28-10-2019, 2:26 AM
ಬೆಳಕಿನ ಹಬ್ಬ ದೀಪಾವಳಿಯನ್ನು ಯುವವಾಹಿನಿ ಕಾಪು ಘಟಕದ ನೇತೃತ್ವದಲ್ಲಿ ಕಾಪು ಕೊರಗಜ್ಜ ದೈವಸ್ಥಾನದ ಬಳಿ ಕೊರಗರ ಕಾಲೋನಿಯಲ್ಲಿ ಶುಕ್ರವಾರ ವಿಶಿಷ್ಟವಾಗಿ ಆಚರಿಸಲಾಯಿತು. ಮಹಿಳೆಯರಿಗೆ ಸೀರೆ, ಗಂಡಸರಿಗೆ ಶಾಲು, ಲುಂಗಿ ಡ್ರೆಸ್ ಹಾಗೂ ಸಿಹಿ ತಿಂಡಿ ವಿತರಣೆ ಮಾಡಲಾಯಿತು. ಕಾಲೋನಿಯ ಕುಟುಂಬಗಳ ಸದಸ್ಯರು ಈ ವಿಶಿಷ್ಟ ದೀಪಾವಳಿಯಲ್ಲಿ ಪಾಲ್ಗೊಂಡು ಸಂಭ್ರಮಪಟ್ಟರು. ಮಾಜಿ ಸಚಿವ ವಿನಯಕುಮಾರ್ ಸೊರಕೆ ಉದ್ಘಾಟಿಸಿ ಮಾತನಾಡಿ, ಹಿಂದೂಗಳ ದೊಡ್ಡ ಹಬ್ಬ ಆಗಿರುವ ಬೆಳಕಿನ ಹಬ್ಬ ದೀಪಾವಳಿ ಹಬ್ಬದ ಆಚರಣೆಗೆ ಯಾವುದೇ ಜಾತಿ, ಮತಗಳ ಭೇದ ಭಾವ […]
Read More
28-10-2019, 2:22 AM
ಮನುಷ್ಯ ಬದುಕಲು ಆಹಾರ ಎಷ್ಟು ಮುಖ್ಯವೋ ವಾಸ ಮಾಡಲು ಮಮನೆಯೂ ಅಷ್ಟೇ ಮುಖ್ಯ. ಇದನ್ನರಿತ ಯುವವಾಹಿನಿ (ರಿ) ಕೂಳೂರು ಘಟಕವು ಅನಾರೋಗ್ಯರೂ, ಕಡುಬಡವರೂ ಆದ ಗುರುವಪ್ಪ ಪೂಜಾರಿ ಯವರ ಮನೆಯ ದುರಸ್ಥಿ ಕೆಲಸ ಮಾಡುವ ಯೋಜನೆ ಹಾಕಿಕೊಂಡಿತು. ಆ ಯೋಜನೆಯು ಪೂರ್ಣಗೊಂಡು, ದೀಪಾವಳಿಯ ಶುಭ ದಿನ ದಿನಾಂಕ 28.10.19 ರಂದು ಸಂಜೆ 6 ಗಂಟೆಗೆ ಸರಿಯಾಗಿ ದೀಪ ಬೆಳಗುವ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಯುವವಾಹಿನಿ ಕೂಳೂರು ಘಟಕದ ಅಧ್ಯಕ್ಷರಾದ ಭಾಸ್ಕರ್ ಕೋಟ್ಯಾನ್ ರವರು ವಹಿಸಿದ್ದರು. ಭಾವನಾತ್ಮಕ […]
Read More
24-10-2019, 2:19 AM
ದಿನಾಂಕ 24.10.19 ರಂದು ಸಂಜೆ 5.30 ಕ್ಕೆ ಸರಿಯಾಗಿ ಯುವವಾಹಿನಿ ಕೂಳೂರು ಘಟಕದ ವತಿಯಿಂದ ದೀಪಾವಳಿ ಪ್ರಯುಕ್ತ 5 ಕಡು ಬಡವ ಕುಟುಂಬಕ್ಕೆ ದೀಪಾವಳಿ ಆಚರಿಸಲು ಹಾಗೂ ಒಂದು ತಿಂಗಳಿಗೆ ಬೇಕಾದ ದಿನಸಿ ಸಾಮಗ್ರಿಗಳನ್ನು ವಿತರಿಸಲಾಯಿತು. ಮೊದಲಿಗೆ ಬ್ರಹ್ಮಶ್ರೀ ನಾರಾಯಣ ಗುರು ಮಂದಿರ ದಲ್ಲಿ ದೀಪ ಬೆಳಗುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು. ನಂತರ 20 ಜನ ಸದಸ್ಯರೊಂದಿಗೆ ಪದ್ಮನಾಭ ಕುಲಾಲ್, ದಿ. ಗೋಪಾಲ ಪೂಜಾರಿ, ಅಪ್ಪು ಆಚಾರಿ, ಗುರುವಪ್ಪ ಪೂಜಾರಿ ಒಟ್ಟು 5 ಮನೆಗಳಿಗೆ ವಿತರಿಸಲಾಯಿತು. […]
