ಮಂಗಳೂರು :- ಯುವವಾಹಿನಿ (ರಿ.) ಕೇಂದ್ರ ಸಮಿತಿ, ಮಂಗಳೂರು ಆಶ್ರಯದಲ್ಲಿ, ಯುವವಾಹಿನಿಯ ವಿವಿಧ ಘಟಕಗಳ ಸಹಕಾರದಲ್ಲಿ, “ಕಡಲತಡಿಯ ಸ್ವಚ್ಛತಾ ಅಭಿಯಾನ” ವು 75ನೇ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ದಿನಾಂಕ 12 ಆಗಸ್ಟ್ 2022ರ ಶುಕ್ರವಾರದಂದು ಪಣಂಬೂರು ಬೀಚ್ ನಲ್ಲಿ MPEDA – NETFISH ಸಂಸ್ಥೆಯು Coastal clean – up Programme ಕಾರ್ಯಕ್ರಮವನ್ನು ಆಯೋಜಿಸಿತ್ತು. ಯುವವಾಹಿನಿ (ರಿ.) ಮಂಗಳೂರು ಘಟಕವು ಈ ಕಾರ್ಯಕ್ರಮವನ್ನು ಸಂಘಟಿಸಿದ್ದು, ಕೇಂದ್ರ ಸಮಿತಿಯ ಕಡಲತಡಿಯ ವಿವಿಧ ಘಟಕಗಳು ಇದರಲ್ಲಿ ಭಾಗವಹಿಸಿದ್ದವು.
ಈ ಸ್ವಚ್ಛತಾ ಕಾರ್ಯಕ್ರಮಕ್ಕೆ ಲಯನ್ಸ್ ಕ್ಲಬ್ ಮಂಗಳಾದೇವಿ, ಲಯನ್ಸ್ ಕ್ಲಬ್ ಕುಡ್ಲ, ಲಯನ್ಸ್ ಕ್ಲಬ್ ಫಲ್ಗುಣಿ ಹಾಗೂ ಕೋಸ್ಟ್ ಗಾರ್ಡ್ ಸಂಸ್ಥೆಯು ಸಂಪೂರ್ಣವಾದ ಸಹಕಾರವನ್ನು ನೀಡಿತ್ತು. ಕೇಂದ್ರ ಸಮಿತಿ ಅಧ್ಯಕ್ಷರಾದ ಉದಯ ಅಮೀನ್ ಮಟ್ಟುರವರು ರಾಷ್ಟ್ರ ಧ್ವಜವನ್ನು ಹಾರಿಸಿ ಬೀಚ್ ಸ್ವಚ್ಛತಾ ಅಭಿಯಾನಕ್ಕೆ ಚಾಲನೆ ನೀಡಿದರು. ಸುಮಾರು 1500ಕ್ಕೂ ಅಧಿಕ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ಇದರಲ್ಲಿ ಪಾಲ್ಗೊಂಡಿದ್ದರು. ಸುಮಾರು 5.00 ಟನ್ ನಷ್ಟು ಪ್ಲಾಸ್ಟಿಕ್ ಕಸವನ್ನು ಸಂಗ್ರಹಿಸಲಾಯಿತು.
ಮಂಗಳೂರು ಘಟಕದ ಅಧ್ಯಕ್ಷರಾದ ಗಣೇಶ್ ವಿ. ಕೋಡಿಕಲ್, ಕೇಂದ್ರ ಸಮಿತಿಯ ಸಮಾಜಸೇವೆ ನಿರ್ದೇಶಕರಾದ ಚಂದ್ರಶೇಖರ್ ವಿ. ಕರ್ಕೇರ, ಘಟಕದ ಸಮಾಜ ಸೇವೆ ನಿರ್ದೇಶಕರಾದ ಭಾಸ್ಕರ ಪೂಜಾರಿ, ಮಾಜಿ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸರ್ವ ಸದಸ್ಯರು ಬೀಚ್ ಸ್ವಚ್ಛತಾ ಕಾರ್ಯಕ್ರಮವು ಯಶಸ್ವಿಯಾಗಲು ಸಹಕಾರ ನೀಡಿದರು.