ಮಂಗಳೂರು : ದಿನಾಂಕ 28.07.2019 ರಂದು ದ.ಕ.ಜಿ.ಪಂ. ಮಾದರಿ ಹಿರಿಯ ಪ್ರಾಥಮಿಕ ಶಾಲೆ ಕೋಡಿಕಲ್ ನಲ್ಲಿ ಉಚಿತ ಬ್ರಹತ್ ವೈದ್ಯಕೀಯ ಶಿಬಿರ ಹಾಗೂ ಕ್ಯಾನ್ಸರ್ ಅರಿವು ,ಮಾಹಿತಿ ಮತ್ತು ತಪಾಸನಾ ಶಿಬಿರ ನಡೆಯಿತು. ಈ ಕಾರ್ಯಕ್ರಮವೂ ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಹಾಗೂ ಸ್ವಾತಿ ಹೋಮಿಯೋಪತಿ ಕ್ಲಿನಿಕ್ ಇದರ ಸಹಯೋಗದಲ್ಲಿ ನಡೆದಿದ್ದು, ಓಂಕಾಲಜಿ ವಿಭಾಗ, ಯನೊಪೋಯ ಪರಿಗಣಿಸಲ್ಪಟ್ಟ ವಿಶ್ವ ವಿದ್ಯಾಲಯ ದೇರಳಕಟ್ಟೆ ಹಾಗೂ ಗ್ರಾಮೀಣ ಆರೋಗ್ಯ ರಕ್ಷಣೆ ಮತ್ತು ಅಭಿವೃದ್ಧಿ ಕೇಂದ್ರ, ಸಮುದಾಯ ದಂತ ವಿಭಾಗ, ಯನೊಪೋಯ ದಂತ ಕಾಲೇಜು ಮತ್ತು ಆಸ್ಪತ್ರೆ ದೇರಳಕಟ್ಟೆ ಇವರ ಸಂಯುಕ್ತ ಆಶ್ರಯದಲ್ಲಿ ನಡೆದಿದೆ. ಲಯನ್ಸ್ ಕ್ಲಬ್ ಮಂಗಳೂರು ಕುಡ್ಲ ಅಧ್ಯಕ್ಷರು ಲ! ಚಂದ್ರಹಾಸ್ ರೈ ಯವರು ಕಾರ್ಯಕ್ರಮ ಉದ್ಘಾಟಿಸಿದ್ದು, ಸ್ವಾತಿ ಹೋಮಿಯೋಪತಿ ಕ್ಲಿನಿಕ್ ಡಾ.ಶಿವಪ್ರಸಾದ್ ಕೆ. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮಹಿಳಾ ಘಟಕದ ಅಧ್ಯಕ್ಷರಾದ ಉಮಾಶ್ರೀಕಾಂತ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು ಯನೊಪೋಯ ಆಸ್ಪತ್ರೆಯ ಕ್ಯಾನ್ಸರ್ ತಜ್ಞರು ಸೇರಿದಂತೆ, ಪ್ರಸಿದ್ಧ ಡಾಕ್ಟರುಗಳು ಭಾಗವಹಿಸಿದ್ದು, ಸುಮಾರು 40 ವಿವಿಧ ವಿಭಾಗಗಳ ಡಾಕ್ಟರುಗಳು ಶಿಬಿರವನ್ನು ನಡೆಸಿಕೊಟ್ಟರು. ಕ್ಯಾನ್ಸರ್ ಬಗ್ಗೆ ಮಾಹಿತಿ ನೀಡಲಾಯಿತು. ಮಂಗಳೂರು ಮಹಿಳಾ ಘಟಕದ ಅಧ್ಯಕ್ಷರಾದ ಉಮಾಶ್ರೀಕಾಂತ್ ಸ್ವಾಗತಿಸಿದರು ಮತ್ತು ಮಂಗಳೂರು ಘಟಕದ ಉಪಾಧ್ಯಕ್ಷರಾದ ಚಂದ್ರ ಶೇಖರ್ ಕರ್ಕೇರ ರವರು ಧನ್ಯವಾದ ನೀಡಿದರು. ಕಾರ್ಯಕ್ರಮವನ್ನು ಮಂಗಳೂರು ಘಟಕದ ಮಾಜಿ ಅಧ್ಯಕ್ಷರಾದ ರಾಕೇಶ್ ಕುಮಾರ್ ರವರು ನಿರೂಪಿಸಿದರು. ಮಹಿಳಾ ಘಟಕದ ಸಲಹೆಗಾರರು ಜಿತೇಂದ್ರ ಸುವರ್ಣ, ಮಂಗಳೂರು ಘಟಕದ ಕಾರ್ಯದರ್ಶಿ ಗಣೇಶ್ ವಿ.ಕೋಡಿಕಲ್, ನೈನ ವಿಶ್ವನಾಥ್, ಘಟಕದ ಎಲ್ಲಾ ಮಾಜಿ ಅಧ್ಯಕ್ಷರುಗಳು, ಸರ್ವ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸುಮಾರು 120ಕ್ಕೂ ಅಧಿಕ ಜನರು ಈ ಶಿಬಿರದ ಪ್ರಯೋಜನ ಪಡೆದರು. ಆವಶ್ಯಕವಿರುವ ಶಿಬಿರಾರ್ಥಿಗಳಿಗೆ ಉಚಿತವಾಗಿ ಕನ್ನಡಕವನ್ನೂ ನೀಡಲಾಯಿತು.