ಉಪ್ಪಿನಂಗಡಿ : ಜನಸೇವೆಯೇ ಭಗವಂತನ ಸೇವೆ ಎಂಬುದನ್ನು ಮನಗಂಡು ಯುವವಾಹಿನಿ ಉಪ್ಪಿನಂಗಡಿ ಘಟಕದ ವತಿಯಿಂದ ಕಷ್ಟದಲ್ಲಿರುವವರಿಗೆ ಸಹಾಯವಾಗಲಿ ಎಂಬ ಉದ್ದೇಶದಿಂದ ನರ ದೌರ್ಬಲ್ಯ ಸಮಸ್ಯೆಯಿಂದ ಬಳಲುತ್ತಿರುವ ಬೆಳ್ತಂಗಡಿ ತಾಲೂಕಿನ ಮುಗೇರಡ್ಕ ನಿವಾಸಿ, ಘಟಕದ ವತಿಯಿಂದ ಕುದ್ರೋಳಿ ದಸರಾ ಕಾರ್ಯಕ್ರಮದಲ್ಲಿ ಪ್ರತಿ ವರ್ಷ ಸ್ವಯಂ ಸೇವಕರಾಗಿ ಸೇವೆ ಸಲ್ಲಿಸುತ್ತಿದ್ದ ಉಮೇಶ್ ಪೂಜಾರಿಯವರಿಗೆ ರೂ. 10,000 ವನ್ನು ದಿನಾಂಕ 28.07.19 ರ ಅವರ ಮನೆಗೆ ತೆರಳಿ ಹಸ್ತಾಂತರಿಸಲಾಯಿತು. ಈ ಸಂದರ್ಭದಲ್ಲಿ ಘಟಕದ ಗೌರವ ಸಲಹೆಗಾರರಾದ ವರದರಾಜ್.ಎಂ, ಡಾ.ಸದಾನಂದ ಕುಂದರ್, ಅಧ್ಯಕ್ಷರಾದ ಡಾ.ಆಶಿತ್ ಎಂ.ವಿ, ಕಾರ್ಯದರ್ಶಿ ಪುನೀತ್ ದಾಸರಮೂಲೆ, ಕೋಶಾಧಿಕಾರಿ ಮನೋಜ್. ಎನ್ ಸಾಲ್ಯಾನ್, ಮಾಜಿ ಅಧ್ಯಕ್ಷರಾದ ಜನಾರ್ಧನ ನೂಜ, ಸದಸ್ಯರಾದ ಬೊಮ್ಮಯ್ಯ ಬಂಗೇರ, ಅಂಕಿತ್ ಎಂ.ಜೆ, ಉದಯ್ ಬಿಳಿಯೂರು ಉಪಸ್ಥಿತರಿದ್ದರು.