Read More
12-10-2019, 6:04 AM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ ಯುವ ಸ್ಪಂದನ ಸೇವಾ ಯೋಜನೆಯ 20 ನೇ ಸೇವೆಯನ್ನು ಆರ್ಥಿಕ ನೆರವಿಗಾಗಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ವಿಶ್ವನಾಥ ಪೂಜಾರಿ ವಿದ್ಯಾ ನಿವಾಸ್ ನಡಿಬೆಟ್ಟು ಮನೆ ಪುಚ್ಚೆಮೊಗರು ಇವರು ಮನವಿಯನ್ನು ಸಲ್ಲಿಸಿರುತ್ತಾರೆ ಈ ಮನವಿಯನ್ನು ಪರಿಶೀಲಿಸಲು ಇಂದು ಸಂಜೆ ಸಮಯ 6.30 ಕ್ಕೆ ಅವರ ಮನೆಗೆ ಭೇಟಿ ನೀಡಿ ಪರಿಶೀಲಿಸಲಾಯಿತು. ಇವರು ಕಡುಬಡತನದಲ್ಲಿದ್ದು ಇವರಿಗೆ ಹೆಂಡತಿ, ಮಗು ಹಾಗೂ ಹೆತ್ತವರಿಗೆ ಇವರೇ ಆಧಾರ ಸ್ತಂಭವಾಗಿದ್ದು ಇದೀಗ ಮನೆಯವರಿಗೆ ದಿಕ್ಕೇ ತೋಚದಂತಗಿದೆ.ತೀರಾ […]
Read More
10-10-2019, 5:59 AM
ಯುವವಾಹಿನಿ (ರಿ) ಮಂಗಳೂರು ಘಟಕ ವತಿಯಿಂದ ವಿಶ್ವ ವಿಖ್ಯಾತ ಮಂಗಳೂರು ದಸರಾ ಶೋಭಾಯಾತ್ರೆಯಲ್ಲಿ ಸತತ 8ನೇ ವರ್ಷದ ಶರಬತ್ ಸೇವೆಯು ದಿನಾಂಕ 08.10.2019ರಂದು ನಡೆಯಿತು. ಶರಬತ್ ಸೇವೆಯ ಉದ್ಘಾಟನೆಯನ್ನು ನಮಗೆ ಸ್ಥಳಾವಕಾಶ ಒದಗಿಸಿಕೊಟ್ಟ ಎಸ್ಎಲ್ ಶೇಟ್ ಡೈಮಂಡ್ಸ್ ಹೌಸ್ ನ ಮಾಲಕರಾದ ರವೀಂದ್ರ ಶೇಟ್ ರವರು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರಕ್ಕೆ ದೀಪ ಬೆಳಗಿಸುವುದರ ಮೂಲಕ ಉದ್ಘಾಟಿಸಿದರು. ಮಹಾಸಂತ ಬ್ರಹ್ಮಶ್ರೀ ನಾರಾಯಣ ಗುರುಗಳ ಸಿದ್ಧಾಂತಗಳನ್ನು ಪಾಲಿಸಿಕೊಂಡು ಅತ್ಯುತ್ತಮವಾದ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿರುವ ಹಾಗೂ ಸಮಾಜದಲ್ಲಿ ಉತ್ತಮವಾದ […]
Read More
