ಮೂಡುಬಿದಿರೆ : ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ ಮೂಡುಬಿದಿರೆ ಘಟಕದ ಆತಿಥ್ಯದಲ್ಲಿ ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವು ಮೂಡಬಿದಿರೆಯ ಸ್ಜೌಟ್ಸ್ ಗೈಡ್ಸ್ ಕನ್ನಡ ಭವನದಲ್ಲಿ ದಿನಾಂಕ 29-12-2024 ರಂದು ಸಂಪನ್ನಗೊಂಡಿತು.
ಯುವವಾಹಿನಿಯ ಶಿಸ್ತು, ಅಚ್ಚುಕಟ್ಟುತನ, ಹೊಸತನ ಎಲ್ಲರಿಗೂ ಮಾದರಿ : ಉಮಾನಾಥ ಕೋಟ್ಯಾನ್
ಯುವವಾಹಿನಿಯ ಸಮಾವೇಶದ ಪ್ರತಿ ಕ್ಷಣವನ್ನು ಆನಂದಿಸಿದ್ದೇನೆ, ಶಿಸ್ತು, ಅಚ್ಚುಕಟ್ಟುತನ, ಹೊಸತನ ಇತರರಿಗೆ ಮಾದರಿಯಾಗಿದೆ ಎಂದು ಯುವವಾಹಿನಿಯ 37ನೇ ವಾರ್ಷಿಕ ಸಮಾವೇಶವನ್ನು ದೀಪ ಬೆಳಗಿಸಿ ಉದ್ಘಾಟಿಸಿದ ಮುಲ್ಕಿ – ಮೂಡುಬಿದಿರೆ ಕ್ಷೇತ್ರದ ಶಾಸಕ ಉಮಾನಾಥ ಕೋಟ್ಯಾನ್ ತಿಳಿಸಿದರು.
ಸಮಾವೇಶದ ಅಧ್ಯಕ್ಷತೆಯನ್ನು ವಹಿಸಿದ್ದ ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಹರೀಶ್ ಕೆ ಪೂಜಾರಿ 2024-25ನೇ ಸಾಲಿನ ಕೇಂದ್ರ ಸಮಿತಿಯ ನೂತನ ಕಾರ್ಯಕಾರಿ ಸಮಿತಿಗೆ ಪ್ರತಿಜ್ಞಾವಿಧಿ ಬೋಧಿಸಿದರು ಹಾಗೂ ಕಳೆದ ಒಂದು ವರ್ಷದಲ್ಲಿ ಯಶಸ್ವಿ ಕಾರ್ಯಕ್ರಮ ನೀಡಲು ಸಹಕರಿಸಿದ ಎಲ್ಲರಿಗೂ ಗೌರವ ಸಲ್ಲಿಸಿದರು.
ಯುವವಾಹಿನಿ ಕೇಂದ್ರ ಸಮಿತಿಯ 2024-25 ನೇ ಸಾಲಿನ ಅಧ್ಯಕ್ಷರಾಗಿ ಲೋಕೇಶ್ ಕೋಟ್ಯಾನ್ ಕೂಳೂರು ನೇತ್ರತ್ವದ ನೂತನ ಕಾರ್ಯಕಾರಿ ಸಮಿತಿಯು ಪ್ರತಿಜ್ಞಾವಿಧಿ ಸ್ವೀಕರಿಸಿದರು, ಕೇಂದ್ರ ಸಮಿತಿಯ ನಿಕಟಪೂರ್ವ ಅಧ್ಯಕ್ಷ ರಾಜೇಶ್ ಬಿ. ನೂತನ ತಂಡವನ್ನು ಸಭೆಗೆ ಪರಿಚಯಿಸಿದರು
ಯುವಸಿಂಚನ ವಿಶೇಷಾಂಕ ಬಿಡುಗಡೆ
ಯುವವಾಹಿನಿಯ ಮುಖವಾಣಿ ಯುವಸಿಂಚನ ವಿಶೇಷಾಂಕವನ್ನು ಭಾರತ್ ಕೊ-ಓಪರೇಟಿವ್ ಬ್ಯಾಂಕ್, ಮುಂಬೈ (ಲಿ), ಇದರ ಅಧ್ಯಕ್ಷರಾದ ಸೂರ್ಯಕಾಂತ್ ಜೆ. ಸುವರ್ಣ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಯುವಸಿಂಚನ ಕಾರ್ಯನಿರ್ವಾಹಕ ಸಂಪಾದಕ ಸತೀಶ್ ಕಿಲ್ಪಾಡಿ, ಸಂಪಾದಕ ದಿನಕರ್ ಡಿ. ಬಂಗೇರ, ಸಾಮಾಜಿಕ ಜಾಲತಾಣ ಸಂಪಾದಕ ನವಾನಂದ ಹಾಗೂ ಸಂಪಾದಕೀಯ ಮಂಡಳಿ ಸದಸ್ಯರು ಉಪಸ್ಥಿತರಿದ್ದರು, ಯುವಸಿಂಚನ ಮುಖಪುಟ ವಿನ್ಯಾಸಕ್ಕಾಗಿ ರಾಜೇಶ್ ಸುವರ್ಣ ಇವರನ್ನು ಗೌರವಿಸಲಾಯಿತು.
