ಮಂಗಳೂರು :- ದಿನಾಂಕ 26 ಜುಲೈ 2022 ರಂದು ದುಷ್ಕರ್ಮಿಗಳ ದಾಳಿಗೆ ಒಳಗಾಗಿ ನಮ್ಮನ್ನಗಲಿದ ಯುವವಾಹಿನಿ (ರಿ.) ಸುಳ್ಯ ಘಟಕದ ಮಾಜಿ ಅಧ್ಯಕ್ಷರು ಹಾಗೂ ಪ್ರಸ್ತುತ ಯುವವಾಹಿನಿ ಕೇಂದ್ರ ಸಮಿತಿಯ ಸಂಘಟನಾ ಕಾರ್ಯದರ್ಶಿಯಾಗಿದ್ದ ಪ್ರವೀಣ್ ನೆಟ್ಟಾರು ಇವರ ಮನೆಗೆ ಈ ದಿನ ಯುವವಾಹಿನಿ ಕೇಂದ್ರ ಸಮಿತಿಯ ತಂಡವು ಅಧ್ಯಕ್ಷರಾದ ಉದಯ ಅಮೀನ್ ಮಟ್ಟು ಇವರ ನೇತ್ರತ್ವದಲ್ಲಿ ದಿನಾಂಕ 04 ಆಗಸ್ಟ್ 2022 ರಂದು ಪ್ರವೀಣ್ ಇವರ ಪತ್ನಿ ನೂತನ ಹಾಗೂ ಪ್ರವೀಣ್ ಇವರ ತಂದೆ ತಾಯಿಯನ್ನು ಅವರ ಮನೆ ಬೆಳ್ಳಾರೆಯ ನೆಟ್ಟಾರಿನಲ್ಲಿ ಭೇಟಿಯಾಗಿ ಅವರಿಗೆ ಸಾಂತ್ವನದ ಮಾತುಗಳೊಂದಿಗೆ ಆತ್ಮ ಸ್ಥೈರ್ಯವನ್ನು ತುಂಬಿ ಯುವವಾಹಿನಿ ಸಂಸ್ಥೆಯ ವತಿಯಿಂದ ರೂ 1 ಲಕ್ಷ ಮೊತ್ತವನ್ನು ನೀಡಲಾಯಿತು. ಈ ಸಂದರ್ಭದಲ್ಲಿ ಕೇಂದ್ರ ಸಮಿತಿಯ ಮಾಜಿ ಅಧ್ಯಕ್ಷರುಗಳು, ಉಪಾಧ್ಯಕ್ಷರುಗಳು ,ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ವಿವಿಧ ಘಟಕದ ಅಧ್ಯಕ್ಷರು,ಮಾಜಿ ಅಧ್ಯಕ್ಷರು ಮತ್ತು ಸದಸ್ಯರು ಸೇರಿ 37 ಮಂದಿ ಭೇಟಿ ನೀಡಿದ ತಂಡದಲ್ಲಿ ಉಪಸ್ಥಿತರಿದ್ದರು.