06-10-2019, 4:22 PM
ಯುವವಾಹಿನಿ (ರಿ) ವೇಣೂರು ಘಟಕದ ವತಿಯಿಂದ ,ಸೇವಾಭಾರತಿ ಕನ್ಯಾಡಿಯವರ ಸಹಭಾಗಿತ್ವದಲ್ಲಿ ದಿನಾಂಕ 6/ 10 ಭಾನುವಾರ ಬಜಿರೆಯಲ್ಲಿ ಮಹಿಳೆಯರಿಗಾಗಿ ಒಂದು ತಿಂಗಳ ಉಚಿತ ಟೈಲರಿಂಗ್ ತರಭೇತಿ ಶಿಬಿರ ಉದ್ಘಾಟನೆಗೊಂಡಿತ್ತು.ಸೇವಾಭಾರತಿ ಕನ್ಯಾಡಿಯ ಮಾಜಿ ಅಧ್ಯಕ್ಷರಾದ ಕೃಷ್ಣಪ್ಪ ಗುಡಿಗಾರ್ ಉದ್ಘಾಟನೆ ಮಾಡಿದ ಕಾರ್ಯಕ್ರಮದಲ್ಲಿ ಅಧ್ಯಕ್ಷತೆಯನ್ನು ಯುವವಾಹಿನಿ (ರಿ) ವೇಣೂರು ಘಟಕದ ಅಧ್ಯಕ್ಷರಾದ ನವೀನ್ ಪಚ್ಚೇರಿ ವಹಿಸಿದ್ದರು ,ಕಾರ್ಯಕ್ರಮದ ವೇದಿಕೆಯಲ್ಲಿ ಸೇವಾಭಾರತಿಯ ಗ್ರಾಮಸಮಿತಿಯ ಅಧ್ಯಕ್ಷ ಹರೀಣ್ ಸುವರ್ಣ ಸೇರಿದಂತೆ ಯುವವಾಹಿನಿಯ ಪದಾಧಿಕಾರಿಗಳು ಉಪಸ್ಥಿತರಿದ್ದರು
Read More
02-10-2019, 8:38 AM
ದಿನಾಂಕ 2.10.19 ರಂದು ಯುವವಾಹಿನಿ ಕೂಳೂರು ಘಟಕದ ವತಿಯಿಂದ 150 ನೇ ಗಾಂಧಿ ಜಯಂತಿ ಪ್ರಯುಕ್ತ ಭಾರತಿ ಪದವಿಪೂರ್ವ ಕಾಲೇಜು, ನಂತೂರು ಇಲ್ಲಿ ಸ್ವಚ್ಛತಾ ಕಾರ್ಯಕ್ರಮ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ಭಾರತಿ ಸಮೂಹ ಸಂಸ್ಥೆಯ ಸೇವಾ ಸಮಿತಿಯ ಕಾರ್ಯದರ್ಶಿ ಕೃಷ್ಣ ನೀರಮೂಲೆ ವಹಿಸಿದ್ದರು. ಕಾರ್ಯಕ್ರಮದ ಉದ್ಘಾಟನೆಯನ್ನು ಯುವವಾಹಿನಿ (ರಿ) ಕೂಳೂರು ಘಟಕದ ಉಪಾಧ್ಯಕ್ಷರಾದ ಪವಿತ್ರ. ಯು. ಅಮೀನ್ ರವರು ದೀಪ ಬೆಳಗಿಸುವುದರ ಮೂಲಕ ಮಾಡಿದರು. ನಂತರ ಮಾತನಾಡಿದ ಇವರು ಸ್ವಚ್ಛತೆ ಎಂಬುದು ನಮ್ಮ ಮನೆಯಲ್ಲಿ ಪ್ರಾರಂಭವಾಗಿ […]
Read More
02-10-2019, 6:10 AM
ಯುವವಾಹಿ (ರಿ) ಕಟಪಾಡಿ ಘಟಕ ಸ್ಥಳೀಯ ಕಟಪಾಡಿ ಗ್ರಾಮ ಪಂಚಾಯತ್ ವಿವಿಧ ಸಂಘ ಸಂಸ್ಥೆಗಳ ಮುಖೇನ ಗಾಂಧಿ ಜಯಂತಿ ಪ್ರಯುಕ್ತ ಆಯೋಜಿಸಿದ ಸ್ವಚ್ಛತಾ ಕಾರ್ಯಕ್ರಮದಲ್ಲಿ ನಮ್ಮ ಯುವವಾಹಿನಿ ಘಟಕ (ಸಾರ್ವಜನಿಕ ಹಿಂದೂ ರುದ್ರಭೂಮಿ ಸರಕಾರಿ ಗುಡ್ಡೆ ) ಇಲ್ಲಿ ಒಂದು