ಯುವವಾಹಿನಿ ಸಾಧನಾ ಶ್ರೀ, ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ
ವಿವೇಚನೆಯು ಹೊಣೆಗಾರಿಕೆಯಾಗಿ, ಸಂಘಗಳು ಸಂಸ್ಥೆಗಳಾಗಿ ಪರಿವರ್ತನೆ ಆಗಬೇಕು. ಗುಪ್ತತೆ ಮರೆಯಾಗಿ ಪಾರದರ್ಶಕತೆ ಮೆರೆಯಬೇಕು ಎಂದು ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಹೈಕೋರ್ಟ್ ನಾಮನಿರ್ದೇಶಿತ ಹಿರಿಯ ನ್ಯಾಯವಾದಿ ಇರುವೈಲು ತಾರಾನಾಥ ಪೂಜಾರಿ ಹೇಳಿದರು.
ಸಹಕಾರ ಕ್ಷೇತ್ರದ ಸಾಧಕ ಭಾಸ್ಕರ್ ಎಸ್. ಕೋಟ್ಯಾನ್ ಕೊಳಕೆ ಇರ್ವತ್ತೂರು, ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ ಹಾಗೂ ಬಿಲ್ಲವ ಸಮಾಜ ಸೇವಾ ಸಂಘ (ರಿ), ಮುಲ್ಕಿ ಸಂಘಟನೆಗೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಯಿತು.
ಪ್ರಶಸ್ತಿ ಪುರಸ್ಕೃತ ಭಾಸ್ಕರ್ ಕೋಟ್ಯಾನ್ ಹಾಗೂ ಮುಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ವಾಮನ ಕೋಟ್ಯಾನ್ ನಡಿಕುದ್ರು ಕೃತಜ್ಞತೆ ಸಲ್ಲಿಸಿದರು.
ಸಾಂಸ್ಕೃತಿಕ, ಜಾನಪದ ಸಂಶೋಧನೆ, ಸಂಘಟನಾ ಕ್ಷೇತ್ರದ ಸಾಧಕ ದಿನೇಶ್ ಸುವರ್ಣ ರಾಯಿ,
ಸಂಗೀತ ಕ್ಷೇತ್ರದ ಸಾಧಕ ಸಚಿತ್ ಪೂಜಾರಿ ನಂದಳಿಕೆ, ಕ್ರೀಡಾ ಕ್ಷೇತ್ರದ ಸಾಧಕಿ ರಕ್ಷಾ ರೆಂಜಾಳ ಇವರಿಗೆ ಯುವವಾಹಿನಿ ಯುವ ಸಾಧನಾ ಪುರಸ್ಕಾರ ಪ್ರದಾನ ಮಾಡಲಾಯಿತು.
ಯುವಸಾಧನಾ ಪುರಸ್ಕಾರ ಪುರಸ್ಕೃತರ ಪರವಾಗಿ ದಿನೇಶ್ ಸುವರ್ಣ ರಾಯಿ ಕೃತಜ್ಞತೆ ಸಲ್ಲಿಸಿದರು.
ಸಾಮಾಜಿಕ ಕ್ಷೇತ್ರದ ಸಾಧನೆಗಾಗಿ ಕುಮಾರ್ ಪೂಜಾರಿ ಇರುವೈಲು ಹಾಗೂ ವೈದ್ಯಕೀಯ ಕ್ಷೇತ್ರದ ಸಾಧನೆಗಾಗಿ ಡಾ. ಆನಂದ ಬಂಗೇರ ಇವರಿಗೆ ಯುವವಾಹಿನಿ ಗೌರವ ಅಭಿನಂದನೆ, ಡಾಕ್ಟರೇಟ್ ಪದವಿಯ ಸಾಧನೆಗಾಗಿ ಡಾ| ಶಿಲ್ಪಾ ದಿನೇಶ್ ಇವರಿಗೆ ಯುವವಾಹಿನಿ ಅಭಿನಂದನೆ, ಕಲೆ ಮತ್ತು ಸಾಂಸ್ಕೃತಿಕ ಕ್ಷೇತ್ರದ ಸಾಧನೆಗಾಗಿ ಪ್ರಕೃತಿ ಮಾರೂರು ಇವರಿಗೆ ಯುವವಾಹಿನಿ ಸಾಧಕ ಪುರಸ್ಕಾರ ಪ್ರದಾನ ಮಾಡಲಾಯಿತು.
