಸ್ಥಾನ ವಹಿಸಿಕೊಂಡಿದ್ದರು. ವೇದಿಕೆಯಲ್ಲಿ ಕೇಂದ್ರ ಸಮಿತಿಯ ಉಪಾಧ್ಯಕ್ಷರಾದ ನರೇಶ್ ಸಸಿಹಿತ್ಲು,ಮಾಣಿ ಬಿಲ್ಲವ ಸಂಘದ ಅಧ್ಯಕ್ಷರಾದ ನಾರಾಯಣ ಸಾಲ್ಯನ್,ನಿವೃತ್ತ ಕ.ರಾ.ರ.ಸಾ.ನಿ TC ನಾರಾಯಣ ಪೂಜಾರಿ ಮರುವ,ಕೇಂದ್ರ ಸಮಿತಿ ಮಾಜಿ ಅಧ್ಯಕ್ಷರು ಮಾಣಿ ಘಟಕ ಸಲಹೆಗಾರಾದ ರವಿಚಂದ್ರ ಪಣಂಬೂರು, ಕಾರ್ಯಕ್ರಮದ ಸಂಚಾಲಕರು ಪ್ರವೀಣ್ ಕೋಟ್ಯಾನ್ ಉಪಸ್ಥಿತರಿದ್ದರು.ಕಾರ್ಯದರ್ಶಿ ಸುಜಿತ್ ಅಂಚನ್ ಸ್ವಾಗತಿಸಿದರು, ಉಪಾಧ್ಯಕ್ಷರಾದ ರಮೇಶ್ ಮುಜಲ ವಂದಿಸಿದರು ತೃಪ್ತಿ ಮಿತ್ತೂರು ಮತ್ತು ದೀಪಕ್ ಪೆರಾಜೆ ಕಾರ್ಯಕ್ರಮ ನಿರೂಪಿಸಿದರು.