ಮಾಣಿ :- ಜಗತ್ತಿನ ಕೆಲವೊಂದು ಬದಲಾವಣೆಗೆ ಪರಿಸರವು ಕಾರಣವಾಗುತ್ತದೆ.ಇಂದೆಲ್ಲ ಪರಿಸರವನ್ನು ನಾಶಗೊಳಿಸಿ ಕಟ್ಟಡಗಳು ತಲೆ ಎತ್ತುತ್ತಿವೆ.ಇದು ಮುಂದಿನ ಪೀಳಿಗೆಗೆ ಅಪಾಯಕಾರಿಯಾಗಿದೆ, ಹಾಗಾಗಿ ಪರಿಸರವನ್ನು ಉಳಿಸುವುದು ಮತ್ತು ಬೆಳೆಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ” ಎಂದು ಪುತ್ತೂರು ಪೋಲೀಸ್ ಇಲಾಖೆಯ ಅಸಿಸ್ಟೆಂಟ್ ಸಬ್ ಇನ್ಸ್ ಪೆಕ್ಟರ್ ರಾಧಾಕೃಷ್ಣ ಬಿ.ಜಿ ರವರು ತಿಳಿಸಿದರು.
ಅವರು ದಿನಾಂಕ 19 ಜೂನ್ 2022 ರ ಆದಿತ್ಯವಾರದಂದು ದ.ಕ.ಜಿ.ಪಂ.ಹಿ. ಪ್ರಾಥಮಿಕ ಶಾಲೆ,ಮಲ್ಲಡ್ಕ,ಪೆರ್ನೆ ಇಲ್ಲಿ ಯುವವಾಹಿನಿ (ರಿ.) ಮಾಣಿ ಘಟಕದ ವತಿಯಿಂದ ನಡೆದ “ಹಸಿರೇ-ಉಸಿರು” ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದರು. ನಂತರ ಮಾತನಾಡಿದ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ(ರಿ.) ಮಾಣಿ ಇದರ ಅಧ್ಯಕ್ಷರಾದ ಸುರೇಶ್ ಸೂರ್ಯ ರವರು ಇಂತಹ ಕಾರ್ಯಗಳು ಇನ್ನಷ್ಟು ಆಗಬೇಕು, ಗಿಡಗಳನ್ನು ನೆಡುವುದರ ಮೂಲಕ ಪರಿಸರದ ಬಗ್ಗೆ ಎಲ್ಲರಿಗೂ ಜಾಗೃತಿ ಮೂಡಿಸಬೇಕು ಎಂದರು. ಘಟಕದ ಅಧ್ಯಕ್ಷರಾದ ಜಯಂತ ಬರಿಮಾರು ರವರು ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ ಪರಿಸರದ ಬಗ್ಗೆ ಕಾಳಜಿ ವಹಿಸುವುದು ನಮ್ಮೆಲ್ಲರ ಕರ್ತವ್ಯ, ಘಟಕವು ಪ್ರತಿ ವರ್ಷ ಇಂತಹ ಕಾರ್ಯಕ್ರಮ ಹಮ್ಮಿಕೊಂಡು ಪರಿಸರವನ್ನು ಉಳಿಸುವ ಕಾರ್ಯವನ್ನು ಮಾಡುತ್ತಿದೆ ಎಂದು ತಿಳಿಸಿದರು. ಘಟಕದ ತ್ರೀವೆಣಿ ರಮೇಶ್ ರವರು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು. ಶಾಲೆಯ ಎಸ್.ಡಿ.ಎಂ.ಸಿ ಅಧ್ಯಕ್ಷರಾದ ಜಯಶ್ರೀ,ಪೆರ್ನೆ ಗ್ರಾಮ ಪಂಚಾಯಿತಿಯ ಸದಸ್ಯರಾದ ಕೇಶವ,ಸದಸ್ಯೆಯಾದ ಸುಮತಿ,ಶಾಲೆಯ ಮುಖ್ಯೋಪಾಧ್ಯಾಯರಾದ ಸವಿತ, ಕಾರ್ಯಕ್ರಮದ ಸಂಚಾಲಕರಾದ ಚೇತನ್ ಮಲ್ಲಡ್ಕ ಮೊದಲಾದವರು ಉಪಸ್ಥಿತರಿದ್ದರು. ಘಟಕದ ಪದಾಧಿಕಾರಿಗಳು ಹಾಗೂ ಸದಸ್ಯರು ಉಪಸ್ಥಿತರಿದ್ದರು. ನಂತರ ಅತಿಥಿಗಳ ಒಡಗೂಡಿ ಶಾಲೆಯ ಅವರಣದಲ್ಲಿ ಗಿಡವನ್ನು ನೆಟ್ಟು ಹಾಗೂ ಶಾಲೆಯ ಅಕ್ಷರದಾಸೋಹಕ್ಕೆ ಉಪಯೋಗವಾಗುವಂತೆ ತರಕಾರಿಯ ತೋಟವನ್ನು ರಚಿಸಲಾಯಿತು. ಘಟಕದ ಸದಸ್ಯೆ ಜಯಶ್ರೀ ಪ್ರಾರ್ಥಿಸಿದರು. ಶಾಲಾ ಮುಖ್ಯೋಪಾಧ್ಯಾಯರಾದ ಸವಿತರವರು ಸ್ವಾಗತಿಸಿ, ಶಿಕ್ಷಕಿ ಸೌಮ್ಯರವರು ವಂದಿಸಿದರು. ಮಮತ ಏನಾಜೆ ನಿರೂಪಿಸಿದರು.