ಶಕ್ತಿನಗರ : ಯುವವಾಹಿನಿ ಶಕ್ತಿನಗರ ಘಟಕದ ವತಿಯಿಂದ ದಿನಾಂಕ 28-7-2019 ರಂದು ಕುವೆಂಪು ಮಾದರಿ ಹಿರಿಯ ಪ್ರಾಥಮಿಕ ಶಾಲೆ ನಾಲ್ಯಪದವು ಇದರ ಸಭಾಂಗಣದಲ್ಲಿ ಆಟಿಡೊಂಜಿ ದಿನ ಹಳೆಯ ನೆನಪುಗಳ ದಿನಗಳನ್ನು ಸರಮಾಲೆಯನ್ನು ಹಾಗೂ ಹಳೆ ಬೇರು ಹೊಸ ಚಿಗುರು ಎಂಬ ಆಟಿದ ಸುಂದರವಾದ ಕಾರ್ಯಕ್ರಮವನ್ನು ಆಯೋಜಿಸಲಾಯಿತು
ಸಭಾಧ್ಯಕ್ಷತೆಯನ್ನು ಘಟಕದ ಅಧ್ಯಕ್ಷೆಯಾದ ಭಾರತಿ ಜಿ. ಅಮಿನ್ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಕಲಾವತಿ ಜಯಂತ್ ನಡುಬೈಲು ವಹಿಸಿದ್ದರು. ಉದ್ಘಾಟನೆಯು ವಿನೂತನವಾಗಿ ನಾಟಿ ಮಾಡುವ ಮೂಲಕ ನಡೆಯಿತು.ಮುಖ್ಯ ಅತಿಥಿಗಳಾಗಿ ಡಾ. ಗಣೇಶ್ ಸಂಕಮಾರ್ ಅವರು “ಆಟಿದ ಮದಿಪು” ಎಂಬ ಶೀರ್ಷಿಕೆಯಲ್ಲಿ ಬಹಳ ಸೊಗಸಾಗಿ ವಿವರಿಸಿದರು. ವೇದಿಕೆಯಲ್ಲಿ ಕಿಶೋರ್ ಜೆ. ಬಿಜೈ, ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರಾದ ಸಾಧು ಪೂಜಾರಿ, ಘಟಕದ ನಿಕಟಪೂರ್ವ ಅಧ್ಯಕ್ಷರಾದ ಶ್ರೀನಿವಾಸ್ ಪೂಜಾರಿ ಮತ್ತು ಕಾರ್ಯದರ್ಶಿಯಾದ ಜಯರಾಮ ಪೂಜಾರಿ ಬಾಳಿಲ ಇವರುಗಳು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಹಿರಿಯರಾದ ಶ್ರೀಮತಿ ಕಮಲ ಬೈತುರ್ಲಿ, ಶ್ರೀ ಸದಾಶಿವ ಪೂಜಾರಿ, ಶ್ರೀಮತಿ ವೇದಾವತಿ ಹಾಗೂ ಶ್ರೀಮತಿ ಇಂದಿರಾ ಅವರನ್ನು ಸನ್ಮಾನಿಸಲಾಯಿತು.
ಯುವವಾಹಿನಿ ಘಟಕದ ಶಾಲಾ ಮಕ್ಕಳಿಗೆ ಪುಸ್ತಕ ವಿತರಿಸಲಾಯಿತು. ಹಾಗೂ 25 ಬಗೆಯ ತಿಂಡಿ ತಿನಿಸುಗಳನ್ನು ಘಟಕದ ಸದಸ್ಯರೇ ಮಾಡಿ ತರಲಾಗಿದೆ. ಊಟೋಪಚಾರ ಗಳನ್ನು ಮನೆಯಲ್ಲಿ ಮಾಡಿ ತಂದಂತಹ ಎಲ್ಲರನ್ನು ಹೂ ಕೊಟ್ಟು ಅಭಿನಂದಿಸಲಾಗಿದೆ.
ಶ್ರೀನಿವಾಸ ಪೂಜಾರಿಯವರ ಮುಂದಾಳತ್ವದಲ್ಲಿ ನಾಲ್ಯಪದವು ಶಾಲೆಯ ಬಚ್ಚಲು ಮನೆಗೆ ಮೇಲ್ಛಾವಣಿ ಮತ್ತು ಹೊರಗೆ ಇಂಟರ್ಲಾಕ್ ನ್ನು ಸುಮಾರು 2.5 ಲಕ್ಷ ರೂ. ವೆಚ್ಚದಲ್ಲಿ ನಿರ್ಮಿಸಿ ಶ್ರೀಮತಿ ಕಲಾವತಿ ಗಣೇಶ್ ಸಂಕಮಾರ್ ಅವರೊಂದಿಗೆ ಉದ್ಘಾಟಿಸಿ ಶಾಲೆಗೆ ಅರ್ಪಿಸಲಾಯಿತು.ಕೊನೆಗೆ ವಂದನಾರ್ಪಣೆಯನ್ನು ಕಾರ್ಯದರ್ಶಿಯಾದ ಜಯರಾಮ ಪೂಜಾರಿ ಮಾಡಿದರು
Good programme. Keep it up