ಮಂಗಳೂರು ವಿಕಾಸ್ ಎಜ್ಯುಕೇಶನ್ ಟ್ರಸ್ಟ್, ಇದರ ಟ್ರಸ್ಟೀ ಸೂರಜ್ ಕುಮಾರ್ ಕಲ್ಯಾ, ಶ್ರೀ ಕ್ಷೇತ್ರ ಗೆಜ್ಜೆಗಿರಿ ನಂದನಬಿತ್ತಿಲು ಅಧ್ಯಕ್ಷ ರವಿ ಪೂಜಾರಿ ಚಿಲಿಂಬಿ, ಮೂಡುಬಿದಿರೆ ರತ್ನ ವುಮೆನ್ಸ್ ಕ್ಲಿನಿಕ್ ಡಾ. ರಮೇಶ,
ಉದ್ಯಮಿಗಳಾದ ದಿನೇಶ್ ಅಮೀನ್, ಮೂಡುಬಿದಿರೆ ಬ್ರಹ್ಮಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ ಅಧ್ಯಕ್ಷ ಸುರೇಶ್ ಕೆ. ಪೂಜಾರಿ, ಸರಕಾರಿ ಪದವಿಪೂರ್ವ ಕಾಲೇಜು ಕೋಟ ಇದರ ಪ್ರಾಧ್ಯಾಪಕರಾದ ಡಾ|ಸುನೀತಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಸಾಧಕ ಯುವವಾಹಿನಿ ಘಟಕಗಳಿಗೆ ಅಭಿನಂದನೆ
ಅತ್ಯಧಿಕ ನೂತನ ಸದಸ್ಯರ ನೊಂದಾವಣೆಗಾಗಿ ಮೂಡುಬಿದಿರೆ, ಮಂಗಳೂರು, ಬಂಟ್ವಾಳ, ಬೆಂಗಳೂರು, ವಿಟ್ಲ, ಉಡುಪಿ ಹಾಗೂ ನೂತನ ಘಟಕ ಗ್ರಾಮಚಾವಡಿ ಕೊಣಾಜೆ, ಪೆರ್ಮಂಕಿ ಘಟಕಗಳನ್ನು ಅಭಿನಂದಿಸಲಾಯಿತು.
ಸಮಾವೇಶದಲ್ಲಿ ನಿಗದಿತ ಸಮಯದಲ್ಲಿ ಅತೀ ಹೆಚ್ಚು ನೊಂದಾವಣೆಗಾಗಿ ಪ್ರಥಮ ಬಹುಮಾನ ಪಡೆದ ಪಣಂಬೂರು ಕುಳಾಯಿ ಹಾಗೂ ದ್ವಿತೀಯ ಬಹುಮಾನ ಪಡೆದ ಕೊಲ್ಯ ಮತ್ತು ಹೆಚ್ಚು ಸದಸ್ಯರ ನೊಂದಾವಣೆಗಾಗಿ ಕೂಳೂರು ಘಟಕಗಳನ್ನು ಅಭಿನಂದಿಸಲಾಯಿತು.
ನಮ್ಮ ಘಟಕ ನಮ್ಮ ಹೆಮ್ಮೆ ರೀಲ್ಸ್ ಸ್ಪರ್ಧೆಯ ಪ್ರಥಮ ಬಹುಮಾನ ಪಡೆದ ಪಣಂಬೂರು ಕುಳಾಯಿ ಹಾಗೂ ದ್ವಿತೀಯ ಬಹುಮಾನ ಪಡೆದ ಕೊಲ್ಯ ಘಟಕವನ್ನು ಗೌರವಿಸಲಾಯಿತು.
ಮೂಡುಬಿದಿರೆ ಘಟಕದ ಸದಸ್ಯರು ನಿರ್ಮಿಸಿದ ಸಮಾವೇಶದ ಥೀಮ್ ಸಾಂಗ್ ತಂಡವನ್ನು ಅಭಿನಂದಿಸಲಾಯಿತು.
ಯುವವಾಹಿನಿ ನಡೆದು ಬಂದ ಹಾದಿಯನ್ನು (ಪ್ರಸ್ತಾವನೆ) ಸಾಕ್ಷ್ಯಚಿತ್ರದ ಮೂಲಕ ಎಲ್.ಇ.ಡಿ ಪರದೆಯಲ್ಲಿ ಬಿತ್ತರಿಸಲಾಯಿತು.
ಯುವವಾಹಿನಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಜಗದೀಶ್ಚಂದ್ರ ಡಿ.ಕೆ ವಾರ್ಷಿಕ ವರದಿ ಮಂಡಿಸಿದರು.
ಯುವವಾಹಿನಿ ಮೂಡುಬಿದಿರೆ ಘಟಕದ ಅಧ್ಯಕ್ಷ, ಸಮಾವೇಶದ ಸಂಚಾಲಕ ಶಂಕರ್ ಎ. ಕೋಟ್ಯಾನ್
ಸ್ವಾಗತಿಸಿದರು.
ಸಮಾವೇಶದ ನಿರ್ದೇಶಕ ಗಣೇಶ್ ವಿ. ಕೋಡಿಕಲ್ ಧನ್ಯವಾದ ನೀಡಿದರು.
ಯುವವಾಹಿನಿ ಬೆಳ್ತಂಗಡಿ ಘಟಕದ ಸ್ಮಿತೇಶ್ ಎಸ್ ಬಾರ್ಯ ಹಾಗೂ ಪ್ರಜ್ಞಾ ಓಡಿಲ್ನಾಳ ಕಾರ್ಯಕ್ರಮ ನಿರೂಪಿಸಿದರು.