ಬಜಪೆ : ಯುವವಾಹಿನಿ (ರಿ ) ಬಜಪೆ ಘಟಕ ಇವರ ಅತಿಥ್ಯದಲ್ಲಿ ಮತ್ತು ಬ್ರಹ್ಮಶ್ರೀ ನಾರಾಯಣ ಸೇವಾ ಸಂಘ ಬಜಪೆ -ಕರಂಬಾರು ಇವರ ಆಶ್ರಯದಲ್ಲಿ , ಆಟಿದ ನೆಂಪು -2019 ಹಾಗೂ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ,ವಿದ್ಯಾನಿಧಿ ವಿತರಣಾ ಕಾರ್ಯಾಕ್ರಮವು ನಾರಾಯಣಗುರು ಸಮುದಾಯ ಭವನ ಬಜಪೆ ಇಲ್ಲಿ ನಡೆಯಿತು .ಈ ಕಾರ್ಯಕ್ರಮವನ್ನು ಮರದ ಸೆಮಿಗೆ ಮಣೆಯಲ್ಲಿ ಸೆಮಿಗೆ ಒತ್ತುವ ಮೂಲಕ ಬಿರುವೆರ್ ಕುಡ್ಲ ಬಜಪೆ ವಲಯದ ಉಪಾದ್ಯಕ್ಷರು ಹಾಗೂ ವೃತ್ತಿಯಲ್ಲಿ ಯುವ ವಕೀಲರಾದ ಚಂದ್ರಶೇಕರ್ ಎಂ .ಅಮಿನ್ ಚಾಲನೆ ನೀಡಿ ಪ್ರತಿಬಾ ಪುರಸ್ಕಾರ ಹಾಗೂ ವಿದ್ಯಾನಿಧಿ ಪಡೆದ ವಿದ್ಯಾರ್ಥಿಗಳಿಗೆ ಹಿಂದಿನ ದಿನಗಳಲ್ಲಿ ವಿದ್ಯಾಭ್ಯಾಸ ಪಡೆಯಲು ಪಟ್ಟ ಕಷ್ಟಕರದ ದಿನಗಳು ಹಾಗೂ ಈಗಿನ ದಿನಗಳಲ್ಲಿ ವಿದ್ಯಾಬ್ಯಾಸ ಮುಂದುವರಿದ ರೀತಿ ,ಇದರ ಬಗ್ಗೆ ವಿದ್ಯಾರ್ಥಿಗಳಿಗೆ ಮನದಟ್ಟುವಂತೆ ,ಹಾಗೂ ವಿದ್ಯಾರ್ಥಿಗಳ ಮುಂದಿನ ಭವಿಶ್ಯ ಉಜ್ವಲವಾಗುವಂತೆ ಉದ್ಘಾಟಣಾ ಭಾಷಣದಲ್ಲಿ ಹೇಳಿದರು .
ಅತಿಥಿಗಳಾಗಿ ಆಗಮಿಸಿದ ಮಾಧವ ಅಮಿನ್ ದೊಡ್ಡಿಕಟ್ಟ ಬಜಪೆ , ಸಂಜೀವಿನಿ ಆರ್ .ಕೆಂಜಾರ್ ಇವರು ಹಿಂದಿನ ಕಾಲದ ಆಟಿಯ ಕಷ್ಟಕರದ ದಿನಗಳನ್ನು ನೆನೆಪಿಸಿದರು .ಬಜಪೆ ಘಟಕದ ಸಲಹೆಗಾರರಾದ ಪರಮೆಶ್ವರ ಪೂಜಾರಿ ಬಜಪೆ ಘಟಕ ನಡೆಸಿದ ಉತ್ತಮ ಕಾರ್ಯಕ್ರಮಗಳನ್ನು ಶ್ಲಾಘಿಸಿದರು .ಸಭೆಯ ಅಧ್ಯಕ್ಷತೆ ವಹಿಸಿಕೊಂಡ ಬಜಪೆ ಯುವವಹಿನಿ ಅಧ್ಯಕ್ಷರಾದ ಸಂಧ್ಯಾ ಕುಳಾಯಿ ಮಾತನಾಡಿ ಈ ಅರ್ಥಪೂರ್ಣವಾದ ಕಾರ್ಯಕ್ರಮಕ್ಕೆ ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು. ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ಜಯಂತ್ ನಡುಬೈಲು ಇವರನ್ನು ಎಲ್ಲಾ ಸದಸ್ಯರು ಸೇರಿ ಸನ್ಮಾನಿಸಲಾಯಿತು .ಕಾಯ್ರಕ್ರಮದ ಸಂಚಾಲಕರಾದ ಮಾಧವ ಸಾಲ್ಯಾನ್ ವೇದಿಕೆಯಲ್ಲಿ ಉಪಸ್ತಿತರಿದ್ದರು .
ಅಶೊಕ್ ಕುಮಾರ್ ಮುರನಗರ ಕಾರ್ಯಕ್ರಮ ನಿರೂಪಿಸಿದರು , ಗ್ರೀಷ್ಮಾ ಎಕ್ಕಾರು ಪ್ರಾರ್ಥಿಸಿ , ರವೀಂದ್ರಪೂಜಾರಿ ಸ್ವಾಗತಿಸಿ ,ಪ್ರತಿಭಾ ಪುರಸ್ಕರ ವಿದ್ಯಾರ್ಥಿಗಳ ಹೆಸರನ್ನು ಯೊಗೀಶ್ ಪೂಜಾರಿ ಕರಂಬಾರು ,ವಿದ್ಯಾನಿಧಿ ವಿದ್ಯಾರ್ಥಿಗಳ ಹೆಸರನ್ನು ವಿದ್ಯಾನಿಧಿ ನಿರ್ದೆಶಕ ಚಿತ್ತರಂಜನ್ ಸಾಲ್ಯಾನ್ ಸಭೆಗೆ ವಾಚಿಸಿದರು .ಕೊನೆಯಲ್ಲಿ ಕಾರ್ಯಾದರ್ಶಿ ರೋಹಿತ್ ಪೂಜಾರಿ ಧನ್ಯವಾದಗೈದರು .
ಸಭಾಕಾರ್ಯಕ್ರಮದ ನಂತರ ಯುವವಾಹಿನಿ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು .ಚಂದ್ರಶೇಖರ ಪೂಜಾರಿ ನಿರೂಪಿಸಿದರು .ಸದಸ್ಯರು ಮನೆಯಲ್ಲಿ ಮಾಡಿಕೊಂಡು ಬಂದ ವಿವಿದ ರೀತಿಯ ಆಟಿ ತಿಂಗಳ ತಿಂಡಿ ತಿನಿಸುಗಳನ್ನು ಸಭೆಗೆ ಬಡಿಸಲಾಯಿತು .