ಯಡ್ತಾಡಿ :- ಯುವವಾಹಿನಿ (ರಿ.) ಯಡ್ತಾಡಿ ಘಟಕ ಹಾಗೂ ಸ. ಹಿ. ಪ್ರಾ. ಶಾಲೆ ಯಡ್ತಾಡಿ ಜಂಟಿಯಾಗಿ ಶಾಲಾ ಮಕ್ಕಳ ಬಿಸಿಯೂಟಕ್ಕೆ ತರಕಾರಿಗಳನ್ನು ಶಾಲಾ ವಠಾರದಲ್ಲಿ ಬೆಳೆಯುವ ವಿನೂತನ ಕಾರ್ಯಕ್ರಮವನ್ನು ದಿನಾಂಕ 19 ಜೂನ್ 2022ರ ರವಿವಾರದಂದು ಸ. ಹಿ. ಪ್ರಾ. ಶಾಲೆ ಯಡ್ತಾಡಿಯಲ್ಲಿ ನಡೆಸಲಾಯಿತು.ಘಟಕದ ಅಧ್ಯಕ್ಷರಾದ ಸೋಮಪ್ಪ ಪೂಜಾರಿಯವರು ಹಾಗೂ ಕಾರ್ಯದರ್ಶಿ ಸುಶಾಂತ್ ಪೂಜಾರಿಯವರು ತರಕಾರಿ ಬೀಜಗಳನ್ನು ಮಣ್ಣಿನ ದಿಬ್ಬಗಳಲ್ಲಿ ಬಿತ್ತುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಯುವವಾಹಿನಿ(ರಿ.) ಯಡ್ತಾಡಿ ಘಟಕದ ಸದಸ್ಯರು ಹಾಗೂ ಶಾಲಾ ಮಕ್ಕಳು ಜೊತೆಯಾಗಿ ಮಣ್ಣಿನ ದಿಬ್ಬಗಳನ್ನು ಗೊಬ್ಬರದೊಂದಿಗೆ ರಚಿಸಿ, ತರಕಾರಿ ಬೀಜಗಳನ್ನು ಬಿತ್ತಿದರು. ಕಾರ್ಯಕ್ರಮದ ಕೊನೆಯಲ್ಲಿ ಲಘು ಉಪಹಾರದ ವ್ಯವಸ್ಥೆ ಮಾಡಲಾಗಿತ್ತು. ನಿಕಟಪೂರ್ವ ಅಧ್ಯಕ್ಷರಾದ ರಾಜು ಪೂಜಾರಿಯವರು, ಪ್ರಥಮ ಉಪಾಧ್ಯಕ್ಷರ ರಮೇಶ್ ಪೂಜಾರಿಯವರು, ಕೇಂದ್ರ ಸಮಿತಿಯ ನಾಮ ನಿರ್ದೇಶಿತ ಸದಸ್ಯರಾದ ರಾಘವೇಂದ್ರ ಪೂಜಾರಿಯವರು, ಮಾಜಿ ಅಧ್ಯಕ್ಷರಾದ ಅಣ್ಣಪ್ಪ ಪೂಜಾರಿಯವರು, ಶಂಕರ ಪೂಜಾರಿ, ಗೀತಾ ಪೂಜಾರಿ, ಹಾಗೂ ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು.