ಕೊಲ್ಯ : ಯುವವಾಹಿನಿ (ರಿ) ಕೊಲ್ಯ ಘಟಕದ ವತಿಯಿಂದ ಘಟಕದ ನಾರಾಯಣ ಗುರು ತತ್ವ ಪ್ರಚಾರದ ನಿರ್ದೇಶಕರಾದ ಮೋಹನ್ ಮಾಡೂರ್ ರವರು ಕಳೆದ 7 ತಿಂಗಳಿನ ಹಿಂದೆ ಬೈಕ್ ಅಪಘಾತಕ್ಕೊಳಗಾದ ಪರಿಣಾಮವಾಗಿ ತನ್ನ ಒಂದು ಕಾಲು ಶಸ್ತ್ರಚಿಕಿತ್ಸೆ ಗೊಳಗಾಗಿ ತನ್ನ ಕುಟುಂಬ ನಿರ್ವಹಣೆಯನ್ನು ಮಾಡಲು ತಾನು ಮಾಡುತ್ತಿರುವ ವೃತ್ತಿಯನ್ನು ಮುಂದುವರಿಸಲು ಸಾಧ್ಯವಾಗದೆ ಬೇರಾವ ಸಂಪಾದನೆ ಕೂಡಾ ಇವರಿಗಿಲ್ಲ.ಇವರ ಪತ್ನಿ ವೀಣಾ ರವರು ಕೂಡಾ ಘಟಕದ ಸದಸ್ಯೆಯಾಗಿದ್ದು ಇವರಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇವರ ಮಕ್ಕಳ ವಿದ್ಯಾಭ್ಯಾಸದ ವೆಚ್ಚವನ್ನು ಭರಿಸುವ ಉದ್ದೇಶದಿಂದ ಮೋಹನ್ ವೀಣಾ ದಂಪತಿಗಳ ಸಂಸಾರಕ್ಕೆ ನಾವು ಕೂಡು ಕುಟುಂಬವಿದ್ದಂತಿರುವ ನಮ್ಮ ಹೆಮ್ಮೆಯ ಸಂಸ್ಥೆ ಯುವವಾಹಿನಿ ಯ ಮೂಲಕ ನಮ್ಮ ಕುಟುಂಬ ಸದಸ್ಯರ ಕಷ್ಟದಲ್ಲಿ ನಾವು ಭಾಗಿಯಾಗಿ ಅವರೊಂದಿಗೆ ನಾವಿದ್ದೇವೆ ಅನ್ನುವಂತಹ ಮನೋಭಾವನೆಯಿಂದ ನಾವೆಲ್ಲ ಸದಸ್ಯರು ಸ್ಪಂದಿಸಬೇಕಾದ ಕರ್ತವ್ಯವೆಂಬಂತೆ ದಿನಾಂಕ 28/07/2019 ರಂದು ಸದಸ್ಯ ದಂಪತಿಗಳ ನಿವಾಸಕ್ಕೆ ತೆರಳಿ ಘಟಕದಿಂದ ಹಾಗೂ ವಿಶ್ವ ಬಿಲ್ಲವರ ಸೇವಾ ಚಾವಡಿ(ರಿ) ಯ ವತಿಯಿಂದ ಸಂಗ್ರಹವಾದ ಒಟ್ಟು ಮೊತ್ತ ರೂ 35,000.00/-ನ್ನು ದಂಪತಿಗಳಿಗೆ ಹಸ್ತಾಂತರಿಸಲಾಯಿತು.
ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ಆನಂದ ಮಲಯಾಳಕೋಡಿ, ವಿಶ್ವ ಬಿಲ್ಲವರ ಸೇವಾ ಚಾವಡಿಯ ಸದಸ್ಯರೂ ಆದ ಘಟಕದ ನಿಕಟಪೂರ್ವ ಅಧ್ಯಕ್ಷರಾದ ಕುಸುಮಾಕರ ಕುಂಪಲ,ಪ್ರಧಾನ ಕಾರ್ಯದರ್ಶಿ ಆನಂದ ಅಮೀನ್ ಸೋಮೇಶ್ವರ್, ಘಟಕದ ಸಮಾಜ ಸೇವಾ ನಿರ್ದೇಶಕರಾದ ಅನೀಶ್ ಕಿನ್ಯ , ಉಪಾಧ್ಯಕ್ಷರುಗಳಾದ ಲತೀಶ್ ಪಾಪುದಡಿ,ಲತೀಶ್ ಸಂಕೊಳಿಗೆ ನಿರ್ದೇಶಕರುಗಳಾದ ಸುಂದರ್ ಸುವರ್ಣ,ದೀಪಕ್.ಎಸ್.ಕೋಟ್ಯಾನ್, ನವೀನ್ ಕೊಂಡಾಣ, ಗಣೇಶ್ ಕಿನ್ಯ, ಜಗಜೀವನ್ ಕೊಲ್ಯ,ರಕ್ಷತ್ ಕಿನ್ಯ ರವರು ಉಪಸ್ಥಿತರಿದ್ದರು.