ದಿನದ ಸ್ವಚ್ಛತಾ ಕಾರ್ಯಕ್ರಮವನ್ನು ಹಮ್ಮಿಕೊಂಡಿತು ಸ್ಥಳೀಯ ಗ್ರಾಮಪಂಚಯತಿನ ಸದಸ್ಯರಾದ ಅಶೋಕ್ ರಾವ್ ,ಉದಯ ಶೆಟ್ಟಿ ಕನ್ಯಾನ ,ಸ್ಥಳೀಯರಾದ ಶೇಕರ್ ಶೆಟ್ಟಿ, ಸರ್ವಾಜನಿಕ ಗಣೇಶೋತ್ಸವ ಸಮಿತಿ ಸರಕಾರಿ ಗುಡ್ಡೆ ಇದರ ಅಧ್ಯಕ್ಷರಾದ ಕಿಶೋರ್ ಕುಮಾರ್ ಯುವವಾಹಿನಿ ಅಧ್ಯಕ್ಷರಾದ […]
Read More
15-09-2019, 4:36 PM
ಯುವವಾಹಿನಿ ರಿ. ಮೂಡಬಿದಿರೆ ಘಟಕದ ವತಿಯಿಂದ ಆರಂಭಿಸಲಾದ ಯುವ ಸ್ಪಂದನ ಸೇವಾ ಯೋಜನೆಯ 19ನೇ ಸೇವೆಯನ್ನು ದಿನಾಂಕ 15/09/2019ರಂದು ಕಡಂದಲೆ ಪಾಲಡ್ಕ ಪುಪಾಡಿ ಕಲ್ಲು ವಸಂತ ಸಲ್ಯಾನ್ ಇವರು ನಮ್ಮ ಘಟಕದ ಸಂಘಟನಾ ಕಾರ್ಯದರ್ಶಿ ಹಾಗೂ ಯುವ ಸ್ಪಂದನ ಸೇವಾ ಯೋಜನೆಯ ಸೇವಾ ದಾನಿಯಾಗಿದ್ದಾರೆ ಇವರು ತೀವ್ರ ಬೆನ್ನು ಮೂಳೆಯ ನೋವಿನಿಂದ ಸದ್ಯದ ಮಟ್ಟಿಗೆ ಯಾವುದೇ ಕೆಲಸವನ್ನು ಮಾಡಲು ಆಗದ ಪರಿಸ್ಥಿತಿಯಲ್ಲಿ ಇದ್ದರೆ ಇವರು ಯುವವಾಹಿನಿ ರಿ. ಮೂಡಬಿದಿರೆ ಘಟಕಕ್ಕೆ ಆರ್ಥಿಕ ನೆರವಿಗಾಗಿ ಮನವಿ ಸಲ್ಲಿಸಿದ್ದರು. ಅದನ್ನು […]
Read More
15-09-2019, 10:37 AM
ನಮ್ಮ ಸಮಾಜದಲ್ಲಿ ಮದುವೆಯ ಮದರಂಗಿ ಕಾರ್ಯಕ್ರಮದಲ್ಲಿ ಮದ್ಯಪಾನವು ವಿಪರೀತವಾಗಿದ್ದು ಅದರಿಂದ ಆಗುವ ತೊಂದರೆಗಳು ಹಲವಾರು. ಬ್ರಹ್ಮಶ್ರೀ ನಾರಾಯಣ ಗುರುಗಳು ಮದ್ಯಪಾನವನ್ನು ಬಹಳ ವಿರೋಧಿಸಿದ್ದರು. ಮೂಡಬಿದ್ರೆ ಯುವವಾಹಿನಿ ಘಟಕ ಬ್ರಹ್ಮಶ್ರೀ ನಾರಾಯಣ ಗುರುಗಳ 165 ಜನ್ಮದಿನಾಚರಣೆಯ ಅಂಗವಾಗಿ ಮದ್ಯಪಾನ ಮುಕ್ತ ಮದರಂಗಿ ಕಾರ್ಯಕ್ರಮವನ್ನು ನಡೆಸಬೇಕೆಂದು ವಿನಂತಿಸುವ ಗುರು ಸಂದೇಶ ಸಂಕಲ್ಪ ಎಂಬ ನಾಮಾಂಕಿತ ಮನವಿ ಪತ್ರವನ್ನು ದಿನಾಂಕ 15/09/2019 ರಂದು ಕಡಂದಲೆ ಪಾಲಡ್ಕ ಬಿಲ್ಲವ ಸಂಘದಲ್ಲಿ ನಡೆದ ಗುರು ಜಯಂತಿ ಕಾರ್ಯಕ್ರಮದಲ್ಲಿ ಹೊಸ್ಮಾರು ಬಲ್ಲೆಟ್ಟು ಸ್ವಾಮಿಗಳಾದ ಶ್ರೀಶ್ರೀಶ್ರೀ ವಿಖ್ಯಾತಾನಂದ […]
Read More